ನಮ್ಮ ರಾಜ್ಯ-ಕರ್ನಾಟಕ-ಪ್ರಾಕೃತಿಕ ವಿಭಾಗಗಳು
ಅಭ್ಯಾಸಗಳು
|.ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ:
1. ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಒಂದನೆಯ ದಿನಾಂಕದಂದು ಆಚರಿಸುತ್ತೇವೆ.
2. ಕರ್ನಾಟಕ ಎಂದು ಮರುನಾಮಕರಣ ಮಾಡಿದ ವರ್ಷ 1973.
3. ಕರ್ನಾಟಕದ ಪೂರ್ವಭಾಗದಲ್ಲಿ ಆಂಧ್ರಪ್ರದೇಶ ರಾಜ್ಯವಿದೆ.
4. ಕರ್ನಾಟಕದ ಬೆಳಗಾವಿ ಜಿಲ್ಲೆಯು ವಿಸ್ತೀರ್ಣದಲ್ಲಿ ದೊಡ್ಡದಾಗಿದೆ.
5. ಕರ್ನಾಟಕವು ಭಾರತದ ದಕ್ಷಿಣ ಭಾಗದಲ್ಲಿದೆ.
6. ಮಲ್ಪೆ ಸಮೀಪದಲ್ಲಿ ಸೇಂಟ್ ಮೇರೀಸ್ ದ್ವೀಪವಿದೆ.
7. ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗವನ್ನು ಸಹ್ಯಾದ್ರಿ ಬೆಟ್ಟಗಳೆಂದು ಕರೆಯುತ್ತಾರೆ.
8. ಆಗುಂಬೆ ಘಾಟಿಯು ಶಿವಮೊಗ್ಗ ಮತ್ತು ಉಡುಪಿ ಸ್ಥಳಗಳನ್ನು ಸಂಪರ್ಕಿಸುತ್ತದೆ.
9. ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆಯನ್ನು ಕರೆಯುತ್ತಾರೆ.
||.ಗುಂಪುಗಳಲ್ಲಿ ಚರ್ಚಿಸಿ ಮತ್ತು ಕೆಳಕಂಡ ಪ್ರಶ್ನೆ ಗಳಿಗೆ ಉತ್ತರಿಸಿ.
10.ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವಿಸ್ತರಣೆಯನ್ನು ಬರೆಯಿರಿ.
ಉತ್ತರ:-ಕರ್ನಾಟಕವು 11°- 311 ಮತ್ತು 180-45l ಉತ್ತರ ಅಕ್ಷಾಂಶಗಳು ಹಾಗೂ 740-12l ಮತ್ತು 780-40l ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ.
11. ನಮ್ಮ ನೆರೆ-ಹೊರೆ ರಾಜ್ಯಗಳನ್ನು ಹೆಸರಿಸಿ.
ಉತ್ತರ:-ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ನಮ್ಮ ನೆರೆ-ಹೊರೆ ರಾಜ್ಯಗಳಾಗಿವೆ.
12.ಕರ್ನಾಟಕದ ನಾಲ್ಕು ಆಡಳಿತವಿಭಾಗಗಳಾವುವು?
ಉತ್ತರ:-ಕರ್ನಾಟಕದ ನಾಲ್ಕು ಆಡಳಿತವಿಭಾಗಗಳು ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ.
13.ಭಾರತದಲ್ಲಿ ಕರ್ನಾಟಕದ ಭೌಗೋಳಿಕ ಸ್ಥಾನ ವನ್ನು ತಿಳಿಸಿ.
ಉತ್ತರ:-ಭಾರತದ 28 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಇದು ಭಾರತದ ದಕ್ಷಿಣದಲ್ಲಿದ್ದು, ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ. ಕರ್ನಾಟಕವು 11°- 311 ಮತ್ತು 180-45l ಉತ್ತರ ಅಕ್ಷಾಂಶಗಳು ಹಾಗೂ 740-12l ಮತ್ತು 780-40l ಪೂರ್ವ ರೇಖಾಂಶಗಳ ನಡುವೆ ವಿಸ್ತರಿಸಿದೆ.
