ಪ್ರಾಣಿಗಳಲ್ಲಿ ಪೋಷಣೆ
ಅಭ್ಯಾಸಗಳು
1. ಬಿಟ್ಟ ಸ್ಥಳ ತುಂಬಿ :
(ಎ) ಮಾನವನ ಪೋಷಣೆಯ ಪ್ರಮುಖ ಹಂತಗಳು ಆಹಾರ ಸೇವನೆ, ಜೀರ್ಣಕ್ರಿಯೆ, ಹೀರಿಕೆ, ಸ್ವಾಂಗೀಕರಣ ಮತ್ತು ವಿಸರ್ಜನೆ.
(ಬಿ) ಮನುಷ್ಯನ ದೇಹದಲ್ಲಿ ಅತ್ಯಂತ ದೊಡ್ಡ ಗ್ರಂಥಿ ಯಕೃತ್.
(ಸಿ) ಆಹಾರದ ಮೇಲೆ ಕ್ರಿಯೆ ನಡೆಸುವ ಹೈಡೋ ಕ್ಲೋರಿಕ್ ಆಮ್ಲ ಮತ್ತು ಜೀರ್ಣ ರಸಗಳನ್ನು ಜಠರವು ಬಿಡುಗಡೆ ಮಾಡುತ್ತದೆ.
(ಡಿ) ಸಣ್ಣ ಕರುಳಿನ ಒಳಭಿತ್ತಿಯು ವಿಲ್ಲೈ ಎಂಬ ಹಲವಾರು ಬೆರಳಿನಂತಹ ರಚನೆಗಳನ್ನು ಹೊಂದಿದೆ.
(ಇ) ಅಮೀಬಾವು ತನ್ನ ಆಹಾರವನ್ನು ರಸದಾನಿಯಲ್ಲಿ ಜೀರ್ಣಿಸುತ್ತದೆ.
2. ಕೆಳಗಿನ ವಾಕ್ಯಗಳು ಸರಿ ಇದ್ದರೆ ಸರಿ ಎಂದು ತಪ್ಪಾಗಿದ್ದರೆ ತಪ್ಪು ಎಂದು ಗುರ್ತಿಸಿ.
(ಎ) ಪಿಷ್ಟದ ಜೀರ್ಣಕ್ರಿಯೆಯು ಜಠರದಲ್ಲಿ ಪ್ರಾರಂಭ ವಾಗುತ್ತದೆ. (ಸರಿ/ತಪ್ಪು)
ತಪ್ಪು
ಸರಿ ಉತ್ತರ:-ಪಿಷ್ಟದ ಜೀರ್ಣಕ್ರಿಯೆಯು ಬಾಯಿಯಲ್ಲಿ ಪ್ರಾರಂಭ ವಾಗುತ್ತದೆ.
(ಬಿ) ನಾಲಿಗೆಯು ಆಹಾರವನ್ನು ಲಾಲಾರಸದೊಂದಿಗೆ ಸೇರಿಸಲು ಸಹಾಯ ಮಾಡಿತ್ತದೆ. (ಸರಿ/ತಪ್ಪು)
ಸರಿ.
(ಸಿ) ಪಿತ್ತಕೋಶವು ತಾತ್ಕಾಲಿಕವಾಗಿ ಪಿತ್ತರಸವನ್ನು ಹಿಡಿ ದಿಟ್ಟುಕೊಂಡಿರುತ್ತದೆ. (ಸರಿ/ತಪ್ಪು)
ಸರಿ.
(ಡಿ) ಮೆಲುಕು ಹಾಕುವ ಪ್ರಾಣಿಗಳು ನುಂಗಿರುವ ಹುಲ್ಲನ್ನು ಬಾಯಿಗೆ ಪುನಃ ತಂದುಕೊಳ್ಳುತ್ತವೆ ಮತ್ತು ಅದನ್ನು ಸ್ವಲ್ಪ ಸಮಯದವರೆಗೆ ಜಗಿಯುತ್ತವೆ. (ಸರಿ/ತಪ್ಪು)
ಸರಿ
3. ಕೆಳಗೆ ಕೊಟ್ಟಿರುವ ಪ್ರತಿಯೊಂದು ವಾಕ್ಯಕ್ಕೆ ಸರಿ ಉತ್ತರವನ್ನು ( ) ಚಿಹ್ನೆಯಿಂದ ಗುರ್ತಿಸಿ.
