ಜಗತ್ತಿನ ಪ್ರಮುಖ ಘಟನೆಗಳು
ಅಭ್ಯಾಸಗಳು
- ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ:
1. ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್.
2. ಮಹಮದ್ ಪೈಗಂಬರ್ ಜನಿಸಿದ ಸ್ಥಳ ಮೆಕ್ಕ (ಅರಬ್ ದೇಶ).
3. ಕುಬ್ಲಾಯ್ ಖಾನ್ ಚಂಗಿಸ್ ಖಾನ್ ರ ಮೊಮ್ಮಗ.
4. ಟರ್ಕರ ಮೂಲ ಮಧ್ಯ ಏಷ್ಯಾದ ತುರ್ಕಿಸ್ತಾನ.
II. ಗುಂಪುಗಳಲ್ಲಿ ಚರ್ಚಿಸಿ ಸಂಕ್ಷಿಪ್ತವಾಗಿ ಉತ್ತರಿಸಿ.
1. ಯೇಸುಕ್ರಿಸ್ತ ಎಲ್ಲಿ ಜನಿಸಿದರು? ಅವರ ತಾಯಿ ಯಾರು?
ಉತ್ತರ:-ಯೇಸುಕ್ರಿಸ್ತ ಇಸ್ರೇಲ್ ದೇಶದ ಬೆತ್ಲಹೆಂ ಎಂಬಲ್ಲಿ ಜನಿಸಿದರು. ಇವರ ತಾಯಿ – ಮೇರಿ.
2. ಯೇಸುಕ್ರಿಸ್ತರ ಮುಖ್ಯ ಬೋಧನೆಗಳು ಯಾವುವು?
ಉತ್ತರ:-ಯೇಸುಕ್ರಿಸ್ತರ ಮುಖ್ಯ ಬೋಧನೆಗಳು
1. ನಾವೆಲ್ಲ ದೇವರ ಮಕ್ಕಳು! ನಾವೆಲ್ಲ ಸಹೋದರರು ಎಂದು ಯೇಸು ಸಾರಿ ಹೇಳಿದರು.
2. ಪಾಪಗಳನ್ನು ಮಾಡದೆ ಶುದ್ಧ ಜೀವನ ನಡೆಸಬೇಕೆಂದು ತಿಳಿಸಿದರು. “ನಿಮ್ಮ ನೆರೆಯವರನ್ನು ನಿಮ್ಮಂತೆ ಪ್ರೀತಿಸಿ”.
3. ಮಾನವ ಸೇವೆಯೇ ದೇವರ ಸೇವೆ.
3. ಕ್ರೂಸೇಡ್ ಯುದ್ಧಗಳಿಗೆ ಕಾರಣವೇನು?
ಉತ್ತರ:-ಯೆಹೂದಿಗಳು, ಕ್ರೈಸ್ತರು ಮತ್ತು ಮುಸಲ್ಮಾನರಿಗೆ ಪ್ಯಾಲೆಸ್ಟೈನ್ ಹಾಗೂ ಅವರ ರಾಜಧಾನಿ ಪವಿತ್ರ ಭೂಮಿ ಯಾಗಿತ್ತು. ಇದನ್ನು ವಶಪಡಿಸಿಕೊಳ್ಳುವುದಕ್ಕಾಗಿ ಕ್ರೈಸ್ತರು ಮತ್ತು ಮುಸಲ್ಮಾನರು ಒಂಬತ್ತು ಬಾರಿ ಯುದ್ಧಗೈದರು. ಟರ್ಕರು ಜೊರೊಸಲೆಮ್ ಯಾತ್ರಿಗಳ ಮೇಲೆ ನಿಷೇಧ ಹೇರಿದ್ದು ಈ ಯುದ್ಧಗಳಿಗೆ ಕಾರಣ.
4. ಪ್ರವಾದಿ ಮಹಮ್ಮದ್ರ ಮುಖ್ಯ ಬೋಧನೆಗಳು ಯಾವುವು?
ಉತ್ತರ:-ಪ್ರವಾದಿ ಮಹಮ್ಮದ್ರ ಮುಖ್ಯ ಬೋಧನೆಗಳು
1.ದೇವನೊಬ್ಬನೆ, ಏಕದೇವತಾರಾಧನೆ ಇಸ್ಲಾಮಿನ ಮೂಲಭೂತ ತತ್ವ. ಪ್ರವಾದಿ ಮಹಮ್ಮದ್ ದೇವರ ಪ್ರವಾದಿ ಅಥವಾ ಸಂದೇಶವಾಹಕರು, ದೇವನು ನಿರಾಕಾರ ಸ್ವರೂಪಿ ಎಂಬುದು ಇಸ್ಲಾಮಿನ ವಿಶ್ವಾಸ.
2. ಪ್ರತಿಯೊಬ್ಬ ಮುಸಲ್ಮಾನನೂ ದೇವರ ಸೇವಕ ನಾಗಬೇಕು, ಪ್ರಾಮಾಣಿಕನಾಗಿರಬೇಕು.
5. ಅರಬ್ಬರ ಯಾವುದಾದರೂ ಎರಡು ಕೊಡುಗೆಗಳನ್ನು ಹೇಳಿ.
ಉತ್ತರ:-ಅರಬ್ಬರ ಯಾವುದಾದರೂ ಎರಡು ಕೊಡುಗೆಗಳು
1. ಅರಬ್ಬರು ಸಾಹಿತ್ಯ, ಕಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
2. ಅರಬ್ಬರು ಬೀಜಗಣಿತ, ರಸಾಯನಶಾಸ್ತ್ರ ಮತ್ತು ಖಗೋಳಶಾಸ್ತ್ರಗಳಿಗೆ ಮಹತ್ವದ ಕೊಡುಗೆಯನಿತ್ತರು. ಶೂನ್ಯವು (ಸೇರಿದಂತೆ ಅಂಕೆಗಳ ಬಳಕೆ ಅರಿತು ಕೊಂಡು ಅವುಗಳನ್ನು ಪಾಶ್ಚಾತ್ಯ ದೇಶಗಳಿಗೂ ಮುಟ್ಟಿಸಿದರು.
3. ‘ಯುನಾನಿ‘ ಎಂಬ ವೈದ್ಯಪದ್ಧತಿ ಅರಬ್ಬರ ಕೊಡುಗೆ ಯಾಗಿದೆ.
6. ಅಟೋಮನ್ ಟರ್ಕರ ಬಗ್ಗೆ ಟಿಪ್ಪಣಿ ಬರೆಯಿರಿ.
ಉತ್ತರ:-ಅಲೆಮಾರಿ ಜನಾಂಗಕ್ಕೆ ಸೇರಿದ ಟರ್ಕರ ಮೂಲಸ್ಥಾನ ಮಧ್ಯ ಏಷ್ಯಾದ ತುರ್ಕಿಸ್ತಾನ(ಈಗಿನ ತುರ್ಕ್ಮೆನಿಸ್ತಾನ) ಇವರು ಇಸ್ಲಾಂ ಅನುಯಾಯಿಗಳಾದರು. ಕುಬ್ಲಾಯ್ ಖಾನನ ಸಾಮ್ರಾಜ್ಯ ಅವನತಿ ಕಂಡ ನಂತರ, ಟರ್ಕರು ಸುತ್ತಮುತ್ತಲಿನ ವಿಶಾಲವಾದ ಪ್ರದೇಶಗಳನ್ನು ಆಕ್ರಮಿಸಿ ಕೊಂಡರು. ‘ಆಟೋಮಾನ್” ಎಂಬ ಮಿಲಿಟರಿ ರಾಜ್ಯವನ್ನು ಕಟ್ಟಿದರು. ಭಾರತದ ಮೇಲೆ ಆಕ್ರಮಣ ನಡೆಸಿದರು.