ಭಾರತದಪ್ರಾಕೃತಿಕವಿಭಾಗಗಳು
ಅಭ್ಯಾಸಗಳು
- ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿಮಾಡಿ.
1. ಭಾರತವು ವಿಸ್ತೀರ್ಣದಲ್ಲಿ ಪ್ರಪಂಚದಲ್ಲಿ 7 ನೇ ಸ್ಥಾನದಲ್ಲಿದೆ.
2. ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ.
3. ಭಾರತದಲ್ಲಿ 28 ರಾಜ್ಯಗಳು ಹಾಗು 8 ಕೇಂದ್ರಾಡಳಿತ ಪ್ರದೇಶಗಳಿವೆ.
4. ಭಾರತದ ಅತ್ಯಂತ ಎತ್ತರವಾದ ಶಿಖರ ಮೌಂಟ್ ಗಾಲ್ವಿನ್ ಅಸ್ಟಿನ್ (8611 ಮೀ)
5. ಕರ್ನಾಟಕದ ಹೆಬ್ಬಾಗಿಲು ಎಂದು ನವಮಂಗಳೂರು ಬಂದರು ಅನ್ನು ಕರೆಯುತ್ತಾರೆ.
6. ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆ
||.ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಭಾರತವು ಯಾವ ಯಾವ ಅಕ್ಷಾಂಶ ಹಾಗೂ ರೇಖಾಂಶಗಳ ನಡುವೆ ವಿಸ್ತರಿಸಿದೆ. (ಭೌಗೋಳಿಕ ಸ್ಥಾನ ಯಾವುದು?)
ಉತ್ತರ:-ಅಕ್ಷಾಂಶಿಕವಾಗಿ 8° ಉತ್ತರದಿಂದ 37° ಉತ್ತರ ಅಕ್ಷಾಂಶ ಹಾಗು ರೇಖಾಂಶಿಕವಾಗಿ 68° ಪೂರ್ವದಿಂದ 970 ಪೂರ್ವ ರೇಖಾಂಶಗಳವೆರೆಗೆ ವಿಸ್ತರಿಸಿದೆ. ಕರ್ಕಾಟಕ ಸಂಕ್ರಾಂತಿ ವೃತ್ತವು ದೇಶದ ಮಧ್ಯಭಾಗದಲ್ಲಿ ಹಾಯ್ದು ಹೋಗಿದೆ.
2. ಕರ್ನಾಟಕದ ನೆರೆಹೊರೆಯ ರಾಜ್ಯಗಳ ಪಟ್ಟಿಮಾಡಿ.
ಉತ್ತರ:- ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವದಿಕ್ಕಿನಲ್ಲಿ ಆಂಧ್ರ ಮತ್ತು ತೆಲಂಗಾಣ ಹಾಗು ನೈಋತ್ಯದಲ್ಲಿ ಕೇರಳ ರಾಜ್ಯಗಳಿವೆ.
3. ಭಾರತದ ಪ್ರಾಕೃತಿಕ ವಿಭಾಗಗಳನ್ನು ಹೆಸರಿಸಿ.
ಉತ್ತರ:-ಭಾರತವನ್ನು 4 ಪ್ರಮುಖ ಭಾಗಗಳಾಗಿ ವಿಂಗಡಿಸ ಲಾಗಿದೆ.
1. ಉತ್ತರದ ಪರ್ವತಗಳು
2. ಉತ್ತರದ ಮೈದಾನಗಳು
3. ಪರ್ಯಾಯ ಪ್ರಸ್ಥಭೂಮಿ
4. ಕರಾವಳಿ ಮೈದಾನಗಳು
1. ಉತ್ತರದ ಪರ್ವತಗಳು: ಇದು ಬಹಳಷ್ಟು ಮಟ್ಟಿಗೆ ಹಿಮಾಲಯ ಪರ್ವತ ಸರಣಿಗಳನ್ನು ಒಳಗೊಂಡಿದೆ. ಇವು ಪ್ರಪಂಚದಲ್ಲೇ ಅತ್ಯಂತ ಎತ್ತರವಾದ ಪರ್ವತಗಳಾಗಿದ್ದು ಹಿಮದಿಂದ ಆವೃತವಾಗಿದೆ. ಮೌಂಟ್ ಗಾಲ್ವಿನ್ ಆಸ್ಟಿನ್ (K2 8611 ಮೀ) ಭಾರತದ ಅತ್ಯಂತ ಎತ್ತರವಾದ ಶಿಖರ. ಹಿಮಾಲಯ ಪರ್ವತಗಳು ಸ್ವಾಭಾವಿಕ ಗಡಿಯಂತೆ ವರ್ತಿಸುತ್ತವೆ. ಮಧ್ಯ ಏಷ್ಯಾದಿಂದ ಬೀಸಿ ಬರುವ ಶೀತಗಾಳಿ ಗಳನ್ನು ತಡೆಯುತ್ತವೆ. ಮಾನ್ಸೂನ್ ಮಾರುತಗಳನ್ನು ನಿಯಂತ್ರಿಸಿ ಹೆಚ್ಚು ಮಳೆಯನ್ನು ಸುರಿಸುತ್ತವೆ. ಅನೇಕ ನದಿಗಳಿಗೆ ಉಗಮಸ್ಥಾನ ಹಾಗೂ ಹಲವು ಗಿರಿಧಾಮಗಳಿಗೆ ನೆಲೆಯಾಗಿವೆ.
2. ಉತ್ತರ ಮೈದಾನಗಳು: ಇವು ಹಿಮಾಲಯ ಪರ್ವತ ಮತ್ತು ಪರ್ಯಾಯ ಪ್ರಸ್ಥಭೂಮಿಗಳ ನಡುವೆ ವಿಸ್ತರಿಸಿದೆ. ಹಿಮಾಲಯ ಪರ್ವತಗಳಲ್ಲಿ ಉಗಮಹೊಂದಿ ಇಲ್ಲಿ ಹರಿಯು ವ ಸೆಟೇಜ್, ಗಂಗಾ, ಬ್ರಹ್ಮಪುತ್ರ ಹಾಗೂ ಅವುಗಳ ಉಪನದಿಗಳು ತಂದು ಸಂಚಯ ಮಾಡಿದ ಮೆಕ್ಕಲಿನಿಂದ ಇದು ನಿರ್ಮಾಣವಾಗಿದ್ದು ಬಹಳ ವಿಸ್ತಾರವಾದ, ಫಲವತ್ತಾದ, ಸಮತಟ್ಟಾದ ಮೈದಾನಗಳಾಗಿವೆ.
3. ಪರ್ಯಾಯ ಪ್ರಸ್ತಭೂಮಿ: ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಇದು ಹೆಚ್ಚು ವಿಸ್ತಾರವಾದುದು. ಉತ್ತರ ಭಾರತದ ಮೈದಾನದಿಂದ ದಕ್ಷಿಣ ಭಾಗದಲ್ಲಿದ್ದು ಬಹುಪಾಲು ಪುರಾತನ ಕಠಿಣ ಶಿಲೆಗಳಿಂದ ರಚನೆಯಾಗಿದೆ ನರ್ಮದಾಸೋನೆ ಸೀಳು ಕಣಿವೆಯು ಈ ವಿಭಾಗವನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಉತ್ತರದ ಭಾಗವನ್ನು ಮಾಳ್ವ ಪ್ರಸ್ಥಭೂಮಿ ಎಂತಲೂ ಮತ್ತು ದಕ್ಷಿಣದ ಭಾಗವನ್ನು ದಖನ್ ಪ್ರಸ್ಥಭೂಮಿ ಎಂತಲೂ ಕರೆಯಲಾಗಿದೆ.
4. ಕರಾವಳಿ ಮೈದಾನಗಳು: ಪರ್ಯಾಯ ಪ್ರಸ್ಥ ಭೂಮಿಯ ಎರಡೂ ಬದಿಗಳು ಕರಾವಳಿ ಮೈದಾನಗಳಿಂದ ಆವರಿಸಿದೆ. ಅದನ್ನು ಪಶ್ಚಿಮ ತೀರ ಮೈದಾನ ಮತ್ತು ಪೂರ್ವ ತೀರ ಮೈದಾನವೆಂದು ವಿಂಗಡಿಸಬಹುದು.
ಪಶ್ಚಿಮ ಕರಾವಳಿಯು ಅರಬ್ಬಿ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇದೆ. ಇದು ಕಛ್ (ಉತ್ತರ)ನಿಂದ ಕನ್ಯಾಕುಮಾರಿ ಭೂಶಿರ(ದಕ್ಷಿಣ)ದವರೆಗೆ ವಿಸ್ತರಿಸಿದೆ. ಇದು ನೇರವಾಗಿದ್ದು ಕಿರಿದಾದ ಶಿಲಾರಚಿತ ಸ್ವರೂಪವುಳ್ಳದ್ದು.
ಪೂರ್ವ ಕರಾವಳಿಯು ಬಂಗಾಳಕೊಲ್ಲಿ ಮತ್ತು ಪೂರ್ವ ಘಟ್ಟಗಳ ಮಧ್ಯ ಉತ್ತರದಲ್ಲಿ ಗಂಗಾ ನದಿ ಮುಖಜದಿಂದ ದಕ್ಷಿಣದಲ್ಲಿ ಕನ್ಯಾಕುಮಾರಿವರೆಗೆ ವಿಸ್ತರಿಸಿದೆ. ಇದು ಅಗಲವಾಗಿದೆ. ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಪ್ರಮುಖ ಬಂದರುಗಳಿವೆ.
4. ಕರ್ನಾಟಕದ ಪ್ರಾಕೃತಿಕ ವಿಭಾಗಗಳಾವುವು?
ಉತ್ತರ:-ಕರ್ನಾಟಕವು ಭಾರತದ ಪರ್ಯಾಯ ಪ್ರಸ್ಥಭೂಮಿ ಭಾಗವಾಗಿದ್ದು, ವಿವಿಧ ಮೇಲ್ಮೈಲಕ್ಷಣಗಳನ್ನು ಹೊಂದಿದೆ.
1. ಕರಾವಳಿ ಪ್ರದೇಶ
2. ಮಲೆನಾಡು
3. ಮೈದಾನಪ್ರದೇಶ
1. ಕರಾವಳಿ ಪ್ರದೇಶ: ಇದು ಕರ್ನಾಟಕದ ಪಶ್ಚಿಮ ಭಾಗ, ಮಲೆನಾಡು ಮತ್ತು ಅರಬ್ಬಿಸಮುದ್ರಗಳ ನಡುವೆ ಕಂಡುಬರುತ್ತದೆ. ಇದು ಉತ್ತರದಲ್ಲಿ ಗೋವಾ ತೀರದಿಂದ ದಕ್ಷಿಣದಲ್ಲಿ ಕೇರಳ ತೀರದವರೆಗೆ (324 ಕಿ.ಮೀ) ವ್ಯಾಪಿಸಿದೆ. ಇದರಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಸಮುದ್ರ ತೀರಗಳು ಸೇರಿವೆ.
ರಾಜ್ಯದ ಕರಾವಳಿ ಉತ್ತರದಲ್ಲಿ ಕಿರಿದಾಗಿದ್ದು ದಕ್ಷಿಣದಲ್ಲಿ ‘ಅಗಲವಾಗಿದೆ .ಈ ಮೂಲಕ ಕರ್ನಾಟಕದ ಪಶ್ಚಿಮಕ್ಕೆ ಹರಿಯುವ ಅನೇಕ ನದಿಗಳ ತೀರಕ್ಕೆ ಸಮೀಪದಲ್ಲಿ ಕೆಲವು ದ್ವೀಪಗಳಿವೆ.
ಉದಾ:ಗೆ ಸೇಂಟ್ ಮೇರಿ ದ್ವೀಪ, ಈ ಕರಾವಳಿಯಲ್ಲಿ ಭಾರತದ ಪ್ರಮುಖ ಬಂದರುಗಳಲ್ಲಿ ಬಂದಾದ ನವಮಂಗಳೂರು ಬಂದರಿದೆ. ಇದನ್ನು ‘ಕರ್ನಾಟಕದ ಹೆಬ್ಬಾಗಿಲು’ ಎನ್ನುವರು.
2. ಮಲೆನಾಡು: ಇದು ಗುಡ್ಡಗಾಡು ಪ್ರದೇಶವಾಗಿದ್ದು, ಕರಾವಳಿ ಮತ್ತು ಮೈದಾನಗಳ ನಡುವೆ ವಿಸ್ತರಿಸಿದೆ. ಇದು “ಸಹ್ಯಾದ್ರಿ ಸರಣಿಗಳು’ ಎಂತಲೂ ಜನಪ್ರಿಯವಾಗಿದೆ. ಇದೊಂದು ಕರ್ನಾಟಕದ ಅತಿ ಪ್ರಮುಖ ಪ್ರಾಕೃತಿಕ ವಿಭಾಗ. ಇಲ್ಲಿ ಹೆಚ್ಚು ಮಳೆ ಬೀಳುವುದರಿಂದ ದಟ್ಟವಾದ ಅರಣ್ಯ ಹಾಗೂ ವನ್ಯಧಾಮಗಳಿವೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ‘ಆಗುಂಬೆ’ ಈ ಭಾಗದಲ್ಲಿದೆ. ರಾಜ್ಯದಲ್ಲೇ ಅತ್ಯಂತ ಎತ್ತರವಾದ ‘ಮುಳ್ಳಯ್ಯನಗಿರಿ’ (1913 ಮೀ) ಇದೆ.
3. ಮೈದಾನ ಪ್ರದೇಶ: ಇದು ಮಲೆನಾಡಿನ ಪೂರ್ವ ಭಾಗದಲ್ಲಿದ್ದು ಏರುದಿಣ್ಣೆಗಳಿಂದ ಕೂಡಿದ ಮೆಲೈ ಲಕ್ಷಣಗಳನ್ನು ಹೊಂದಿದೆ. ಇದನ್ನು ಈ ಪ್ರದೇಶದ ಈ ಮಧ್ಯಭಾಗದಲ್ಲಿ ಹರಿಯುವ ತುಂಗಾಭದ್ರಾ ನದಿಯನ್ನಾಧರಿಸಿ ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ
1. ಉತ್ತರ ಮೈದಾನ. 2. ದಕ್ಷಿಣ ಮೈದಾನ
5. ಕರಾವಳಿಯನ್ನು ಹೊಂದಿರುವ ಕರ್ನಾಟಕದ ಜಿಲ್ಲೆಗಳನ್ನು ತಿಳಿಸಿ.
ಉತ್ತರ:-ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ.