ಬೆಳೆಗಳ ಉತ್ಪಾದನೆ ಮತ್ತು ನಿರ್ವಹಣೆ
ಎಂಟನೇ ತರಗತಿ ವಿಜ್ಞಾನ
ಅಧ್ಯಾಯ 1
ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ
ಪ್ರಶ್ನೋತ್ತರಗಳು
1. ಈ ಕೆಳಗೆ ನೀಡಿರುವ ಪದಗಳಿಂದ ಸರಿಯಾದ ಪದವನ್ನು ಆರಿಸಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿ
ತೇಲು, ನೀರು, ಬೆಳೆ, ಪೋಷಕಾಂಶಗಳು, ಪೂರ್ವಸಿದ್ಧತೆ
(a) ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಿ ಬೆಳೆಸುವುದನ್ನು ಬೆಳೆ ಎನ್ನುತ್ತಾರೆ.
(b) ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣಿನ-ಪೂರ್ವಸಿದ್ಧತೆ ಮೊದಲ ಹಂತವಾಗಿದೆ.
(c) ಹಾನಿಗೊಳಗಾದ ಬೀಜಗಳು ನೀರಿನ ಮೇಲೆ ತೇಲುತ್ತವೆ.
(d) ಬೆಳೆಯುತ್ತಿರುವ ಬೆಳೆಗೆ ಸಾಕಷ್ಟು ಸೌರಬೆಳಕು ಮತ್ತು ಮಣ್ಣಿನಿಂದ ಪೋಷಕಾಂಶಗಳು ಅಗತ್ಯವಾಗಿ ಬೇಕು.
2. A ಪಟ್ಟಿಯಲ್ಲಿರುವ ಪ್ರಮುಖ ಪದಗಳೊಂದಿಗೆ B ಪಟ್ಟಿಯಲ್ಲಿರುವ ಅಂಶಗಳನ್ನು ಹೊಂದಿಸಿ ಬರೆಯಿರಿ.
A
B
I. ಖಾರಿಫ್ ಬೆಳೆಗಳು……………… (a) ಭತ್ತ ಮತ್ತು ಜೋಳ
II. ರಬಿ ಬೆಳೆಗಳು…………………… (d) ಗೋಧಿ, ಕಡಲೆ, ಬಟಾಣಿ
III ರಾಸಾಯನಿಕ ಗೊಬ್ಬರಗಳು……… (b) ಯೂರಿಯಾ ಮತ್ತು ಸೂಪರ್ ಫಾಸ್ಟೇಟ್
IV. ಸಾವಯವ ಗೊಬ್ಬರ… (c) ಪಾಣಿ ತ್ಯಾಜ್ಯ, ಸಗಣಿ, ಮೂತ್ರ ಮತ್ತು ಸಸ್ಯ ತ್ಯಾಜ್ಯ
3. ಪ್ರತಿಯೊಂದಕ್ಕೂ ಎರಡು ಉದಾಹರಣೆಗಳನ್ನು ಕೊಡಿ.
(a) ಖಾರಿಫ್ ಬೆಳೆ………ಗೋಧಿ, ಕಡಲೆ, ಬಟಾಣಿ.
(b) ರಬಿ ಬೆಳೆ……………ಭತ್ತ ಮತ್ತು ಜೋಳ.
4. ಈ ಕೆಳಗಿನ ಪ್ರತಿಯೊಂದರ ಬಗ್ಗೆ ನಿಮ್ಮ ಸ್ವಂತ ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ.
(a) ಮಣ್ಣನ್ನು ಸಿದ್ಧಗೊಳಿಸುವಿಕೆ
ಬೆಳೆಯನ್ನು ಬೆಳೆಯುವ ಮೊದಲು ಮಣ್ಣು ಹದಗೊಳಿಸುವದು ಕೃಷಿಯ ಮೊದಲ ಹಂತವಾಗಿದೆ.ಕೃಷಿಯಲ್ಲಿನ ಬಹುಮುಖ್ಯ ಕಾರ್ಯವೆಂದರೆ, ಮಣ್ಣನ್ನು ತಿರುವಿ ಹಾಕುವುದು ಮತ್ತು ಅದನ್ನು ಸಡಿಲಗೊಳಿಸುವುದು. ಇದರಿಂದ ಬೇರುಗಳು ಮಣ್ಣಿನ ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ.
