ಪಾಶ್ಚಾತ್ಯ ಧರ್ಮಗಳು
ಅಭ್ಯಾಸಗಳು
|.ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ:
1. ಯಹೂದಿ ಧರ್ಮದ ಮೂಲ ಪುರುಷ ಅಬ್ರಹಾಂ
2. ಪಾರ್ಸಿ ಧರ್ಮದ ಸ್ಥಾಪಕರು ಜರತುಷ್ಟ
3. ಯೇಸುಕ್ರಿಸ್ತರು ಹುಟ್ಟಿದ ಸ್ಥಳ ಬೆತ್ಲ ಹ್ಯಾಂ
4. ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಬೆಟ್ಟ ಗೋಲ್ಗೊಥ
5. ಕ್ರೈಸ್ತ ಧರ್ಮವು ರೋಮಿನ ರಾಜಧರ್ಮವಾಗಿದ್ದುದು ಚಕ್ರವರ್ತಿ ಕಾನ್ಸ್ಟಾಂಟೈನ್ ನ ಆಳ್ವಿಕೆಯ ಅವಧಿಯಲ್ಲಿ.
6.ಮೊಹಮ್ಮದ್ ಪೈಗಂಬರರು ಹುಟ್ಟಿದ ಸ್ಥಳ ಮೆಕ್ಕಾ
7. ಇಸ್ಲಾಂನ ಪವಿತ್ರ ಗ್ರಂಥ ಕುರಾನ್
8. ಮೊಹಮ್ಮದ್ ಪೈಗಂಬರರ ಉತ್ತರಾಧಿಕಾರಿಗಳನ್ನು ಖಲೀಫರು ಎನ್ನುವರು.
||.ಕೆಳಗಿನ ಪ್ರಶ್ನೆಗಳಿಗೆ ಗುಂಪಿನಲ್ಲಿ ಮಿತ್ರರೊಂದಿಗೆ ಚರ್ಚಿಸಿ ಉತ್ತರ ಬರೆಯಿರಿ.
9. ಯಹೂದಿ ಧರ್ಮದ ಹತ್ತು ಕಟ್ಟಳೆಗಳನ್ನು ಪಟ್ಟಿಮಾಡಿ.
ಉತ್ತರ:-ಯಹೂದಿ ಧರ್ಮದ ಹತ್ತು ಕಟ್ಟಳೆಗಳು
1) ‘ಯಾವೆ’ ಹೊರತಾಗಿ ಬೇರೆ ದೇವರಿಲ್ಲ.
2) ಪೂರ್ತಿ ಪೂಜೆ ಸಲ್ಲದು.
3) ದೇವರ ಹೆಸರಿಗೆ ಕಳಂಕ ತರಬಾರದು.
4) ಸಬ್ಬತ್ ದಿನವನ್ನು ಪವಿತ್ರವೆಂದು ಕಣುವುದು.
5) ತಂದೆ- ತಾಯಿಯನ್ನು ಗೌರವಿಸಬೇಕು.
6) ವ್ಯಬಿಚಾರ ಸಲ್ಲದು.
7) ಕಳ್ಳತನ ಮಾಡಬಾರದು.
8) ಕೊಲೆ ಮಾಡಬಾರದು.
9) ಸುಳ್ಳು ಹೇಳಬಾರದು.
10) ಅಸೂಯೆ ಪಡಬಾರದು.
10. ಪಾರ್ಸಿ ಧರ್ಮವು ವೈದಿಕಾಚರಣೆಗಳಿಗೆ ಹತ್ತಿರವಾಗಿದೆ. ಸಮರ್ಥಿಸಿ.
ಉತ್ತರ:-ಪಾರ್ಸಿ ಧರ್ಮವು ವೈದಿಕಾಚರಣೆಗಳಿಗೆ ಹತ್ತಿರವಾಗಿದೆ. ಉದಾ:ಗೆ ಒಳಿತು – ಕೆಡಕುಗಳ ನಡುವಿನ ಸಂಘರ್ಷದಲ್ಲಿ ಒಳಿತು ಗೆಲುವನ್ನು ಸಾಧಿಸುವುದರಿಂದ ಮಾನವನು ಒಳಿತನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಇವರ ನಂಬಿಕೆ. ಇದೇ ರೀತಿ ಇವರ ಸೂರ್ಯೋಪಾಸನೆ. ಪಾರ್ಸಿಗಳ ಧರ್ಮಗ್ರಂಥ ವಾದ ‘ಅವೆಸ್ತ’ದಲ್ಲಿ ಬರುವ ಪದ್ಯ , ಶ್ಲೋಕರೂಪದ ಸಾಹಿತ್ಯವನ್ನು “ಗಾಥಾ” ಎನ್ನುತ್ತಾರೆ. ಹಾಗೆಯೇ ಪೂಜೆ, ಆರಾಧನೆ , ಆಚರಣೆಗಳಿಗೆ ಸಂಬಂಧಿಸಿದ ಭಾಗವನ್ನು ಯಷ್ನ ಎನ್ನುತ್ತಾರೆ. ಇವೆಲ್ಲವೂ ಸಂಸ್ಕೃತ ಮೂಲದ ಪದಗಳು ಎಂಬುದನ್ನು ಗಮನಿಸಬಹುದು.
