೨. ಭಾರತೀಯತೆ
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
ဂ) ಪರ್ವತ ಹಿಮ ಯಾವ ಎತ್ತರಕ್ಕೆ ಎದ್ದು ನಿಂತಿದೆ?
ಉತ್ತರ:-ಹಿಮ ಪರ್ವತವು ಆಕಾಶಕ್ಕೆದ್ದು ನಿಂತಿದೆ.
೨) ಪೆರ್ದೆರೆಗಳು ಯಾವುದಕ್ಕೆ ಮುತ್ತ ನೀಡುತ್ತಿವೆ?
ಉತ್ತರ:-ಕರಾವಳಿಯ ಸಮುದ್ರ ತೀರದಲ್ಲಿರುವ ಸಮುದ್ರದ ಅಲೆಗಳು ತೀರಕ್ಕೆ ಮುತ್ತನೀಡುತ್ತವೆ.
೩) ಹಸಿರು ದೀಪವನ್ನು ಎಲ್ಲಿ ಹಚ್ಚಲಾಗಿದೆ?
ಉತ್ತರ:-ಹಸಿರು ದೀಪವನ್ನು ನದಿಗಳಲ್ಲಿ ಹಚ್ಚಲಾಗಿದೆ.
೪) ಯಂತ್ರಘೋಷ ಏಳುತ್ತಿರುವ ಬಗೆ ಹೇಗೆ?
ಉತ್ತರ:-ನೀಲಾಕಾಶದಲ್ಲಿ ಹೊಗೆಯ ಚೆಲ್ಲುತ್ತ ಯಂತ್ರಘೋಷ ಏಳುತ್ತಿವೆ.
೫) ನಮ್ಮ ಧ್ವಜವನ್ನು ಎತ್ತಿ ಹಿಡಿದಿರುವವರು ಯಾರು?
ಉತ್ತರ:-ನಮ್ಮ ಯೋಧರು ನಮ್ಮ ಧ್ವಜವನ್ನು ಎತ್ತಿ ಹಿಡಿದಿರುವವರು.
೬) ನಮ್ಮ ಪಯಣ ಎತ್ತ ಸಾಗಿದೆ?
ಉತ್ತರ:-ನಮ್ಮ ಗುರಿಯ ಬೆಳಕಿನೆಡೆಗೆ ನಮ್ಮ ಪಯಣ ಸಾಗಿದೆ.
ಆ) ಕೊಟ್ಟಿರುವ ಪ್ರಶ್ನೆಗೆ ಎರಡು–ಮೂರು ವಾಕ್ಯಗಳಲ್ಲಿಉತ್ತರಿಸಿ:
೧) ಕಣ್ಣು ಬೇರೆಯಾದರೂ ನೋಟ ಒಂದಾಗುವ ಸಂದರ್ಭಗಳನ್ನು ತಿಳಿಸಿ.
ಉತ್ತರ:-ಕಣ್ಣು ಬೇರೆಯಾದರೂ ನೋಟ ಒಂದಾಗುವ ಹಲವಾರು ಸಂದರ್ಭಗಳು ನಮ್ಮ ಎದುರಿವೆ. ಯೋಧರನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಕರೆಸುವುದುಂಟು. ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಕಾರ್ಗಿಲ್ ಮುಂತಾದ ಯುದ್ದಗಳಲ್ಲಿ ಭಾಗವಹಿಸಿದ ಮಹಾನ್ ಯೋಧರನ್ನು ಕರೆಸಿ ಅವರ ಅನುಭವಗಳನ್ನು ಕೇಳಿದಾಗ ಅವರ ಮಹಾನ್ ಸಾಧನೆಗಳನ್ನು ಕೇಳುತ್ತಿದ್ದರು ನೂರಾರು-ಸಾವಿರಾರು ಕಣ್ಣುಗಳು, ಕಿವಿಗಳು ಅವರ ನೋಡುತ್ತಿದ್ದರು- ಕೇಳುತ್ತಿದ್ದರು ನೋಟ ಅವರತ್ತಲೆ ಇರುತ್ತದೆ.
೨. ‘ಭಾಷೆ ಬೇರೆಯಾದರೂ ಭಾವ ಒಂದು’ –ಸಮರ್ಥಿಸಿ.
ಉತ್ತರ:-ಭಾರತ ದೇಶದಲ್ಲಿ ಹಲವಾರು ರಾಜ್ಯಗಳಲ್ಲಿದ್ದು ಎಲ್ಲಾ ರಾಜ್ಯಗಳಲ್ಲಿಯೂ ಅವರದೇ ಆದ ರಾಜ್ಯಭಾಷೆಗಳಿವೆ, ಪ್ರತಿಯೊಬ್ಬ ಭಾರತೀಯರು ತನ್ನದೇ ಆದ ಭಾಷೆಯಲ್ಲಿ ಮಾತಾಡುವುದು, ವ್ಯವಹರಿಸುವುದೇ ಆದರೂ ಭಾರತೀಯರ ಭಾವನೆಗಳು ಒಂದೇ ಆಗಿರುತ್ತದೆ. ದೇಶದ ತುಂಬ ಹಲವಾರು – ರಾಜ್ಯಗಳು, ರಾಜ್ಯಗಳಲ್ಲಿ ಹಲವಾರು ಜಿಲ್ಲೆಗಳು, ಜಿಲ್ಲೆಗಳಲ್ಲಿ ಹಲವಾರು ತಾಲ್ಲೂಕು ಹೀಗೆ ವಿಂಗಡಿಸುತ್ತಾ ಹೋದಾಗ ಒಂದೇ ರಾಜ್ಯದ ಹಲವಾರು ಭಾಗಗಳಲ್ಲಿ ಹಲವಾರು ರೀತಿಯ ಭಾಷೆಗಳು ಇವೆ. ಆದರೂ ಅವರು ಯಾವುದೇ ಭಾಷೆ ಮಾತನಾಡಿದರು, ಇವರೆಲ್ಲರ ಭಾವನೆಗಳು ಒಂದೇ ಆಗಿರುತ್ತದೆ.ಭಾರತೀಯರ ಭಾಷೆಗಳು ಬೇರೆ ಇರಬಹುದು, ಆದರೆ ಎಲ್ಲಾ ಭಾರತೀಯರ ಭಾವನೆಗಳು ಒಂದೇ ಇದಕ್ಕೆ ಉದಾ: ನಾವೆಲ್ಲರೂ ಬಹಳ ಶ್ರದ್ದಾ ಭಕ್ತಿಯಿಂದ ಹಾಡುವ ರಾಷ್ಟ್ರಗೀತೆ ಆಗಿದೆ.
ಇ) ಕೊಟ್ಟಿರುವ ಪ್ರಶ್ನೆಗೆ ಎಂಟು–ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧) ನಾವು ಭಾರತೀಯರು ಎಂಬ ಅಭಿಮಾನ ಮಿಡಿ ಯುವ ಸನ್ನಿವೇಶಗಳನ್ನು ವಿವರಿಸಿ.
ಉತ್ತರ:-ನಾವು ಭಾರತೀಯರು ಎಂಬ ಅಭಿಮಾನ ಪ್ರತಿಯೊಬ್ಬ ಭಾರತೀಯನಿಗೂ ಇದ್ದೇ ಇರುತ್ತದೆ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಾಗ ಯಾವುದೇ ಧರ್ಮ, ಜಾತಿಯನ್ನು ಯೋಚಿಸದೆ ಎಲ್ಲರ ಮನದಲ್ಲಿಯೂ ನಾವು ಭಾರತೀಯರು ಎಂಬ ಭಾವನೆಯಿಂದ ಪ್ರತಿಯೊಬ್ಬರು ರಾಷ್ಟ್ರಧ್ವಜಕ್ಕೆ ವಂದಿಸುತ್ತಾ, ರಾಷ್ಟ್ರಗೀತೆಯನ್ನು, ಹಾಡುತ್ತೇವೆ. ಯೋಧನೊಬ್ಬನನ್ನು ಕೆರದು ಸನ್ಮಾಯಿಸುವ ಸಂದರ್ಭದಲ್ಲಿಯೂ ನಾವು ಭಾರತೀಯರು ಎಂಬ ಆತ್ಮೀಯ ಭಾವನೆಯೊಂದಿಗೆ ಆ ಯೋಧನನ್ನು ಗೌರವಿಸುತ್ತೇವೆ.
