8th science|force and pressure| question and answer|ಬಲಮತ್ತುಒತ್ತಡ

1. ನಿಮ್ಮ ತಳ್ಳುವಿಕೆ ಅಥವಾ ಎಳೆಯುವಿಕೆಯಿಂದ ಚಲನಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ತಿಳಿಸುವ ಪ್ರತಿ ಸಂದರ್ಭದ ಎರಡು ಉದಾಹರಣೆಗಳನ್ನು ನೀಡಿ.

  • ನಮ್ಮ ಬಳಿಗೆ ಬರುತ್ತಿರುವ ಚೆಂಡನ್ನು ಹೊಡೆಯುವುದು,
  • ಫುಟ್‌ಬಾಲ್‌ಗೆ ಒದೆಯುವುದು.

2. ಬಲಪ್ರಯೋಗದಿಂದ ವಸ್ತುವಿನ ಆಕಾರದಲ್ಲಿ ಬದಲಾವಣೆಯಾಗುವುದನ್ನು ತಿಳಿಸುವ ಸಂದರ್ಭಗಳಿಗೆ ಎರಡು ಉದಾಹರಣೆಗಳನ್ನು ನೀಡಿ.

  • ರಬ್ಬರ್ ಬ್ಯಾಂಡ್ ಅನ್ನು ಎಳೆಯುವುದು.
  • ಆಟಿಕೆಗಳನ್ನು ತಯಾರಿಸಲು ಮಣ್ಣಿನ್ನು ಕಲೆಸುವುದು.

3. ಕೆಳಗಿನ ಹೇಳಿಕೆಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ.

4. ಒಬ್ಬ ಬಿಲ್ಲುಗಾರ್ತಿಯು ಗುರಿಯಿಟ್ಟು ಹೊಡೆಯುವಾಗ ಬಿಲ್ಲನ್ನು ಎಳೆಯುತ್ತಾಳೆ. ಆಕೆ ಬಾಣವನ್ನು ಬಿಟ್ಟ ನಂತರ, ಬಾಣವು ಗುರಿಯ ಕಡೆಗೆ ಚಲಿಸುತ್ತದೆ. ಈ ಮಾಹಿತಿಯನ್ನು ಆಧರಿಸಿ ಈ ಕೆಳಗಿನ ಹೇಳಿಕೆಗಳಲ್ಲಿ ಬಿಟ್ಟ ಸ್ಥಳಗಳನ್ನು ಕೆಳಗಿನ ಪದಗಳನ್ನು ಬಳಸಿ ಭರ್ತಿಮಾಡಿ.

(ಸ್ನಾಯು, ಸಂಪರ್ಕ, ಸಂಪರ್ಕರಹಿತ, ಗುರುತ್ವಾಕರ್ಷಣೆ, ಘರ್ಷಣೆ, ಆಕಾರ, ಆಕರ್ಷಣೆ.)

5. ಕೆಳಗಿನ ಸಂದರ್ಭಗಳಲ್ಲಿ ಪ್ರಯೋಗಿಸುತ್ತಿರುವ ಬಲದ ಮೂಲ ಮತ್ತು ಅದು ಯಾವ ವಸ್ತುವಿನ ಮೇಲೆ ವರ್ತಿಸುತ್ತಿದೆ ಎಂಬುದನ್ನು ಗುರುತಿಸಿ. ಪ್ರತಿ ಸಂದರ್ಭದಲ್ಲೂ ಬಲದ ಪರಿಣಾಮವನ್ನು ತಿಳಿಸಿ.

(a) ಒಂದು ನಿಂಬೆಹಣ್ಣಿನ ತುಂಡನ್ನು ರಸ ಪಡೆಯಲು ಬೆರಳುಗಳ ನಡುವೆ ಹಿಂಡುವುದು.

(b) ಟೂತ್ಪೇಸ್ಟ್ ಟ್ಯೂಬ್ನಿಂದ ಪೇಸ್ಟ್ ಹೊರತೆಗೆಯುವುದು.

(c) ಸ್ಪ್ರಿಂಗ್‌ ನಿಂದ ಭಾರವನ್ನು ತೂಗುಹಾಕಿ ಅದರ ಇನ್ನೊಂದು ತುದಿಯನ್ನು ಸ್ಥಿರವಾಗಿ ಗೋಡೆಯಲ್ಲಿರುವ ಕೊಕ್ಕೆಗೆ ನೇತುಹಾಕಿದೆ.

(d) ಒಬ್ಬ ಎತ್ತರ ಜಿಗಿತದ ಕ್ರೀಡಾಪಟು ನಿರ್ದಿಷ್ಟ ಎತ್ತರದಲ್ಲಿರುವ ಅಳತೆಕೋಲನ್ನು ದಾಟುವುದು.

ಕ್ರ.ಸಂಪ್ರಯೋಗಿಸುತ್ತಿರುವ ಬಲದ ಮೂಲಈ ವಸ್ತುವಿನ ಮೇಲೆ ವರ್ತಿಸುತ್ತಿದೆಬಲದ ಪರಿಣಾಮ
1ಬೆರಳುನಿಂಬೆಹಣ್ಣುರಸವನ್ನು ಬಲದಿಂದ ಹೊರತೆಗೆಯಲಾಗುತ್ತದೆ.
2ಬೆರಳುಟೂತ್‌ಪೇಸ್ಟ್ಬಲ ಪ್ರಯೋಗದಿಂದ ಟೂತ್‌ಪೇಸ್ಟ್ ಟ್ಯೂಬ್‌ನಿಂದ ಪೇಸ್ಟ್ ಹೊರಬರುತ್ತದೆ.
3ಭಾರಸ್ಪ್ರಿಂಗ್‌ಸ್ಪ್ರಿಂಗ್‌ ಹಿಗ್ಗುತ್ತದೆ.
4ಕ್ರೀಡಾಪಟುಕ್ರೀಡಾಪಟುವಿನ ದೇಹನಿರ್ದಿಷ್ಟ ಎತ್ತರದಲ್ಲಿರುವ ಅಳತೆಕೋಲನ್ನು ದಾಟುವುದು.

