ಅಧ್ಯಾಯ 3
ಪ್ರಾಚೀನ ಭಾರತದ ನಾಗರಿಕತೆಗಳು :ಸಿಂಧೂ – ಸರಸ್ವತಿ ನಾಗರಿಕತೆ ಮತ್ತು ವೇದಗಳ ಕಾಲದ ನಾಗರಿಕತೆ.
ಅಭ್ಯಾಸಗಳು
I. ಈ ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿರಿ.
1. ಸಿಂಧೂ-ಸರಸ್ವತಿ ನಾಗರೀಕತೆಯ ಮುದ್ರೆಗಳ ಮೇಲೆ ಕಂಡುಬಂದಿರುವ ಲಿಪಿಯನ್ನು ಚಿತ್ರಲಿಪಿ ಎಂದು ಕರೆಯಲಾಗಿದೆ.
2. ಈ ನಾಗರೀಕತೆಯ ಸಮುದ್ರ ವಾಣಿಜ್ಯದ ಪ್ರಮುಖ ಕೇಂದ್ರ ಲೋಥಾಲ್.
3. ಮಳೆ ನೀರನ್ನು ಯುಕ್ತವಾಗಿ ಸಂಗ್ರಹಿಸಿದ ವ್ಯವಸ್ಥೆಯಿದ್ದ ತಾಣ ದೋಲಾವೀರಾ
II. ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
4. ಸಿಂಧೂ – ಸರಸ್ವತಿ ನಾಗರೀಕತೆಯ ಸ್ನಾನದ ಕೊಳಗಳು ಹೇಗೆ ರಚನೆಯಾಗಿದ್ದವು?
ಉತ್ತರ:-ಸಿಂಧೂ – ಸರಸ್ವತಿ ನಾಗರೀಕತೆಯ ಮನೆಗಳು ಸ್ನಾನದ ಕೊಠಡಿಗಳನ್ನು ಹೊಂದಿದ್ದವು. ಈ ನಾಗರೀಕತೆಯ ಮೊಹೆಂಜೋದಾರೋವಿನಲ್ಲಿ ಒಂದು ಸ್ನಾನದ ಕೊಳವನ್ನು ಕಟ್ಟಲಾಗಿತ್ತು. ಇದನ್ನು ಇಟ್ಟಿಗೆಗಳಿಂದ ಕಟ್ಟಲಾಗಿದೆ. ಕೊಳದಿಂದ ನೀರಿನ ಸೋರಿಕೆ ಆಗದಂತೆ ಎಚ್ಚರ ವಹಿಸಿದ್ದಾರೆ. ಇದರ ಎರಡು ಕಡೆಗಳಲ್ಲಿ ಇಳಿಯುವ ಮೆಟ್ಟಿಲುಗಳಿದ್ದು ಸುತ್ತಲೂ ಕೊಠಡಿಗಳಿದ್ದವು. ಬಹುಶಃ ನೀರಿನ ಪೂರೈಕೆಯು ಬಾವಿಯಿಂದ ಆಗುತ್ತಿತ್ತು ಹಾಗು ಬಳಕೆಯ ಬಳಿಕ ನೀರನ್ನು ಹೊರಗೆ ಬಿಡಲಾಗುತ್ತಿತ್ತು.
5. ಸಿಂಧೂ–ಸರಸ್ವತಿ ನಾಗರಿಕತೆಯ ನಗರನಿರ್ಮಾಣ ಹೇಗಿತ್ತು ಎಂಬುದನ್ನು ವಿವಿರಿಸಿ.
ಉತ್ತರ:- ಸಿಂಧೂ-ಸರಸ್ವತಿ ನಾಗರಿಕತೆಯಲ್ಲಿ ನಗರನಿರ್ಮಾಣವು ಸುಸಜ್ಜಿತ ವಾಗಿತ್ತು ಮತ್ತು ಆ ಕಾಲದ ಇತರ ನಾಗರಿಕತೆಗಳಾದ ಈಜಿಪ್ಟ್ ಮೆಸಪೊಟೇಮಿಯಾ ನಾಗರಿಕತೆಗಳಿಗಿಂತ ಬಹಳ ಮುಂದುವರಿದಿದ್ದು ಬಹಳ ವಿಶಾಲವಾಗಿತ್ತು ಎಂಬುದು ತಿಳಿದು ಬರುತ್ತದೆ. ನಗರ ನಿರ್ಮಾಣದ ಪ್ರಮುಖವಾದ ಅಂಶಗಳು ಹೀಗಿದ್ದವು.
1. ನಗರದ ತಗ್ಗಿನ ಪ್ರದೇಶದಲ್ಲಿರುವ ಗ್ರಾಮವು ಜನ ವಸತಿಯ ಜಾಗವಾಗಿತ್ತು. ಇದನ್ನು ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ರಚಿಸಿದ್ದರು.
2. ಕ್ರಮಬದ್ಧವಾಗಿ ನಿರ್ಮಿಸಿದ ಮನೆಗಳು, ರಸ್ತೆಗಳು ಹಾಗೂ ಚರಂಡಿಗಳನ್ನು ನಿರ್ಮಿಸಿದ್ದರು.
3. ಸಾಮಾನ್ಯವಾಗಿ ಜನರು ಒಂದು ಅಥವಾ ಎರಡು ಅಂತಸ್ತಿನ ಮನೆಗಳನ್ನು ಕಟ್ಟಿದ್ದರು.
4. ಈ ಮನೆಗಳನ್ನು ಸುಟ್ಟ ಅತ್ಯುತ್ತಮ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದು, ಅವುಗಳ ಗೋಡೆಗಳು ಭದ್ರವಾಗಿದ್ದವು. ಅದರ ಒಳಾಂಗಣದ ಸುತ್ತ ಕೊಠಡಿಗಳಿದ್ದವು. ಮನೆಯ ಬಾಗಿಲುಗಳು ರಸ್ತೆಯ ಮಗ್ಗುಲಿನಲ್ಲಿದ್ದವು. ಯಾವ ಕಿಟಕಿಯೂ ರಸ್ತೆಗೆ ಮುಖ ಮಾಡಿರಲಿಲ್ಲ.
5. ಪ್ರತಿಯೊಂದು ಮನೆಗಳು ಸ್ನಾನದ ಕೊಠಡಿಗಳನ್ನು ಹೊಂದಿದ್ದವು.
6. ಕೆಲವು ಮನೆಗಳಲ್ಲಿ ಬಾವಿಗಳಿದ್ದು ಅವುಗಳಿಂದ ನೀರಿನ ಪೂರೈಕೆಯಾಗುತ್ತಿತ್ತು. ನೀರು ಸಮೃದ್ಧವಾಗಿತು.
7. ನಗರಗಳು ಒಳಚರಂಡಿ ವ್ಯವಸ್ಥೆಯನ್ನು ಹೊಂದಿ ದ್ದವು. ಚರಂಡಿಗಳನ್ನು ಇಟ್ಟಿಗೆಗಳಿಂದ ನಿರ್ಮಿಸಿ ಅವುಗಳ ಮೇಲೆ ಚಪ್ಪಡಿಗಳಿಂದ ಮುಚ್ಚಲಾಗಿತ್ತು.
8. ಮನೆಬಳಕೆಯ ಹಾಗೂ ಸ್ನಾನದಲ್ಲಿ ಬಳಸಿದ ಕಲುಷಿತ ನೀರು ಮೋರಿಯ ಮೂಲಕ ಚರಂಡಿಗೆ ಬಂದು ಸೇರುತ್ತಿತ್ತು.
9. ಚರಂಡಿಗಳನ್ನು ಕಾಲದಿಂದ ಕಾಲಕ್ಕೆ ಶುಚಿಯಾಗಿಡಲು ಅಲ್ಲಲ್ಲಿ ರಂಧ್ರಗಳನ್ನು ನಿರ್ಮಿಸಿದ್ದರು.
ಒಳಚರಂಡಿಯ ವ್ಯವಸ್ಥೆ ಒಂದರಿಂದಲೇ ಆಗಿನ ಕಾಲದ ನಗರ ನಿರ್ಮಾಪಕರ ವ್ಯವಸ್ಥಿತ ಆಲೋಚನೆ, ಕುಂದು– ಕೊರತೆಗಳಿಲ್ಲದ ಕ್ರಿಯಾನ್ವಯ ಮತ್ತು ಸಾರ್ವಜನಿಕ ಬಾಧ್ಯತೆಗಳು ಬಹಳ ಉನ್ನತವಾಗಿತ್ತು ಎಂಬುದು ತಿಳಿದು ಬರುತ್ತದೆ.
6. ಸಿಂಧೂ–ಸರಸ್ವತಿ ನಾಗರೀಕತೆಯ ಸಾಂಸ್ಕೃತಿಕ ವಿವರ ಗಳನ್ನು ತಿಳಿಯಲು ದೊರೆತಿರುವ ಕುರುಹುಗಳನ್ನು ಪಟ್ಟಿಮಾಡಿ.
ಉತ್ತರ:- ಸಿಂಧೂ-ಸರಸ್ವತಿ ನಾಗರೀಕತೆಯ ಕಟ್ಟಡಗಳನ್ನು ಹೊರತು ಪಡಿಸಿ ದೊರೆತಿರುವ ವಸ್ತುಗಳಲ್ಲಿ ಲೋಹ ಹಾಗು ಬೆಲೆಬಾಳುವ ಹರಳುಗಳನ್ನು ಹೆಚ್ಚಾಗಿ ಕಾಣುತ್ತೇವೆ. ಮಣಿಗಳು ಹಾಗು ಮುದ್ರೆಗಳು ದೊರೆತಿವೆ. ಹರಪ್ಪದ ಮಣಿಗಳಿಗೆ ದೂರದ ಮೆಸೋಪೋಟೇಮಿಯಾದಲ್ಲಿ ಸಹ ಹೆಚ್ಚಿನ ಬೇಡಿಕೆಯಿತ್ತು. ಮಣಿಗಳಲ್ಲಿ ಉದ್ದವಾಗಿ ರಂಧ್ರವನ್ನು ಕೊರೆಯುವ ವಿಧಾನ ವನ್ನು ಅವರು ಕರಗತಮಾಡಿಕೊಂಡಿದ್ದರು. ಬಗೆ ಬಗೆಯ ಚಿತ್ತಾರದ ಮಡಕೆಗಳು ಸಿಕ್ಕಿವೆ. ಲೋಹ ಹಾಗು ಶಂಖಗಳಿಂದ ನಿರ್ಮಿಸಿದ ಬಳೆಗಳು ಹೇರಳವಾಗಿ ದೊರೆತಿವೆ. ಬಳೆಗಳನ್ನು ವಿವಿಧ ರೀತಿಗಳಲ್ಲಿ ಧರಿಸಿರುವ ಸ್ತ್ರೀಯರ ಮೂರ್ತಿಗಳು ಸಿಕ್ಕಿವೆ. ಬೆಲೆಬಾಳುವ ಲೋಹಗಳು, ಹರಳುಗಳು ಮತ್ತು ಆಭರಣಗಳನ್ನು ಇವರು ಬಳಸುತ್ತಿದ್ದರು.
7.ಸರಸ್ವತೀ ನಾಗರಿಕತೆ ಕಾಲದ ಆರ್ಥಿಕ ವ್ಯವಸ್ಥೆಯನ್ನು ವಿವರಿಸಿ.
ಉತ್ತರ:-ಸಿಂಧೂ-ಸರಸ್ವತಿ ಸಂಸ್ಕೃತಿಯ ಜನ ಕೃಷಿ ಮತ್ತು ವ್ಯಾಪಾರವನ್ನು ಅವಲಂಬಿಸಿದ್ದರು. ಗೋಧಿ, ಬಾರ್ಲಿ ಹಾಗು ಕಾಳು ಇವರ ಮುಖ್ಯ ಬೆಳೆಗಳಾಗಿದ್ದವು. ಬೇಟೆ ಮತ್ತು ಮೀನುಗಾರಿಕೆಗಳೂ ವ್ಯಾಪಕವಾಗಿದ್ದವು. ಹತ್ತಿಯನ್ನು ಬೆಳೆದು ಬಗೆಬಗೆಯ ಉಡುಪುಗಳನ್ನು ತಯಾರಿಸಲಾಗುತ್ತಿತ್ತು. ಡುಬ್ಬದ ಗೂಳಿ, ದನ, ಎಮ್ಮೆ, ಕುರಿ, ಮೇಕೆ ಹಾಗು ಕೋಳಿಗಳ ಸಂಗೋಪನೆಯಲ್ಲಿ ತೊಡಗಿದ್ದರು. ಎತ್ತುಗಳನ್ನು ಹೊರೆ ಒಯ್ಯಲು ಬಳಸಲಾಗುತ್ತಿತ್ತು. ಕೃಷಿಯ ಜೊತೆಯಲ್ಲಿ ವ್ಯಾಪಾರ-ವಾಣಿಜ್ಯಗಳು ಪ್ರಮುಖ ಸ್ಥಾನವನ್ನು ಪಡೆದು ಕೊಂಡಿದ್ದವು. ನಗರಗಳು ಗ್ರಾಮೀಣ ಪ್ರದೇಶಗಳ ಹಾಗು ಹೊರದೇಶಗಳ ಜೊತೆಯಲ್ಲಿ ವ್ಯಾಪಾರಮಾಡುತ್ತಿದ್ದವು. ಬಲೂಚಿಸ್ತಾನ, ಸೌರಾಷ್ಟ್ರ ಹಾಗು ದಖನ್ ಪ್ರದೇಶಗಳ ಜೊತೆಯಲ್ಲಿ ವ್ಯಾಪಾರ ಮಾಡುತ್ತಿದ್ದವು. ಮೆಸಪಟೋಮಿಯೊ ದಲ್ಲಿ ಸಿಕ್ಕಿರುವ ಹಲವು ಮುದ್ರೆಗಳು ಆ ಪ್ರದೇಶದೊಂದಿಗೆ ಸಿಂಧೂ-ಸರಸ್ವತೀ ನಾಗರೀಕತೆಯು ಹೊಂದಿದ್ದ ಆರ್ಥಿಕ ಸಂಬಂಧವನ್ನು ಸೂಚಿಸುತ್ತದೆ. ಗುಜರಾತಿನ ಲೋಥಾಲ್ನಲ್ಲಿ ಬೃಹದಾಕಾರದ ಕಟ್ಟಡವೊಂದು ಪತ್ತೆಯಾಗಿದ್ದು, ಅದು ಹಡಗು ಕಟ್ಟೆ (ಡಾರ್ಕ್ಯೋರ್ಕ್) ಆಗಿದ್ದಿರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಲೋಥಾಲ್ ಸಮುದ್ರ ವಾಣಿಜ್ಯದ ಒಂದು ಪ್ರಮುಖ ಕೇಂದ್ರವಾಗಿತ್ತು. ಧೋಲಾವೀರಾ ಎಂಬ ತಾಣದಲ್ಲಿ ಮಳೆನೀರನ್ನು ಅತ್ಯಂತ ಯುಕ್ತವಾಗಿ ಸಂಗ್ರಹಿಸಲು ವ್ಯವಸ್ಥೆಯಿದ್ದಿತು.
7. ಪೂರ್ವ ವೇದಕಾಲ ಮತ್ತು ಉತ್ತರ ವೇದಕಾಲದ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ವಿಶ್ಲೇಷಿಸಿ.
ಉತ್ತರ:- ಪೂರ್ವ ವೇದಕಾಲ :-ಋಗ್ವೇದದ 10ನೆಯ ಮಂಡಲದ ‘ಪುರಷಸೂಕ್ತ’ದಲ್ಲಿ ವರ್ಣವ್ಯವಸ್ಥೆ ಬಗ್ಗೆ ಉಲ್ಲೇಖಿಸಲಾಗಿದೆ. ಆ ಸಮಾಜದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಂಬ ನಾಲ್ಕು ವರ್ಣಗಳು ಅಸ್ತಿತ್ವದಲ್ಲಿದ್ದವು. ವ್ಯಕ್ತಿಯು ಆಯ್ದುಕೊಂಡ ವೃತ್ತಿಯ ಮೇಲೆ ಈ ವರ್ಣ ನಿರ್ಧಾರವಾಗುತ್ತಿತ್ತೇ ಹೊರತು ಹುಟ್ಟಿನಿಂದಲ್ಲ. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ-ಮಾನವಿತ್ತು, ರಾಜನನ್ನು ‘ರಾಜನ್’ ಎಂದು ಕರೆಯುತ್ತಿದ್ದರು. ಈತನ ಸಹಾಯಕ್ಕೆ ಸಭಾ, ಸಮಿತಿ ಮತ್ತು ವಿಧಾತ ಇದ್ದವು. ವಿಧವಾ ವಿವಾಹ ಜಾರಿಯಲ್ಲಿತ್ತು. ಪೂರ್ಣ ವೇದದ ಕಾಲದಲ್ಲಿ ಜನರು ಮೂಲಭೂತವಾಗಿ ಪಶುಸಂಗೋಪನೆ ಮತ್ತು ಕೃಷಿಯಲ್ಲಿ ತೊಡಗಿದ್ದರು.
ಉತ್ತರವೇದಕಾಲ:- ಹುಟ್ಟಿನಿಂದ ವ್ಯಕ್ತಿಯ ಜಾತಿ ನಿರ್ಧಾರಿತವಾಗತೊಡಗಿತ್ತು. ಜಾತಿವ್ಯವಸ್ಥೆ ಜಟಿಲಗೊಂಡಿತು. ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಸ್ಥಾನ-ಮಾನವಿರಲಿಲ್ಲ. ಈ ಕಾಲದಲ್ಲಿ ಯಜ್ಞ-ಯಾಗಗಳು ಬಳಕೆಗೆ ಬಂದವು. ಈ ಅವಧಿಯಲ್ಲಿ ‘ವಿದಾತ್’ ಸಭೆಯು ಕಣ್ಮರೆಯಾಯಿತು. ವಿಧವಾ ವಿವಾಹ ಪದ್ಧತಿಯನ್ನು ನಿಷೇಧಿಸಲಾಯಿತು. ವರದಕ್ಷಣೆ, ಪರದಾ ಪದ್ಧತಿ, ಬಾಲ್ಯವಿವಾಹ ಅಸ್ತಿತ್ವಕ್ಕೆ ಬಂದವು. ಉತ್ತರ ವೇದದ ಕಾಲದಲ್ಲಿ ಜನರು ಬೇಟೆ ಮತ್ತು ಪಶುಪಾಲನೆಗಿಂತ ಕೃಷಿ ಪ್ರಮುಖ ಉದ್ಯೋಗವಾಯಿತು.