6 ರಿಂದ 14 ನೇ ಶತಮಾನದ ಭಾರತ
ಅಭ್ಯಾಸಗಳು
|. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1. ಗುರ್ಜರ ಪ್ರತಿಹಾರ ರಜಪೂತ ಮನೆತನದ ಸ್ಥಾಪಕ ಹರಿಶ್ಚಂದ್ರ
2. ಪೃಥ್ವಿರಾಜ ಚೌವ್ಹಾಣನು ಮೊದಲನೆಯ ತರೈನ್ ಕಾಳಗ ದಲ್ಲಿ ಘೋರಿಮಹಮ್ಮದ್ ನನ್ನು ಸೋಲಿಸಿದನು.
3. ಮೊಹಮ್ಮದ್ ಘೋರಿಯ ಪ್ರಮುಖ ದಂಡನಾಯಕ ಕುತ್ಬುದ್ದೀನ್ ಐಬಕ್
4. ದೆಹಲಿ ಸುಲ್ತಾನರಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮಹಿಳೆ ರಜಿಯಾ ಸುಲ್ತಾನ
5. ಖಿಲ್ಜಿ ವಂಶದ ಪ್ರಸಿದ್ಧ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ
6. ತುಘಲಕ್ ಕಾಲದಲ್ಲಿ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾಯಿಸಲಾಯಿತು.
||. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
7. ರಜಪೂತ ಅರಸರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ವಿವರಿಸಿ.
ಉತ್ತರ:-ರಜಪೂತ ಅರಸರು ವಿದ್ವಾಂಸರುಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಭೋಜ, ಮುಂಜ ಎಂಬ ರಜಪೂತ ಅರಸರುಗಳೇ ಸ್ವತಃ ವಿದ್ವಾಂಸರಾಗಿದ್ದರು. ಮುಂಜ ರಾಜನು ಪದ್ಮಗುಪ್ತ, ಹಲಾಯುಧ ಎಂಬ ಕವಿಗಳಿಗೆ ಆಶ್ರಯ ನೀಡಿದ್ದನು. ಭೋಜರಾಜನ ಕಾಲದಲ್ಲಿ ಶಾಂತಿಸೇನ, ಪ್ರಭಾಚಂದ್ರ ಸೂರಿ, ಘನಪಾಲ ಎಂಬ ಜೈನ ಪಂಡಿತರು ಆಶ್ರಯ ಪಡೆದಿದ್ದರು. ಜಯದೇವನ ‘ಗೀತಗೋವಿಂದ’, ಭಾರವಿಯ ‘ಕಿರಾತಾರ್ಜುನೀಯ’, ಭತೃಹರಿಯ ‘ರಾವಣ ವಧಾ’, ಮಹೇಂದ್ರಪಾಲನ ‘ಕಾವ್ಯ ಮೀಮಾಂಸೆ’ ಕಾವ್ಯಗಳು ಇವರ ಕಾಲದಲ್ಲಿ ರಚನೆಯಾದವು. ನಾಟಕಗಳಾದ ರಾಜಶೇಖರ ರಚಿಸಿದ ‘ಬಾಲ ರಾಮಾಯಣ’ ಮತ್ತು ‘ಕರ್ಪೂರ ಮಂಜರಿ’, ಭವಭೂತಿ ರಚಿಸಿದ‘ಮಹಾವೀರಚರಿತ’ ಹಾಗೂ ‘ಉತ್ತರರಾಮಚರಿತ’, ಐತಿಹಾಸಿಕ ಕೃತಿಗಳಾದ ಕಲ್ಹಣನ ‘ರಾಜ ತರಂಗಿಣಿ’,
ಜಯನಿಕನ ‘ಪೃಥ್ವೀರಾಜ ವಿಜಯ’ ಮತ್ತು ಹೇಮಚಂದ್ರನ ‘ಕುಮಾರಪಾಲಚರಿತ’ ಮಹತ್ವದ್ದಾಗಿವೆ. ರಜಪೂತ ಅರಸರ ಜೀವನ ಕೃತಿಗಳಾದ ‘ಪೃಥ್ವೀರಾಜ ರಾಸೋ’ವನ್ನು ಚಾಂದ್ಬರ್ದಾಯಿ ಮತ್ತು‘ಭೋಜ ಪ್ರಬಂಧ’ ವನ್ನು ಬಲ್ಲಾಳ ಎಂಬುವನು ರಚಿಸಿದನು. ಈ ಕಾಲದಲ್ಲಿ ಗುಜರಾತಿ, ರಾಜಸ್ಥಾನಿ, ಹಿಂದಿ ಭಾಷೆಗಳು ಅಭಿವೃದ್ಧಿಯತ್ತ ಸಾಗಿದವು.
8. ಕಾಶ್ಮೀರದ ಕಾರ್ಕೋಟ ಮನೆತನದ ಪ್ರಮುಖ ಅರಸ ಯಾರು? ಅವನು ತನ್ನ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸಿದನು?
ಉತ್ತರ:-ಕಾಶ್ಮೀರದ ಕಾರ್ಕೋಟ ಮನೆತನದ ಪ್ರಮುಖ ಅರಸ ಲಲಿತಾದಿತ್ಯ ಮುಕ್ತಾಪೀಡ. ಲಲಿತಾದಿತ್ಯನ ಆಸ್ಥಾನ ಕವಿಯಾಗಿದ್ದ ಕಲ್ದಣನ ‘ರಾಜತರಂಗಿಣಿ’ಯಲ್ಲಿ ಹಾಗು ಅಲ್ಬೆರೂನಿ ಬರೆದ ‘ತಾರಿಖ್ ಹಿಂದ್’ ಕೃತಿಯಲ್ಲಿ ಈತನ ಸಾಹನಗಳ ಬಗ್ಗೆ ವರ್ಣನೆ ಇದೆ. ಲಲಿತಾದಿತ್ಯ ಮೂಲತಹಃ ಶೂರನೂ, ಧೀರನೂ, ಮಹತ್ವಾಕಾಂಕ್ಷಿಯೂ ಆಗಿದ್ದನು. ಪ್ರಾರಂಭದಲ್ಲಿ ಈತ ಕನೌಜದ ಯಶೋವರ್ಮ ನನ್ನು ಯುದ್ಧದಲ್ಲಿ ಸೋಲಿಸಿ, ನಂತರ ಕಾಬೂಲ್ ಪ್ರಾಂತ್ಯವನ್ನಾಳುತ್ತಿದ್ದ ಶಾಹಿ ವಂಶಸ್ಥರನ್ನು ಸೋಲಿಸಿ ಆ ಪ್ರದೇಶದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದನು. ವಿಂಧ್ಯಾಚಲದ ಬಹಳಷ್ಟು ರಾಜರ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಸಾಧಿಸಿ, ಈ ಭಾಗಗಲ್ಲಿ ತನಗೆ ಯಾರೂ ಹಗೆಗಳಾಗದಂತೆ ನೋಡಿಕೊಂಡನು. ರಾಷ್ಟ್ರಕೂಟರ ಜೊತೆಯಲ್ಲಿಯೂ ಲಲಿತಾದಿತ್ಯನು ಸ್ನೇಹ ಸಂಬಂಧಗಳನ್ನು ಬೆಳೆಸಿಕೊಂಡನು. ಪೂರ್ವದಲ್ಲಿ ತನ್ನ ಸಾಮ್ರಾಜ್ಯದ ಪ್ರಭಾವವನ್ನು ಬಂಗಾಳದವರೆಗೆ ವಿಸ್ತರಿಸಿದನು. ಚೀನಾದ ಟಾಂಗ್ ರಾಜರುಗಳ ಜೊತೆ ಸ್ನೇಹ ಸಂಪಾದಿಸಿ ಅವರ ನೆರವುಪಡೆದು ಟಿಬೆಟನ್ನರ ಮೇಲೆ ಯುದ್ಧ ಮಾಡಿ ಅವರ ವಶದಲ್ಲಿದ್ದ ವಾಯುವ್ಯ ಭಾರತದ ಬಹಳಷ್ಟು ರಾಜ್ಯಗಳನ್ನು ಸ್ವತಂತ್ರ ಗೊಸಿದನು. ಅಲ್ಲದೆ ತನ್ನ ಕಾರ್ಕೋಟ ಸಾಮ್ರಾಜ್ಯವನ್ನು ಟರ್ಕಿಯವರೆಗೆ ವಿಸ್ತರಿಸಿದನು. ಆಗಿನ ಕಾರ್ಕೋಟ ರಾಜ್ಯವು ಇಂದಿನ ಉಜ್ಬೆಕಿಸ್ತಾನ, ತಜಕಿಸ್ತಾನ, ಕಿರ್ಗಿಸ್ತಾನ, ಕಜಕಿಸ್ತಾನ, ಕಾಬೂಲಗಳನ್ನೆಲ್ಲ ಒಳಗೊಂಡಿತ್ತು.