ಕೇವಲ ಕೆಲವು ಸೆಂಟಿಮೀಟರ್ಗಳಷ್ಟು ದಪ್ಪದ ಮಣ್ಣಿನ ಮೇಲ್ಪದರವು ಸಸ್ಯಗಳ ಬೆಳವಣಿಗೆಯನ್ನು ಬೆಂಬಲಿಸುವುದರಿಂದ ಮಣ್ಣು ಸಡಿಲಗೊಳಿಸುವ ಪ್ರಕ್ರಿಯೆಯು ಪೋಷಕಾಂಶದಿಂದ ಸಮೃದ್ಧವಾದ ಮಣ್ಣನ್ನು ಮೇಲ್ಬಾಗಕ್ಕೆ ತರುತ್ತದೆ. ಈ ಪೋಷಕಾಂಶಗಳನ್ನು ಸಸ್ಯಗಳು ಬಳಸಿಕೊಳ್ಳುತ್ತವೆ.ಆದ್ದರಿಂದ, ಮಣ್ಣನ್ನು ತಿರುವಿಹಾಕುವುದು ಮತ್ತು ಸಡಿಲಗೊಳಿಸುವುದು ಬೆಳೆಗಳನ್ನು ಬೆಳೆಯಲು ಅತೀ ಮುಖ್ಯವಾಗಿದೆ. ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉಳುಮೆ ಮಾಡುವುದು ಎನ್ನುತ್ತಾರೆ. ಇದನ್ನು ನೇಗಿಲನ್ನು ಬಳಸಿ ಮಾಡಲಾಗುತ್ತದೆ.
(b) ಬಿತ್ತನೆ
ಕೃಷಿಯಲ್ಲಿ ಬಿತ್ತನೆ ಮಹತ್ತರವಾದ ಕಾರ್ಯವಾಗಿದೆ
ಬಿತ್ತುವುದು ಎಂದರೆ ಉತ್ತಮ ಬೀಜಗಳನ್ನು ತೇವವಾದ ಮಣ್ಣಿನಲ್ಲಿ ಅಥವಾ ಭೂಮಿಯಲ್ಲಿ ಮಣ್ಣಿನ ಒಳಗೆ ಹಾಕುವುದು. ನೆಲವನ್ನು ಹದಗೊಳಿಸಿ ಮಣ್ಣಿನ ಮಣ್ಣನ್ನು ಸಡಿಲಗೊಳಿಸಿ ಆದ ನಂತರ ಬಿತ್ತನೆ ಕಾರ್ಯ ಕೈಗೊಳ್ಳುತ್ತಾರೆ.
ಸಾಂಪ್ರದಾಯಿಕವಾಗಿ ಬಿತ್ತನೆಗೆ ಕೂರಿಗೆ ಯಂತಹ ಉಪಕರಣವನ್ನು ಬಳಸುತ್ತಿದ್ದರು. ಆಧುನಿಕವಾಗಿ ಟ್ರ್ಯಾಕ್ಟರ್ ಗಳ ಮೂಲಕ ಯಾಂತ್ರಿಕ ಕೂರಿಗೆಯಲ್ಲಿ ಬಿತ್ತಲಾಗುತ್ತದೆ. ತರಕಾರಿ ಅಂತಹ ಬೀಜಗಳನ್ನು ನರ್ಸರಿಗಳಲ್ಲಿ ಸಣ್ಣ ಸಣ್ಣ ಸಸಿಗಳನ್ನಾಗಿ ಬೆಳೆಸಿ, ನಂತರ ಹೊಲಗಳಿಗೆ ಬಿತ್ತಲಾಗುತ್ತದೆ.