೧೧. ಯೇಸು ಕ್ರಿಸ್ತರ ಜೀವನವನ್ನು ಕುರಿತು ಬರೆಯಿರಿ.
ಉತ್ತರ:-ಜೀಸಸ್ ಜನನ ಸ್ಥಳವು ಜ್ಯೂಡಿಯಾ ಪ್ರಾಂತ್ಯಕ್ಕೆ ಸೇರಿದ ಜೆರೊಸಲನಿಂದ ೫ ಕಿ.ಮೀ ದೂರದಲ್ಲಿರುವ ಬೆತ್ಲೆಹೆಂ. ತಂದೆ ಜೋಸೆಫ್, ತಾಯಿ ಮೇರಿ ಎಂಬ ಬಡ ದಂಪತಿಗಳ ಏಕೈಕ ಪುತ್ರ. ಜೀಸಸ್ ಆರಂಭ ಜೀವನದ ವಿಚಾರಗಳ ಮಾಹಿತಿ ಬಹಳ ವಿರಳವಾಗಿದೆ. ಜೀಸಸ್ ಅರಾಮಿಕ್ ಮತ್ತು
ಸೆಮಿಟಿಕ್ ಭಾಷೆಗಳನ್ನು ಬಲ್ಲವರಾಗಿದ್ದರು. ಇದೇ ಸಮಯ ದಲ್ಲಿ ಯಹೂದಿಗಳು ತಮ್ಮನ್ನು ಕಷ್ಟಗಳಿಂದ ರಕ್ಷಿಸುವ ಮಸೀಹ ಅಥವಾ ಮಹಾರಕ್ಷಕನ ಆಗಮನವನ್ನು ನಿರೀಕ್ಷಿಸು ತಿದ್ದರು. ಈ ಆಗಮನದ ಕಲ್ಪನೆ ಜಾನ್ ಎಂಬ ವ್ಯಕ್ತಿಯ ದಾಗಿತ್ತು. ಮೂಲತ: ಮತ ಪ್ರವರ್ತಕರಂತಿದ್ದ ಜಾನ್ನಿಂದ
ದೀಕ್ಷಾಸ್ನಾನಕ್ಕೆ ಒಳಗಾದ ಜೀಸಸ್ರನ್ನು ಜಾನ್ ಮಸೀಹ ಅಥವಾ ಮಹಾರಕ್ಷಕ ಎಂದು ಉದ್ಗರಿಸಿದರು. ಕಾಲಾ ನಂತರದಲ್ಲಿ ಯಹೂದಿಗಳು ಜೀಸಸ್ರನ್ನು ತಮ್ಮ ಧಾರ್ಮಿಕ ಮುಖಂಡನನ್ನಾಗಿ ಸ್ವೀಕರಿಸಿದರು. ಜೀಸಸ್ ಇಸ್ರೇಲ್ ದೇಶದಲ್ಲೆಲ್ಲಾ ಸಂಚರಿಸುತ್ತಾ ಮತ ಪ್ರಚಾರ ಹಾಗೂ ಬೋಧನೆಯಲ್ಲಿ ತೊಡಗಿದರು. ಮೊದಲು ೧೨ ಜನ ಶಿಷ್ಯರನ್ನು ಹೊಂದಿದ್ದು, ಅವರನ್ನು ಅಪೋಸಲ್ಸ್ ಎಂದು ಕರೆಯಲಾಗಿದೆ. ಜೀಸಸ್ ರೋಗದಿಂದ ನರಳುವವರ ಮತ್ತು ದೀನ ದಲಿತರ ಬಗ್ಗೆ ಸಹಾನುಭೂತಿ ಹಾಗೂ ಕನಿಕರ-ಕರುಣೆಯನ್ನು ಹೊಂದಿದ್ದರು. ಈ ಅಸಮಾನ್ಯ ಶಕ್ತಿಯ ಮೂಲಕ ಬಡವರ ಕಷ್ಟಗಳನ್ನು ಪರಿಹರಿಸಲು ಮುಂದಿರುತ್ತಿದ್ದರು.