ನಾವು ವಿದೇಶಕ್ಕೆ ಹೋದಾಗ ಅಲ್ಲಿ ಯಾರಾದರೂ ಭಾರತೀಯರು ಸಿಕ್ಕಿದಾಗ ನಮಗೆ ಆಗುವ ಸಂತೋಷಕ್ಕೆ ಪಾರವೇ ಇಲ್ಲ. ವಿದೇಶದಲ್ಲಿ ಅದರಲ್ಲಿಯೂ ನಮ್ಮ ಮಾತೃಭಾಷೆಯಾಡುವವರು ಕನ್ನಡ, ಹಿಂದಿ, ತೆಲುಗು, ತಮಿಳು ಇತ್ಯಾದಿ ಯಾವುದೇ ಭಾಷೆ ಮಾತನಾಡಿದವರೇ ಆಗಿದ್ದರೆ ನಾವೆಲ್ಲ ಭಾರತೀಯರು ಸ್ವದೇಶಿಯರು ಎಂಬ ಭಾವನೆಯಿಂದ ಪುಳಕಿತರಾಗಿ ಸ್ನೇಹ ಸಂಬಂಧ ಬೆಳೆಸುತ್ತೇವೆ. ವಿದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರ ಬಗ್ಗೆ ಇವರು ನಮ್ಮ ಭಾರತೀಯರು ಎಂಬ ಭಾವನೆ ನಮಗುಂಟಾಗುತ್ತದೆ. ವಿದೇಶದಿಂದ ಪುರಸ್ಕಾರ ಪಡೆದ ಭಾರತೀಯರ ಬಗ್ಗೆ ಹೆಮ್ಮೆ ಪಡುತ್ತೇವೆ.
ವಿದೇಶದ ಮ್ಯೂಜಿಯಂಗಳಲ್ಲಿ ಅಥವಾ ಲೈಬ್ರರಿಗಳಲ್ಲಿ ಭಾರತೀಯರ ಸಾಹಿತಿಗಳು, ವಿಜ್ಞಾನಿಗಳು, ಇತಿಹಾಸಕಾರರು ಬರೆದ ಪುಸ್ತಕಗಳಾಗಲಿ, ಭಾರತಕ್ಕೆ ಸಂಬಂಧಿಸಿದ ಯಾವುದಾದರೂ ವೈಜ್ಞಾನಿಕ, ಐತಿಹಾಸಿಕ, ದೇವಾಲಯ ಮುಂತಾದವುಗಳನ್ನು ನಾವು ನೋಡಿದಾಗ ಭಾರತೀಯರ ಸಾಧನೆ ವಿದೇಶದವರೆಗೂ ಪಸರಿಸುವುದನ್ನು ಕಂಡಾಗ ಅತೀಯ ಸಂತೋಷ ಉಂಟಾಗುತ್ತದೆ.
ಒಬ್ಬ ಯೋಧ ಯಾವುದೇ ಧರ್ಮವು ಆಗಿದ್ದರೂ ಸರಿ, ಆತ ದೇಶಕ್ಕಾಗಿ, ವೀರ ಮರಣ ಹೊಂದಿದಾಗ, ಭಾರತೀಯ ಪದ್ಧತಿಯಂತೆ ಪ್ರತಿಯೊಬ್ಬರು ಆತನನ್ನು ವಿಧಿ ಪೂರ್ವಕವಾಗಿ ಸನ್ಮಾನಿಸಿ ಗೌರವದೊಂದಿಗೆ ಸಂಸ್ಕಾರ ಮಾಡುವುದು ಕೂಡ ‘ನಾವು ಭಾರತೀಯರು‘ ಎಂದು ಭಾವನೆಯೊಂದಿಗೆ ಗೌರವ ಯುತವಾಗಿ ಕಳುಹಿಸಿ ಕೊಡುತ್ತೇವೆ.
ಈ) ಈ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ:
1) ಕಣ್ಣು ಬೇರೆ ನೋಟ ವೊಂದು.”
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ಮೇಲ್ಕಂಡ ವಾಕ್ಯವನ್ನು ಶ್ರೀಯುತ ಕೆ. ಎಸ್. ನರಸಿಂಹಸ್ವಾಮಿಯವರು ರಚಿಸಿರುವ “ಭಾರತೀಯತೆ” ಎಂಬ ಕವನದಿಂದ ಆರಿಸಲಾಗಿದ್ದು, ಇದನ್ನು ಕೆ. ಎಸ್. ನರಸಿಂಹಸ್ವಾಮಿಯವರ “ನವಪಲ್ಲವ” ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ಭಾರತ ದೇಶದ ಜನರ ಜೀವನ ಶೈಲಿಯಲ್ಲಿ ಭಿನ್ನತೆ ಇದ್ದರೂ ಏಕತಾಭಾವ, ದೇಶಭಕ್ತಿ, ತ್ಯಾಗ, ಪರೋಪಕಾರ ಬುದ್ದಿ ಮುಂತಾದ ಉತ್ಕೃಷ್ಟ ಗುಣಗಳನ್ನು ಕವಿ ಇಲ್ಲಿ ಹೇಳುವ ಸಂದರ್ಭದಲ್ಲಿ ಈ ಮೇಲ್ಕಂಡ ವಾಕ್ಯವನ್ನು ಬರೆದಿದ್ದಾರೆ.