(c) ಕಳೆ ನಿವಾರಣೆ
ಒಂದು ಜಮೀನಿನಲ್ಲಿ ಬೆಳೆಯ ಜೊತೆಗೆ ಅನೇಕ ಅನಪೇಕ್ಷಿತ ಸಸ್ಯಗಳು ತಾನೇ ತಾನಾಗಿ ಬೆಳೆಯಬಹುದು. ಈ ಅನಪೇಕ್ಷಿತ ಸಸ್ಯಗಳನ್ನು ಕಳೆಗಳು ಎನ್ನುವರು.ಕಳೆಗಳನ್ನು ತೆಗೆದುಹಾಕುವುದಕ್ಕೆ ಕಳೆ ಕೀಳುವಿಕೆ ಎನ್ನುವರು.ಕಳೆಗಳು ನೀರು, ಪೋಷಕಾಂಶಗಳು, ಸ್ಥಳ ಮತ್ತು ಬೆಳಕಿಗಾಗಿ ಬೆಳೆಗಳೊಂದಿಗೆ ಸ್ಪರ್ಧೆ ನಡೆಸುವುದರಿಂದ ಕಳೆ ಕೀಳುವಿಕೆ ಅಗತ್ಯವಾಗಿದೆ.
ಬಿತ್ತನೆಗೆ ಮೊದಲು ಉಳುಮೆ ಮಾಡುವಿಕೆಯು ಕಳೆಗಳನ್ನು ಬುಡಮೇಲಾಗಿಸಿ ನಾಶಪಡಿಸುತ್ತದೆ. ಕಳೆಗಳು ಹೂವು ಮತ್ತು ಬೀಜಗಳನ್ನು ಬಿಡುವ ಮೊದಲು ಅವುಗಳನ್ನು ಕಿತ್ತು ಹಾಕಬೇಕು.
ಕುರ್ಪಿ ಅಥವಾ ಕುರ್ಜಿಗೆ ಎಂದು ಕರೆಯುವ ಸಣ್ಣ ಕತ್ತಿಗಳಿಂದ ಕಾಲಕಾಲಕ್ಕೆ ಕಳೆಗಳನ್ನು ಬುಡಸಹಿತ ಕಿತ್ತುಹಾಕುವುದು ಅಥವಾ ನೆಲಮಟ್ಟಕ್ಕೆ ಅವುಗಳನ್ನು ಕತ್ತರಿಸುವುದು ಕಳೆಗಳನ್ನು ನಿವಾರಿಸುವ ವಿಧಾನವಾಗಿದೆ. ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಗಳನ್ನೂ, ಕಳೆನಾಶಕಗಳನ್ನು ಸಹ ಬಳಸಲಾಗುತ್ತದೆ.
(d) ಒಕ್ಕಣೆ
ಪಕ್ವವಾದ ಬೆಳೆಯ ಕೊಯ್ಲಿನ ನಂತರ ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಒಕ್ಕಣೆ (thrashing) ಎಂದು ಕರೆಯುವರು. ಇದನ್ನು ‘ಕಂಬೈನ್’ (combine) ಎಂದು ಕರೆಯುವ ಯಂತ್ರದಿಂದ ನಡೆಸಲಾಗುತ್ತದೆ.
ಮೊದಲು ಕೈಗಳಿಂದ ಅಥವಾ ಕೋಲಿನಿಂದ ಬಡಿಯುವ ಮೂಲಕ ಕಾಳುಗಳನ್ನು ಬೇರ್ಪಡಿಸುತ್ತಿದ್ದರು. ಕಣಗಳಲ್ಲಿ ಗುಂಡನ್ನು ಹಾಯಿಸುವುದರ ಮುಖಾಂತರವೂ ಕಾಳುಗಳನ್ನು ಬೇರ್ಪಡಿಸಲಾಗುತ್ತಿತ್ತು.
5. ರಸಗೊಬ್ಬರಗಳು ಸಾವಯವ ಗೊಬ್ಬರಕ್ಕಿಂತ ಹೇಗೆ ಭಿನ್ನವಾಗಿವೆ ಎಂದು ವಿವರಿಸಿ.
6. ನೀರಾವರಿ ಎಂದರೇನು? ನೀರನ್ನು ಉಳಿತಾಯ ಮಾಡುವ ನೀರಾವರಿಯ ಎರಡು ವಿಧಾನಗಳನ್ನು ವಿವರಿಸಿ.
ಉತ್ತರ
ಬೆಳೆಗಳಿಗೆ ವಿಭಿನ್ನ ಕಾಲಗಳಲ್ಲಿ ನೀರನ್ನು ಒದಗಿಸುವುದಕ್ಕೆ ನೀರಾವರಿ ಎಂದು ಕರೆಯುತ್ತಾರೆ.
ನೀರಾವರಿಯ ಎರಡುವಿಧಾನಗಳು.
(1)ತುಂತುರು ವಿಧಾನ:ಇಲ್ಲಿ ತುದಿಯಲ್ಲಿ ತಿರುಗುವ ನಳಿಕೆಯನ್ನು ಹೊಂದಿರುವ ಕೊಳವೆಗಳನ್ನು ಮುಖ್ಯ ಕೊಳವೆಗೆ ನಿಯಮಿತ ಅಂತರಗಳಲ್ಲಿ ಲಂಬವಾಗಿ ನಿಲ್ಲುವಂತೆ ಜೋಡಿಸಲಾಗಿರುತ್ತದೆ.ಒಂದು ಮೋಟಾರ್ ಪಂಪ್ನ ಸಹಾಯದಿಂದ ನೀರನ್ನು ಹೆಚ್ಚು ಒತ್ತಡದಲ್ಲಿ ಮುಖ್ಯ ಕೊಳವೆಗೆ ಹರಿಯುವಂತೆ ಮಾಡಿದರೆ ಅದು ತಿರುಗುವ ನಳಿಕೆಗಳ ಮೂಲಕ ಹೊರಚಿಮ್ಮುತ್ತದೆ. ಇದು ಮಳೆಯಂತೆ ಬೆಳೆಗಳ ಮೇಲೆ ಬೀಳುತ್ತದೆ. ಹುಲ್ಲು ಹಾಸುಗಳು, ಕಾಫಿ ತೋಟ ಮತ್ತು ಇತರ ಬೆಳೆಗಳಿಗೆ ತುಂತುರು ನೀರಾವರಿ ತುಂಬಾ ಉಪಯುಕ್ತವಾಗಿದೆ.
(2) ಹನಿ ನೀರಾವರಿ ವಿಧಾನ : ಈ ವಿಧಾನದಲ್ಲಿ ನೀರು ಹನಿ ಹನಿಯಾಗಿ ಬೇರುಗಳ ಬಳಿ ಬೀಳುತ್ತದೆ. ಇದು ಹಣ್ಣಿನ ಗಿಡಗಳಿಗೆ, ಉದ್ಯಾನಗಳಿಗೆ ಮತ್ತು ಮರಗಳಿಗೆ ನೀರು ಹಾಯಿಸುವ ಅತ್ಯುತ್ತಮ ತಂತ್ರವಾಗಿದೆ. ಇಲ್ಲಿ ನೀರು ವ್ಯರ್ಥವಾಗುವುದೇ ಇಲ್ಲ.
7. ಒಂದು ವೇಳೆ ಖಾರಿಫ್ ಋತುವಿನಲ್ಲಿ ಗೋಧಿಯನ್ನು ಬಿತ್ತನೆ ಮಾಡಿದರೆ ಏನಾಗಬಹುದು?
ಉತ್ತರ:ಖಾರಿಫ್ ಋತುವಿನಲ್ಲಿ (ಜೂನ್ ನಿಂದ ಅಕ್ಟೋಬರ್ ವರೆಗೆ) ಗೋಧಿಯನ್ನು ಬಿತ್ತಿದರೆ, ಹಲವಾರು ಅಂಶಗಳಿಂದ ಇಡೀ ಬೆಳೆ ನಾಶವಾಗಬಹುದು.
