೨. ಸಾರ್ಥಕ ಬದುಕಿನ ಸಾಧಕ – ಡಿ.ವಿ.ಜಿ.
ಅಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಡಿವಿಜಿಯವರ ಹುಟ್ಟೂರು ಯಾವುದು?
ಉತ್ತರ:-ಡಿವಿಜಿಯವರ ಹುಟ್ಟುರು ಕೋಲಾರ ಜಿಲ್ಲೆಯ ಮುಳಬಾಗಿಲು.
2. ಡಿವಿಜಿಯವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಯಾರು?
ಉತ್ತರ:-ಡಿವಿಜಿಯವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಅವರ ಅಜ್ಜಿ ಸಾಕಮ್ಮ ಹಾಗೂ ಅವರ ಸೋದರ ಮಾವ ತಿಮ್ಮಪ್ಪ.
3. ಡಿವಿಜಿಯವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ಯಾರು?
ಉತ್ತರ:-ಡಿವಿಜಿಯವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿವರು ಬಂಡಿ ಹೊಡೆಯುವ ರಸೂಲ್ಖಾನ್.
4. ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ಅಲಂಕರಿಸಿದ್ದ ಹುದ್ದೆ ಯಾವುದು?
ಉತ್ತರ:-ವಿಶ್ವೇಶ್ವರಯ್ಯನವರು ಮೈಸೂರು ಸರ್ಕಾರದಲ್ಲಿ ದಿವಾನ್ ಹುದ್ದೆಯನ್ನು ಅಲಂಕರಿಸಿದ್ದರು.
5. ಡಿವಿಜಿಯವರು ಸ್ಥಾಪಿಸಿದ ಸಂಸ್ಥೆ ಯಾವುದು?
ಉತ್ತರ:-ಡಿವಿಜಿಯವರು ಸ್ಥಾಪಿಸಿದ ಸಂಸ್ಥೆ ಎಂದರೆ ‘ಗೋಖಲೆ ಸಾರ್ವಜನಿಕ ಸಂಸ್ಥೆ’.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು / ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ರಸೂಲ್ಖಾನ್ ಅವರು ಡಿವಿಜಿ ಅವರ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಹಾಯವೇನು?
ಉತ್ತರ:-ಡಿವಿಜಿ ಅವರ ವಿದ್ಯಾಭ್ಯಾಸಕ್ಕಾಗಿ ರಸೂಲ್ಖಾನ್ ಹಟಹಿಡಿದು, ತನ್ನ ಬಂಡಿಯಲ್ಲಿ ಕೂರಿಸಿಕೊಂಡು ಬಂಗಾರಪೇಟೆಗೆ ಹೋಗಿ, ಬೆಂಗಳೂರಿನ ರೈಲಿನಲ್ಲಿ ಕೂರಿಸಿ ಟಿಕೆಟ್ ಕೊಡಿಸಿ, ಒಂದು ರೂಪಾಯಿ ಖರ್ಚಿಗೆ ಕೊಟ್ಟು ಓದಲು ಸಹಾಯ ಮಾಡಿದರು.
2. ವಿಶ್ವೇಶ್ವರಯ್ಯ ಅವರು ತಮ್ಮ ಕಾರ್ಯದರ್ಶಿಗೆ ಏನು ಹೇಳಿದರು?
ಉತ್ತರ:-ವಿಶ್ವೇಶ್ವರಯ್ಯನವರು ತಮ್ಮ ಕಾರ್ಯದರ್ಶಿಗೆ, ಡಿವಿಜಿಯವರ ಬಗ್ಗೆ ‘ಈ ಮನುಷ್ಯನ ರೀತಿಯೇ ಬೇರೆ ಇವರಿಗೆ ನಾವು ಹಣ ಕೊಡಲು ಬರುವುದಿಲ್ಲ. ಅದನ್ನು ಹಿಂದಕ್ಕೆ ತೆಗೆದು ಕೊಂಡು ಬಿಡಿ’ ಎಂಬುದಾಗಿ ಹೇಳಿದರು.
3. ಡಿವಿಜಿಯವರು ಏಕೆ ಸಂಭಾವನೆಯನ್ನು ಪಡೆಯಲಿಲ್ಲ?
ಉತ್ತರ:-ಪತ್ರಿಕೆಗಳಲ್ಲಿ ವರದಿ ಮಾಡುವುದು ಪತ್ರಕರ್ತರಾದ ತಮ್ಮ ಕರ್ತವ್ಯವೆಂದು ಅದಕ್ಕೆ ಆಗುವ ಖರ್ಚನ್ನು ಪತ್ರಿಕೆಯವರು ಕೊಡಬೇಕೆ ಹೊರತು ಸರ್ಕಾರವಲ್ಲ. ಇಷ್ಟೆ ಅಲ್ಲ, ವಿಶ್ವೇಶ್ವರರಯ್ಯನವರೊಡನೆ ವ್ಯವಹರಿಸುವುದೇ ಒಂದು ಹೆಮ್ಮೆಯ ವಿಷಯ. ಇದಕ್ಕೆ ಸಂಭಾವನೆ ಖಂಡಿತ ತೆಗೆದು ಕೊಳ್ಳಬಾರದೆಂದು ಹೇಳಿ ಡಿವಿಜಿಯವರು ಸಂಭಾವನೆಯನ್ನು ಪಡೆಯಲಿಲ್ಲ.
4. ಡಿವಿಜಿ ಅವರ ಶ್ರೀಮತಿ ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಏಕೆ ಹೋಗಲಿಲ್ಲ?
ಉತ್ತರ:- ಡಿವಿಜಿಯವರ ಪತ್ನಿ ಶ್ರೀಮತಿ ಬಳಿ ಇದ್ದುದು ಒಂದೇ ಸೀರೆ, ಅದು ಕೂಡ ಒಂದೆರಡು ಕಡೆ ಹರಿದಿತ್ತು. ಹರಿದ ಸೀರೆಯನ್ನುಟ್ಟು ಹೊರಗೆ ಹೋದರೆ ತಮ್ಮ ಪತಿಯ ಮರ್ಯಾದೆ ಹೋಗುವುದೆಂದು ಹೇಳಿ ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಹೋಗಲಿಲ್ಲ.
5. ಎಲ್ಲರೊಳಗೊಂದಾಗಿ ಬಾಳುವ ಬಗೆಯನ್ನು ಡಿವಿಜಿ ಹೇಗೆ ಚಿತ್ರಿಸಿದ್ದಾರೆ?
ಉತ್ತರ:-ಬೆಟ್ಟದಡಿಯಲ್ಲಿ ಬೆಳೆಯುವ ಹುಲ್ಲಿನಂತೆ ಮನೆಗೆ ಮಲ್ಲಿಗೆಯ ಪರಿಮಳದಂತೆ, ಇರಬೇಕು. ವಿಧಿ ನಮ್ಮ ಮೇಲೆ ನಿರಂತರವಾಗಿ ಕಷ್ಟದ ಮಳೆಯನ್ನು ಸುರಿಸಿದರೆ ನಮ್ಮ ಕಲ್ಲಿನಂತೆ ನಮ್ಮ ಮನಸ್ಸನ್ನು ದೃಢ ಪಡಿಸಿಕೊಳ್ಳಬೇಕು. ದೀನ ದುರ್ಬಲರನ್ನು ಕಂಡಾಗ ಅವರನ್ನು ಪ್ರೀತಿಯಿಂದ ಬೆಲ್ಲ – ಸಕ್ಕರೆಯಂತೆ ಸವಿನುಡಿಗಳನ್ನು ನುಡಿಯಬೇಕು, ನಾವು ಏಕಾಂಗಿಯಾಗಿರದೆ ಎಲ್ಲರೊಳು ಒಂದಾಗಿ ಬಾಳಬೇಕೆಂದು ಡಿವಿಜಿಯವರು ಹೇಳಿದ್ದಾರೆ.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಆರು / ಎಂಟು ವಾಕ್ಯಗಳಲ್ಲಿ ಉತ್ತರಿಸಿ.
1. ಡಿವಿಜಿ ಅವರ ವ್ಯಕ್ತಿತ್ವವನ್ನು ಸಂಗ್ರಹಿಸಿ ಬರೆಯಿರಿ.
ಉತ್ತರ:- ಡಿವಿಜಿಯವರು ಸಾರ್ಥಕ ಬದುಕಿನ ಸಾಧಕರಾಗಿದ್ದರು. ಸತ್ವಶಾಲಿವುಳ್ಳವರು, ಶೀಲ, ವಿವೇಕ, ಸ್ವಯಂ ಅರ್ಜಿತ ಪಾಂಡಿತ್ಯ, ಸಾರ್ವಜನಿಕ ಹಿತಾಸಕ್ತಿಗಳ ಬಲದಿಂದ, ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ ನವರಂತಹ ಕಾಲದಲ್ಲಿ ದೊಡ್ಡ ಮೇಧಾವಿಯೆಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು.
ಶ್ರೀಯುತರು ಸುಮಾರು 66 ಕೃತಿಗಳನ್ನು ಸುಮಾರು ಎಂಟು ಸಾವಿರ ಪುಟಗಳ ಸಾಹಿತ್ಯವನ್ನು 1500 ಪುಟಗಳ ಬಿಡಿ ಲೇಖನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಸಿರಿವಂತ ಸಾಹಿತಿ, ಲೇಖಕ, ಪತ್ರಕರ್ತ, ಸಂಪಾದಕ.ಇವರು ಸಾಹಿತಿ ಮತ್ತು ರಾಜಕಾರಣಿಯಾಗಿ ಎಲ್ಲದಕ್ಕೂ ಮಿಗಿಲಾಗಿ ಲೌಕಿಕ ಆಸೆ ಆಮಿಷಗಳಿಗೆ ಒಳಗಾಗದೇ ಮೇರು ವ್ಯಕ್ತಿತ್ವದ ಆದರ್ಶ ವ್ಯಕ್ತಿಯಾಗಿ ಬಾಳಿ ಬದುಕಿದವರು.
2. ಡಿವಿಜಿಯವರಿಗೂ ಅವರ ಶ್ರೀಮತಿ ಅವರಿಗೂ ನಡೆದ ಸಂಭಾಷಣೆಯನ್ನು ಬರೆಯಿರಿ:
ಉತ್ತರ:-‘ಒಮ್ಮೆ ಡಿವಿಜಿಯ ಬಂಧುಗಳೊಬ್ಬರ ಮನೆಯಲ್ಲಿ ಒಂದು ಉತ್ಸವ ನಡೆಯಿತು, ಡಿವಿಜಿಗೆ ಹೋಗಲು ಆಗಲಿಲ್ಲ. ಮಕ್ಕಳನ್ನು ಕಳಿಸಿದರು. ಆರತಿ ಅಕ್ಷತೆಯ ಹೊತ್ತಾದರೂ ಹೆಂಡತಿ ಮನೆಯಲ್ಲೇ ಇದ್ದಾರೆ. ಗಂಡ ಅಸಮಾಧಾನದಿಂದ ಕೇಳಿದರು.
ಡಿವಿಜಿ: ನೀನು ಉತ್ಸವಕ್ಕೆ ಹೋಗುವುದಿಲ್ಲವೇ?
ಶ್ರೀಮತಿ – ಇಲ್ಲ
ಡಿವಿಜಿ :ಯಾಕೆ?
ಶ್ರೀಮತಿ – ಮಕ್ಕಳನ್ನು ಕಳುಹಿಸಿದ್ದೇನಲ್ಲ
ಡಿವಿಜಿ ‘ಅದು ಸರಿ ನೀನು ಹೋಗಬೇಕಷ್ಟೆ, ಅವರು ನಮಗೆ ಬಹಳ ಬೇಕಾದವರು ನೀನು ಹೋಗದಿದ್ದರೆ ಬೇಸರ ಪಡುವುದಿಲ್ಲವೇ?’
ಶ್ರೀಮತಿ – ನನ್ನ ಹತ್ತಿರ ಇರುವುದು ಒಂದೇ ಸೀರೆ. ಅದು ಹರಿದಿದೆ. ಈ ಬಟ್ಟೆಯಲ್ಲಿ ಹೊರಗೆ ಹೋದರೆ ಜನ ನಿಮ್ಮನು ಆಡಿಕೊಳ್ಳಬಹುದು? ನಿಮ್ಮ ಮರ್ಯಾದೆಗೆ ಊನಬಾರದಂತೆ ನಡೆದುಕೊಳ್ಳುವುದೂ ನನ್ನ ಕರ್ತವ್ಯ.
ಈ. ಸಂದರ್ಭಾನುಸಾರ ವಿವರಿಸಿ :
1. ‘ಏನು ಬಂದಿರಿ ಗುಂಡಪ್ಪ?’
ಉತ್ತರ:-ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಎನ್ ಎಸ್ಲಕ್ಷ್ಮೀನಾರಾಯಣಭಟ್ ರವರು ರಚಿಸಿದ ಸಾರ್ಥಕ ಬದುಕಿನ ಸಾಧಕ’ ಎಂಬ ವ್ಯಕ್ತಿ ಚಿತ್ರದಿಂದ ಆರಿಸಲಾಗಿದೆ. ಇದನ್ನು ಲಕ್ಷ್ಮೀನಾರಾಯಣಭಟ್ಟರ ಸಾಹಿತ್ಯ ರತ್ನ ಸಂಪುಟ’ ದಿಂದ ಆರಿಸಲಾಗಿದೆ.
ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು, ಡಿ.ವಿ.ಜಿಯವರು ದಸರಾ ಉತ್ಸವದ ವರದಿಗಾಗಿ ನೀಡಿದ ಸಂಭಾವನೆಯನ್ನು ಹಿಂತಿರುಗಿಸಲು ಬಂದಾಗ, ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಈ ಮಾತನ್ನು ಡಿವಿಜಿಯವರಿಗೆ ಕೇಳಿದರು.
ವಿವರಣೆ : ಡಿವಿಜಿಯವರು ಹಣದ ಸಮೇತ ಅನಿರೀಕ್ಷಿತವಾಗಿ ಬಂದುದ್ದನ್ನು ಕಂಡು ವಿಶ್ವೇಶ್ವರಯ್ಯನವರು ಆಶ್ಚರ್ಯದಿಂದ ಹಾಗೂ ಆತ್ಮೀಯವಾಗಿ ‘ಏನು ಬಂದಿರಿ ಗುಂಡಪ್ಪ’? ಎಂಬುದಾಗಿ ಕೇಳಿದರು.
ವಿಶೇಷತೆ : * ಈ ವಾಕ್ಯದಲ್ಲಿ ಡಿವಿಜಿಯವರ ವ್ಯಕ್ತಿತ್ವವು ವ್ಯಕ್ತವಾಗಿದೆ.
* ಡಿವಿಜಿಯವರು ಅತ್ಯುತ್ತಮ ಪತ್ರಕರ್ತವಾಗಿದ್ದಾರೆಂಬುದು ಇಲ್ಲಿ ತಿಳಿದು ಬರುತ್ತದೆ.
* ವಿಶ್ವೇಶ್ವರಯ್ಯನವರಿಗೂ, ಡಿವಿಜಿಯವರಿಗೂ ಇದ್ದ ಆತ್ಮೀಯತೆ ವ್ಯಕ್ತವಾಗುತ್ತದೆ.
2. “ನೀನು ಉತ್ಸವಕ್ಕೆ ಹೋಗುವುದಿಲ್ಲವೇ’
ಉತ್ತರ:-ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ರಚಿಸಿರುವ ‘ಸಾರ್ಥಕ’ ಬದುಕಿನ ಸಾಧಕ’ ಎಂಬ ವ್ಯಕ್ತಿ ಚಿತ್ರದಿಂದ ಆರಿಸಲಾಗಿದ್ದು, ಇದನ್ನು ‘ಸಾಹಿತ್ಯ ರತ್ನ ಸಂಪುಟ’ ಎಂಬ ಆಕರದಿಂದ ಆಯ್ದು ಕೊಳ್ಳಲಾಗಿದೆ.
ಸಂದರ್ಭ : ಡಿವಿಜಿಯವರ ಬಂಧುಗಳ ಮನೆಯ ಉತ್ಸವಕ್ಕೆ ಹೋಗಬೇಕಾಗಿದ್ದ ಅವರ ಶ್ರೀಮತಿ, ಹೋಗದೆ ಮನೆಯಲ್ಲೇ ಉಳಿದುದ್ದನ್ನು ಕಂಡು ಡಿವಿಜಿಯವರು ಈ ಮಾತನ್ನು ತಮ್ಮ ಶ್ರೀಮತಿಗೆ ಕೇಳಿದರು.
ವಿವರಣೆ : ಬಂಧುಗಳೊಡನೆ ಸ್ನೇಹ ಸೌಹಾರ್ದತೆಯಿಂದ ಇರಬೇಕೆಂಬ ಭಾವನೆ ವ್ಯಕ್ತವಾಗಿದೆ, ಹಾಗೂ ತಮ್ಮ ಪತ್ನಿಯೊಂದಿಗೆ ಅವರ ಮಧುರ ಬಾಂಧವ್ಯ ಈ ವಾಕ್ಯದಲ್ಲಿ ಮೂಡಿ ಬಂದಿದೆ.
ವಿಶೇಷತೆ :* ಪತಿ – ಪತ್ನಿಯರ ಆತ್ಮೀಯ ಸಂಬಂಧ ಡಿವಿಜಿಯವರ ಈ ಮಾತಿನಲ್ಲಿ ವ್ಯಕ್ತವಾಗಿದೆ.
3. ‘ನನ್ನ ಹತ್ತಿರ ಇರುವುದು ಇದೊಂದೇ ಸೀರೆ’
ಉತ್ತರ:-ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಎನ್. ಎಸ್. ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಎನ್. ಎಸ್.ಲಕ್ಷ್ಮೀನಾರಾಯಣ ಭಟ್ಟ’ ರವರು ರಚಿಸಿರುವ ಸಾರ್ಥಕ ಬದುಕಿನ ಸಾಧಕ’ ಎಂಬ ವ್ಯಕ್ತಿ ಚಿತ್ರಣದಿಂದ ಆರಿಸಲಾಗಿದೆ. ಇದನ್ನು ‘ಸಾಹಿತ್ಯ ರತ್ನ ಸಂಪುಟ’ ಎಂಬ ಆಕರದಿಂದ ಆಯ್ದು ಕೊಳ್ಳಲಾಗಿದೆ.
ಸಂದರ್ಭ : ಬಂಧುಗಳ ಮನೆಯ ಉತ್ಸವಕ್ಕೆ ಹೋಗದಿರಲು ಡಿವಿಜಿಯವರ ಪತ್ನಿಯು ಡಿವಿಜಿಯವರಿಗೆ ಹೇಳಿದ ಮಾತು ಇದಾಗಿದೆ.
ವಿವರಣೆ : ಶ್ರೀಮತಿಯವರ ಬಳಿ ಇರುವುದು ಒಂದೇ ಸೀರೆ ಎಂದು ಹೇಳುವ ವಾಕ್ಯದಲ್ಲಿ ಡಿವಿಜಿಯವರ ಆರ್ಥಿಕ ಸ್ಥಿತಿ, ಬಡತನ ವ್ಯಕ್ತವಾಗುತ್ತದೆ.
ವಿಶೇಷತೆ : ಡಿವಿಜಿಯವರ ಆರ್ಥಿಕ ಸ್ಥಿತಿ ಇಲ್ಲಿ ವ್ಯಕ್ತವಾಗಿದೆ. ಡಿವಿಜಿಯವರು ಬಡತನದಲ್ಲಿದ್ದರು, ತನ್ನ ಪತಿಯ ಮರ್ಯಾದೆ ಕಾಯುವ ರೀತಿ ಸೊಗಸಾಗಿ ಮೂಡಿ ಬಂದಿದೆ.
ಭಾರತೀಯ ನಾರಿಯ ಸಂಪ್ರದಾಯ ಇಲ್ಲಿ ವ್ಯಕ್ತವಾಗುತ್ತದೆ.
4. ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ
ಉತ್ತರ:-‘ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ’ ರವರು ರಚಿಸಿರುವ ಸಾರ್ಥಕ ಬದುಕಿನ ಸಾಧಕ’ ಎಂಬ ವ್ಯಕ್ತಿ ಚಿತ್ರಣದಿಂದ ಆರಿಸಲಾಗಿ. ಇದರ ಆಕರ ಗ್ರಂಥ’ ಸಾಹಿತ್ಯರತ್ನ ಸಂಪುಟ’.
ಸಂದರ್ಭ : ಕೆಲಸ ಅಥವಾ ಸಹಾಯ ಮಾಡುವ ವ್ಯಕ್ತಿಗಳು ಮಾಡುವುದಕ್ಕಿಂತ ಆಡುವುದೇ ಹೆಚ್ಚಾಗಿರುತ್ತದೆ .ಹೀಗೆ ಬರಿ ಮಾತಾಡುವ ಬಾಯಿ ಬಡುಕರನ್ನು ಉದ್ದೇಶಿಸಿ ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ನೀತಿ ಸಂದೇಶವೊಂದನ್ನು ನೀಡಿದ್ದಾರೆ. –
ವಿವರಣೆ : ‘ತುಟಿಗಳನ್ನು ಹೊಲೆದುಕೊಂಡು ಕಾರ್ಯಮಾಡು ಕಾರ್ಯ ನಿರತನಾಗು’ ಎಂಬುದನ್ನು ಪ್ರಸ್ತುತ ವಾಕ್ಯದಲ್ಲಿ ಹೇಳಲಾಗಿದೆ. ‘ಮಂಕುತಿಮ್ಮ’ ಎನ್ನುವುದು ಅವರ ಕಾವ್ಯ ನಾಮವಾಗಿದೆ.
ವಿಶೇಷತೆ : ‘ಮಂಕುತಿಮ್ಮನ ಕಗ್ಗ’ ಡಿವಿಜಿಯವರ ಸುಪ್ರಸಿದ್ದ ಕೃತಿಯಾಗಿದ್ದು ಇದು ನೀತಿ ಚಿಂತಾಮಣಿಯಾಗಿದೆ..
5. ಬೆಲ್ಲ – ಸಕ್ಕರೆಯಾಗು ದೀನ ದುರ್ಬಲರಿಂಗೆ
ಉತ್ತರ:-ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ’ ರವರು ರಚಿಸಿರುವ ಸಾರ್ಥಕ . ಬದುಕಿನ ಸಾಧಕ’ ಎಂಬ ಪ್ರಕಿ ಚಿತ್ರಣದಿಂದ ಆರಿಸಲಾಗಿದೆ.
ಇದರ ಆಕರ ಗ್ರಂಥ’ ಸಾಹಿತ್ಯರತ್ನ ಸಂಪುಟ’.
ಸಂದರ್ಭ : ಜೀವನದಲ್ಲಿ ನಾವು ಯಾವ ರೀತಿ ಬಾಳಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಾ ‘ಡಿವಿಜಿ’ಯವರು ತಮ್ಮ ‘ಮಂಕುತಿಮ್ಮನ ಕಗ್ಗ’ದಲ್ಲಿ ವಿವರಿಸುತ್ತಾ ಈ ಮೇಲ್ಕಂಡ ವಾಕ್ಯವನ್ನು ಬರೆದಿದ್ದಾರೆ.
ವಿವರಣೆ : ನಾವು ಸಮಾಜದಲ್ಲಿ ಇತರರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕೆನ್ನುವ ಪಾಠ ಇಲ್ಲಿದೆ. ನಮ್ಮ ಜೀವನದಲ್ಲಿ ಹಲವಾರು ಕಷ್ಟ – ನಷ್ಟಗಳನ್ನು ಅನುಭವಸಿದರೂ ತಾಳ್ಮೆಯಿಂದ ಸಹಿಸಿಕೊಳ್ಳಬೇಕು, ನಮಗಿಂತ ದುರ್ಬಲರಾದವರಿಗೆ ಬೆಲ್ಲ – ಸಕ್ಕರೆಯಂತೆ ಸವಿ ಮಾತನ್ನು ಆಡಬೇಕು, ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬುದು ಈ ವಾಕ್ಯದ ಅರ್ಥವಾಗಿದೆ .
ವಿಶೇಷತೆ :* ದೀನರ ಬಗ್ಗೆ ನಾವು ನಡೆದುಕೊಳ್ಳಬೇಕಾದ ರೀತಿಯನ್ನು ವಿವರಿಸಲಾಗಿದೆ. * ಪ್ರೀತಿ, ಸಹಾನುಭೂತಿ ಎಂಬ ಪದಗಳಿಗೆ ಬದಲಾಗಿ ಬೆಲ್ಲ – ಸಕ್ಕರೆ ಎಂಬ ಪದವನ್ನು ಬಳಸಲಾಗಿದೆ.
ಉ. ಬಿಟ್ಟ ಸ್ಥಳವನ್ನು ಸೂಕ್ತಪದಗಳಿಂದ ತುಂಬಿರಿ:
1. ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದವರು ಮಿರ್ಜಾಸಾಹೇಬರು.
2. ಮಿರ್ಜಾ ಅವರ ಕಾಲಕ್ಕೆ ಡಿವಿಜಿ ದೊಡ್ಡ ಮೇಧಾವಿ
ಎಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು.
3. ಮುಳಬಾಗಿಲು ಕೋಲಾರ ಜಿಲ್ಲೆಗೆ ಸೇರಿದೆ.
4. ಡಿವಿಜಿಯವರು ಮುಳಬಾಗಿಲಿನ ಆಂಗ್ಲ ವರ್ನಾಕ್ಯುಲರ್ ಶಾಲೆಯಲ್ಲಿ ಲೋಯರ್ ಸೆಕೆಂಡರಿ ಪೂರ್ತಿಗೊಳಿಸಿದರು.
5. ಡಿವಿಜಿಯವರು ಕನ್ನಡ ಸಾರಸ್ವತ ಲೋಕದ ಭೀಷ್ಮ ಎಂದು ಕರೆಸಿಕೊಂಡರು.
ಅಭ್ಯಾಸ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
೧. ನಾಮಪದ ಎಂದರೇನು?
ಉತ್ತರ:-ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ‘ನಾಮ ಪದಗಳು’ ಎಂದು ಕರೆಯುತ್ತೇವೆ.
೨. ಭಾವನಾಮ ಎಂದರೇನು?
ಉತ್ತರ:-ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳನ್ನು ‘ಭಾವನಾಮ’ ಎನ್ನುತ್ತಾರೆ.
ಉದಾ: ಬಿಳಿಯದರ ಭಾವ – ಬಿಳಿಪು, ಆಡುವುದರ ಭಾವ – ಆಟ.
೩. ಸರ್ವನಾಮ ಎಂದರೇನು? ವಿಧಗಳಾವುವು?
ಉತ್ತರ:-ನಾಮಪದಗಳ ಬದಲಾಗಿ ಬಳಸುವ ಪದಗಳಿಗೆ ಸರ್ವನಾಮಗಳು ಎನ್ನುವರು.
ಉದಾ: ಅವನು, ಅವಳು, ಅದು, ಇದು, ಅವರು, ಇವರು ಇತ್ಯಾದಿ.
ಸರ್ವನಾಮದ ವಿಧಗಳೆಂದರೆ
೧) ಪುರುಷಾರ್ಥಕ ಸರ್ವನಾಮ
ಅ) ಉತ್ತಮ ಪುರಷ
ಆ) ಮಧ್ಯಮ ಪುರುಷ
ಇ) ಪ್ರಥಮ ಪುರಷ
೨) ಆತ್ಮಾರ್ಥಕ ಸರ್ವನಾಮ
೩) ಪ್ರಶ್ನಾರ್ಥಕ ಸರ್ವನಾಮ
೪. ಪುರುಷಾರ್ಥಕ ಸರ್ವನಾಮಗಳಲ್ಲಿ ಎಷ್ಟು ವಿಧ?
ಪುರುಷಾರ್ಥಕ ಸರ್ವನಾಮಗಳಲ್ಲಿ ಮೂರು ವಿಧ, ಅವುಗಳೆಂದರೆ
೧. ಉತ್ತಮ ಪುರುಷ
೨. ಮಧ್ಯಮ ಪುರುಷ
೩. ಪ್ರಥಮ ಪುರುಷ
ಪ್ರಾಯೋಗಿಕ ಅಭ್ಯಾಸ
ಕೊಟ್ಟಿರುವ ವಾಕ್ಯಗಳಲ್ಲಿರುವ ನಾಮಪದಗಳನ್ನು ಆರಿಸಿ ಬರೆಯಿರಿ.
1. ಡಿವಿಜಿಯ ಊರು ಮುಳಬಾಗಿಲು .
ಡಿವಿಜಿ, ಮುಳಬಾಗಿಲು
2. ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ .
ಬೆಂಗಳೂರು, ರೈಲು
3. ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲವದು. ವಿಶ್ವೇಶ್ವರಯ್ಯನವರು, ದಿವಾನರು
4. ಡಿವಿಜಿಯ ಬಂಧುಗಳ ಮನೆಯಲ್ಲಿ ಒಂದು ಉತ್ಸವವು ನಡೆಯಿತು.
ಡಿವಿಜಿ, ಮನೆಯಲ್ಲಿ, ಬಂಧುಗಳು
2. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆದು ಅದು ಯಾವ ವಿಭಕ್ತಿ ಎಂಬುದನ್ನು ಬರೆಯಿರಿ.
1.ದಿವಾನರನ್ನು – ಅನ್ನು – ದ್ವಿತೀಯ ವಿಭಕ್ತಿ
2. ದಿನದಿನದ –ಅ – ಷಷ್ಠಿ ವಿಭಕ್ತಿ
3. ಡಿವಿಜಿಗೆ – ಗೆ – ಚತುರ್ಥಿ ವಿಭಕ್ತಿ
4. ಬಲದಿಂದ – ಯಿಂದ – ಪಂಚಮೀ ವಿಭಕ್ತಿ
5. ವಲಯದಲ್ಲಿ – ಅಲ್ಲಿ – ಸಪ್ತಮೀ ವಿಭಕ್ತಿ
6. ಮಂಕುತಿಮ್ಮನ –ಅ– ಷಷ್ಟಿ ವಿಭಕ್ತಿ
7. ಶಿಕ್ಷಣವನ್ನು – ಅನ್ನು – ದ್ವಿತೀಯ ವಿಭಕ್ತಿ
8. ಓದಿಗೆ– ಗೆ– ಚತುರ್ಥಿ ವಿಭಕ್ತಿ
9. ಸಹಾಯಕ್ಕೆ – ಕ್ಕೆ – ಚತುರ್ಥಿ ವಿಭಕ್ತಿ
10. ಬಂಡಿಯಲ್ಲಿ – ಅಲ್ಲಿ – ಸಪ್ತಮಿ ವಿಭಕ್ತಿ
11. ದಯೆಯಿಂದ – ಯಿಂದ – ಪಂಚಮೀ ವಿಭಕ್ತಿ
12. ರಸೂಲ್ಖಾನ್ನ –ಅ – ಷಷ್ಟಿವಿಭಕ್ತಿ