ಹೊಸ ಹಾಡು
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು?
ಉತ್ತರ:-ಬದುಕಿಗೆ ಹೊಸ ತಿರುವು ನೀಡಬಲ್ಲ, ಹೊಸ ಆಶಯವನ್ನು, ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪು ನೀಡುವ ಹಾಡನ್ನು ಹಾಕಬೇಕೆಂದು ಕವಿಯು ಬಯಸುವರು.
2. ವೀರಧ್ವನಿ ಹೇಗೆ ಏರಬೇಕು?
ಉತ್ತರ:-ಗಂಭೀರ ಭಾವನೆಯನ್ನು ಹರಡಿಸುವ ರೀತಿ ವೀರಧ್ವನಿ ಏರಬೇಕು.
3. ಕಡಿದೊಗೆಯ ಬೇಕಾದ ಪಾಶಗಳು ಯಾವುವು?
ಉತ್ತರ:-ಜಾತಿ, ಕುಲ, ಮತ, ಧರ್ಮಗಳ ಪಾಶಗಳನ್ನು ಕಡಿದೊಡೆಯಬೇಕು.
4. ಹಾಡು ನುಡಿಗಂಡುಗಳು ಯಾವುದರ ಬೆನ್ನಟ್ಟಬೇಕು?
ಉತ್ತರ:-ಹಾಡು ನುಡಿಗಂಡುಗಳು ಭಯದ ಬೆನ್ನಟ್ಟಬೇಕು.
5. ಬಾನು ಭುವಿ ಯಾವುದರಿಂದ ಬೆಳಗಬೇಕು?
ಉತ್ತರ:-ಜಡನಿದ್ರೆಯಿಂದ ಸಿಡಿದೆದ್ದ ವೀರಾಟ್ಟಹಾಸದಲ್ಲಿ ಬಾನು ಬುವಿ ಬೆಳಗಬೇಕು.
ಆ) ಕೊಟ್ಟಿರವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರ ಬೇಕು ಎಂದು ಬಯಸುತ್ತಾರೆ?
ಉತ್ತರ:-ಹೊಸ ಭಾವನೆ, ಹೊಸ ಜೀವನ, ಹೊಸಶಕ್ತಿ ತುಂಬಿಸುವ ಹಾಡನ್ನು ಹಾಡಬೇಕು, ತೀವ್ರತರವಾದ ಗಂಭೀರ ಭಾವನೆಯನ್ನು ಹರಡಿ ವೀರಧ್ವನಿ ಏರಬೇಕು ಎಂದು ಕವಿ ಬಯಸುತ್ತಾರೆ.
2. ಕವಿ ಎಂತಹ ಹಾಡು ಗುಡಗಬೇಕು ಎಂದು ಆಸಿಸುತ್ತಾರೆ?
ಉತ್ತರ:-ಜಾತಿ, ಕುಲ, ಮತ, ಧರ್ಮಗಳ ಪಾಶಗಳನ್ನು ಕಿತ್ತೋ ಗೆದು ಎದೆ ಹಿಗ್ಗಿಸಿ ಯುಗಯುಗಗಳಾಚೆಗೂ, ಲೋಕ ಲೋಕಾಂತಾರಕ್ಕೂ ಗುಡುಗಿ ಕೇಳುವಂತಿರಬೇಕು ಎಂದು ಕವಿ ಆಶಿಸುತ್ತಾರೆ.
3. ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣ ವೇನು?
ಉತ್ತರ:-ಈ ಹಾಡು ಹೊಸತು ಎಂದು ಕವಿ ಹೇಳುತ್ತಿದ್ದಾರೆ, ಏಕೆಂದರೆ, ಈ ಹೊಸ ಹಾಡು ಬದುಕಿಗೆ ಹೊಸ ತಿರುವನ್ನು ನೀಡಬಲ್ಲದು. ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಿದೆ, ಈ ಹಾಡು ಸ್ಫೂರ್ತಿಯ ಚಿಲುವೆಯಾಗಿ ನಿತ್ಯನೂತನೆಯಿಂದ ಕೂಡಿರುವುರಿಂದ “ಈ ಹಾಡು ಹೊಸತು” ಎಂದು ಕವಿ ಹೇಳುತ್ತಾರೆ.
ಇ) ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತು ಗಳಲ್ಲಿ ಬರೆಯಿರಿ.
ಉತ್ತರ:-ಬದುಕಿಗೆ ಹೊಸ ತಿರುವನ್ನು ನೀಡಬಲ್ಲ, ಹೊಸ ಆಶಯವನ್ನು, ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ, ಹೊಸ ಭಾವನೆಗಳನ್ನು ಸೃಜಿಸಿಬಲ್ಲ ಹೊಸ ಹಾಡನ್ನು ಹಾಡಬೇಕು ಎಂಬುದಾಗಿ ಕವಿ ಹೊಸ ಹಾಡಿನ ರೂಪರೇಷೆಗಳನ್ನು ಕೊಟ್ಟಿದ್ದಾರೆ.
ಹೊಸದಾದ ಭಾವನೆಗಳನ್ನು ಸೂಸುವ ಹೊಸ ಭಕ್ತಿ ತುಂಬುವ ಹಾಡನ್ನೊಮ್ಮೆ ನಾವು ಹಾಡಬೇಕು, ಗಂಭೀರವಾದ, ಚಿಂತನೆಗೆ ಒಳಪಡುವ ಧ್ವನಿಯನ್ನು ತೊರೆದು ವೀರಧ್ವನಿಯೇರಿಸಿ ಹಾಡಬೇಕು.
ನಮ್ಮ ನಮ್ಮಲ್ಲಿ ಯಾವುದೇ ರೀತಿ, ಜಾತಿ, ಕುಲ, ಮತ ಧರ್ಮಗಳ ಕಟ್ಟುಪಾಡುಗಳು ಇರಬಾರದು. ಬಂಧನಗಳನ್ನು ತೊರೆದು ಎದೆಯುಬ್ಬಿಸಿ ಧೈರ್ಯದಿಂದ ಹಾಡಬೇಕು. ಈ ಹಾಡು ಕೇವಲ ಸೀಮಿತ ಕ್ಷೇತ್ರಕ್ಕೆ ಮೀಸಲಾಗಿರದೆ ಲೋಕಲೋಕಾಂತದಲ್ಲಿಯೂ ಗುಡಗಬೇಕು. ಅಂತೆಯೇ ಆ ಹೊಸಹಾಡು ಕ್ಷಣಿಕ ಮಾತ್ರವಾಗಿರದೆ ಯುಗಯುಗಳಾಚೆಗೂ ಮೊಳಗಬೇಕು.
ನಾವು ಹಾಡುವ ಹಾಡು ತಗ್ಗಿನಲ್ಲಿ ಕುಳಿತು ಹಾಡಬೇಕು ಏಕೆಂದರೆ ಅದು ಎಲ್ಲರಿಗೂ ಕೇಳಿಸಬೇಕು. ಅದಕ್ಕಾಗಿಯೇ ಹಿಮಾದ್ರಿ ಶಿಖರವೇರಿ ಹಾಡಬೇಕು. ಹಾಡಿನ ಧಾಟಿ, ಭಯವನ್ನು ಹೊಡೆದೋಡಿಸುವಂತಿರಬೇಕು. ಗುಂಡುಗಳು ಹಾರುವಂತೆ ನುಡುಗುಂಡುಗಳು ಹಾಕಬೇಕು.
ನಾವಾಡುವ ನುಡಿ ಗರ್ಜನೆಗೆ ಮೂವತ್ತು ಮೂರುಕೋಟಿ ಕನ್ನಡಿಗರ ಕಂಠವು ಬೆರಸಬೇಕು, ನಾವಾಡುವ ಹಾಡಿನ ದನಿಯು ಭೂಮಿ ಆಕಾಶದಂತರದಲ್ಲಿಯೂ ಪ್ರತಿಧ್ವನಿಸಬೇಕು.
ನಾವು ನಮ್ಮ ಜಡ ನಿದ್ರೆಯನ್ನು, ಸೋಮಾರಿತನವನ್ನು ತೊರೆದು ವೀರತೆಯಿಂದ, ಅಟ್ಟಹಾಸ ಮಾಡುತ್ತಾ ಆಕಾಶ ಭೂಮಿಯವರೆಗೂ ಮೊಳಗಬೇಕು.
ನಾವು ನುಡಿಯಲ್ಲಿ ಹಾಗೂ ನಡೆಯಲ್ಲಿ ಕ್ರಾಂತಿಯ ಕಿಡಿಯನ್ನು ಹಚ್ಚಬೇಕು ಎಂಬುದಾಗಿ ಕವಿ ಕನ್ನಡಾಂಬೆಗೆ, ಭಾರತಾಂಬೆಗೆ ಹೇಳುತ್ತಾ ಹೇ ಜನನಿ, ನಾವಾಡುವ – ಹಾಡನ್ನು ವಿಶ್ವಾಸ ಕೇಳು. ಹಿಂದಿನ ಬಂಧನ, ಗೋಳು ಎಲ್ಲವೂ ಮುಗಿದು ಈಗ ಹಾಕುತ್ತಿರುವ ಹಾಡು ಹೊಸಹಾಡಾಗಿ ಮೂಡಿಬಂದಿದೆ ಎಂಬುದಾಗಿ ಕವಿ ಹಾಡುತ್ತಿದ್ದಾರೆ.