9. ಇಲ್ತಮಶ್ನ ಆಡಳಿತ ಪದ್ಧತಿಯನ್ನು ಸ್ಕೂಲವಾಗಿ ವಿವರಿಸಿ.
ಉತ್ತರ:-ಇಲ್ತಮಶ್ ರಾಜ್ಯವನ್ನು ಅನೇಕ ಇಕ್ತಾಗಳನ್ನಾಗಿ ವಿಂಗಡಿಸಿ, ಆಡಳಿತ ನಿರ್ವಹಣೆಗಾಗಿ ಇಕ್ತಾದಾರರನ್ನು ನೇಮಿಸಿದನು. ಆಡಳಿತದಲ್ಲಿ ಸಲಹೆ ಸೂಚನೆ ನೀಡಲು ‘ನಲವತ್ತು ಸರದಾರರ ಕೂಟ’ ನೇಮಕ ಮಾಡಿದನು. ಪ್ರಧಾನ ಮಂತ್ರಿ ಮತ್ತು ನ್ಯಾಯಾಧೀಶರು ಸುಲ್ತಾನನಿಗೆ ಸಲಹೆ ನೀಡುತ್ತಿದ್ದರು.
ಇಲ್ತಮಶ್ನು ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ಚಲಾವಣೆಗೆ ತಂದನು. ಇವನು ಕುತ್ಬುದ್ದೀನನಕಾಲದಲ್ಲಿ ನಿರ್ಮಿಸಲು ಪ್ರಾರಂಭಿಸಿದ್ದ ದೆಹಲಿಯ ಕುತುಬ್ಮಿನಾರನ್ನು ಪೂರ್ಣಗೊಳಿಸಿದನು.
10. ಅಲ್ಲಾವುದ್ದೀನ್ ಖಿಲ್ಟಿಯ ಆಡಳಿತಾತ್ಮಕ ಸುಧಾರಣೆಗಳಾವುವು?
ಉತ್ತರ:-ಅಲ್ಲಾವುದ್ದೀನ್ ಖಿಲ್ಟಿಯು ಆಡಳಿತದಲ್ಲಿ ಹಲವು ಸುಧಾರಣೆಗಳನ್ನು ಕೈಗೊಂಡನು. ಧಾರ್ಮಿಕ ದತ್ತಿ, ಇನಾಮ್ ಭೂಮಿ ಮತ್ತು ಸಹಾಯಧನಗಳನ್ನು ರದ್ದುಗೊಳಿಸಿದನು. ದಕ್ಷ ಗೂಢಚಾರ ವ್ಯವಸ್ಥೆ ರಚಿಸಿದನು. ಮದ್ಯಪಾನ, ಮಾದಕ ವಸ್ತುಗಳ ಮಾರಾಟ, ಪಗಡೆಯಾಟಗಳನ್ನು ನಿಷೇಧಿಸಿದನು. ಸರದಾರರ ಕೂಟ, ಸಾರ್ವಜನಿಕರೊಂದಿಗಿನ ಸ್ನೇಹ ಸಮಾರಂಭ ಹಾಗೂ ಅಂತರಜಾತಿ ವಿವಾಹಗಳನ್ನು ನಿಷೇಧಿಸಿದನು. ಪ್ರಜೆಗಳಿಂದ ಅಧಿಕ ಪ್ರಮಾಣದ ತೆರಿಗೆ ಸಂಗ್ರಹಿಸಲು ಆದೇಶ ನೀಡಿದನು.
11. ಮಹಮ್ಮದ್-ಬಿನ್ ತುಘಲಕ್ನು ಜಾರಿಗೊಳಿಸಿದ ಆಡಳಿತಾತ್ಮಕ ಸುಧಾರಣೆಗಳನ್ನು ತಿಳಿಸಿ.
ಉತ್ತರ:--ಸಾಮ್ರಾಜ್ಯದ ಭೂಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ಎಲ್ಲ ವಿವರಗಳನ್ನೊಳಗೊಂಡ ಅಧಿಕೃತ ದಾಖಲೆ ಪುಸ್ತಕವನ್ನು ತಯಾರಿಸಿದನು. ಕೃಷಿ ಇಲಾಖೆಯನ್ನು ಸ್ಥಾಪಿಸಿದನು. ಕೃಷಿಗೆ ಒಳಪಡದ ಭೂಮಿಯನ್ನು ಸಾಗುವಳಿಗೆ ಒಳಪಡಿಸಿದನು. ರೈತರಿಗೆ ಆರ್ಥಿಕ ನೆರವು ನೀಡಿದನು. ದೋ- ಅಬ್ ಪ್ರದೇಶದಲ್ಲಿ ಭೂಕಂದಾಯವನ್ನು ಹೆಚ್ಚಿಸಿದನು. ವಿಶಾಲವಾದ ಸಾಮ್ರಾಜ್ಯಕ್ಕೆ ರಾಜಧಾನಿ ಕೇಂದ್ರಭಾಗದಲ್ಲಿರ ಬೇಕು ಹಾಗೂ ಪರಕೀಯರ ದಾಳಿಗಳಿಂದ ರಕ್ಷಿಸಲು ಅನುಕೂಲ ವಾಗಿರಬೇಕೆಂಬ ಉದ್ದೇಶದಿಂದ ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾಯಿಸಿದನು. ನಾಣ್ಯಗಳ ಮೌಲ್ಯವನ್ನು ತನ್ನ ಕಾಲದ ಬಂಗಾರ ಮತ್ತು ಬೆಳ್ಳಿಯ ಮೌಲ್ಯಕ್ಕೆ ಸರಿಹೊಂದುವಂತೆ ಮಾಡಿದನು. ದಿನಾರ ಎಂಬ ಬಂಗಾರದ ಹಾಗೂ ಅದಲಿ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದನು. ಕೆಲವು ವರ್ಷಗಳ ನಂತರ ತಾಮ್ರ ಮತ್ತು ಹಿತ್ತಾಳೆಯ ಸಾಂಕೇತಿಕ ನಾಣ್ಯಗಳನ್ನು ಚಲಾವಣೆಗೆ ತಂದನು.
12. ದೆಹಲಿ ಸುಲ್ತಾನರು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಾವುವು? ಉದಾಹರಿಸಿ.
ಉತ್ತರ:-ದೆಹಲಿ ಸುಲ್ತಾನರು ಭಾರತದಲ್ಲಿ ಇಂಡೋ-ಇಸ್ಲಾಮಿಕ್ ಎಂಬ ಹೊಸ ಶೈಲಿಯ ವಾಸ್ತುಶಿಲ್ಪವನ್ನು ಪರಿಚಯಿಸಿದರು. ಕಮಾನುಗಳು, ಗುಮ್ಮಟಗಳು ಹಾಗೂ ಮಿನಾರ್ ಗಳು ಈ ಶೈಲಿಯ ಮುಖ್ಯ ಲಕ್ಷಣಗಳು. ದೆಹಲಿ ಸುಲ್ತಾನರು ಕೋಟೆ, ಮಸೀದಿ, ಅರಮನೆ, ಸಾರ್ವಜನಿಕ ಕಟ್ಟಡ, ಮದರಸಾ, ಧರ್ಮಶಾಲೆಗಳನ್ನು ನಿರ್ಮಿಸಿದರು. ಇಂಡೋ-ಇಸ್ಲಾಮಿಕ್ ಶೈಲಿಗೆ ಉದಾಹರಣೆ: ದೆಹಲಿಯ ಕುವತ್-ಉಲ್-ಇಸ್ಲಾಂ ಮಸೀದಿ, ಕುತುಬ್ ಮಿನಾರ್, ಅಲೈ ದರವಾಜಾ, ಜಮೈತ್ ಖಾನಾ ಮಸೀದಿಗಳು.
13. ಮೊದನೇ ಪಾಣಿಪತ್ ಕದನದ ಪರಿಣಾಮವೇನು?
ಉತ್ತರ:-ಲೋದಿ ಸಂತತಿಯ ಇಬ್ರೂಹಿಂ ಲೋದಿಯು ಅಸಮರ್ಥನಾಗಿದ್ದನು. ಭಾರತದ ಮೇಲೆ ದಾಳಿ ಮಾಡುವಂತೆ ಈತನ ರಾಜ್ಯಪಾಲರಾದ ಆಲಂಖಾನ್ ಮತ್ತು ದೌಲತ್ ಖಾನ್ ಆಫ್ಘನ್ನರಿಗೆ ಆಮಂತ್ರಣ ನೀಡಿದರು. ಅದರಂತೆ ಬಾಬರ್ ಭಾರತದ ಮೇಲೆ ದಾಳಿ ಮಾಡಿ 1526ರಲ್ಲಿ ಮೊದಲನೇ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೋದಿ ಯನ್ನು ಸೋಲಿಸಿ ಮೊಘಲರ ಆಳ್ವಿಕೆ ಪ್ರಾರಂಭಿಸಿದನು.