ಸಂವಿಧಾನ
ಅಭ್ಯಾಸ
|.ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತಪದಗಳಿಂದ ಭರ್ತಿ ಮಾಡಿರಿ.
1. ರಾಜ್ಯವನ್ನಾಳುವ ಮೂಲ ಕಾನೂನೇ ಸಂವಿಧಾನ
2. ಸಂವಿಧಾನ ರಚನಾ ಸಭೆಯ ಮೊದಲ ಸಭೆ ಡಿಸೆಂಬರ್ 9, 1946 ರಂದು ನಡೆಯಿತು.
3. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದವರು ಡಾ. ಬಿ.ಆರ್.ಅಂಬೇಡ್ಕರ್.
4. ನಮ್ಮ ಸಂವಿಧಾನವು ಸಂಸದೀಯ ಸರ್ಕಾರ ಪದ್ಧತಿಗೆ ಅವಕಾಶ ಮಾಡಿಕೊಟ್ಟಿದೆ.
5. ನಮ್ಮ ಸಂವಿಧಾನವು ಪ್ರಜೆಗಳಿಗೆ ಏಕ ಪೌರತ್ವಕ್ಕೆ ಅವಕಾಶ ಮಾಡಿಕೊಟ್ಟಿದೆ.
6. ಸಂವಿಧಾನಾತ್ಮಕ ಪರಿಹಾರಗಳ ಹಕ್ಕನ್ನು 32 ನೇ ವಿಧಿಯಲ್ಲಿ ಅಳವಡಿಸಲಾಗಿದೆ.
7. ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ಐರಿಷ್ ಸಂವಿಧಾನ ದಿಂದ ಪಡೆಯಲಾಗಿದೆ.
||.ಈ ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.
8. ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರು?
ಉತ್ತರ:-ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಡಾ. ರಾಜೇಂದ್ರಪ್ರಸಾದ್.
9. ಸಂವಿಧಾನ ಜಾರಿಗೆ ಬಂದಿದ್ದು ಯಾವಾಗ?
ಉತ್ತರ:-ಜನವರಿ 26, 1950 ರಂದು ಸಂವಿಧಾನ ಜಾರಿಗೆ ಬಂದಿತು.
10.ಭಾರತ ಸಂವಿಧಾನದ ಪ್ರಸ್ತಾವನೆಯ ಸಾರಾಂಶ ವನ್ನು ತಿಳಿಸಿ
ಉತ್ತರ:-ಭಾರತ ಸಂವಿಧಾನದ ಪ್ರಸ್ತಾವನೆ ಭಾರತದ ರಾಜಕೀಯ ವ್ಯವಸ್ಥೆಯ ಪದ್ಧತಿ, ತತ್ವಗಳು, ಧ್ಯೇಯಗುರಿಗಳು ಮತ್ತು ಮೌಲ್ಯಗಳ ಸಾರಸತ್ವವಾಗಿದೆ.
11. ಜಾತ್ಯತೀತತೆ ಎಂದರೇನು?
ಉತ್ತರ:-ಎಲ್ಲಾ ಧರ್ಮಗಳನ್ನು ಸಮಾನತೆಯಿಂದ ಕಾಣಬೇಕೆಂಬುದನ್ನು ಪ್ರತಿಪಾದಿಸುವುದೇ ಜಾತ್ಯತೀತತೆ.
ಒಟ್ಟಿನಲ್ಲಿ ಸರ್ವಧರ್ಮ ಸಮಭಾವದ ನೀತಿಯನ್ನು ಅನುಸರಿಸುವುದೇ ಜಾತ್ಯತೀತತೆಯಾಗಿದೆ.
12.ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳನ್ನು ವಿವರಿಸಿ.
