ಅಧ್ಯಾಯ 2,
ಭರತವರ್ಷ : ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಪ್ರಾಗೈತಿಹಾಸಿಕ ಕಾಲ ಅಭ್ಯಾಸ-ಪ್ರಶ್ನೋತ್ತರಗಳು
|.ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ
1 ಭಾರತವು ಒಂದು ಪರ್ಯಾಯ ದ್ವೀಪವಾಗಿದೆ.
2 ಬೂದಿಯ ಕುರುಹುಗಳು ಕರ್ನೂಲಿನ ಗವಿಗಳಲ್ಲಿ ದೊರೆತಿವೆ.
3 ಮಧ್ಯಶಿಲಾಯುಗದ ಪರಿಕರಗಳನ್ನು ಸೂಕ್ಷ್ಮ ಶಿಲಾಪರಿಕರಗಳು ಎಂದು ಕರೆಯುತ್ತಾರೆ.
||.ಸಂಕ್ಷಿಪ್ತವಾಗಿ ಉತ್ತರಿಸಿ.
4 ಭಾರತದ ಭೂ ಮೇಲ್ಮೈ ರಚನೆಯನ್ನು ಸ್ಕೂಲವಾಗಿ ತಿಳಿಸಿ ?
ಉತ್ತರ:- ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ವಿಶಾಲವಾದ ಭೂ ಪ್ರದೇಶವನ್ನು ಹೊಂದಿರುವ ಭಾರತವು ಒಂದು ಉಪಖಂಡ. ಮೂರು ಕಡೆ ನೀರಿನಿಂದಲೂ ಮತ್ತು ಒಂದು ಕಡೆ ಭೂಭಾಗದಿಂದಲೂ ಆವೃತವಾಗಿರುವುದರಿಂದ ಇದೊಂದು ಪರ್ಯಾಯ ದ್ವೀಪವಾಗಿದೆ.
ಭಾರತದ ಭೂ ರಚನೆಯು ಉತ್ತರದಲ್ಲಿ ಹಿಮಾಲಯದ ಪರ್ವತಶ್ರೇಣಿಗಳನ್ನು, ಸಮತಟ್ಟಾದ ಸಿಂಧೂ, ಗಂಗಾ ಬಯಲು ಪ್ರದೇಶವನ್ನು, ದಕ್ಷಿಣದ ದಖನ್ ಪ್ರಸ್ಥಭೂಮಿಯನ್ನು ಹಾಗೂ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.
5 ಭಾರತದ ಮೇಲೆ ದಾಳಿಗಳು ಯಾವ ಕಣಿವೆಗಳ ಮೂಲಕ ಸಂಭವಿಸಿವೆ ?
ಉತ್ತರ:- ಭಾರತದ ಮೇಲೆ ದಾಳಿಗಳು ವಾಯುವ್ಯ ಭಾರತದಲ್ಲಿನ ಬೊಲಾನ್ ಮತ್ತು ಖೈಬರ್ ಕಣಿವೆಗಳ ಮೂಲಕ ಸಂಭವಿಸಿವೆ.
6 ಪ್ರಾಗೈತಿಹಾಸಿಕ ಕಾಲ ಎಂದರೇನು ?
ಉತ್ತರ:- ಮಾನವನು ಲೇಖನ ಕಲೆಯನ್ನು ಕಂಡುಹಿಡಿಯುವುದಕ್ಕೆ ಮೊದಲಿನ ಕಾಲವನ್ನು ಪ್ರಾಗೈತಿಹಾಸಿಕ ಕಾಲ ಎನ್ನುತ್ತಾರೆ.
7 ಪಶು ಸಂಗೋಪನೆ ಮತ್ತು ಹೈನುಗಾರಿಕೆಯು ಹೇಗೆ ಪ್ರಾರಂಭವಾಯಿತು ?
ಉತ್ತರ:- ಸುಮಾರು 12 ಸಾವಿರ ವರ್ಷಗಳ ಹಿಂದೆ ಭೂಮಿಯ ತಾಪಮಾನ ಹೆಚ್ಚಾಗಿ ಇದು ಹಲವೆಡೆ ಹುಲ್ಲುಗಾವಲುಗಳು ಬೆಳೆಯಲು ಕಾರಣವಾಯಿತು. ಪ್ರಾಣಿ ಪಕ್ಷಿಗಳು ಹಿಂದೆಂದೂ ಇಲ್ಲದಂತೆ ಸಂತಾನಾಭಿವೃದ್ಧಿ ಯಲ್ಲಿ ತೊಡಗಿ ಅವುಗಳ ಸಂತತಿ ಹೆಚ್ಚಾಗ ತೊಡಗಿದವು. ಈ ಸಂಕುಲಗಳ ಜೊತೆಯಲ್ಲಿಯೇ ಜಿಂಕೆ, ಕಡವೆ, ಕುರಿ, ಮೇಕೆ ಮುಂತಾದವುಗಳು ಹುಲ್ಲುಗಾವಲು ಪ್ರದೇಶದಲ್ಲಿ ಸಮೃದ್ಧಿಯಿಂದ ಬೆಳೆಯಲು ಕಾರಣವಾಯಿತು. ಇವನ್ನೇ ಬೇಟೆಯಾಡಿ ತಿನ್ನುತ್ತಿದ್ದ ಮಾನವನು ಅವುಗಳ ಸ್ವಭಾವ ಆಹಾರ ರೀತಿ ಮತ್ತು ಸಂತತಿಯ ವೃದ್ಧಿಯ ಬಗ್ಗೆ ತಿಳಿದುಕೊಂಡು ಅವುಗಳನ್ನು ತಂದು ಪೋಷಿಸತೊಡಗಿದನು. ಹೀಗೆ ಪಶು ಸಂಗೋಪನೆ ಮತ್ತು ಹೈನುಗಾರಿಕೆಯು ಪ್ರಾರಂಭವಾಯಿತು.
8. ಪ್ರಾಗೈತಿಹಾಸಿಕ ಕಾಲಘಟ್ಟವನ್ನು ವಿದ್ವಾಂಸರು ವಿವಿಧ ಹೆಸರುಗಳಿಂದ ಕರೆದಿದ್ದಾರೆ. ಅವು ಯಾವುವು?
ಉತ್ತರ:- ಪ್ರಾಗೈತಿಹಾಸಿಕ ಕಾಲಘಟ್ಟವನ್ನು ವಿದ್ವಾಂಸರು 3 ವಿಭಾಗಗಳಾಗಿ ಮಾಡಿದ್ದಾರೆ.
1.ಹಳೆಯ ಶಿಲಾಯುಗ
2.ಮದ್ಯ ಶಿಲಾಯುಗ ಮತ್ತು
3.ನವ ಶಿಲಾಯುಗ
ಹಳೆಯ ಶಿಲಾಯುಗದ ಕಾಲಘಟ್ಟವನ್ನು ಮತ್ತೆ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
1.ಆದಿ ಹಳೆ ಶಿಲಾಯುಗ,
2.ಮಧ್ಯ ಹಳೆ ಶಿಲಾಯುಗ ಮತ್ತು
3.ಅಂತ್ಯ ಹಳೆ ಶಿಲಾಯುಗ.