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
1. “ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿ ಯೇರಬೇಕು”
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ಕಾವ್ಯವನ್ನು ಕಯ್ಯಾರ ಕಿಞ್ಞಣ್ಣರೈರವರು ರಚಿಸಿರುವ ‘ಹೊಸನಾಡು’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ‘ಶತಮಾನದಗಾನ’ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ನಾವು ಹೊಸ ಹಾಡನ್ನು ಹೇಗೆ ಹಾಡಬೇಕು ಎಂಬುದರ ಬಗ್ಗೆ ಹೇಳುತ್ತಾ ಕವಿ ಈ ವಾಕ್ಯವನ್ನು ರಚಿಸಿದ್ದಾರೆ.
ಸ್ವಾರಸ್ಯ: ನಾವು ಹೊಸ ಹಾಡನ್ನು ಹಾಡುವಾಗ ಆ ಹಾಡು ಹಾಡುವ ನಮ್ಮ ಧ್ವನಿ ತುಂಬ ಗಂಭೀರಧ್ವನಿಯಾಗಿ ಉತ್ಸಾಹ, ಹುರುಪುನೊಂದಿಗೆ ವೀರಧ್ವನಿಯೇರಿಸಿ ಎಲ್ಲಡೆಯೂ ಪಸರಿಸುವಂತೆ (ಹರಡು ವಂತೆ) ಹಾಕಬೇಕೆಂಬುದು ಈ ಸಾಲಿನ ಸ್ವಾರಸ್ಯವಾಗಿದೆ.
2. “ಯುಗಯುಗಳಾಚೆಯಲಿ ಲೋಕಲೋಕಾಂತರದಲ್ಲಿ ಆ ಹಾಡು ಗುಡುಗಬೇಕು”
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ಕಾವ್ಯವನ್ನು ಕಯ್ಯಾರ ಕಿಞ್ಞಣ್ಣರೈರವರು ರಚಿಸಿರುವ ‘ಹೊಸನಾಡು’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ‘ಶತಮಾನದಗಾನ’ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ನಾವಾಡುವ ಹೊಸ ಹಾಡು ಸೀಮಿತ ಕ್ಷೇತ್ರಕ್ಕೆ ಸೀಮಿತವಾಗಿರದೆ ಬಹಳ ದೂರದೂರದವರೆಗೆ ಹಾಗೂ ಬಹಳ ಸಮಯದವರೆಗೂ ಹಾಡುತ್ತಿರಲೇಬೇಕು ಎಂಬುವ ಆಸೆಯನ್ನು ವ್ಯಕ್ತಪಡಿಸುತ್ತ ಈ ಸಾಲುಗಳನ್ನು ಕವಿ ರಚಿಸಿದ್ದಾರೆ.
ಸ್ವಾರಸ್ಯ: ನವಾಡುವ ಹೊಸ ಹೊಸ ಹಾಡುಗಳು, ಬಹಳ ಸಮಯದವರೆಗೂ ಅಂದರೆ ಯುಗಯುಗಗಳವರೆಗೂ ಸಾಗಬೇಕು ಅಂದರೆ ಹಾಡುತ್ತಿರಲೇ ಬೇಕು, ಅಷ್ಟೇ ಅಲ್ಲ ನಾವಾಡುವ ಹೊಸ ಹಾಡು ಬಹಳ ದೂರ-ದೂರದವರೆಗೆ ಅಂದರೆ ಲೋಕಲೋಕಾಂತರದವರೆಗೆ ಗುಡಿಗಿನಂತೆ ಏರು ಧ್ವನಿಯಲ್ಲಿ ಜೋರಾಗಿ ಹಾಡಬೇಕು, ಎಂಬುದಾಗಿ ಕವಿ ಕರೆ ಕೊಟ್ಟಿದ್ದಾರೆ.
3. ‘ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲ್ಲಿ ಬಾನಿ ಭುವಿ ಬೆಳಗಬೇಕು’
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ಕಾವ್ಯವನ್ನು ಕಯ್ಯಾರ ಕಿಞ್ಞಣ್ಣ ರೈರವರು ರಚಿಸಿರುವ ‘ಹೊಸನಾಡು’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ‘ಶತಮಾನದಗಾನ’ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ನಾವಾಡುವ ಹೊಸ ಹಾಡು ಹೇಗೆ ಬೆಳಗಬೇಕು ಹೇಗೆ ಸಿಡಿದೇಳಬೇಕು ಎಂಬುದರೆ ಬಗ್ಗೆ ಹೇಳುತ್ತಾ ಕವಿ ಈ ಸಾಲುಗಳನ್ನು ಬರೆದಿದ್ದಾರೆ.
ಸ್ವಾರಸ್ಯ: ನಾವಾಡುವ ಹಾಡಿನ ಧ್ವನಿ ಜಡನಿದ್ರೆಯಲ್ಲಿ ಅಂದರೆ ಸೋಮಾರಿಗಳಂತೆ ಮಲಗಿರುವವನನ್ನು ಬಡಿದೆಬ್ಬಿಸಬೇಕು. ನಮ್ಮ ಹಾಡಿನ ಧ್ವನಿ ವೀರತೆಯ ಅಟ್ಟಹಾಸದ ಏರು ಧ್ವನಿ ಇದು ಅದು ಭೂಮಿಯಿಂದ ಆಕಾಶದವರೆಗೂ ಕೇಳಿಸುವಂತಿರಬೇಕು.
4. “ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕ್ರಾಂತಿ ಕಿಡಿ ಕೆರಳಬೇಕು”
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ಕಾವ್ಯವನ್ನು ಕಯ್ಯಾರ ಕಿಞ್ಞಣ್ಣರೈರವರು ರಚಿಸಿರುವ ‘ಹೊಸನಾಡು’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ‘ಶತಮಾನದಗಾನ’ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ನಮ್ಮ ಹಾಡು ಹೊಸತನದಿಂದ ಮಾತ್ರ ಕೂಡಿರದೆ ಆ ನಡೆನುಡಿಗಳಲ್ಲಿ ಆಚರಣೆ ಬರುವಂತೆ, ಮನಸ್ಸಿನಾಳದವರೆಗೂ ತಲುಪಿ ಭಾವನೆಗಳನ್ನು ಕೆರಳಿಸುವಂತಿಬೇಕು, ಅದನ್ನು ಪರಿವರ್ತಿತಗೊಳಿಸುವಂತೆ, ಕ್ರಾಂತಿಯ ಕಿಡಿಕಾರುವಂತೆ ಹಾಡಬೇಕು ಎಂಬುದಾಗಿ ಕವಿ ಹೇಳುವ ಸಂದರ್ಭದಲ್ಲಿ ಈ ಸಾಲನ್ನು ರಚಿಸಿದ್ದಾರೆ.
ಸ್ವಾರಸ್ಯ: ನಮ್ಮ ಹೊಸ ಹಾಡಿನ ಪದಗಳು, ಶಬ್ದಾರ್ಥಗಳು ನಮ್ಮ ನಡೆನುಡಿಗಳ ಮೇಲೆ ಪ್ರಭಾವ ಬೀರಬೇಕು, ಇತರರ ಪಾದತಳದಲ್ಲಿರಬೇಕಾದ ಪರಿಸ್ಥಿತಿಯನ್ನು ಹೋಗಳಾಡಿಸ ಬೇಕು, ಅದನ್ನು ಪರಿವರ್ತಿತಗೊಳಿಸುವಂತೆ, ಕ್ರಾಂತಿಯ ಕಿರಿಕಾಡುವಂತೆ ಹಾಡಬೇಕು ಎಂಬುದಾಗಿ ಎಲ್ಲರ ಮನಗಳನ್ನು ಪರಿವರ್ತಿಸುವಂತಹ ಹಾಡು ಹಾಡಬೇಕೆಂದು ತಿಳಿಸಿದ್ದಾರೆ..
5. “ಇದೋ ಮೊದಲ ಮುನ್ನಿಲ್ಲ”
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ಕಾವ್ಯವನ್ನು ಕಯ್ಯಾರ ಕಿಞ್ಞಣ್ಣರೈರವರು ರಚಿಸಿರುವ ‘ಹೊಸನಾಡು’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ‘ಶತಮಾನದಗಾನ’ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ಪ್ರತಿಬಾರಿಯೂ ಹಾಡುವ ಹಾಡು ನವೀನವಾಗಿ, ಹೊಸದಾಗಿ ಹೊಸರೀತಿಯಲ್ಲಿ ಹಾಡು ಇರಬೇಕು, ಹಿಂದಿನದನ್ನು ಬಿಟ್ಟು ಮುಂದಿನದರ ಬಗ್ಗ ಯೋಚಿಸಬೇಕು ಎಂಬುದರ ಬಗ್ಗೆ ಹೇಳುತ್ತಾ ಕವಿ ಈ ಸಾಲುಗಳನ್ನು ರಚಿಸಿದ್ದಾರೆ..
