- ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದ ಗಳಿಂದ ತುಂಬಿರಿ.
1. ಸಮಾಜದ ಜೀವಕೋಶ ಕುಟುಂಬ ಆಗಿದೆ.
2.ತಂದೆಯೇ ಕುಟುಂಬದ ಒಡೆಯನಾದರೆ ಆ ಕುಟುಂಬ ವನ್ನು ಪಿತೃಪ್ರಧಾನ ಎನ್ನುತ್ತಾರೆ.
3. ಕೇರಳದ ಮಲಬಾರ್ನ ನಾಯರ್ಗಳಲ್ಲಿ ಮಾತೃಪ್ರಧಾನ ಕುಟುಂಬ ಕಂಡುಬರುತ್ತದೆ.
- ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
4. ಕುಟುಂಬವು ಸಮಾಜದ ಘಟಕ ಹೇಗೆ?
ಉತ್ತರ:-ಕುಟುಂಬದಿಂದಲೇ ಸಮುದಾಯವು ಪ್ರಗತಿ ಹೊಂದಿ ರಾಷ್ಟ್ರವು ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ಕುಟುಂಬವನ್ನು ಸಮಾಜದ ಒಂದು ಘಟಕ ಎನ್ನಬಹುದು.
5. ಕುಟುಂಬದ ಪ್ರಕಾರಗಳನ್ನು ತಿಳಿಸಿ.
ಉತ್ತರ:-
1. ಪಿತೃಪ್ರಧಾನ ಕುಟುಂಬ.
2. ಮಾತೃಪ್ರಧಾನ ಕುಟುಂಬ.
3. ಆಧುನಿಕ ಕೇಂದ್ರ ಕುಟುಂಬ.
6. ಅವಿಭಕ್ತ ಕುಟುಂಬ ಎಂದರೇನು?
ಉತ್ತರ:-ಅವಿಭಕ್ತ ಕುಟುಂಬದಲ್ಲಿ ಪತಿ, ಪತ್ನಿ ಅವರ ಮಕ್ಕಳು, ಮೊಮ್ಮಕ್ಕಳು ಮರಿ ಮಕ್ಕಳು ಹೀಗೆ ಎರಡಕ್ಕಿಂತಲೂ ಹೆಚ್ಚು ತಲೆಮಾರಿನ ಜನರಿರುತ್ತಾರೆ. ಸಾಮಾನ್ಯವಾಗಿ ಒಂದೇ ಮನೆಯಲ್ಲಿ ವಾಸಿಸುವ, ಒಂದೇ ಕಡೆ ಮಾಡಿದ ಅಡಿಗೆಯನ್ನು ಊಟಮಾಡುವ, ಸಮಾನವಾದ ಆಸ್ತಿ ಹೊಂದಿರುವ ಮತ್ತು ಸಾಮಾನ್ಯ ಕುಟುಂಬ ಪೂಜಾ ಪದ್ಧತಿಯನ್ನು ಹೊಂದಿರುವ ಮತ್ತು ನಿರ್ಧಿಷ್ಟ ರಕ್ತಸಂಬಂಧಿಗಳಾಗಿರುವ ಜನರ ಗುಂಪು
7. ಕೇಂದ್ರ ಕುಟುಂಬ ಎಂದರೇನು?
ಉತ್ತರ:-ತಂದೆ, ತಾಯಿ ಮತ್ತು ಅವರ ಅವಿವಾಹಿತ ಮಕ್ಕಳು ಮಾತ್ರ ಸದಸ್ಯರಾಗಿರುವ ಕುಟುಂಬವನ್ನು ಕೇಂದ್ರ ಕುಟುಂಬ ಎನ್ನುತ್ತೇವೆ.
8. ಕುಟುಂಬದ ಲಕ್ಷಣಗಳೇನು?
ಉತ್ತರ:-ಕುಟುಂಬದ ಸಾರ್ವತ್ರಿಕ. ಎಲ್ಲ ಕಾಲಕ್ಕೂ ಎಲ್ಲ ದೇಶ ಗಳಲ್ಲೂ ಕಂಡು ಬರುವ ಸಾಮಾಜಿಕ ವ್ಯವಸ್ಥೆ. ಸಮಾಜದ ಎಲ್ಲ ವ್ಯವಸ್ಥೆಗೂ ಇದು ಕೇಂದ್ರವಾಗಿದೆ. ಕುಟುಂಬಗಳಿಂದಲೇ ನೆರೆಹೊರೆ, ಗ್ರಾಮ, ನಗರ, ರಾಷ್ಟ್ರ ನಿರ್ಮಾಣಗೊಂಡಿದೆ. ಕುಟುಂಬದ ಸದಸ್ಯರು ಬಾಲ್ಯಾವಸ್ಥೆಯಿಂದಲೇ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ತಿಳಿಯುವುದಲ್ಲದೇ ಸಹಕಾರ ವನ್ನು ಮನಗಾಣುತ್ತಾರೆ. ಸಮಾಜದ ಸಂಪ್ರದಾಯ, ನೈತಿಕ ನಿಯಮಗಳು, ವರ್ತನೆಗಳನ್ನು ಕುಟುಂಬವು ನಿಯಂತ್ರಿಸುತ್ತದೆ. ಕುಟುಂಬವು ಸರ್ವವ್ಯಾಪಿ, ಶಾಶ್ವತ ಹಾಗೂ ಪರಂಪರಾಗತ ಘಟಕವಾಗಿದೆ ಎಂದು ಹೇಳಬಹುದು.
9. ವ್ಯಕ್ತಿಯ ಸಾಮಾಜಿಕ ಬೆಳವಣಿಗೆಯ ಹಂತಗಳಲ್ಲಿ ಬಾಲ್ಯ ಹಾಗೂ ಯೌವನದ ಪಾತ್ರವನ್ನು ತಿಳಿಸಿ.
ಉತ್ತರ:-ವ್ಯಕ್ತಿಯ ಸಾಮಾಜಿಕ ಬೆಳವಣಿಗೆಯ ಹಂತಗಳಲ್ಲಿ ಬಾಲ್ಯ-ಯೌವನವು ಮುಖ್ಯವಾಗಿದೆ. ಮಾತೃಭಾಷೆಯನ್ನು ಮಗುವು ಮೊದಲು ತಿಳಿಯುವುದಲ್ಲದೆ ಅದರ ಸನಿಹದಿಂದ ಮೂಲ ಸಾಮಾಜಿಕ ವಿಚಾರಗಳನ್ನು ತಿಳಿಯುತ್ತದೆ. ಕೌಟುಂಬಿಕ ಹಾಗೂ ಸಾಮಾಜಿಕ ಪರಿಸರದಲ್ಲಿ ಬೆಳೆದ ಮಗುವು ಅದಕ್ಕನುಗುಣವಾದ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುತ್ತವೆ. ಸಮವಯಸ್ಸಿನ ಮಕ್ಕಳೊಂದಿಗೆ ಸ್ನೇಹ ಸಂಬಂಧ ಬೆಳೆಯುತ್ತದೆ. ಎಲ್ಲರೊಂದಿಗೆ ಬೆರೆತು ಮುಂದಾಳತ್ವದ ಗುಣಗಳನ್ನು ರೂಢಿಸಿ ಕೊಳ್ಳುತ್ತದೆ. ಸಾಮಾಜಿಕ ವರ್ತನೆಗಳು, ಬೇಡಿಕೆಗಳು, ಕಟ್ಟಳೆ ಗಳು ಮಗುವಿನ ಮೇಲೆ ಪ್ರಭಾವ ಬೀರಿ ಸಾಮಾಜಿಕ ಸಂಬಂಧ ರೂಪುಗೊಳ್ಳುತ್ತದೆ. ಯೌವ್ವನದಲ್ಲಿ ಇದು ಮುಂದುವರಿದು ಸ್ನೇಹ, ಸ್ವಾತಂತ್ರ್ಯ, ಭದ್ರತೆ, ಅಂಗೀಕಾರ ಇವುಗಳಿಗಾಗಿ ಹಾತೊರೆಯುತ್ತಾರೆ. ಈ ವಯಸ್ಸಿನಲ್ಲಿ ಬೆಳೆಸಿಕೊಂಡ ವರ್ತನೆ ಗಳು ಹಾಗೂ ಅಭಿಪ್ರಾಯಗಳು ಪ್ರೌಢ ಹಾಗೂ ಮುಪ್ಪಿನ ಕಾಲದವರೆಗೆ ಮುಂದುವರೆಯುತ್ತವೆ.
೧೦. ಅವಿಭಕ್ತ ಕುಟುಂಬದ ಲಕ್ಷಣಗಳನ್ನು ವಿವರಿಸಿ.
ಉತ್ತರ:-ದೊಡ್ಡಗಾತ್ರ: ರಕ್ತ ಸಂಬಂಧಿಗಳು ಒಂದೇ ಮನೆಯಲ್ಲಿ ನಿರಂತರವಾಗಿ ಒಟ್ಟಿಗೆ ವಾಸಿಸುತ್ತಾರೆ. ಕುಟುಂಬದ ಗಾತ್ರವು ದೊಡ್ಡದಾಗಿರುತದೆ.
ಆಸ್ತಿ: ಕುಟುಂಬದ ಸದಸ್ಯರೆಲ್ಲರೂ ಆಸ್ತಿಯ ಮಾಲೀಕತ್ವ ಹೊಂದಿರುತ್ತಾರೆ. ಇಂತಹ ಮಾಲೀಕತ್ವ ಸಂಪಾದನೆ ಹಾಗೂ ಆಸ್ತಿ: ಕುಟುಂಬದ ಸದಸ್ಯರೆಲ್ಲರೂ ಹೊಂದಿರುತ್ತಾರೆ. ಇಂತಹ ಮಾಲೀಕತ್ವ ಸಂಪಾದನೆ ಹಾಗೂ ಸಂಪತ್ತಿನ ಬಳಕೆಯು ಸಾಮರಸ್ಯತೆಯಿಂದ ನಡೆಯುತ್ತದೆ. ಅವಿಭಕ್ತ ಕುಟುಂಬವು ಸದಸ್ಯರ ಪರಸ್ಪರ ಸಹಕಾರದಿಂದ ನಡೆಯುತ್ತದೆ. ಅದರ ಯಜಮಾನ ಧರ್ಮದರ್ಶಿಯಾಗಿ ಕೆಲಸ ಮಾಡುತ್ತಾನೆ. ಸಹಸದಸ್ಯರ ಒಪ್ಪಿಗೆಯಿಂದ ಆಸ್ತಿಯ ಮಾರಾಟ /ಪರಭಾರೆ ನಡೆಯುತ್ತದೆ.
ವಾಸಸ್ಥಳ: ಕುಟುಂಬದ ಸದಸ್ಯರು ಸಾಮಾನ್ಯವಾಗಿ ಒಂದೇ ಛಾವಣಿಯಲ್ಲಿ ವಾಸಿಸುತ್ತಾರೆ. ಒಬ್ಬ ಮಗ ತನ್ನ ಹೆಂಡತಿ ಮಕ್ಕಳೊಂದಿಗೆ ಪ್ರತ್ಯೇಕ ಕುಟುಂಬವನ್ನು ಹೊಂದಿ ದ್ದರೂ ಅವರು ಮೂಲ ಕುಟುಂಬದೊಂದಿಗೆ ಅದೇ ಸಂಬಂಧ ವನ್ನು ಮುಂದುವರೆಸಿಕೊಟ್ಟು ಹೋಗುತ್ತಾರೆ. ಆ ಹೊಸ ಕುಟುಂಬವನ್ನು ಅವಿಭಕ್ತ ಕುಟುಂಬದ ಶಾಖೆಯೆಂದೇ ಪರಿಗಣಿಸಲಾಗುತ್ತದೆ.
ಅಡುಗೆಮನೆ: ಅವಿಭಕ್ತ ಕುಟುಂಬದ ಸದಸ್ಯರೆಲ್ಲರೂ ಸಾಮಾನ್ಯವಾಗಿ ಒಂದೇ ಅಡುಗೆ ಮನೆಯಲ್ಲಿ ಆಹಾರ ಸಿದ್ಧಪಡಿಸಿ ಸೇವಿಸುತ್ತಾರೆ.
