ಮಧ್ಯಯುಗದ ಯುರೋಪ್
ಅಭ್ಯಾಸ
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ:
1. ಪುನರುಜ್ಜಿವನ ಸಾ.ಶ 1400-1600 ರ ಕಾಲಾವಧಿ ಯಲ್ಲಿ ಆರಂಭವಾಯಿತು.
2. ಪುನರುಜ್ಜಿವನ ಕಾಲದ ಪ್ರಖ್ಯಾತ ಚಿತ್ರಕಾರರು ಲಿಯೋನಾರ್ಡೋ-ದ-ವಿಂಚಿಮತ್ತು ಮೈಕೆಲೆಂಜೆಲೋ
3. ಕೊಲಂಬಸ್ ಅಮೇರಿಕಾದ ಮೂಲವಾಸಿಗಳನ್ನು ರೆಡ್ ಇಂಡಿಯನ್ಸ್ ಎಂದು ಕರೆದನು.
4. ಭೂ ಪ್ರದಕ್ಷಿಣಿಯನ್ನು ಮಾಡಿದ ಮೊದಲ ಹಡಗು ವಿಕ್ಟೋರಿಯಾ
5. ಜರ್ಮಿನಿಯಲ್ಲಿ ಧಾರ್ಮಿಕ ಸುಧಾರಣ ಚಳುವಳಿಯನ್ನು ಪ್ರಾರಂಭಿಸಿದವರು ಮಾರ್ಟಿನ್ ಲೂಥರ್
II. ಗುಂಪುಗಳಲ್ಲಿ ಚರ್ಚಿಸಿ ಸಂಕ್ಷಿಪ್ತವಾಗಿ ಉತ್ತರಿಸಿ.
1. ಪುನರುಜ್ಜಿವನದ ಎರಡು ಲಕ್ಷಣಗಳು ಯಾವುವು?
ಉತ್ತರ:- ಪುನರುಜ್ಜಿವನದ ಎರಡು ಲಕ್ಷಣಗಳು ಮಾನವತಾವಾದ ಮತ್ತು ವೈಚಾರಿಕತೆ
2. ಮುದ್ರಣ ಯಂತ್ರವು ಪುನರುಜ್ಜಿವನಕ್ಕೆ ಹೇಗೆ ಪ್ರೇರಕವಾಯಿತು?
ಉತ್ತರ:-ಮುದ್ರಣಯಂತ್ರವು ಜ್ಞಾನ ಪ್ರಸಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ಪುನರುಜ್ಜಿವನಕ್ಕೆ ಪ್ರೇರಕವಾಯಿತು.
3. ಪುನರುಜ್ಜಿವನ ಕಾಲದ ಮೂರು ಮಂದಿ ಪ್ರಸಿದ್ಧ ಸಾಹಿತಿಗಳು ಯಾರು?
ಉತ್ತರ:-ಪುನರುಜ್ಜಿವನ ಕಾಲದ ಪ್ರಸಿದ್ಧ ಸಾಹಿತಿಗಳು ಪೆಟ್ರಾರ್ಕ್, ಡಾಂಟೆ, ಸರ್ವಾಂಟೆ, ಮಿಲಿಯಂ ಷೇಕ್ಸ್ ಪಿಯರ್, ಬೊಕಾಷಿಯೊ, ಜಾನ್ ಕ್ಯಾಲ್ವಿನ್
4. ವಿಲಿಯಂ ಷೇಕ್ಸ್ಪಿಯರ್ ಯಾರು?
ಉತ್ತರ:-ವಿಲಿಯಂ ಷೇಕ್ಸ್ಪಿಯರ್ ಪ್ರಮುಖ ಇಂಗ್ಲೀಷ್ ನಾಟಕಕಾರ.
5. ಪುನರುಜ್ಜಿವನ ಕಾಲದ ಇಬ್ಬರು ಖ್ಯಾತ ವಿಜ್ಞಾನಿಗಳು ಯಾರು?
ಉತ್ತರ:-ಪುನರುಜ್ಜಿವನ ಕಾಲದ ಇಬ್ಬರು ಖ್ಯಾತ ವಿಜ್ಞಾನಿಗಳು ಪೋಲೆಂಡಿನ ಕೋಪರ್ನಿಕಸ್, ಇಂಗ್ಲೆಂಡಿನ ಸರ್ ಐಸಾಕ್ ನ್ಯೂಟನ್.
6. ಪ್ರತಿಸುಧಾರಣೆ ಎಂದರೇನು?
ಉತ್ತರ:-ತನ್ನ ಆಂತರಿಕ ಸುಧಾರಣೆಗಾಗಿ ಕ್ಯಾಥೊಲಿಕ್ ಚರ್ಚ್ ನಡೆಸಿದ ಎಲ್ಲ ಪ್ರಯತ್ನಗಳನ್ನು ಪ್ರತಿಸುಧಾರಣೆ ಎನ್ನುವರು.
7. ಮಾರ್ಕೋ ಪೋಲೋ ಯಾರು?
ಉತ್ತರ:-ಮಾರ್ಕೋ ಪೋಲೋ ಇಟಲಿಯ ವರ್ತಕ (ವ್ಯಾಪಾರಿ).
8. ಕೋಪರ್ನಿಕಸ್ನ ಸಂಶೋದನೆಗಳನ್ನು ತಿಳಿಸಿ.
ಉತ್ತರ:-ಸೂರ್ಯನ ಸುತ್ತ ತಿರುಗುವ ಹಲವಾರು ಗ್ರಹಗಳಲ್ಲಿ ಭೂಮಿಯು ಒಂದು ಎಂದು ಕೋಪರ್ನಿಕಸ್ ತಿಳಿಸಿದರು.
III. ಚರ್ಚಿಸಿರಿ.
1. ಪುನರುಜ್ಜಿವನ ಚಳುವಳಿಯು ಕಲೆ, ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸಿ.
ಉತ್ತರ:-ಸಾಹಿತ್ಯ: ಪುನರುಜ್ಜಿವನ ಕಾಲದಲ್ಲಿ ದೇಶಭಾಷೆ ಅಥವಾ ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯ ರಚನೆಗೊಂಡಿತು. ಲೇಖಕ ಪೆಟ್ರಾರ್ಕ್ನಿಗೆ ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಾಹಿತ್ಯದ ಮೇಲೆ ಅತೀವ ಅಭಿಮಾನವಿತ್ತು. ಈತನ ಭಾವಗೀತೆ ಮತ್ತು ಕಾವ್ಯಗಳು ಪ್ರಸಿದ್ಧವಾಗಿದ್ದವು. ಯುವ ಸಾಹಿತಿಗಳು ಇವನಿಂದ ಪಡೆದ ಸ್ಫೂರ್ತಿ ಗಮನಾರ್ಹವಾದುದು. ಡಾಂಟೆ ಇಟಲಿಯ ಒಬ್ಬ ಕವಿ. ‘ದ ಡಿವೈನ್ ಕಾಮಿಡಿ’ ಈತನ ಮಹಾಕಾವ್ಯ. ಫ್ರೆಂಚ್ ಗದ್ಯ ಸಾಹಿತ್ಯಕ್ಕೆ ಒಂದು ಹೊಸ ಶೈಲಿಯನ್ನು ಕೊಟ್ಟವನೆಂದರೆ ಮತಸುಧಾರಕನಾದ ಜಾನ್ ಕ್ಯಾಲ್ವಿನ್, ಸರ್ವಾಂಟೆ ಸ್ಪೇನ್ ದೇಶದ ಪುನರುಜ್ಜಿವನ ಕಾಲದ ಮುಖ್ಯ ಸಾಹಿತಿ. ಈತನ ಪ್ರಸಿದ್ಧ ಕೃತಿ ‘ಡಾನ್ ಕ್ವಿಹೋಟೆ. ಇಂಗ್ಲೀಷ್ ನಾಟಕಕಾರರಲ್ಲಿ ವಿಲಿಯಂ ಷೇಕ್ಸ್ ಪಿಯರ್ ಪ್ರಮುಖ. ಜೂಲಿಯಸ್ ಸೀಸರ್, ರೋಮಿಯೋ ಜ್ಯೂಲಿಯಟ್, ಕಿಂಗ್ಲಿಯರ್, ಮ್ಯಾಕ್ಬೆತ್ ಈತನ ಪ್ರಮುಖ ನಾಟಕಗಳು.
ಕಲೆ ಮತ್ತು ವಾಸ್ತುಶಿಲ್ಪ :ಪುನರುಜ್ಜಿವನ ಕಾಲದ ವಾಸ್ತು ಸೌಂದರ್ಯವನ್ನು ನಾವು ರೋಮಿನ ಸಂತಪೀಟರ್ ಚರ್ಚ್, ಲಂಡನ್ನಿನ ಸಂತ ಪಾಲ್ ಚರ್ಚ್ ಮುಂತಾದವುಗಳಲ್ಲಿ ಕಾಣಬಹುದು. ಪುನರು ಜೀವನದ ವಾಸ್ತುಶಿಲ್ಪಿಗಳು ಮಧ್ಯಯುಗದ ಅಲಂಕರಣದ ಮತ್ತು ಅಡಂಬರದ ಗಾಥಿಕ್ ಶೈಲಿಯನ್ನು ಕೈಬಿಟ್ಟು, ಚೂಪಾದ ಮೊನೆಯುಳ್ಳ ಕಮಾನುಗಳ ಬದಲು ದುಂಡದಾದ ಕಮಾನುಗಳನ್ನು ಬಳಸಿದರು. ಇಟಲಿಯಲ್ಲಿ ಪ್ರತಿಭಾವಂತ ಚಿತ್ರಕಾರರಿದ್ದರು. ಲಿಯೊನಾರ್ಡೊ–ದ–ವಿಂಚಿ ಮತ್ತು ಮೈಕಲ್ ಎಂಜೆಲೊ ಪ್ರಮುಖರು. ಮೊನಾಲಿಸಾ – ಲಿಯೊನಾರ್ಡೊ ದ ವಿಂಚಿ ಮತ್ತು ಮೋಸೆಸ್ – ಮೈಕೆಲೆಂಜೆಲೊ ರವರ ಪ್ರಸಿದ್ದ ವರ್ಣ ಚಿತ್ರಗಳಾಗಿವೆ.
ವಿಜ್ಞಾನ :ಪೊಲೆಂಡಿನ ಕೋಪರ್ನಿಕಸ್ ಸೂರ್ಯನ ಸುತ್ತ ತಿರುಗುವ ಹಲವಾರು ಗ್ರಹಗಳಲ್ಲಿ ಭೂಮಿಯು ಒಂದೆಂದು ತಿಳಿಸಿದರು. ಇಟಲಿಯ ಖಗೋಳಶಾಸ್ತ್ರಜ್ಞನಾದ ಗೆಲಿಲಿಯೊ ದೂರದರ್ಶಕವನ್ನು ಕಂಡುಹಿಡಿದನು. ಇಂಗ್ಲೆಂಡಿನ ಸರ್ ಐಸಾಕ್ ನ್ಯೂಟನ್ ನೆಲದಿಂದ ಮೇಲಕ್ಕೆ ಏರಿದ ವಸ್ತುಗಳು ಪುನಃ ಕೆಳಗೆ ಬೀಳಲು ‘ಗುರುತ್ವಾಕರ್ಷಣ‘ ಬಲವೇ ಕಾರಣ ಎಂಬುದನ್ನು ತೋರಿಸಿಕೊಟ್ಟನು. ವಿಲಿಯಂ ಹಾರ್ವೆಯು ಮಾನವ ದೇಹದಲ್ಲಿನ ರಕ್ತಪರಿಚಲನೆಯ ಕ್ರಮವನ್ನು ತೋರಿಸಿಕೊಟ್ಟನು. ವೆಸಾಲಿಯಸ್ ಎಂಬ ಬೆಲ್ಡಿಯಂ ವಿಜ್ಞಾನಿಯು ದೇಹದಲ್ಲಿ ರಕ್ತಸಂಚಾರದ ಬಗ್ಗೆ ಅಮೂಲ್ಯ ಗ್ರಂಥವನ್ನು ಪ್ರಕಟಿಸಿದರು.
ಹೀಗೆ ಪುನರುಜ್ಜಿವನವು ಆಧುನಿಕ ಸಮಾಜ ಮತ್ತು ನಾಗರೀಕತೆಗಳ ಮೇಲೆ ಮಹತ್ವದ ಪ್ರಭಾವವನ್ನು ಬೀರಿತು.
2. ಧಾರ್ಮಿಕ ಸುಧಾರಣಾ ಚಳುವಳಿಯಲ್ಲಿ ಮಾರ್ಟಿನ್ ಲೂಥರನ ಪಾತ್ರವೇನು?
ಉತ್ತರ:-ಮಾರ್ಟಿನ್ ಲೂಥರ್ ಜರ್ಮನಿಯಲ್ಲಿ ಧಾರ್ಮಿಕ ಸುಧಾರಣಾ ಚಳುವಳಿಯನ್ನು ಆರಂಭಿಸಿದ ನಾಯಕ. ಈತನು ಸಂತ ಆಗಸ್ಟಿನ್ ಚರ್ಚಿನ ಪಾದ್ರಿಯಾಗಿದ್ದನು. ರೋಮನ್ ಪಟ್ಟಣದಲ್ಲಿ ಪೋಪ್ ಮತ್ತು ಪಾದ್ರಿಗಳ ವೈಬೋಗದ ಜೀವನ ಶೈಲಿಯನ್ನು ಗಮನಿಸಿದ ಲೂಥರ್ ಚರ್ಚಿನ ವಿರುದ್ಧ ತಿರುಗಿ ಬಿದ್ದನು. ಅವನು ಅವನು ಪಾಪಕ್ಷಮಾಪಣ ಪತ್ರಗಳನ್ನು ಕುರಿತು 95 ಹೇಳಿಕೆಗಳನ್ನು ಬರೆದು ವಿಟೆನ್ಬರ್ಗ್ ಚರ್ಚಿನ ಹೆಬ್ಬಾಗಿಲಿಗೆ ಹಚ್ಚಿ ಜನರಲ್ಲಿ ಜಾಗೃತಿ ಮೂಡಿಸಿದನು.ಲೂಥರ್ ಬೈಬಲನ್ನು ಜರ್ಮನ್ ಭಾಷೆಗೆ ಭಾಷಾಂತ ರಿಸಿದ್ದರಿಂದ ಅದು ಸಾಮಾನ್ಯ ಜನರೆಲ್ಲರಿಗೂ ದೊರೆಯು ವಂತಾಯಿತು. ಚರ್ಚಿನ ಧಾರ್ಮಿಕ ಸೇವೆಗಳಲ್ಲಿ ಲ್ಯಾಟಿನ್ ಭಾಷೆಯ ಬದಲಾಗಿ ಜರ್ಮನ್ ಭಾಷೆ ಬಳಸಲಾರಂಭಿ ಸಿದರು. ಪೋಪರು ಲೂಥರ್ನನ್ನು ಶಿಕ್ಷೆಗೆ ಗುರಿಪಡಿಸಲು ರೋಮಿನ ರಾಜನಿಗೆ ಆಜ್ಞಾನಿಪಿಸಿದರು. ಆದರೆ ಲೂಥರನಿಗೆ ಅನೇಕ ರಾಜರ ಬೆಂಬಲವಿದ್ದುದರಿಂದ ಯಾವುದೇ ಶಿಕ್ಷೆ ವಿಧಿಸಲು ಸಾಧ್ಯವಾಗಲಿಲ್ಲ. ಕ್ಯಾಥೋಲಿಕ್ ಚರ್ಚ್ನವರು ಲೂಥರ್ನ ಅನುಯಾಯಿಗಳನ್ನು “ಪ್ರಾಟೆಸ್ಟಂಟ್ಸ್’ (ಪ್ರತಿಭಟನಾಕಾರರು) ಎಂದು ಕರೆದರು. ಕಾಲಕ್ರಮೇಣ ಪ್ರಾಟೆಸ್ಟಂಟರು ಕ್ರೈಸ್ತಧರ್ಮದ ಒಂದು ಪಂಗಡವಾಗಿ ವಿಶ್ವದ ಎಲ್ಲಾ ದೇಶಗಳಲ್ಲಿ ಹರಡಿದರು. ಈ ಬೆಳವಣಿಗೆ ಮುಂದೆ ಉದಾರವಾದ ಎಂಬ ರಾಜಕೀಯ ಸಿದ್ದಾಂತದ ಉಗಮಕ್ಕೆ ಕಾರಣವಾಯಿತು.
3. ಭೌಗೋಳಿಕ ಅನ್ವೇಷಣೆಯ ಪರಿಣಾಮಗಳನ್ನು ಚರ್ಚಿಸಿ.
ಉತ್ತರ:-
1. ವಾಣಿಜ್ಯದ ವಿಸ್ತರಣೆ: ಹೊಸದಾಗಿ ಶೋಧಿಸಲಾದ ಭೂ ಪ್ರದೇಶಗಳನ್ನು ಯುರೋಪಿಯನ್ನರು ತಮ್ಮ ವಾಣಿಜ್ಯ ವಸಾಹತುಗಳನ್ನಾಗಿ ಪರಿವರ್ತಿಸಿಕೊಂಡರು. ಇದರಿಂದ ಜಾಗತಿಕ ವಸಾಹತುಗಳನ್ನಾಗಿ ಪರಿವರ್ತಿಸಿಕೊಂಡರು. ಏಷ್ಯಾದ ಸಾಮಗ್ರಿಗಳು ಯುರೋಪಿನಲ್ಲಿ ವಿಶಾಲ ಮಾರುಕಟ್ಟೆ ಗಳಿಸಿದವು.
2. ಗುಲಾಮರ ವ್ಯಾಪಾರ: ಯುರೋಪಿಯನ್ನರು ವೆಸ್ಟ್ ಇಂಡಿಸ್, ಮೆಕ್ಸಿಕೊ, ಪೆರಿ ಹಾಗೂ ಬ್ರೆಜಿಲ್ ಮೂಲನಿವಾಸಿ ಗಳನ್ನು ಗುಲಾಮರನ್ನಾಗಿ ಮಾಡಿಕೊಂಡರು. ಕ್ರಮೇಣ ಗುಲಾಮರನ್ನು ಸರಕುಗಳಂತೆ ಮಾರಲಾಯಿತು. ಮುಂದೆ ‘ಗುಲಾಮರ ವ್ಯಾಪಾರ’ದ ದಂಧೆ ಅಮಾನವೀಯ ಹಂತವನ್ನುತಲುಪಿತು. ಗುಲಾಮರನ್ನು ಕಠಿಣವಾಗಿ ದುಡಿಸಿ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿತ್ತು.
3. ಕ್ರಿಶ್ಚಿಯನ್ ತತ್ವಗಳ ಪ್ರಕಾರ: ಈ ಬೆಳವಣಿಗೆ ಕ್ರಿಶ್ಚಿಯನ್ ತತ್ವಗಳನ್ನು ಜಗತ್ತಿನಾದ್ಯಂತ ಹರಡಲು ಕಾರಣವಾಯಿತು. ಮುಂದೆ ವಸಾಹತು ವ್ಯವಸ್ಥೆ ರೂಪುಗೊಳ್ಳುವಲ್ಲಿ ಈ ಬೆಳವಣಿಗೆ ಮಹತ್ವದ ಪಾತ್ರ ವಹಿಸಿತು.
4. ರಾಜಕೀಯ ಪರಿಣಾಮ: ಐರೋಪ್ಯ ದೇಶಗಳೊಳಗೆ ವಸಾಹತುಗಳ ಸ್ವಾಧೀನಕ್ಕಾಗಿ ಮತ್ತು ಅಲ್ಲಿನ ಸಂಪತ್ತಿಗಾಗಿ ತೀವ್ರ ಪೈಪೋಟಿ ನಡೆಯಿತು. ಯುರೋಪಿನ ದೇಶಗಳು ಏಷ್ಯಾ, ಆಫ್ರಿಕ ಮತ್ತು ಅಮೇರಿಕ ಖಂಡಗಳಲ್ಲಿ ತಮ್ಮ ವಸಾಹತು ನೆಲೆಗಳನ್ನು ಸ್ಥಾಪಿಸಿಕೊಂಡವು.