ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪರಿಭಾಷೆಗಳ ಪರಿಚಯ
ಅಭ್ಯಾಸಗಳು
- ಒಂದು ವಾಕ್ಯದಲ್ಲಿ ಉತ್ತರಿಸಿ:
1. ಶಾಸಕಾಂಗದ ಮೂಲ ಪದ ಯಾವುದು?
ಉತ್ತರ:-ಶಾಸಕಾಂಗ ಎಂಬ ಪದವು ಫ್ರೆಂಚ್ ಭಾಷೆಯ “Parler’ ಮತ್ತು ಲ್ಯಾಟಿನ್ ಭಾಷೆಯ “Parlamentum”ಎಂಬ ಶಬ್ದಗಳಿಂದ ಬಂದಿದೆ.
2. ಶಾಸಕಾಂಗ ಎಂದರೇನು?
ಉತ್ತರ:-ಶಾಸಕಾಂಗವು ರಾಜ್ಯದ ಇಚ್ಛೆಯನ್ನು ರೂಪಿಸುವ ಮತ್ತು ವ್ಯಕ್ತಪಡಿಸುವ ಸರ್ಕಾರದ ಮೊದಲನೆಯ ಅಂಗವಾಗಿದೆ. ಇದು ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯ ನಿರ್ವಹಣೆಗೂ ಆಧಾರವಾಗಿದೆ. ಆದುದರಿಂದ ಶಾಸಕಾಂಗವನ್ನು ಸಾರ್ವಜನಿಕ ಅಭಿಪ್ರಾಯದ ಬಾರೋಲೀಟರ್ ಎಂದು ಕರೆಯಲಾಗಿದೆ.
3. ಏಕ ಸದನ ಶಾಸಕಾಂಗ ಎಂದರೇನು?
ಉತ್ತರ:-ಶಾಸಕಾಂಗವೊಂದು ಏಕೈಕ ಸದನವನ್ನು ಹೊಂದಿರು ವುದೇ ಏಕಸದನ ಶಾಸಕಾಂಗ. ಇಲ್ಲಿ ಜನತೆಯ ಇಚ್ಚೆಯು ಏಕಸದನದಲ್ಲಿ ಮಾತ್ರ ವ್ಯಕ್ತವಾಗುತ್ತದೆ.
ಏಕ ಸದನವನ್ನು ಹೊಂದಿರುವ ದೇಶಗಳು – ಸ್ವೀಡನ್, ಡೆನ್ಮಾರ್ಕ್
4. ದ್ವಿಸದನ ಶಾಸಕಾಂಗ ಎಂದರೇನು?
ಉತ್ತರ:-ಎರಡು ಸದನಗಳನ್ನು ಹೊಂದಿರುವ ಶಾಸಕಾಂಗವೇ ದ್ವಿಸದನ ಶಾಸಕಾಂಗ.
ದ್ವಿಸದನವನ್ನು ಹೊಂದಿರುವ ದೇಶಗಳು: ಭಾರತ ಮತ್ತು ಇಂಗ್ಲೇಂಡ್