ಅಧ್ಯಾಯ 7
ರಾಜ್ಯಶಾಸ್ತ್ರದ ಅರ್ಥ ಮತ್ತು ಮಹತ್ವ ಅಭ್ಯಾಸ–ಪ್ರಶ್ನೋತ್ತರಗಳು
|. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1.ಪಾಲಿಟಿಕ್ಸ್ ಎಂಬ ಪದವು ಪೊಲಿಸ್ ಎಂಬ ಗ್ರೀಕಪದದಿಂದ ಉತ್ಪತ್ತಿಗೊಂಡಿದೆ.
2 ರಿಪಬ್ಲಿಕ್’ ಗಂಥದ ಕರ್ತೃ ಸಾಕ್ರೆಟಿಸ್ ನ ಶಿಷ್ಯ ಪ್ಲೇಟೋ.
3 ಅರಿಸ್ಟಾಟಲ್, ರಾಜ್ಯಶಾಸ್ತ್ರವನ್ನು ಕುರಿತು ರಚಿಸಿದ ಕೃತಿ ಪಾಲಿಟಿಕ್ಸ್.
4 ರಾಜ್ಯಶಾಸ್ತ್ರದ ಬಗೆಗಿನ ಮಾಹಿತಿ ಹೊಂದಿರುವ ಕೌಟಿಲ್ಯನ ಕೃತಿ ಅರ್ಥಶಾಸ್ತ್ರ.
||.ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
5.ರಾಜ್ಯಶಾಸ್ತ್ರ ಎಂದರೇನು?
ಉತ್ತರ:- ರಾಜ್ಯ, ಸರ್ಕಾರ ಮತ್ತು ಮಾನವನ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ವಿಷಯವೇ ರಾಜ್ಯಶಾಸ್ತ್ರ.
6. ರಾಜ್ಯಶಾಸ್ತ್ರದ ಕ್ರಮಬದ್ಧ ಅಧ್ಯಯನ ಯಾರಿಂದ ಪ್ರಾರಂಭವಾಯಿತು?
ಉತ್ತರ:- ರಾಜ್ಯಶಾಸ್ತ್ರದ ಕ್ರಮಬದ್ಧವಾದ ಅಧ್ಯಯನ ಗ್ರೀಕರಿಂದ ಪ್ರಾರಂಭವಾಯಿತು.
7.ರಾಜ್ಯಶಾಸ್ತ್ರದ ಪಿತಾಮಹರೆಂದು ಯಾರನ್ನು ಕರೆಯುತ್ತಾರೆ?
ಉತ್ತರ:- ಗ್ರೀಸ್ ದೇಶದ ದಾರ್ಶನಿಕ ‘ಅರಿಸ್ಟಾಟಲ್’ ರನ್ನು ರಾಜ್ಯಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.
8.ರಾಜ್ಯಶಾಸ್ತ್ರದ ಒಂದು ವ್ಯಾಖ್ಯೆ ನೀಡಿ
ಉತ್ತರ:- ಗರ‍್ನರ್‌ರವರ ಪ್ರಕಾರ : ರಾಜ್ಯದಿಂದ ಆರಂಭವಾಗಿ ರಾಜ್ಯದೊಡನೆಯೇ ಪರಿಸಮಾಪ್ತಿಗೊಳ್ಳುವ ಅಧ್ಯಯನವೇ ರಾಜ್ಯಶಾಸ್ತ್ರ.
9.ರಾಜ್ಯಶಾಸ್ತ್ರದ ಅಧ್ಯಯನದ ಯಾವುದಾದರೊಂದು ಪ್ರಯೋಜನ ತಿಳಿಸಿ?
ಉತ್ತರ:- ರಾಜ್ಯಶಾಸ್ತ್ರವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರಚನೆ ಮತ್ತು ಕಾರ್ಯಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.