ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು?
ಉತ್ತರ:- ದಟ್ಟ ಕಾಡಿನ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ವಾಸವಾಗಿದ್ದವು.
2. ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು?
ಉತ್ತರ:- ಜೋಡಿ ಪಾರಿವಾಳಗಳು ಹಗಲಿರುಳು ಜೊತೆಗೂಡಿ ಬಾಳುತ್ತಿದ್ದವು.
3. ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು?
ಉತ್ತರ:- ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಚೀತ್ಕರಿಸಿದವು.
4. ಏನನ್ನು ತೊರೆದು ಬಾಳಬೇಕು?
ಉತ್ತರ:- ವ್ಯಾಮೋಹವನ್ನು ತೊರೆದು ಬಾಳಬೇಕು.
ಆ) ಈ ಪ್ರಶ್ನೆಗೆ ಮೂರು–ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಪಾರಿವಾಳಗಳ ಆನಂದಕ್ಕೆ ಕಾರಣವೇನು?
ಉತ್ತರ:- ಪಾರಿವಾಳಗಳ ಸಂಸಾರದಲ್ಲಿ ಹಗಲಿರುಳು ಸಂತೋಷ ತುಂಬಿರುತ್ತಿತ್ತು. ಅವುಗಳ ಮೊಟ್ಟೆ ಒಡೆದು ಮರಿಗಳು ಹೊರಬಂದಾಗ, ಅವುಗಳ ಮಧುರ ಸದ್ದು ಕೇಳಿ ಪಾರಿವಾಳಗಳಿಗೆ ಆನಂದವಾಯಿತು.
2. ಬೇಡ ಏನು ಮಾಡಿದನು?
ಉತ್ತರ:- ಕಾಡಿಗೆ ಬಂದ ಬೇಡನು ಪಾರಿವಾಳಗಳನ್ನು ಹಿಡಿಯಲು ಬಲೆ ಬೀಸಿದನು. ಬೇಡನ ಬಲೆಗೆ ಪುಟ್ಟ ಮರಿಗಳು ಸಿಲುಕಿ ಚೇತ್ಕರಿಸತೊಡಗಿದವು.
ಇ) ಈ ಪ್ರಶ್ನೆಗೆ ಎಂಟು–ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ :- ಕಾಡಿನಲ್ಲಿ ಒಂದು ಪಾರಿವಾಳಗಳ ಕುಟುಂಬ ವಾಸ ಮಾಡುತ್ತಿರುತ್ತದೆ . ಇವುಗಳು ಆನಂದದಿಂದ ತನ್ನ ಮರಿ ಪಾರಿವಾಳಗಳೊಂದಿಗೆ ಬಾಳುತ್ತಿರುವ ಸಂದರ್ಭದಲ್ಲಿ ಬೇಡನೊಬ್ಬನು ಬಂದು ಬಲೆಯನ್ನು ಹಾಕುತ್ತಾನೆ .
ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ತನ್ನ ಮಕ್ಕಳು ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ತಾಯಿ ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ .
ಹೆಂಡತಿ ಪಾರಿವಾಳ , ಮಕ್ಕಳು ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ . ಈ ರೀತಿ ಎಲ್ಲಾ ಪಾರಿವಾಳಗಳು ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಲೆಯಲ್ಲಿ ಬೀಳಬಾರದಿತ್ತು .
ಮರಿ ಪಾರವಾಳಗಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳವು ಏವೇಕದಿಂದ ಯೋಚಿಸಿ ‘ ನಾನು ಬಲೆಯಲ್ಲಿ ಬಿದ್ದರೆ ಮರಿ ಪಾರಿವಾಳಗಳನ್ನು ಕಾಪಾಡಲು ಸಾಧ್ಯವೇ ? ‘ ಎಂದು ಯೋಚಿಸಿದ್ದರೆ ತಾನು ಬದುಕುಳಿಯಬಹುದಿತ್ತು.
ಅದರಂತೆ ಮರಿ ಪಾರಿವಾಳಗಳು , ಹೆಂಡತಿ ಪಾರಿವಾಳ ಬೇಡನ ಬಲೆಯಲ್ಲಿ ಬಿದ್ದಾಗ ಹೆಂಡತಿಯನ್ನು ಬಿಟ್ಟಿರಲಾರದೆ ಗಂಡು ಪಾರಿವಾಳ ಬಿಕ್ಕಿ ಬಿಕ್ಕಿ ಅಳುತ್ತಾ ಒಳಗೆ ಹಾರಿತು . ಅದಕ್ಕಾಗಿ ಕಾಯುತ್ತಿದ್ದ ಬೇಡ ಪಾರಿವಾಳಗಳನ್ನು ಹೊತ್ತು ನಡೆದನು .
ವ್ಯಾಮೋಹವನ್ನು ತೊರೆದು ಬಾಳಬೇಕು ಏನೇ ಬಂದರು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು .
2. ‘ಪಾರಿವಾಳ’ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉತ್ತರ:- ದಟ್ಟ ಕಾಡಿನ ದೊಡ್ಡ ಮರದ ಪೊದರಿನಲ್ಲಿ ಬಿಳಿ ಪಾರಿವಾಳಗಳು ಸಂಸಾರ ಹೂಡಿಕೊಂಡಿದ್ದವು. ಸದಾ ಜೋಡಿಯಾಗಿ ಸಂತೋಷದಿಂದ ಇವು ಇರುತ್ತಿದ್ದವು. ಪಾರಿವಾಳವು ಮೊಟ್ಟೆ ಇಟ್ಟು, ಆ ಮೊಟ್ಟೆ ಒಡೆದು ಮರಿಗಳು ಹೊರಬಂದಾಗ ಪಾರಿವಾಳಗಳ ಜೋಡಿಗೆ ಅಪಾರವಾದ ಸಂತೋಷವಾಗುತ್ತದೆ.
ಇದೇ ಸಮಯದಲ್ಲಿ ಕಾಡಿಗೆ ಬಂದ ಬೇಡನು ಪಾರಿವಾಳ ಗಳನ್ನು ಹಿಡಿಯಲು ಬಲೆ ಬೀಸುತ್ತಾನೆ. ಪುಟ್ಟ ಮರಿಗಳು ಬಲೆಯಲ್ಲಿ ಸಿಕ್ಕಿ ಬೀಳುತ್ತವೆ. ಬಂಧಿಗಳಾಗಿ ಕೂಗುತ್ತಿರುವ ಮರಿಗಳನ್ನು ನೋಡಿ ನಡೆಸಲಾಗದೆ ತಾಯಿ ಪಾರಿವಾಳವೂ ಬಲೆಗೆ ಧುಮುಕಿತು. ತನ್ನ ಜೊತೆಗಾತಿ ಬಲೆಗೆ ಹಾರಿದ್ದನ್ನು ಕಂಡು ಗಂಡು ಪಾರಿವಾಳವೂ ಬಲೆಗೆ ಧುಮುಕಿತು. ಆತುರದಿಂದಾಗಿ ಇಡೀ ಸಂಸಾರವೇ ಬೇಡನ ವಶವಾಯಿತು. ಆದ್ದರಿಂದ ‘ಮೋಹ ಮುಸುಕಿದ ಬುದ್ದಿ; ಸರ್ವನಾಶದ ಸಿದ್ಧಿ’ ಎಂದು ಲೇಖಕರು ಹೇಳುತ್ತಾರೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ’
ಪದ್ಯ – ಪಾರಿವಾಳ
ಆಕರ – ಸಮಗ್ರ ಕಥನ ಕವನಗಳು.
ಕವಿ – ಸು.ರಂ. ಎಕ್ಕುಂಡಿ
ಸಂದರ್ಭ ಸ್ವಾರಸ್ಯ: ಮರಿ ಪಾರಿವಾಳಗಳು ಬೇಡನ ಬಲೆಗೆ ಸಿಲುಕಿ ಕೂಗಲು ಪ್ರಾರಂಭಿಸಿದವು. ಆಗ ಮರಿಗಳ ಸಂಕಟ ನೋಡ ಲಾರದೆ ತಾಯಿ ಬಲೆಗೆ ಧುಮುಕಿತು. ಹೆಂಡತಿಯನಗಲಿರದ ಗಂಡು ಪಾರಿವಾಳವೂ ಬಿಕ್ಕಿ ಬಿಕ್ಕಿ ಅಳುತ್ತಾ ಹೆಂಡತಿಯ ಬಳಿ ಬಲೆಯೊಳಗೆ ಬಂದಿತು.
2. “ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ”
ಪದ್ಯ – ಪಾರಿವಾಳ
ಕವಿ – ಸು.ರಂ. ಎಕ್ಕುಂಡಿ
ಆಕರ – ಸಮಗ್ರ ಕಥನ ಕವನಗಳು. –
ಸಂದರ್ಭ ಸ್ವಾರಸ್ಯ – ಮರಿಗಳ ಸಂಕಟವನ್ನು ಕಂಡ ತಾಯಿ ಬಲೆಗೆ ಧುಮುಕಿತು. ಹೆಂಡತಿಯನಗಲಿರದ ಗಂಡು ಪಾರಿವಾಳವೂ ಬಲೆಯೊಳಗೆ ಬಂತು. ಪಾರಿವಾಳದ ಇಡೀ ಸಂಸಾರ ಬೇಡನಿಗೆ ಆಹಾರವಾಯಿತು. ವ್ಯಾಮೋಹವನ್ನು ತೊರೆದರೆ, ತಾಳ್ಮೆಯಿಂದ ಆಲೋಚಿಸಿದರೆ ಹೀಗಾಗುವುದಿಲ್ಲ. ‘ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ’ಯಾದ್ದರಿಂದ ವ್ಯಾಮೋಹವನ್ನು ಬಿಟ್ಟು ತಾಳ್ಮೆಯಿಂದ ಬದುಕಬೇಕೆಂಬ ಸಂದೇಶವನ್ನು ಕವಿಗಳು ಇಲ್ಲಿ ಕೊಟ್ಟಿದ್ದಾರೆ.
ಭಾಷಾ ಚಟುವಟಿಕೆ
ಅ) “ಬಾನಿನಲ್ಲಿ ಗಾಳಿಪಟಗಳು ಹಕ್ಕಿಗಳಂತೆ ಹಾರಾಡುತ್ತಿದ್ದವು” ಇಲ್ಲಿರುವ ಅಲಂಕಾರವನ್ನು ಗುರುತಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿ.
ಅಲಂಕಾರ: ಉಪಮಾಲಂಕಾರ
ಲಕ್ಷಣ: ಎರಡು ವಸ್ತುಗಳಲ್ಲಿ ಪರಸ್ಪರ ಇರುವ ಹೋಲಿಕೆಯನ್ನು ವರ್ಣಿಸುವುದೇ ಉಪಮಾಲಂಕಾರವೆನಿಸುತ್ತದೆ.
ಉಪಮೇಯ: ಗಾಳಿಪಟಗಳು
ಉಪಮಾನ: ಹಕ್ಕಿಗಳು
ಉಪಮಾವಾಚಕ: ಅಂತೆ
ಸಮಾನಧರ್ಮ: ಹಾರಾಡುವುದು.
ಸಮನ್ವಯ : ಉಪಮೇಯವಾದ ಗಾಳಿಪಟಗಳು ಉಪಮಾನವಾದ ಹಕ್ಕಿಗಳಿಗೆ ಹೋಲಿಸಿ ವರ್ಣಿಸಲಾಗಿದೆ. ‘ಅಂತೆ’ ಎಂಬ ಉಪಮಾವಾಚಕ ಪದವನ್ನು‘ಹಾರಾಡುವುದು’ ಎಂಬ ಸಮಾನ ಧರ್ಮವನ್ನು ಮೀರಿ ನಾಲ್ಕು ಅಂಶಗಳನ್ನು ತಿಳಿಸಿರುವುದರಿಂದ ಇದು ಪೂರ್ಣೋಪಮಾಲಂಕಾರ.
ಆ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ.
ಕಂಠಪಾಠ ಮಾಡಿರಿ.
1. ದಟ್ಟ ಕಾಡಿನಲೊಂದು…………………
……………………………………………..
……………………ಪಾರಿವಾಳಗಳ ಜೋಡಿ.
ಉತ್ತರ:-
ದಟ್ಟ ಕಾಡಿನಲೊಂದು ಹೆಮ್ಮರದ ಹೊದರಿನಲಿ
ಇರುತ್ತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿ ಪಾರಿವಾಳಗಳ ಜೋಡಿ.
2. ಹಗಲಿರುಳು ………………………..
…………………………………………..
……………………ಹೊದರಿನಲ್ಲಿ ಬಂದು
ಉತ್ತರ:-
ಹಗಲಿರುಳು ಜೊತೆಗೂಡಿ ಬಾಳಿದವು ಈ ಜೋಡಿ
ಎಂದಿಗೂ ಆಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು.