ಭೂಗೋಳಶಾಸ್ತ್ರ
ಅಧ್ಯಾಯ-11
ಭೂಮಿ-ನಮ್ಮ ಜೀವಂತ ಗ್ರಹ
- ಬಿಟ್ಟಿರುವ ಸ್ಥಳಗಳನ್ನು ಸೂಕ್ತವಾದ ಉತ್ತರಗಳಿಂದ ಭರ್ತಿ ಮಾಡಿ.
1. ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರವು 510 ದಶಲಕ್ಷ ಚದರ ಕಿ.ಮೀ. ಗಳಷ್ಟಿದೆ.
2. ಭೂಮಿಯು ಗೋಳಾಕಾರ ದಲ್ಲಿದೆ.
3. ಭೂಮಿಯ ಸಮಭಾಜಕ ವೃತ್ತ ಮತ್ತು ಧ್ರುವ ಪ್ರದೇಶಗಳ ವ್ಯಾಸವು 12,756 ಕಿ.ಮೀ ಮತ್ತು 12,714 ಕಿ.ಮೀ.ಗಳು.
4. 23.30| ಉತ್ತರ ಅಕ್ಷಾಂಶವನ್ನು ಕರ್ಕಾಟಕ ಸಂಕ್ರಾಂತಿ ವೃತ್ತ ಎಂದು ಕರೆಯುತ್ತಾರೆ.
5. ಭಾರತದ ಪ್ರಮಾಣ ವೇಳೆಯು 820.301 ರೇಖಾಂಶವನ್ನು ಆಧರಿಸಿದೆ.
II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ.
6.ಭೂಮಿಯನ್ನು ‘ಜೀವಂತ ಗ್ರಹ’ವೆಂದು ಏಕೆ ಕರೆಯುತ್ತಾರೆ?
ಉತ್ತರ:-ಸೌರವ್ಯೂಹದಲ್ಲಿರುವ ಗ್ರಹಗಳಲ್ಲಿ ಭೂಮಿಯು ಮಾತ್ರ ಜೀವಿಗಳನ್ನು ಹೊಂದಿದೆ. ಭೂಮಿ ಎಲ್ಲಾ ಬಗೆಯ ಅಂದರೆ ಸಸ್ಯಗಳು, ಪ್ರಾಣಿಗಳು ಮತ್ತು ಜೀವಿಗಳಿಗೆ ವಾಸಸ್ಥಾನವಾಗಿದೆ. ಜೀವಿಗಳಿಗೆ ಪೂರಕವಾದ ಉಷ್ಣಾಂಶ, ಅನಿಲಗಳು, ವಾಯುಗೋಳ, ಜಲಚಕ್ರ ಇತ್ಯಾದಿಗಳನ್ನು ಹೊಂದಿರುವು ದರಿಂದ ಭೂಮಿಯನ್ನು ‘ಜೀವಂತ ಗ್ರಹ’ ಎಂದು ಕರೆಯುತ್ತಾರೆ.
7.ಉತ್ತರಗೋಳಾರ್ಧವನ್ನು ‘ಭೂ ಪ್ರಧಾನಗೋಳʼವೆಂದು’ ಹಾಗೂ ದಕ್ಷಿಣಾರ್ಧಗೋಳವನ್ನು ʼಜಲಪ್ರಧಾನ,ಗೋಳ ವೆಂದು ಏಕೆ ಕರೆಯುತ್ತಾರೆ?
ಉತ್ತರ:-ನೆಲ ಮತ್ತು ಜಲರಾಶಿಗಳು ಉತ್ತರ ಗೋಳಾರ್ಧ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಉತ್ತರ ಗೋಳಾರ್ಧದಲ್ಲಿ ಶೇ. 60 ಭಾಗದಷ್ಟು ಭೂಭಾಗವಿದ್ದು ಶೇ. 40 ಭಾಗದಷ್ಟು ಜಲರಾಶಿಯಿರುವುದು. ಆದ್ದರಿಂದ ಇದನ್ನು ಭೂಪ್ರಧಾನ ಗೋಳಾರ್ಧವೆಂದೂ ಇದಕ್ಕೆ ವಿರುದ್ಧವಾಗಿ ದಕ್ಷಿಣಾರ್ಧಗೋಳದಲ್ಲಿ ಶೇ. 81 ಭಾಗದಷ್ಟು ಜಲರಾಶಿಯಿದ್ದು ಶೇ. 19 ಭಾಗದಷ್ಟು ನೆಲಭಾಗ ವಾಗಿದೆ. ಆದ್ದರಿಂದ ಇದನ್ನು ‘ಜಲ ಪ್ರಧಾನ ಗೋಳಾರ್ಧ’ವೆಂದೂ ಕರೆಯುವರು.
8. ಅಕ್ಷಾಂಶಗಳು ಮತ್ತು ರೇಖಾಂಶಗಳು ಎಂದರೇನು?
ಉತ್ತರ:-ಸಮಭಾಜಕ ವೃತ್ತಕ್ಕೆ ಸಮಾನಾಂತರವಾಗಿ ಇರುವಂತೆ ಗೋಳದ ಮೇಲೆ ಪೂರ್ವ ಪಶ್ಚಿಮವಾಗಿ ಎಳೆದಿರುವ ರೇಖೆಗಳೇ ರೇಖಾಂಶಗಳು. ಪ್ರಧಾನ ರೇಖಾಂಶದಿಂದ (0) ಎತ್ತರದಿಂದಉತ್ತರ ದಕ್ಷಿಣದ ಕಡೆಗೆ ಎಳೆದಿರುವ ಊಹಾರೇಖೆಗಳನ್ನು ಅಕ್ಷಾಂಶಗಳು ಎಂದು ಕರೆಯುವರು.
9. ಸ್ಥಾನಿಕ ವೇಳೆ ಮತ್ತು ಆದರ್ಶ ವೇಳೆಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ.
ಉತ್ತರ:- ಸ್ಥಾನಿಕವೇಳೆ: ಒಂದು ಸ್ಥಳದ ಸ್ಥಾನಿಕವೇಳೆಯನ್ನು ಆ ಸ್ಥಳದ ರೇಖಾಂಶ ಅಥವಾ ಸೂರ್ಯನಸ್ಥಾನಕ್ಕನುಸಾರವಾಗಿ ಹೇಳುತ್ತಾರೆ. ಸ್ಥಾನಿಕವೇಳೆಯು ಆ ಸ್ಥಳದ ಸ್ಥಳೀಯ ರೇಖಾಂಶವನ್ನು ಅದರಲ್ಲೂಸ್ಥಳೀಯ ಮಧ್ಯಾಹ್ನದ ರೇಖೆಯನ್ನು ಆಧರಿಸಿರುತ್ತದೆ. ಆ ಸ್ಥಳದ ಮೇಲೆ ಸೂರ್ಯನ ಕಿರಣ ನೇರವಾಗಿಬೀಳುವುದರಿಂದ ಮಧ್ಯಾಹ್ನ ೧೨ ಗಂಟೆಯಾಗಿರುತ್ತದೆ. ಆ ಮಧ್ಯಾಹ್ನರೇಖೆ ಹಾದುಹೋಗುವ ಎಲ್ಲಾಸ್ಥಳಗಳಲ್ಲೂ ಒಂದೇ ಸ್ಥಾನಿಕ ವೇಳೆಯಿರುತ್ತದೆ. ಪ್ರತಿ ರೇಖಾಂಶವೂ ತನ್ನದೇ ಆದ ಸ್ಥಾನಿಕವೇಳೆಯನ್ನು ಹೊಂದಿದೆ.
ಪ್ರಮಾಣವೇಳೆ: ಸ್ಥಾನಿಕ ವೇಳೆಯು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಪ್ರತಿಯೊಂದು ಸ್ಥಳವೂ ತನ್ನದೇ ಸ್ಥಾನಿಕ ವೇಳೆಯನ್ನು ಅನುಸರಿಸುವುದರಿಂದ, ಸಾಕಷ್ಟು ಗೊಂದಲವುಂಟಾಗುತ್ತದೆ. ಈ ಗೊಂದಲವನ್ನು ನಿವಾರಿಸಲು ಹಲವು ದೇಶಗಳು ಇಡೀ ದೇಶದಲ್ಲಿ ಏಕರೂಪದ ವೇಳೆಯನ್ನು ಅನುಸರಿಸುತ್ತವೆ. ಇಂತಹ ಏಕರೂಪದ ವೇಳೆಯು ಆ ದೇಶದ ಮಧ್ಯದಲ್ಲಿ ಹಾದುಹೋಗುವ ರೇಖಾಂಶದ ವೇಳೆಯನ್ನಾಧರಿಸಿರುತ್ತದೆ ಅಥವಾ ಆ ರೇಖಾಂಶದ ಮೇಲಿರುವ ಪ್ರಮುಖ ನಗರದ ವೇಳೆಯಾಗಿರುತ್ತದೆ. ಈ ವೇಳೆಯನ್ನು ದೇಶದ ಎಲ್ಲಾ ಭಾಗಗಳಲ್ಲೂ ಅನುಸರಿಸುವುದರಿಂದ ಇದನ್ನು ಪ್ರಮಾಣ ವೇಳೆ ((Standard Time) ಎಂದು ಕರೆಯುತ್ತಾರೆ.
10. ಅಂತಾರಾಷ್ಟ್ರೀಯ ದಿನಾಂಕ ರೇಖೆ ಎಂದರೇನು?
ಉತ್ತರ:- ಗ್ರೀನ್ ವಿಚ್ ರೇಖಾಂಶದ ವಿರುದ್ಧವಾದ ದಿಕ್ಕಿನಲ್ಲಿರುವ 180° ರೇಖಾಂಶದ ಮೇಲೆ ಪ್ರಪಂಚ ಪರ್ಯಟನೆ ಮಾಡುವವರು ತಮ್ಮ ಸಂದರ್ಭಕ್ಕೆ ದಿನ ಮತ್ತು ದಿನಾಂಕವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ಇದು ಪೆಸಿಫಿಕ್ ಸಾಗರದ ಮೂಲಕ ಹಾದು ಹೋಗುವ 180° ರೇಖಾಂಶದ ಮೇಲೆ ಇದ್ದರೂ ಕೆಲವೆಡೆ ಭೂಭಾಗಗಳನ್ನು ತಪ್ಪಿಸಲು ಅಲ್ಲಲ್ಲಿ ಅಂಕುಡೊಂಕಾಗಿ ಎಳೆಯಲಾಗಿದೆ. ಇದನ್ನೇ ಅಂತರಾಷ್ಟ್ರೀಯ ದಿನಾಂಕ ರೇಖೆ ಎನ್ನುವರು.
III. ಈ ಕೆಳಗಿನವುಗಳ ಅರ್ಥ ಬರೆಯಿರಿ.
11. ವಿಶಿಷ್ಟ ಗ್ರಹ : ಭೂಮಿಯು ಇತರ ಗ್ರಹಗಳಿಗಿಂತ ಭಿನ್ನವಾಗಿದ್ದು ಜೀವರಾಶಿಗಳನ್ನು ಹೊಂದಿದೆ ಇದೊಂದು ವಿಶಿಷ್ಟ ಗ್ರಹ.
12. ಭೂಮಿಯ ಗಾತ್ರ : ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರವು 510 ದಶಲಕ್ಷ ಚದರ ಕಿ.ಮೀ.ಗಳು.
13. ಭೂಖಂಡಗಳು : ಭೂಮಿಯು ಒಳಗೊಂಡಿರುವ ಭೂಭಾಗಗಳನ್ನು ಭೂ ಖಂಡಗಳೆಂದು ಕರೆಯುವರು.
14. ಭೂಮ್ಯಾಕಾರ : ಭೂಮಿಯ ಆಕಾರವನ್ನು ಭೂಮ್ಯಾಕಾರ (ಜಿಯಾಡ್) ಅಥವಾ ಗೋಳಾಕಾರ ಎಂದು ಕರೆಯಲಾಗಿದೆ.
15. ಪ್ರಧಾನ ರೇಖಾಂಶ : ಇಂಗ್ಲೆಂಡಿನ ಗ್ರೀನ್ವಿಚ್ನ ಮೇಲೆ ಹಾದುಹೋಗುವ ರೇಖಾಂಶವನ್ನು ‘ಪ್ರಧಾನ ರೇಖಾಂಶ’ವೆಂದು ಆಯ್ಕೆ ಮಾಡಲಾಗಿದೆ. ಇದನ್ನು 0°ಎಂದು ಗುರ್ತಿಸಲಾಗಿದೆ.
16. ಭಾರತದ ಆದರ್ಶ ವೇಳೆ : ಭಾರತದಲ್ಲಿ 820.301 ಡಿಗ್ರಿ ಪೂರ್ವ ರೇಖಾಂಶವನ್ನು ದೇಶದ ಅಥವಾ ಆದರ್ಶ ರೇಖಾಂಶವೆಂದು ನಿರ್ಧರಿಸಲಾಗಿದೆ. ಇದು ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ನಗರದ ಮೂಲಕ ಹಾದುಹೋಗಿದೆ.