6 ಒಬ್ಬ ಕಮ್ಮಾರನು ಉಪಕರಣ ತಯಾರಿಸುವಾಗ ಬಿಸಿಯಾದ ಕಬ್ಬಿಣದ ತುಂಡಿನ ಮೇಲೆ ಸುತ್ತಿಗೆಯಿಂದ ಹೊಡೆಯುತ್ತಾನೆ. ಸುತ್ತಿಗೆಯ ಹೊಡೆತದ ಬಲವು ಕಬ್ಬಿಣದ ತುಂಡಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

7. ಉಬ್ಬಿದ ಬಲೂನನ್ನು ಸಿಂಥೆಟಿಕ್ ಬಟ್ಟೆಯ ಚೂರಿನಿಂದ ಉಜ್ಜಿದ ನಂತರ ಗೋಡೆಗೆ ಒತ್ತಲಾಯಿತು. ಬಲೂನ್ ಗೋಡೆಗೆ ಅಂಟಿಕೊಳ್ಳುವುದು ಕಂಡುಬಂತು. ಬಲೂನ್ ಮತ್ತು ಗೋಡೆಯ ನಡುವಿನ ಆಕರ್ಷಣೆಗೆ ಕಾರಣವಾದ ಬಲ ಯಾವುದು?

8. ನೀರು ತುಂಬಿದ ಪ್ಲಾಸ್ಟಿಕ್ ಬಕೆಟ್ ಅನ್ನು ಭೂಮಿಯ ಮೇಲ್ಮೈನಿಂದ ಮೇಲೆ ನಿಮ್ಮ ಕೈಯಲ್ಲಿ ಹಿಡಿದಾಗ ಪ್ಲಾಸ್ಟಿಕ್ ಬಕೆಟ್ ಮೇಲೆ ವರ್ತಿಸುವ ಬಲಗಳನ್ನು ಹೆಸರಿಸಿ. ಬಕೆಟ್ ಮೇಲೆ ವರ್ತಿಸುತ್ತಿರುವ ಬಲಗಳು ಅದರ ಚಲನೆಯ ಸ್ಥಿತಿಯನ್ನು ಏಕೆ ಬದಲಾಯಿಸುವುದಿಲ್ಲ ಎಂದು ಚರ್ಚಿಸಿ.

  • ಗುರುತ್ವಾಕರ್ಷಣೆಯ ಬಲ: ಇದು ಕೆಳಮುಖವಾಗಿ ಕಾರ್ಯನಿರ್ವಹಿಸುತ್ತಿದೆ.
  • ಸ್ನಾಯು ಬಲ: ಬಕೆಟ್ ಅನ್ನು ಮೇಲ್ಮುಖವಾಗಿ ಎತ್ತುವಂತೆ ನಮ್ಮ ಕೈಗಳಿಂದ ಪ್ರಯೋಗವಾಗುತ್ತದೆ.

9. ಒಂದು ಉಪಗ್ರಹವನ್ನು ಅದರ ಕಕ್ಷೆಯಲ್ಲಿಡಲು ಒಂದು ರಾಕೆಟನ್ನು ಉಡಾವಣೆ ಮಾಡಲಾಯಿತು. ಉಡಾವಣಾ ಕೇಂದ್ರವನ್ನು ಬಿಟ್ಟ ಕೂಡಲೇ ರಾಕೆಟ್‌ನ ಮೇಲೆ ವರ್ತಿಸುವ ಎರಡು ಬಲಗಳಾವುವು ? ತಿಳಿಸಿ.

  • ಗಾಳಿಯ ಘರ್ಷಣೆಯ ಬಲ.
  • ಗುರುತ್ವಾಕರ್ಷಣೆಯ ಬಲ

10. ಒಂದು ಡ್ರಾಪರ್‌ನ ನಳಿಕೆಯನ್ನು ನೀರಿನಲ್ಲಿಟ್ಟು ಅದರ ಬಿರಡೆಯನ್ನು ಒತ್ತಿದಾಗ, ಡ್ರಾಪರ್‌ನಲ್ಲಿರುವ ಗಾಳಿಯು ಗುಳ್ಳೆಗಳ ರೂಪದಲ್ಲಿ ಹೊರಬರುತ್ತದೆ. ನಾವು ಬಿರಡೆಯ ಮೇಲಿನ ಒತ್ತಡವನ್ನು ಬಿಡುಗಡೆ ಮಾಡಿದ ಕೂಡಲೇ ನೀರು ಡ್ರಾಪರ್ ನೊ ಳಗೆ ತುಂಬಿಕೊಳ್ಳುತ್ತದೆ. ಡ್ರಾಪರ್‌ನಲ್ಲಿ ನೀರಿನ ಏರಿಕೆಗೆ ಕಾರಣ.

(a) ನೀರಿನ ಒತ್ತಡ

(b) ಭೂಮಿಯ ಗುರುತ್ವಾಕರ್ಷಣೆ

(c) ರಬ್ಬರ್ ಬಿರಡೆಯ ಆಕಾರ

(d) ವಾತಾವರಣದ ಒತ್ತಡ

Leave a comment