ಸ್ವಾರಸ್ಯ: ಪ್ರತಿ ಬಾರಿಯೂ ಹಾಡುವ ಹಾಡು ಹೊಸತನದಿಂದ ಕೂಡಿರಬೇಕು, ಇದು ಹಿಂದೆ, ಮೊದಲು ಹಾಡಲಾಗಿತ್ತು ಎಂಬ ಭಾವನೆ ಬರದಂತೆ ಹಾಡಬೇಕು, ಹಿಂದಿನ ದಿನದ ದುಃಖ ನೋವು ಅಂದಿಗೆ ಮುಗಿಯಿತು. ಇಂದಿನ ದಿನ ನಮ್ಮದು, ಎಂಬ ಭಾವನೆಯನ್ನು ತಾಳಿ, ಹಳೆಯದನ್ನು ಮರೆತು ಹೊಸಹಾಡನ್ನು ಉತ್ಸಾಹದಿಂದ ಹೊಸದಾಗಿ ಹಾಡುವಂತೆ ಉತ್ಸಾಹದಿಂದ, ಹುರುಪಿನಿಂದ ಹಾಡಬೇಕು ಎಂಬುದಾಗಿ ಕವಿ ಕರೆ ಕೊಟ್ಟಿದ್ದಾರೆ.
ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1. ಧ್ವನಿ : ದನಿ : : ಯುಗ: ಜಗ
2. ಲೋಕಾಂತರ : ಸವರ್ಣಧೀರ್ಘಸಂಧಿ : : ಉನ್ನತೋನ್ನತ : ಗುಣಸಂಧಿ
3. ಬಾನು : ಆಕಾಶ : : ಭಾನು : ಸೂರ್ಯ
ಊ) ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.
1. ‘ಹೊಸಹಾಡು’ ಪದ್ಯದ ಆಕರ ಗ್ರಂಥ ಶತಮಾನದಗಾನ (ಪುನರ್ವವ, ಚೇತನ, ಕೊರಗ, ಶತಮಾನದಗಾನ)
2. ‘ಹೊಸನಾಡು’ ಪದ್ಯದ ಕವಿ ಕಯ್ಯಾರ ಕಿಞ್ಞಣ್ಣರೈ (ಗೋಪಾಕೃಷ್ಣ ಅಡಿಗ, ಕಯ್ಯಾರ ಕಿಞ್ಞಣ್ಣರೈ, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ)
3. ಉನ್ನತೋನ್ನುತ ಹಿಮಾಲಯ ಶಿಖರವನ್ನೇರಿ ಹಾಡಲ್ಲಿ ಹಾಡಬೇಕು.
(ಹಿಮಾಲಯ, ಘನಹಿಮಾದ್ರಿ, ಸಹ್ಯಾದ್ರಿ, ವಿಂಧ್ಯಾ)
4. ಜಾತಿಕುಲಮತ ಧರ್ಮಪಾಶಗಳ ಕಡಿದೊಗೆದು ಎದೆ ಹಿಗ್ಗಿ ಹಾಕಬೇಕು.
(ಜಾತಿಕುಲಮತ, ಮೇಲು-ಕೀಳು, ಬಡವ-ಬಲ್ಲಿದ, ಹಳ್ಳಿ-ಪಟ್ಟಣ)
ಭಾಷಾ ಚಟುವಟಿಕೆ:-
ಅ) ಕೊಟ್ಟಿರುವ ಪದ್ಯ ಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.
1.ನವಭಾವ-ನವಜೀವ-ನವಶಕ್ತಿ ತುಂಬಿಸುವ
ಹಾಡೊಮ್ಮೆ ಹಾಡಬೇಕು;
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ
ವೀರಧ್ವನಿಯೇರಬೇಕು;
2.ಜಾತಿ-ಕುಲ-ಮತ-ಧರ್ಮ ಪಾಶಗಳ ಕಡಿದೊಗೆದು
ಎದೆಹಿಗ್ಗಿ ಹಾಡಬೇಕು;
ಯುಗಯುಗಗಳಾಚೆಯಲಿ ಲೋಕಲೋಕಾಂತದಲಿ
ಆ ಹಾಡು ಗುಡುಗಬೇಕು;