ಉತ್ತರ:-ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳು
ಲಿಖಿತ ಮತ್ತು ಬೃಹತ್ ಸಂವಿಧಾನ : ಭಾರತ ಸಂವಿಧಾನವು ಲಿಖಿತ ರೂಪದಲ್ಲಿದೆ. ಸರ್ಕಾರದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ರಚನೆ, ಅಧಿಕಾರ ಮತ್ತು ಕಾರ್ಯವ್ಯಾಪ್ತಿ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ರಾಜ್ಯನೀತಿ ನಿರ್ದೇಶಕ ತತ್ವಗಳು ಬರವಣಿಗೆಯ ರೂಪದಲ್ಲಿವೆ. ನಮ್ಮ ಸಂವಿಧಾನವು ಮೂಲತಃ 22 ಭಾಗಗಳು, 8 ಅನುಸೂಚಿಗಳು ಮತ್ತು 395 ವಿಧಿಗಳನ್ನು ಹೊಂದಿತ್ತು. ನಂತರದಲ್ಲಿ ಹಲವಾರು ತಿದ್ದುಪಡಿಗಳಿಂದಾಗಿ 25 ಭಾಗಗಳು, 12 ಅನುಸೂಚಿಗಳು ಮತ್ತು ಸುಮಾರು 470ಕ್ಕೂ ಹೆಚ್ಚು ವಿಧಿಗಳನ್ನು ಒಳಗೊಂಡ ಬೃಹತ್ ಸಂವಿಧಾನವಾಗಿದೆ.
ಭಾಗಶಃ ನಮ್ಯ, ಭಾಗಶಃ ಅನಮ್ಯ ಸಂವಿಧಾನ : ಭಾರತದ ಸಂವಿಧಾನದ ತಿದ್ದುಪಡಿ ವಿಧಾನವು ಅತಿ ಸರಳವೂ ಆಗಿರದೆ, ಅತಿ ಕಠಿಣವೂ ಆಗಿರದೆ ಸರಳ ಮತ್ತು ಕಠಿಣತೆಗಳ ಮಿಶ್ರಣವಾಗಿದೆ.
ಸಂಸದೀಯ ಸರ್ಕಾರ ಪದ್ಧತಿ :- ನಮ್ಮ ಸಂವಿಧಾನವು ಸಂಸದೀಯ ಸರ್ಕಾರ ಪದ್ಧತಿಗೆ ಅವಕಾಶ ಮಾಡಿಕೊಟ್ಟಿದೆ. ದೇಶದ ಸಾರ್ವಭೌಮ ಅಧಿಕಾರವನ್ನು ಚುನಾಯಿತ ಸಂಸತ್ತಿಗೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾರ್ಯಾಂಗವು ಶಾಸಕಾಂಗಕ್ಕೆ ಹೊಣೆಯಾಗಿದೆ. ಮಂತ್ರಿಮಂಡಲವು ಶಾಸಕಾಂಗದ ವಿಶ್ವಾಸವಿರುವವರೆಗೂ ಅಧಿಕಾರದಲ್ಲಿರುತ್ತದೆ. ಶಾಸಕಾಂಗದ ವಿಶ್ವಾಸ ಕಳೆದುಕೊಂಡ ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.
ಗಣತಂತ್ರ ವ್ಯವಸ್ಥೆ :- ರಾಷ್ಟçದ ಮುಖ್ಯಸ್ಥರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿಸುವ ರಾಜಕೀಯ ವ್ಯವಸ್ಥೆಯನ್ನು ಗಣತಂತ್ರ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಭಾರತದ ರಾಜಕೀಯ ವ್ಯವಸ್ಥೆಯ ಮುಖ್ಯಸ್ಥರಾದ ರಾಷ್ಟಾçಧ್ಯಕ್ಷರನ್ನು ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡುವುದರಿಂದ ಭಾರತವು ಒಂದು ಗಣತಂತ್ರ ವ್ಯವಸ್ಥೆಯಾಗಿದೆ. ಗಣತಂತ್ರ ಎಂಬ ಪದವು ಭಾರತವು ಯಾವುದೇ ಅನುವಂಶೀಯ ರಾಜ ಅಥವಾ ರಾಣಿಯ ಆಳ್ವಿಕೆಗೆ ಒಳಪಟ್ಟಿಲ್ಲ ಎಂಬುದನ್ನು ಸೂಚಿಸುತ್ತದೆ.