ಸೂಕ್ತ ತಾಪಮಾನದ ಕೊರತೆ, ಹೊಂದಿಕೊಳ್ಳುವಿಕೆ, ಕೀಟಗಳ ಲಭ್ಯತೆ ಇತ್ಯಾದಿ. ಖಾರಿಫ್ ಋತುವು ಮಳೆಗಾಲವನ್ನು ಒಳಗೊಂಡಿದೆ. ಅದುಗೋಧಿ ಬೆಳೆಯ ಬೆಳವಣಿಗೆಗೆ ಅನುಕೂಲಕರ ಅಲ್ಲ. ಆದ್ದರಿಂದ, ಈ ಋತುವಿನಲ್ಲಿ ಗೋಧಿ ಬೆಳೆ ಬಿತ್ತನೆ ಮಾಡಬಾರದು.
8. ಒಂದು ಜಮೀನಿನಲ್ಲಿ ನಿರಂತರವಾಗಿ ಬೆಳೆಗಳನ್ನು ಬೆಳೆದರೆ ಮಣ್ಣಿನ ಮೇಲಾಗುವ ಪರಿಣಾಮವನ್ನು ವಿವರಿಸಿ.
ಉತ್ತರ:-ಕೆಲವು ಪ್ರದೇಶಗಳಲ್ಲಿ ರೈತರು ಒಂದೇ ಜಮೀನಿನಲ್ಲಿ ಒಂದಾದ ನಂತರ ಒಂದರಂತೆ ಬೆಳೆಗಳನ್ನು ಬೆಳೆಯುತ್ತಾರೆ. ಜಮೀನನ್ನು ಉಳುಮೆ ಮಾಡದೇ ಖಾಲಿ ಅಥವಾ ಬೀಳು ಬಿಡುವುದೇ ಇಲ್ಲ.ನಿರಂತರವಾಗಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಕೆಲವು ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದರಿಂದ ಸಸ್ಯಗಳ ಬೆಳವಣಿಗೆ ದುರ್ಬಲಗೊಳ್ಳುತ್ತದೆ. ಇದರಿಂದ ಬೆಳೆ ಇಳುವರಿ ಕಡಿಮೆಯಾಗುತ್ತದೆ.
ಮಣ್ಣಿನಲ್ಲಿರುವ ಪೋಷಕಾಂಶಗಳು ನಿರಂತರವಾದ ಬೆಳೆ ಬೆಳೆಯುವುದರಿಂದ ಖಾಲಿಯಾಗುತ್ತವೆ. ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಪುನಃ ಫಲವತ್ತತೆಯನ್ನು ಪಡೆಯಲು ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳನ್ನು ಹಾಕಬೇಕಾಗುತ್ತದೆ. ಅಥವಾ ಬೆಳೆಯನ್ನು ಬಿತ್ತದೆಬೀಳು ಬಿಡಬೇಕಾಗುತ್ತದೆ.
9. ಕಳೆಗಳು ಎಂದರೇನು? ಅವುಗಳನ್ನು ನಾವು ಹೇಗೆ ನಿಯಂತ್ರಿಸಬಹುದು?
ಉತ್ತರ:-ಒಂದು ಜಮೀನಿನಲ್ಲಿ ಬೆಳೆಯ ಜೊತೆಗೆ ಅನೇಕ ಅನಪೇಕ್ಷಿತ ಸಸ್ಯಗಳು ತಾನೇ ತಾನಾಗಿ ಬೆಳೆಯಬಹುದು. ಈ ಅನಪೇಕ್ಷಿತ ಸಸ್ಯಗಳನ್ನು ಕಳೆಗಳು ಎನ್ನುವರು.
ಬಿತ್ತನೆಗೆ ಮೊದಲು ಉಳುಮೆ ಮಾಡುವಿಕೆಯು ಕಳೆಗಳನ್ನು ಬುಡಮೇಲಾಗಿಸಿ ನಾಶಪಡಿಸುತ್ತದೆ. ಕಳೆಗಳು ಹೂವು ಮತ್ತು ಬೀಜಗಳನ್ನು ಬಿಡುವ ಮೊದಲು ಅವುಗಳನ್ನು ಕಿತ್ತು ಹಾಕಬೇಕು.
ಕುರ್ಪಿ ಅಥವಾ ಕುರ್ಜಿಗೆ ಎಂದು ಕರೆಯುವ ಸಣ್ಣ ಕತ್ತಿಗಳಿಂದ ಕಾಲಕಾಲಕ್ಕೆ ಕಳೆಗಳನ್ನು ಬುಡಸಹಿತ ಕಿತ್ತುಹಾಕುವುದು ಅಥವಾ ನೆಲಮಟ್ಟಕ್ಕೆ ಅವುಗಳನ್ನು ಕತ್ತರಿಸುವುದು ಕಳೆಗಳನ್ನು ನಿವಾರಿಸುವ ವಿಧಾನವಾಗಿದೆ. ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಗಳನ್ನೂ, ಕಳೆನಾಶಕಗಳನ್ನು ಸಹ ಬಳಸಲಾಗುತ್ತದೆ.
10, ಕಬ್ಬಿನ ಬೆಳೆಯ ಉತ್ಪಾದನೆಯ ಪರಿಕಲ್ಪನಾ ಹರಿವು ನಕ್ಷೆಯನ್ನು ತಯಾರಿಸಲು ಈ ಕೆಳಗೆ ನೀಡಿರುವ ಅಂಶಗಳನ್ನು ಸರಿಯಾಗಿ ಹೊಂದಿಸಿ.
ಉತ್ತರ:-ಮಣ್ಣನ್ನು ಸಿದ್ಧಗೊಳಿಸುವುದು—-ಜಮೀನನ್ನು ಉಳುಮೆ ಮಾಡುವುದು ——–ಬಿತ್ತನೆ———ಗೊಬ್ಬರಗಳ ಪೂರೈಕೆ———ನೀರಾವರಿ——–ಕೊಯ್ಲು——–ಬೆಳೆಯನ್ನು ಸಕ್ಕರೆ ಕಾರ್ಖಾನೆಗೆ ಕಳುಹಿಸುವುದು.
11. ಈ ಕೆಳಗೆ ನೀಡಿರುವ ಪದ ಜಾಲದಲ್ಲಿ ಮುಂದಿನ ಸುಳುಹುಗಳನ್ನು ಬಳಸಿ ಪದಗಳ ಸುತ್ತ ವೃತ್ತಾಕಾರಕ್ಕೆ ಗೆರೆ ಎಳೆಯಿರಿ (ಮೊದಲನೆಯದನ್ನು ಉದಾಹರಣೆಯಾಗಿ ನೀಡಿದೆ).
1. ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆ – ಖಾರಿಫ್
2. ಬೆಳೆಯನ್ನು ಬೆಳೆಯುವ ಮೊದಲು ಅನುಸರಿಸುವ ಕೃಷಿಯ ಮೊದಲ ಹಂತ.
3. ಈ ಜೀವಿಯು ರೈತನ ಮಿತ್ರ,
4. ಮಣ್ಣನ್ನು ಮಟ್ಟ ಮಾಡಲು ಬಳಸುವ ಉಪಕರಣ,
5. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆ,
6. ಇದೊಂದು ರಸಗೊಬ್ಬರ
7. ಲೆಗ್ಯುಮಿನಸ್ ಸಸ್ಯಗಳ ಬೇರುಗಳ ಗಂಟುಗಳಲ್ಲಿರುವ ಬ್ಯಾಕ್ಟಿರಿಯಾ
8 .ಬೆಳೆಗಳಿಗೆ ವಿಭಿನ್ನ ಕಾಲಾಂತರಗಳಲ್ಲಿ ನೀರನ್ನು ಒದಗಿಸುವುದು,
9. ಕಾಫಿ ತೋಟಕ್ಕೆ ತುಂಬಾ ಉಪಯುಕ್ತವಾದ ನೀರಾವರಿ ವಿಧಾನ
10. ಜಮೀನಿನಲ್ಲಿ ಬೆಳೆಯ ಜೊತೆಗೆ ಬೆಳೆಯುವ ಆನಪೇಕ್ಷಿತ ಸಸ್ಯಗಳು,
II. ಪಕ್ವವಾದ ನಂತರ ಬೆಳೆಯನ್ನು ಕತ್ತರಿಸುವ ಕ್ರಿಯೆ.
12, ಕೊಯ್ಲಿನ ನಂತರ ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವ ಪ್ರಕ್ರಿಯೆ.
13. ಇದೊಂದು ನೀರಾವರಿಯ ಸಾಂಪ್ರದಾಯಿಕ ವಿಧಾನ
14. ಮಣ್ಣಿಗೆ ಎಲ್ಲಾ ಪೋಷಕಾಂಶಗಳನ್ನು ಮರುಭರ್ತಿ ಮಾಡುವ ಒಂದು ವಿಧಾನ.
15. ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುವ ಸರಳ ಉಪಕರಣ.
ಉತ್ತರ
1. ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆ – ಖಾರಿಫ್.
2. ಬೆಳೆಯನ್ನು ಬೆಳೆಯುವ ಮೊದಲು ಅನುಸರಿಸುವ ಕೃಷಿಯ ಮೊದಲ ಹಂತ – ಮಣ್ಣನ್ನು ಹದಗೊಳಿಸುವುದು.
3. ಈ ಜೀವಿಯು ‘ರೈತನ ಮಿತ್ರ’ – ಎರೆಹುಳು
4. ಮಣ್ಣನ್ನು ಮಟ್ಟ ಮಾಡಲು ಬಳಸುವ ಉಪಕರಣ -ಲೆವಲ್ಲರ್
5. ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆ – ಕೂರಿಗೆ
6. ಇದೊಂದು ರಸಗೊಬ್ಬರ – ನೈಟ್ರೋಜನ್
7. ಲೆಗ್ಯುಮಿನಸ್ ಸಸ್ಯಗಳ ಬೇರುಗಳ ಗಂಟುಗಳಲ್ಲಿರುವ ಬ್ಯಾಕ್ಟಿರಿಯಾ- ರೈಜೋಬಿಯಂ
8. ಬೆಳೆಗಳಿಗೆ ವಿಭಿನ್ನ ಕಾಲಾಂತರಗಳಲ್ಲಿ ನೀರನ್ನು ಒದಗಿಸುವುದು– ನೀರಾವರಿ
9. ಕಾಫಿ ತೋಟಕ್ಕೆ ತುಂಬಾ ಉಪಯುಕ್ತವಾದ ನೀರಾವರಿ ವಿಧಾನ – ತುಂತುರು ವಿಧಾನ
10. ಜಮೀನಿನಲ್ಲಿ ಬೆಳೆಯುವ ಜೊತೆಗೆ ಬೆಳೆಯುವ ಅನಪೇಕ್ಷಿತ ಸಸ್ಯಗಳು – ಕಳೆ
11. ಪಕ್ವವಾದ ನಂತರ ಬೆಳೆಯನ್ನು ಕತ್ತರಿಸುವ ಕ್ರಿಯೆ – ಕೊಯ್ದು
12. ಕೊಯ್ಲಿನ ನಂತರ ಹುಲ್ಲುಗಳಿಂದ ಕಾಳುಗಳನ್ನು ಬೇರ್ಪಡಿಸುವ ಪ್ರಕ್ರಿಯೆ – ಒಕ್ಕಣೆ
13. ಇದೊಂದು ನೀರಾವರಿಯ ಸಾಂಪ್ರದಾಯಿಕ ವಿಧಾನ – ಅಗಳು
14. ಮಣ್ಣಿಗೆ ಎಲ್ಲಾ ಪೋಷಕಾಂಶಗಳನ್ನು ಮರುಭರ್ತಿ ಮಾಡುವ ಒಂದು ವಿಧಾನ – ಸರದಿಪದ್ಧತಿ
15. ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುವ ಸರಳ ಉಪಕರಣ –ಎಡೆಕುಂಟೆ