ಸ್ವಾರಸ್ಯ: ‘ಕಣ್ಣು ಬೇರೆ‘ ಎಂದಾಗ ನೋಡುವವರು ಬೇರೆ ಬೇರೆಯವರು ಅಂದರೆ ಹಲವಾರು ಜನರು ನೋಡುವವರ ನೋಟ ಒಂದೇ ಆಗಿರುತ್ತದೆ. ಉದಾ: ತಾಜ್ಮಹಲಿನ ಸೌಂದರ್ಯವನ್ನು ನೋಡಿದಾಗ ನೋಡುವವರೆಲ್ಲರು ಆಶ್ಚರ್ಯ ಸಂತೋಷದ ನೋಟ ದಿಂದಲೇ ನೋಡುವರು.
ವಿಶೇಷತೆ: ಒಟ್ಟಾರೆ ಭಾರತೀಯರು ನೋಡುವ ಕಣ್ಣುಗಳು ಬೇರೆ ಬೇರೆಯಾಗಿದ್ದರು ಅವರು ನೋಡುವ ನೋಟ ಮಾತ್ರ ಒಂದೇ ಆಗಿರುತ್ತದೆ ಎಂಬುದು ಭಾವ.
೨) “ಭಾಷೆ ಬೇರೆ, ಭಾವವೊಂದು.”
ಪ್ರಸ್ತಾವನೆ: ಪ್ರಸ್ತುತ ಈ ಮೇಲ್ಕಂಡ ವಾಕ್ಯವನ್ನು ಶ್ರೀಯುತ ಕೆ. ಎಸ್. ನರಸಿಂಹಸ್ವಾಮಿಯವರು ರಚಿಸಿರುವ “ಭಾರತೀಯತೆ” ಎಂಬ ಕವನದಿಂದ ಆರಿಸಲಾಗಿದ್ದು, ಇದನ್ನು ಕೆ. ಎಸ್. ನರಸಿಂಹಸ್ವಾಮಿಯವರ “ನವಪಲ್ಲವ” ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ಭಾರತ ದೇಶದಲ್ಲಿ ಹಲವಾರು ರಾಜ್ಯಗಳಲ್ಲಿದ್ದು ಎಲ್ಲಾ ರಾಜ್ಯಗಳಲ್ಲಿಯೂ ಅವರದೇ ಆದ ರಾಜ್ಯಭಾಷೆಗಳಿವೆ, ಪ್ರತಿಯೊಬ್ಬ ಭಾರತೀಯರು ತನ್ನದೇ ಆದ ಭಾಷೆಯಲ್ಲಿ ಮಾತಾಡುವುದು, ವ್ಯವಹರಿಸುವುದೇ ಆದರೂ ಭಾರತೀಯರ ಭಾವನೆಗಳು ಒಂದೇ ಆಗಿರುತ್ತದೆ. ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆದಿದ್ದಾರೆ.
ಸ್ವಾರಸ್ಯ: ಭಾರತ ದೇಶದ ಹಲವಾರು ವೈವಿಧ್ಯಗಳಲ್ಲಿ ಭಾಷಾ ವೈವಿಧ್ಯವು ಒಂದು. ದೇಶದ ತುಂಬ ಹಲವಾರು – ರಾಜ್ಯಗಳು, ರಾಜ್ಯಗಳಲ್ಲಿ ಹಲವಾರು ಜಿಲ್ಲೆಗಳು, ಜಿಲ್ಲೆಗಳಲ್ಲಿ ಹಲವಾರು ತಾಲ್ಲೂಕು ಹೀಗೆ ವಿಂಗಡಿಸುತ್ತಾ ಹೋದಾಗ ಒಂದೇ ರಾಜ್ಯದ ಹಲವಾರು ಭಾಗಗಳಲ್ಲಿ ಹಲವಾರು ರೀತಿಯ ಭಾಷೆಗಳು ಇವೆ. ಆದರೂ ಅವರು ಯಾವುದೇ ಭಾಷೆ ಮಾತನಾಡಿದರು, ಇವರೆಲ್ಲರ ಭಾವನೆಗಳು ಒಂದೇ ಆಗಿರುತ್ತದೆ.
ವಿಶೇಷತೆ: ಆದ್ದರಿಂದಲೇ ಭಾರತೀಯರ ಭಾಷೆಗಳು ಬೇರೆ ಇರಬಹುದು, ಆದರೆ ಎಲ್ಲಾ ಭಾರತೀಯರ ಭಾವನೆಗಳು ಒಂದೇ ಇದಕ್ಕೆ ಉದಾ: ನಾವೆಲ್ಲರೂ ಬಹಳ ಶ್ರದ್ದಾ ಭಕ್ತಿಯಿಂದ ಹಾಡುವ ರಾಷ್ಟ್ರಗೀತೆ ಆಗಿದೆ.
೩) “ಎಲ್ಲೇ ಇರಲಿ, ನಾವು ಒಂದೇ.”
ಉತ್ತರ:-ಪ್ರಸ್ತಾವನೆ: ಪ್ರಸ್ತುತ ಈ ಮೇಲ್ಕಂಡ ವಾಕ್ಯವನ್ನು ಶ್ರೀಯುತ ಕೆ. ಎಸ್. ನರಸಿಂಹಸ್ವಾಮಿಯವರು ರಚಿಸಿರುವ “ಭಾರತೀಯತೆ” ಎಂಬ ಕವನದಿಂದ ಆರಿಸಲಾಗಿದ್ದು, ಇದನ್ನು ಕೆ. ಎಸ್. ನರಸಿಂಹಸ್ವಾಮಿಯವರ “ನವಪಲ್ಲವ” ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ನಾವು ಎಲ್ಲೇ ಇರಲಿ, ಹೇಗೆ ಇರಲಿ? ನಮ್ಮ ಮನಸ್ಸಿನಲ್ಲಿ ಮಾತ್ರ ನಾವು ಭಾರತೀಯರು ಎಂಬ ಭಾವನೆ ಇರಬೇಕು ಇಷ್ಟು ಮಾತ್ರವಲ್ಲ ಅದನ್ನು ನಮ್ಮ ನಡೆ-ನುಡಿ ಯಲ್ಲಿಯೂ ಇರಬೇಕೆಂಬುದು ಹೇಳುವ ಸಂದರ್ಭದಲ್ಲಿ ಕವಿ ಈ ವಾಕ್ಯವನ್ನು ರಚಿಸಿದ್ದಾರೆ.
ಸ್ವಾರಸ್ಯ: ನಾವು ನಾಡಿನಲ್ಲಿರಲಿ, ಕಾಡಿನಲ್ಲಿರಲಿ, ದೇಶದಲ್ಲಿರಲಿ, ವಿದೇಶದಲ್ಲಿರಲಿ, ನೀರಿನ ಮೇಲೆ ಇರಲಿ, ಆಕಾಶದಲ್ಲಿ ಹಾರುತ್ತಿರಲಿ, ನಾವು ಭಾರತೀಯರು ಎಂಬ ಭಾವನೆಯನ್ನು ಮರೆಯಬಾರದು. ಅಷ್ಟು ಮಾತ್ರವಲ್ಲ ನಾವೆಲ್ಲರೂ ಒಂದೇ ಎಂಬ ಭಾವನೆ ಹೊಂದಿರಬೇಕು.
ವಿಶೇಷತೆ: ರಾಷ್ಟ್ರಕವಿ ‘ಕುವೆಂಪು’ ರವರ ಮಾತನ್ನು ಕೂಡ ಇಲ್ಲಿ ನಾವು ನೆನಪಿಸಿ ಕೊಳ್ಳ ಬಹುದು. ‘ಎಲ್ಲಾದರೂ ಇರು, ಹೇಗಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂದಿದ್ದಾರೆ. ಆದರೆ ನಾಡಗೀತೆಯಲ್ಲಿ “ಭಾರತ ಜನನಿಯ ತನುಜಾತೆ, ಜೈ ಕರ್ನಾಟಕ ಮಾತೆ” ಎಂದು ಹೇಳಿರುವುದು ಮೊದಲ ಭಾರತೀಯರು, ನಂತರ ಕನ್ನಡಿಗರು ಎಂಬ ಭಾವನೆ ಇಲ್ಲಿದೆ.
ಉ) ಬಿಟ್ಟ ಸ್ಥಳ ತುಂಬಿರಿ:
೧) ಯಂತ್ರ ಘೋಷ ವೇಳುವಲ್ಲಿ.
೨) ಒಂದೇ ನೆಲದ ತೊಟ್ಟಲಲ್ಲಿ.
೩) ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ.
೪) ಎಲ್ಲೇ ಇರಲಿ, ನಾವು ಒಂದು.
೫) ನಡೆವ ಧೀರ ಪಯಣದಲ್ಲಿ.
ಪ್ರಾಯೋಗಿಕ ಭಾಷಾಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
೧) ಛಂದಸ್ಸು ಎಂದರೇನು?
ಉತ್ತರ:-ಪದ್ಯ ರಚನಾ ನಿಯಮಗಳನ್ನು ತಿಳಿಸುವ ಶಾಸ್ತ್ರವೇ – ಛಂದಸ್ಸು.
೨) ಪ್ರಾಸ ಎಂದರೇನು? ಅದರ ವಿಧಗಳಾವುವು?
ಉತ್ತರ:-ಪಠ್ಯದ ಪ್ರತಿಯೊಂದು ಪಾದದ ಎರಡನೆಯ ಅಕ್ಷರದಲ್ಲಿ ಅಥವಾ ಪ್ರತಿಸಾಲಿನ ಕೊನೆಯ ಅಕ್ಷರದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು “ಪ್ರಾಸ” ಎನ್ನುವರು. ಪ್ರಾಸದಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ
* ಪ್ರತಿಸಾಲಿನ ಎರಡನೆಯ ಅಕ್ಷರ ಪ್ರಾಸವಾಗಿದ್ದರೆ ಅದನ್ನು “ಆದಿಪ್ರಾಸ” ಎನ್ನುವರು.
* ಅಂತ್ಯದಲ್ಲಿ ಬರುವ ಪ್ರಾಸವನ್ನು “ಅಂತ್ಯಪ್ರಾಸ” ಎನ್ನುವರು.
* ಮಧ್ಯದಲ್ಲಿ ಬರುವ ಪ್ರಾಸವನ್ನು “ಒಳಪ್ರಾಸ” ಅಥವಾ “ಮಧ್ಯಪ್ರಾಸ’ ಎನ್ನುವರು.
3) ‘ಗಣ’ ಎಂದರೇನು? ವಿವರಿಸಿ.
ಉತ್ತರ:-‘ಗುಂಪು’ ಗಳನ್ನು ‘ಗಣ’ ಎನ್ನುವರು. “ಪದ್ಯದ ಸಾಲಿನ ಅಕ್ಷರ ಅಥವಾ ಮಾತ್ರೆ ಅಥವಾ ಅಂಶಗಳ ಗುಂಪನ್ನು ‘ಗಣ’ ಎನ್ನುವರು.
೪) “ಭಾರತೀಯತೆ” ಪದ್ಯದಲ್ಲಿ ಯಾವ ಪ್ರಾಸವಿದೆ?
ಉತ್ತರ:-“ಭಾರತೀಯತೆ” ಪದ್ಯದಲ್ಲಿ “ಅಂತ್ಯಪ್ರಾಸ”ವಿದೆ.
೫) ಭಾರತೀಯತೆ ಪದ್ಯದ ಮೂರನೇಯ ಚರಣದಲ್ಲಿರುವ ಪ್ರಾಸಾಕ್ಷರ ಪದಗಳನ್ನು ಬರೆಯಿರಿ.
ಉತ್ತರ:-
ಸ್ಮರಣೆಯಲ್ಲಿ-ಕರುಣೆಯಲ್ಲಿ
ಏರುವಲ್ಲಿ -ಮೊಳಗುವಲ್ಲಿ
ಮೊಳಗುವಲ್ಲಿ-ಪಯಣದಲ್ಲಿ
ಆ) ಕೊಟ್ಟಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ:
ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ ಕಷ್ಟದಲ್ಲು ನೆರೆಗೆ ನೆರಳನೀವ ಕರುಣೆಯಲ್ಲಿ
ದಾರಿ ಬಳಸಿ ಏರುವಲ್ಲಿ ಬಿರುಗಾಳಿಯ ಮೊಳಗವಲ್ಲಿ
ನಮ್ಮ ಗುರಿಗೆ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