ಧರ್ಮ: ಸಾಮಾನ್ಯವಾಗಿ ಅವಿಭಕ್ತ ಕುಟುಂಬದ ಸ ರೆಲ್ಲರು ಒಂದೇ ಧರ್ಮವನ್ನು ನಂಬುತ್ತಾರೆ. ಏಕ ಪ್ರಕಾರವಾ ದೇವರ ಪೂಜೆಯನ್ನು ಮಾಡುತ್ತಾರೆ. ಪ್ರಮುಖ ವಿಧಿಗಳು, ಆಚರಣೆಗಳು, ವ್ರತಗಳು ಮತ್ತು ನಿತ್ಯ ಪೂಜೆಗಳು ಕುಟುಂಬದ ದೈನಿಕ ಚಟುವಟಿಕೆಗಳ ಭಾಗವಾಗಿರುತ್ತವೆ.
ಸ್ವಯಂಪೂರ್ಣತೆ: ಅವಿಭಕ್ತ ಕುಟುಂಬವು ಬಹು\ಪಾಲು ಸ್ವಯಂ ಪೂರ್ಣ ಘಟಕವಾಗಿದೆ. ಅದು ತನ್ನ ಸದಸ್ಯರ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಅದು ಅವರ ಬಹುಪಾಲು ಅಗತ್ಯಗಳನ್ನು ಪೂರೈಸುತ್ತದೆ. ಎಲ್ಲ ಸದಸ್ಯರು ಕೆಲಸವನ್ನು ಹಂಚಿಕೊಳ್ಳುತ್ತಾರೆ. ಶ್ರಮ, ವಯಸ್ಸು ಮತ್ತು ಲಿಂಗವನ್ನು ಆಧರಿಸಿ ಕಾರ್ಯವಿಭಜನೆಯಾಗುತ್ತದೆ.
ಅಧಿಕಾರದ ಸಂರಚನೆ: ಅವಿಭಕ್ತ ಕುಟುಂಬದಲ್ಲಿ ಎಲ್ಲರಿಗಿಂತ ಹಿರಿಯ ಸದಸ್ಯನು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾನೆ. ಆತನು ಅಧಿಕಾರವನ್ನು ಹಸ್ತಾಂತರಿ ಸಿದರೂ ಅದು ಹಿರಿತನದ ತತ್ವವನ್ನೇ ಆಧರಿಸುತ್ತದೆ.
11. ವಿಭಕ್ತ ಕುಟುಂಬಗಳು ದಿನೇದಿನೇ ಹೆಚ್ಚಾಗಲು ಕಾರಣಗಳೇನು?
ಉತ್ತರ:-ವೈಯಕ್ತಿಕತೆ, ವೈಯಕ್ತಿಕ ಸುಖ, ಸ್ವಯಂತೃಪ್ತಿ, ಆಸ್ತಿಯ ಹಕ್ಕು, ಬದಲಾದ ಸಾಮಾಜಿಕ ಮೌಲ್ಯಗಳು, ಭೌಗೋಳಿಕ ಹಾಗೂ ಸಾಮಾಜಿಕ ಸಂರಚನೆ, ವಿಜ್ಞಾನ ಮತ್ತು ತಂತ್ರ ಜ್ಞಾನದಲ್ಲಿ ಅಭಿವೃದ್ಧಿ, ಕೈಗಾರಿಕೀಕರಣ, ನಗರೀಕರಣ, ಪ್ರಜಾಸತ್ತಾತ್ಮಕ ಹಾಗೂ ಸಮಾನತೆಯ ತತ್ವಗಳು, ಧಾರ್ಮಿಕ ಪ್ರಭಾವದ ಕುಗ್ಗುವಿಕೆ ಮತ್ತು ಲೌಕಿಕ ಮನೋಭಾವದ ವ್ಯಾಪಕ ಪ್ರಸಾರ, ಸ್ತ್ರೀ ಸ್ವಾತಂತ್ರ್ಯ ಈ ಅಂಶಗಳು ವಿಭಕ್ತ ಕುಟುಂಬ ಗಳು ದಿನೇದಿನೇ ಹೆಚ್ಚಾಗಲು ಕಾರಣವಾಗಿವೆ.