ಅತ್ಯಂತ ಉತ್ತರದ ತುದಿಯಾದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಿಂದ ದಕ್ಷಿಣದ ತುದಿಯಾದ ಚಾಮರಾಜನಗರ ಜಿಲ್ಲೆಯವರೆಗೆ ಒಟ್ಟು ೭೫೦ ಕಿ.ಮೀ. ಉದ್ದವಾಗಿದೆ. ಪಶ್ಚಿಮದಿಂದ ಪೂರ್ವಕ್ಕೆ 400ಕಿ.ಮೀ.ಗಳಷ್ಟು ಅಗಲವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರವು ಅತ್ಯಂತ ಪಶ್ಚಿಮದಲ್ಲಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಪೂರ್ವ ತುದಿಯಲ್ಲಿದೆ. ಕರ್ನಾಟಕ ರಾಜ್ಯವು ಭೂ ಮತ್ತು ಜಲ ಮೇರೆಗಳೆರಡನ್ನೂ ಸಹ ಒಳಗೊಂಡಿರುವುದು. ಪಶ್ಚಿಮಕ್ಕೆ ಅರಬ್ಬಿ ಸಮುದ್ರವಿದ್ದು, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರಪ್ರದೇಶ, ದಕ್ಷಿಣ ಮತ್ತು ಆಗ್ನೇಯಕ್ಕೆ ತಮಿಳುನಾಡು, ನೈಋತ್ಯಕ್ಕೆ ಕೇರಳ, ವಾಯವ್ಯಕ್ಕೆ ಗೋವಾ ರಾಜ್ಯಗಳು ಮೇರೆಗಳಾಗಿವೆ. ಆಕಾರದಲ್ಲಿ ಕರ್ನಾಟಕವು ಗೋಡಂಬಿಯನ್ನು ಹೋಲುತ್ತದೆ.
14.ಕರ್ನಾಟಕದ ಪ್ರಮುಖ ಪ್ರಾಕೃತಿಕ ವಿಭಾಗಗಳನ್ನು ತಿಳಿಸಿರಿ.
ಉತ್ತರ:-ಭೂರಚನೆ ಮತ್ತು ಮೇ ಲಕ್ಷಣಗಳನ್ನಾಧರಿಸಿ ಕರ್ನಾಟಕವನ್ನು
೧. ಕರಾವಳಿ ಮೈದಾನ
೨. ಮಲೆನಾಡು
೩. ಮೈದಾನ ಪ್ರದೇಶವೆಂದು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ.
15.ಮಲೆನಾಡು ಪ್ರದೇಶದ ಲಕ್ಷಣಗಳನ್ನು ಕುರಿತು ಬರೆಯಿರಿ.
ಉತ್ತರ:-ಮಲೆನಾಡು ಉತ್ತರ ದಕ್ಷಿಣವಾಗಿ ಕರಾವಳಿಗೆ ಸಮಾನಾಂತರವಾಗಿ ಹಬ್ಬಿವೆ. ಪಶ್ಚಿಮ ಭಾಗವು ಕಡಿದಾದ ಇಳಿಜಾರನ್ನು ಹೊಂದಿದ್ದು, ಪೂರ್ವದ ಕಡೆಗೆ ಹೋದಂತೆ ನಿಧಾನವಾಗಿ ಹಂತ ಹಂತವಾಗಿ ಇಳಿಜಾರಾಗುತ್ತಾ ಹೋಗುತ್ತದೆ. ಆದ್ದರಿಂದಲೇ ಇದನ್ನು ಘಟ್ಟಗಳೆಂದು ಕರೆಯುತ್ತಾರೆ. ಇದರ ಉದ್ದ 650 ಕಿ.ಮೀ. ಅಗಲ 50-76 ಕಿ.ಮೀ.ಗಳು. ಸರಾಸರಿ ಎತ್ತರ ಸಮುದ್ರ ಮಟ್ಟಕ್ಕೆ 900 ರಿಂದ 1500 ಮೀ.ಗಳು. ಇದು ಅರಬ್ಬಿ ಸಮುದ್ರದಿಂದ ಬೀಸುವ ಮಳೆ ಮಾರುತಗಳನ್ನು ತಡೆದು 200 ಸೆಂ.ಮೀ.ಗಿಂತ ಹೆಚ್ಚು ಮಳೆ ಪಡೆಯುತ್ತದೆ. ಇದು ಅಧಿಕ ಮಳೆಯನ್ನು ಪಡೆಯುವು ದರಿಂದ ನಿತ್ಯಹರಿದ್ವರ್ಣದ ಅರಣ್ಯಗಳಿಂದ ಕೂಡಿದ ಮನೋಹರ ತಾಣಗಳನ್ನು ಹೊಂದಿದೆ. ಇದು ಕರ್ನಾಟಕದ ಹಲವು ನದಿಗಳ ಉಗಮಸ್ಥಾನವಾಗಿದ್ದು, ಅನೇಕ ಜಲಪಾತ ಗಳನ್ನು ನಿರ್ಮಿಸಿದೆ.
೧೬. ಕರ್ನಾಟಕದ ಕರಾವಳಿ ಮೈದಾನದ ಬಗ್ಗೆ ಬರೆಯಿರಿ.
ಉತ್ತರ:-ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಫಲವಾಗಿ ಕರ್ನಾಟಕ ರಾಜ್ಯಕ್ಕೆ ಸಮುದ್ರ ತೀರ ಹಾಗೂ ಕರಾವಳಿ ಮೈದಾನ ಲಭ್ಯವಾಯಿತು. ಈ ಪ್ರಾಕೃತಿಕ ವಿಭಾಗವು ಅರಬ್ಬಿ ಸಮುದ್ರ ಮತ್ತು ಮಲೆನಾಡುಗಳ ಮಧ್ಯೆ ವಿಸ್ತರಿಸಿದೆ. ಇದು ದಕ್ಷಿಣದಲ್ಲಿ ಮಂಗಳೂರಿನಿಂದ ಉತ್ತರದಲ್ಲಿ ಕಾರವಾರದವರೆಗೆ 320 ಕಿ.ಮೀ. ಉದ್ದವಾಗಿದೆ ಹಾಗೂ 12 ರಿಂದ 64ಕಿ.ಮೀ. ಅಗಲವಾಗಿದೆ. ದಕ್ಷಿಣದಲ್ಲಿ ಅಗಲವಾಗಿದ್ದು ಉತ್ತರದ ಕಡೆಗೆ ಕಿರಿದಾಗುತ್ತಾ ಕಡಿದಾದ ಇಳಿಜಾರಿನಿಂದ ಕೂಡಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 200 ಮೀಟರ್ಗಳನ್ನು ಮೀರುತ್ತದೆ. ಇದನ್ನು ‘ಕೆನರಾ ಅಥವಾ ಕರ್ನಾಟಕ ಕರಾವಳಿ’ ಎಂದೇ ಕರೆಯುವರು. ಕಡಲ ಕೊರೆತದಿಂದ ರಚಿತವಾದ ಈ ಕರಾವಳಿಯ ಮೂಲಕ ಹಲವು ನದಿಗಳು ರಭಸದಿಂದ ಹರಿಯುತ್ತವೆ. ಅವು ಅಳಿವೆಗಳನ್ನು ನಿರ್ಮಿಸುತ್ತವೆ. ಕರಾವಳಿಯ ಉದ್ದಕ್ಕೂ ಅನೇಕ ಬಂದರುಗಳು, ಸುಂದರ ಸಮುದ್ರ ತೀರಗಳು, ಸಣ್ಣ ಸಣ್ಣ ದ್ವೀಪಗಳಿವೆ. ಕರಾವಳಿಯ ಜನರ ಮುಖ್ಯ ವೃತ್ತಿ ಮೀನುಗಾರಿಕೆ. ಜೊತೆಗೆ ಕೃಷಿಯೂ ಮತ್ತೊಂದು ಪ್ರಮುಖ ವೃತ್ತಿಯಾಗಿದೆ. ಇಲ್ಲಿ ಗೋಡಂಬಿ, ತೆಂಗು, ಅಡಿಕೆ, ಏಲಕ್ಕಿ, – ಭತ್ತ ಮೊದಲಾದ ಬೆಳೆಗಳನ್ನು ಬೆಳೆಯುವರು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕರಾವಳಿಯ – ಜಿಲ್ಲೆಗಳಾಗಿವೆ.