ಒಕ್ಕೂಟ ವ್ಯವಸ್ಥೆ :- ಭಾರತವು ವಿವಿಧ ಭಾಷೆ, ಜಾತಿ, ಜನಾಂಗ ಮತ್ತು ವಿಶಾಲ ಭೂಪ್ರದೇಶ ಹೊಂದಿರುವುದರಿAದ ಸಂವಿಧಾನವು ಒಕ್ಕೂಟ ಪದ್ಧತಿಗೆ ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯಾಗಿದೆ (ಕೇಂದ್ರಪಟ್ಟಿ 100 ವಿಷಯಗಳು, ರಾಜ್ಯಪಟ್ಟಿ 61 ವಿಷಯಗಳು ಮತ್ತು ಸಮವರ್ತಿ ಪಟ್ಟಿ 52 ವಿಷಯಗಳನ್ನು ಒಳಗೊಂಡಂತೆ ಅಧಿಕಾರ ವಿಭಜನೆಯಾಗಿದೆ). ಈ ಎರಡೂ ಸರ್ಕಾರಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸಲು ಸರ್ವೋಚ್ಛ ನ್ಯಾಯಾಲಯವು ಅಧಿಕಾರ ಪಡೆದಿದೆ.
13.ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳಾವುವು?
ಉತ್ತರ:-ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳು
೧. ಸಮಾನತೆಯ ಹಕ್ಕು
೨. ಸ್ವಾತಂತ್ರ್ಯದ ಹಕ್ಕು
೩. ಶೋಷಣೆಯ ವಿರುದ್ಧದ ಹಕ್ಕು
೪. ಧಾರ್ಮಿಕ ಸ್ವಾತಂತ್ಯದ ಹಕ್ಕು
೫. ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು.
೧೪.ಮೂಲಭೂತ ಕರ್ತವ್ಯಗಳನ್ನು ಬರೆಯಿರಿ.
ಉತ್ತರ:-
ಮೂಲಭೂತ ಕರ್ತವ್ಯಗಳು
1) ನಮ್ಮ ಸಂವಿಧಾನ, ರಾಷ್ಟçಧ್ವಜ ಮತ್ತು ರಾಷ್ಟçಗೀತೆಯನ್ನು ಗೌರವಿಸುವುದು.
2) ಸ್ವಾತಂತ್ರ ಚಳವಳಿಯ ಸ್ಫೂರ್ತಿದಾಯಕ ಆದರ್ಶ ತತ್ವಗಳನ್ನು ಪಾಲಿಸುವುದು.
3) ಭಾರತದ ಸಾರ್ವಭೌಮತೆ, ಏಕತೆ, ಸಮಗ್ರತೆಯನ್ನು ಕಾಪಾಡುವುದು ಮತ್ತು ರಕ್ಷಿಸುವುದು.
4) ಅಗತ್ಯ ಬಂದಾಗ ರಾಷ್ಟçವನ್ನು ರಕ್ಷಿಸಿ ದೇಶದ ಸೇವೆ ಮಾಡಬೇಕು.
5) ಭಾರತೀಯರಲ್ಲಿ ಸಾಮರಸ್ಯ ಮತ್ತು ಸಹೋದರತ್ವ ಭಾವನೆಯನ್ನು ಬೆಳೆಸಬೇಕು ಮತ್ತು ಮಹಿಳೆಯರ ಗೌರವಕ್ಕೆ ಭಂಗ ತರುವ ಆಚರಣೆಗಳನ್ನು ತ್ಯಜಿಸಬೇಕು.
6) ನಮ್ಮ ಸಂಘಟಿತ ಸಂಸ್ಕೃತಿಯ ಪರಂಪರೆಯನ್ನು ಗೌರವಿಸಿ ರಕ್ಷಿಸಬೇಕು.
7) ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯ ಮೃಗಗಳು ಸೇರಿದಂತೆ ಪ್ರಕೃತಿ, ಪರಿಸರವನ್ನು ರಕ್ಷಿಸಿ ಅಭಿವೃದ್ಧಿಪಡಿಸಬೇಕು ಹಾಗೂ ಜೀವಂತ ಪ್ರಾಣಿಗಳಿಗೆ ಅನುಕಂಪ ತೋರಿಸಬೇಕು.
8) ವೈಜ್ಞಾನಿಕ ಹಾಗೂ ಮಾನವೀಯತೆಯ ಗುಣಗಳ ವಿಚಾರಣಾ ಹಾಗೂ ಸುಧಾರಣಾ ಭಾವನೆಯನ್ನು ಬೆಳೆಸಿಕೊಳ್ಳಬೇಕು.
9) ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು ಮತ್ತು ಹಿಂಸಾಮಾರ್ಗವನ್ನು ತ್ಯಜಿಸಬೇಕು.
10) ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆಯನ್ನು ಪ್ರದರ್ಶಿಸಿ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕು.
11) ತಂದೆ, ತಾಯಿ ಅಥವಾ ಪೋಷಕರು 6 ವರ್ಷದಿಂದ 14 ವರ್ಷದವರೆಗೆ ತಮ್ಮ ಮಗುವಿನ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಿಕೊಡಬೇಕು.
೧೫.ರಾಜ್ಯನೀತಿ ನಿರ್ದೇಶಕ ತತ್ವಗಳಾವುವು?
ಉತ್ತರ:-ರಾಜ್ಯನೀತಿ ನಿರ್ದೇಶಕ ತತ್ವಗಳು
1) ಎಲ್ಲಾ ಪೌರರಿಗೂ ತಮ್ಮ ಜೀವನೋಪಾಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು.
2) ಸಮುದಾಯದಲ್ಲಿನ ಸಂಪತ್ತು ಮತ್ತು ಉತ್ಪಾದನಾ ಸಾಧನಗಳು ಕೆಲವೇ ಜನರ ಸ್ವತ್ತಾಗದಂತೆ ತಡೆಗಟ್ಟುವುದು.
3) ಸ್ತ್ರೀ ಮತ್ತು ಪುರುಷರೆಲ್ಲರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಕಾರ್ಮಿಕರ ಯೋಗಕ್ಷೇಮವನ್ನು ರಕ್ಷಿಸುವುದು.
4) ವೃದ್ಧರು, ರೋಗಿಗಳು, ದುರ್ಬಲ ವರ್ಗದವರು ಮತ್ತು ಅಸಮರ್ಥರಿಗೆ ಸಹಾಯದಾನವನ್ನು ಒದಗಿಸುವುದು
5) ದೇಶದಾದ್ಯಂತ ಏಕರೂಪದ ನಾಗರಿಕ ಕಾನೂನನ್ನು ಜಾರಿಗೆ ತರುವುದು.
6) 6 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಬಾಲ್ಯ ಪೋಷಣೆ ಮತ್ತು ಶಾಲಾ ಪೂರ್ವ ಶಿಕ್ಷಣವನ್ನು ಕೊಡಲು ರಾಜ್ಯ ಪ್ರಯತ್ನಿಸಬೇಕು.
7) ಐತಿಹಾಸಿಕ ಸ್ಮಾರಕಗಳು ಮತ್ತು ಸ್ಥಳಗಳನ್ನು ರಕ್ಷಿಸುವುದು.
8) ನ್ಯಾಯಾಂಗವನ್ನು ಕಾರ್ಯಾಂಗದಿAದ ಪ್ರತ್ಯೇಕಿಸುವುದು.
9) ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು, ರಾಷ್ಟ್ರ-ರಾಷ್ಟ್ರಗಳ ನಡುವೆ ನ್ಯಾಯಯುತವಾದ ಮತ್ತು ಗೌರವಯುತವಾದ ಸಂಬಂಧಗಳನ್ನು ಕಾಯ್ದುಕೊಂಡು ಬರುವುದು ಹಾಗೂ ಅಂತರರಾಷ್ಟ್ರೀಯ ವಿವಾದಗಳನ್ನು ಮಧ್ಯಸ್ತಿಕೆಯ ಮೂಲಕ ಇತ್ಯರ್ಥ
ಪಡಿಸಲು ಪ್ರೋತ್ಸಾಹಿಸುವುದು.
10) ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸುವುದು.
11) ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು.
12) ಕೃಷಿ ಹಾಗೂ ಪಶುಸಂಗೋಪನೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು.
13) ಪಾನ ನಿಷೇಧವನ್ನು ಜಾರಿಗೆ ತರುವುದು.
14) ವೈಜ್ಞಾನಿಕ ಕೃಷಿಯನ್ನು ಪ್ರೋತ್ಸಾಹಿಸುವುದು.