13. ಕ್ರೈಸ್ತ ಧರ್ಮವು ಹೇಗೆ ಪ್ರಸಾರವಾಯಿತು?
ಉತ್ತರ:-ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ನಂತರ ಅವರ ಅನುಯಾಯಿಗಳಿಗೆ ಕಿರುಕುಳ ನೀಡಲಾಯಿತು. ಕೆಲವರನ್ನು ಶಿಲುಬೆಗೇರಿಸಲಾಯಿತು. ಚಕ್ರವರ್ತಿಯಾದ ಕಾನ್ ಸ್ಟಾಂಟೈನ್ನ ಆಳ್ವಿಕೆಯ ಅವಧಿಯಲ್ಲಿ ಕ್ರಿಶ್ಚಿಯಾನಿಟಿಯು ರೋಮಿನ ರಾಜ್ಯ ಮತವಾಯಿತು. ನಂತರ ಈ ರಿಲಿಜನ್ ಯುರೋಪಿನಾದ್ಯಂತ ಹರಡಿತು. ಇಂದು ಕ್ರೈಸ್ತ ರಿಲಿಜನ್ ಚರ್ಚ್ಗಳು ಪ್ರಪಂಚದ ತುಂಬೆಲ್ಲಾ ಇದ್ದು ಹೆಚ್ಚು ಜನರ ಸದಸ್ಯತ್ವವನ್ನು ಹೊಂದಿ ಧರ್ಮವಾಗಿದೆ.
14.ಮೊಹಮ್ಮದ್ ಪೈಗಂಬರರ ಜೀವನವನ್ನು ತಿಳಿಸಿರಿ.
ಉತ್ತರ:-ಪ್ರವಾದಿ ಮೊಹಮ್ಮದ್ ಪೈಗಂಬರರು 570 ರಲ್ಲಿ ಮೆಕ್ಕಾದಲ್ಲಿ ಜನಿಸಿದರು. ಇವರ ತಂದೆ ಅಬ್ದುಲ್ಲಾ ಹಾಗೂ ತಾಯಿ ಅಮೀನಾ. ಇವರು ಜನಿಸುವ ಕೆಲವೇ ತಿಂಗಳುಗಳ ಮುಂಚೆ ತಂದೆ ಮರಣ ಹೊಂದಿದ್ದರು. ಅವರ ಆರನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ಇದರಿಂದಾಗಿ ಚಿಕ್ಕಪ್ಪನ ಆರೈಕೆಯಲ್ಲಿ ಬೆಳೆದರು. ವ್ಯಾಪಾರಿಯಾಗಿದ್ದ ಚಿಕ್ಕಪ್ಪ ಕೆಲಸದ ನಿಮಿತ್ತ ಅನೇಕ ದೂರದ ಸ್ಥಳಗಳಿಗೆ ಪ್ರಯಾಣ. ಮಾಡುತ್ತಿದ್ದಾಗ ಮೊಹಮ್ಮದ್ ರು ಸಹಪ್ರಯಾಣಿಕರಾಗಿದ್ದರು. ಕಾಲಾನಂತರದಲ್ಲಿ ಒಬ್ಬ ಶ್ರೀಮಂತ ವಿಧವೆಯಾಗಿದ್ದ ಖದೀಜಾ ಬಳಿ ಸೇವಾ ನೌಕರಿಗೆ ಸೇರಿದರು. ಮುಂದೆ ಅವಳೊಂದಿಗೆ ವಿವಾಹವಾದರು. ಅವರಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದರು. ಸದಾ ಚಿಂತನಾ ಮಗ್ನರಾಗಿದ್ದ ಮೊಹಮ್ಮದ್ರು ಒಂಟಿಯಾಗಿ ಪ್ರಾರ್ಥಿಸುವ ಅಭ್ಯಾಸವುಳ್ಳವರಾಗಿದ್ದರು. ಅವರ ಪ್ರಾರ್ಥನೆಯ ಸ್ಥಳ ಮೆಕ್ಕಾದ ಒಂದು ಗುಹೆಯಾಗಿತ್ತು. ಅವರು ಒಮ್ಮೆ ಧ್ಯಾನಾಸಕ್ತರಾಗಿದ್ದಾಗ ನೀನು ಅಲ್ಲಾನ ಪ್ರವಾದಿ ಎಂಬ ದೇವದೂತನ ಧ್ವನಿಯನ್ನು ಆಲಿಸಿದರು. ಈ ವಿಷಯ ವನ್ನು ತಮ್ಮ ಕುಟುಂಬ-ಬಂಧು ವರ್ಗ ಹಾಗೂ ಸ್ನೇಹಿತ ವರ್ಗಕ್ಕೆ ಮನಗಾಣಿಸಿದರು. ತಾವು ದೇವರೆಂದು ಎಂದೂ ಕರೆದುಕೊಳ್ಳದ ಅವರು ತಾವು ಕೇವಲ ಅಲ್ಲಾನ ಪ್ರವಾದಿ ಎಂದೇ ಪರಿಗಣಿಸುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿ ಕೇಳಿದ ದೈವಿಸತ್ಯವನ್ನು ವ್ಯಕ್ತಪಡಿಸುತ್ತಾ ಹೋದರು. ಈ ನುಡಿಗಳನ್ನು ಅವರ ಶಿಷ್ಯರು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಅದುವೇ ಇಸ್ಲಾಂನ ಗ್ರಂಥ ಕುರಾನ್. ಮೆಕ್ಕಾದ ಸಾಂಪ್ರದಾಯಿಕ ವರ್ಗ ಇವರನ್ನು ವಿರೋಧಿಸಲು ಆರಂಭಿಸಿದಾಗ ಮದೀನಾದ ಕಡೆ ಪಯಣಿಸಿದರು. ಈ ಪಯಣವು ಹಿಜಿರಾ ಶಕ ಎಂಬ ಹೆಸರಿನಿಂದ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ. ಮದೀನಾದಲ್ಲಿ ಅರೇಬಿಯಾದ ಅನೇಕ ಬುಡಕಟ್ಟುಗಳನ್ನು ಒಂದುಗೂಡಿಸಿ ಪುನ: ಮೆಕ್ಕಾಕ್ಕೆ ಬಂದು ನೆಲೆಸಿದರು. ನಂತರ ಅಲ್ಲಿಯೇ ಕೊನೆಯುಸಿರೆಳೆದರು.
15. ಹಿಜಿರಾ ಎಂದರೇನು?
ಉತ್ತರ:-ಮೆಕ್ಕಾದ ಸಾಂಪ್ರದಾಯಿಕ ವರ್ಗ ಮೊಹಮ್ಮದ್ರನ್ನು ವಿರೋಧಿಸಲು ಆರಂಭಿಸಿತು. ಈ ಕಾರಣದಿಂದ ಮುಂದೆ ಅವರಿಗೆ ಮೆಕ್ಕಾದಲ್ಲಿ ಬೋಧಿಸಲು ಸಾಧ್ಯವಾಗಲಿಲ್ಲ. ಆಗ 622 ರಲ್ಲಿ ಮೆಕ್ಕಾದಿಂದ ಮದೀನಾದ ಕಡೆ ಪ್ರಯಾಣಿಸಿದರು ಈ ಪಯಣವು ಹಿಜಿರಾ ಶಕ ಎಂಬ ಹೆಸರಿನಿಂದ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ.
16.. ಇಸ್ಲಾಂನ ನಿಯಮಗಳಾವುವು?
ಉತ್ತರ:-ಇಸ್ಲಾಂನ ನಿಯಮಗಳು
1) ಕಲೀಮಾ – ಅಲ್ಲಾನಲ್ಲಿ ಮಾತ್ರ ನಂಬಿಕೆ. ಮಹಮ್ಮದರು ಅವರ ಪ್ರವಾದಿಗಳು.
2) ನಮಾಜ್ – ಪ್ರತೀ ದಿನ ಐದು ಬಾರಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಬೇಕು.
3) ರೋಜ – ರಂಜಾನ್ ತಿಂಗಳಲ್ಲಿ ಉಪವಾಸ.
4) ಜಕಾತ್ – ಆದಾಯದಲ್ಲಿ ನಿಗದಿಪಡಿಸಿದ ಭಾಗವನ್ನು ಬಡವರಿಗೆ ದಾನ ನೀಡಬೇಕು.
5) ಹಜ್ – ಜೀವನದಲ್ಲಿ ಒಂದು ಬಾರಿ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು.