ರಾಜ್ಯ ಸರ್ಕಾರ
ಅಭ್ಯಾಸ
- ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿಮಾಡಿ.
1. ಶಿಕ್ಷಕರ ಪ್ರತಿನಿಧಿಗಳು ವಿಧಾನಪರಿಷತ್ ಸದನದ ಸದಸ್ಯರು.
2. ಸುವರ್ಣ ಸೌಧ ಬೆಳಗಾವಿ ನಗರದಲ್ಲಿದೆ.
3. ವಿಧಾನಸಭೆ ಕಲಾಪಗಳು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತದೆ.
4. ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
5. ಕರ್ನಾಟಕ ವಿಧಾನಸಭೆ ಸದಸ್ಯರ ಸಂಖ್ಯೆ 224
||.ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.
1. ದ್ವಿಸದನ ಪದ್ಧತಿ ಎಂದರೇನು?
ಉತ್ತರ:-ರಾಜ್ಯ ಶಾಸಕಾಂಗವು ಎರಡು ಸದನಗಳನ್ನು ಹೊಂದಿದ್ದರೆ ಅದನ್ನು ದಿಸದನ ಪದ್ದತಿ ಎನ್ನುವರು.
ಉದಾ: ಕರ್ನಾಟಕ –
ವಿಧಾನಪರಿಷತ್ (ಮೇಲ್ಮನೆ) ಮತ್ತು ವಿಧಾನಸಭೆ (ಕೆಳಮನೆ)
2. ನಿಮ್ಮ ವಿಧಾನಸಭಾ ಕ್ಷೇತ್ರದ ಶಾಸಕರು ಯಾರು?
ಉತ್ತರ:-————————————————————–
3. ರಾಜ್ಯಪಾಲರ ಯಾವುದಾದರೂ ಮೂರು ಅಧಿಕಾರ ಗಳನ್ನು ಹೇಳಿ.
ಉತ್ತರ:-ರಾಜ್ಯಪಾಲರ ಯಾವುದಾದರೂ ಮೂರು ಅಧಿಕಾರ ಗಳು
1. ಶಾಸನಸಭೆಗಳು ಅಂಗೀಕರಿಸಿದ ವಿಧೇಯಕವು ಜಾರಿಗೆ ಬರಬೇಕಾದರೆ ರಾಜ್ಯಪಾಲರ ಒಪ್ಪಿಗೆ ಬೇಕು.
2. ರಾಜ್ಯದಲ್ಲಿ ಸಾಂವಿಧಾನಿಕ ಅಸ್ಥಿರತೆ ಉಂಟಾದರೆ, ರಾಜ್ಯಪಾಲರು ರಾಷ್ಟ್ರಪತಿಯರಿಗೆ ವರದಿ ನೀಡಿ ರಾಜ್ಯ ಸರ್ಕಾರವನ್ನು ವಜಾ ಮಾಡಿಸಬಹುದು.
3. ರಾಷ್ಟ್ರಪತಿ ರಾಜ್ಯ ಸರ್ಕಾರವನ್ನು ವಿಸರ್ಜಿಸಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಅವಧಿಯಲ್ಲಿ, ರಾಜ್ಯಪಾಲರೇ ರಾಜ್ಯದ ಆಡಳಿತವನ್ನು ವಾಸ್ತವವಾಗಿ ನಡೆಸುತ್ತಾರೆ.
4. ಮುಖ್ಯಮಂತ್ರಿಯವರ ಮುಖ್ಯ ಅಧಿಕಾರ ಮತ್ತು ಕರ್ತವ್ಯಗಳು ಯಾವುವು?
ಉತ್ತರ:-ಮುಖ್ಯಮಂತ್ರಿಯವರ ಮುಖ್ಯ ಅಧಿಕಾರ ಮತ್ತು ಕರ್ತವ್ಯಗಳು
1. ಮುಖ್ಯಮಂತ್ರಿಯವರ ಸಲಹೆ ಮೇರೆಗೆ ರಾಜ್ಯಪಾಲರು ಮಂತ್ರಿಗಳನ್ನು ನೇಮಿಸುತ್ತಾರೆ.
2. ಮುಖ್ಯಮಂತ್ರಿಯವರು ಮಂತ್ರಿಗಳಿಗೆ ಖಾತೆಗಳನ್ನು ನೀಡುವ ಮತ್ತು ಬದಲಾಯಿಸುವ ಅಧಿಕಾರವನ್ನು ಪಡೆದಿದ್ದಾರೆ.
3.ಮಂತ್ರಿಗಳನ್ನು ಪದಚ್ಯುತಿ ಗೊಳಿಸುವ ಅಧಿಕಾರ ಮುಖ್ಯಮಂತ್ರಿ ಯವರಿಗಿದೆ.
4. ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಂಬಂಧ ವನ್ನು ಇಟ್ಟುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಪ್ರಮುಖ ಪಾತ್ರ ವಹಿಸುತ್ತಾರೆ.
5. ಒಟ್ಟಿನಲ್ಲಿ ರಾಜ್ಯದ ಪ್ರಗತಿಯು ಮುಖ್ಯಮಂತ್ರಿಯವರ ನೇತೃತ್ವ ಹೊಂದಿರುವ ಮಂತ್ರಿಮಂಡಲದ ಉತ್ತಮ ಆಡಳಿತದಿಂದ ಸಾಧ್ಯವಾಗುತ್ತದೆ.
5. ವಿಧಾನ ಸಭಾ ಸದಸ್ಯರ ಕರ್ತವ್ಯಗಳನ್ನು ತಿಳಿಸಿ.
ಉತ್ತರ:-ವಿಧಾನ ಸಭಾ ಸದಸ್ಯರ ಕರ್ತವ್ಯಗಳು
ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು, ಜನರ ಸುಖದುಃಖ ಗಳಲ್ಲಿ ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದು ಅವರ ಮುಖ್ಯ ಜನಬ್ದಾರಿಯಾಗಿದೆ. ಜನಕಲ್ಯಾಣ ಯೋಜನೆಗಳಲ್ಲಿಯೂ ಅವರು ವಿಶೇಷಕಾಳಜಿ ವಹಿಸತಕ್ಕದ್ದು, ತಮ್ಮ ಜವಬ್ದಾರಿಗಳನ್ನು ನಿರ್ವಹಿಸಲು ಅನುಕೂಲವಾಗು ವಂತೆ, ಅವರಿಗೆ ಸರ್ಕಾರವು ಮಾಸಿಕ ವೇತನ ಮತ್ತು ಕೆಲವು ಸವಲತ್ತುಗಳನ್ನು ನೀಡಿದೆ. ಅವರು ಕೆಲವು ಹಕ್ಕುಗಳು ಮತ್ತು ರಕ್ಷಣೆಗಳನ್ನು ಪಡೆದಿದ್ದಾರೆ.