೧೭.ದಕ್ಷಿಣದ ಬಯಲು ಸೀಮೆಯ ಪ್ರಮುಖ ಬೆಟ್ಟ ಗಳನ್ನು ಹೆಸರಿಸಿ.
ಉತ್ತರ:-ಚಿತ್ರದುರ್ಗದ ಬೆಟ್ಟಗಳು, ಬೆಂಗಳೂರು ಗ್ರಾಮಾಂತರ ಜಲ್ಲೆಯ ನಾರಾಯಣದುರ್ಗ, ಸಾವನದುರ್ಗ, ಶಿವಗಂಗೆ, ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟ, ನಂದಿ ಗಿರಿಧಾಮ, ಚನ್ನಕೇಶವ ಬೆಟ್ಟ, ಕವಲೆದುರ್ಗ ಹಾಗೂ ಸ್ಕಂದಗಿರಿ, ಆದಿ ಚುಂಚನಗಿರಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಮಲೆಮಹ ದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಚಾಮುಂಡಿ ಬೆಟ್ಟ.
೧೮.ಪಶ್ಚಿಮ ಘಟ್ಟಗಳಲ್ಲಿರುವ ಪ್ರಮುಖ ಪರ್ವತ ಘಾಟಿಗಳಾವುವು?
ಉತ್ತರ:-ಚಾರ್ಮಾಡಿ ಘಾಟಿ, ಶಿರಾಡಿ ಘಾಟಿ, ಆಗುಂಬೆ ಘಾಟಿ, ಹುಲಿಕಲ್ ಘಾಟಿ.
III. ಹೊಂದಿಸಿ ಬರೆಯಿರಿ.
1. ಜೋಗ್ ಜಲಪಾತ ಎ) ಮಂಗಳೂರು
2. ಓಂ ಬೀಚ್ ಬಿ) ಉತ್ತರದ ಮೈದಾನ
3. ನಂದಿ ಗಿರಿಧಾಮ ಸಿ) ಶರಾವತಿ ನದಿ
4. ಏಕಶಿಲಾ ಬೆಟ್ಟ ಡಿ) ಗೋಕರ್ಣ
5. ಬಿಸಿಲನಾಡು ಇ) ಚಿಕ್ಕಬಳ್ಳಾಪುರ
ಎಫ್) ಮಧುಗಿರಿ ಬೆಟ್ಟ
ಉತ್ತರ:-
1. ಜೋಗ್ ಜಲಪಾತ ಸಿ) ಶರಾವತಿ ನದಿ
2. ಓಂ ಬೀಚ್ ಡಿ) ಗೋಕರ್ಣ
3. ನಂದಿ ಗಿರಿಧಾಮ ಇ) ಚಿಕ್ಕಬಳ್ಳಾಪುರ
4. ಏಕಶಿಲಾ ಬೆಟ್ಟ ಎಫ್) ಮಧುಗಿರಿ ಬೆಟ್ಟ
5. ಬಿಸಿಲನಾಡು ಬಿ) ಉತ್ತರದ ಮೈದಾನ