(ಎ) ಕೊಬ್ಬು ಸಂಪೂರ್ಣವಾಗಿ ಇಲ್ಲಿ ಜೀರ್ಣಗೊಳ್ಳುತ್ತದೆ.
i) ಜಠರ
ii) ಬಾಯಿ
iii) ಸಣ್ಣ ಕರುಳು
iv) ದೊಡ್ಡ ಕರುಳು
ಉತ್ತರ : –iii) ಸಣ್ಣ ಕರುಳು
(ಬಿ) ಜೀರ್ಣಗೊಳ್ಳದ ಆಹಾರದಿಂದ ನೀರು ಮುಖ್ಯ ವಾಗಿ ಇಲ್ಲಿ ಹೀರಲ್ಪಡುತ್ತದೆ.
i) ಜಠರ
ii) ಅನ್ನನಾಳ
iii) ಸಣ್ಣ ಕರುಳು
iv) ದೊಡ್ಡ ಕರುಳು
ಉತ್ತರ : –iv) ದೊಡ್ಡ ಕರುಳು
5. ವಿಲ್ಲೈ ಗಳೆಂದರೇನು ? ಅವುಗಳು ಎಲ್ಲಿವೆ ಮತ್ತು ಅವು ಗಳ ಕಾರ್ಯವೇನು ?
ಉತ್ತರ : –ಸಣ್ಣ ಕರುಳಿನ ಒಳ ಭಿತ್ತಿ (ಗೋಡೆ)ಯಲ್ಲಿ ಸಾವಿರಾರು ಬೆರಳಿನಾಕಾರದ ರಚನೆಗಳಿವೆ. ಈ ರಚನೆಗಳನ್ನು ವಿಲ್ಲೈ ಎನ್ನುವರು. ಜೀರ್ಣಗೊಂಡ ಆಹಾರವನ್ನು ವಿಲ್ಲೈ ಗಳ ಮೇಲೈ ಹೀರಿಕೊಳ್ಳುತ್ತೆ. ವಿಲ್ಲೈ ಗಳಿಂದಾಗಿ ಆಹಾರ ಹೀರಿ ಕೆಯ ಮೇಲ್ಮಯ ವಿಸ್ತೀರ್ಣವು ಹೆಚ್ಚಾಗಿರುತ್ತದೆ.
6. ಪಿತ್ತರಸವು ಎಲ್ಲಿ ಉತ್ಪತ್ತಿಯಾಗುತ್ತದೆ ? ಆಹಾರದ ಯಾವ ಘಟಕವನ್ನು ಜೀರ್ಣಿಸಲು ಅದು ಸಹಾಯ ಮಾಡುತ್ತದೆ?
ಉತ್ತರ : –ಪಿತ್ತರಸವು ದೇಹದ ಅತ್ಯಂತ ದೊಡ್ಡ ಗ್ರಂಥಿಯಾದ ಯಕೃತ್ನಲ್ಲಿ ಉತ್ಪತ್ತಿಯಾಗುತ್ತದೆ. ಪಿತ್ತರಸವು ಕೊಬ್ಬಿನ ಜೀರ್ಣಕ್ರಿಯೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಪಿತ್ತರಸವು ಕೊಬ್ಬನ್ನು ಜೀರ್ಣಿಸುತ್ತದೆ.
7. ಮನುಷ್ಯರಿಂದ ಜೀರ್ಣಿಸಲು ಆಗದ, ಆದರೆ ಮೆಲುಕು ಹಾಕುವ ಪ್ರಾಣಿಗಳಿಂದ ಜೀರ್ಣಿಸಲಾಗುವ ಕಾರ್ಬೊ ಹೈಡೇಟ್ನ ವಿಧವನ್ನು ಹೆಸರಿಸಿ. ಇದಕ್ಕೆ ಕಾರಣವೇ ನೆಂಬುದನ್ನೂ ತಿಳಿಸಿ.
ಉತ್ತರ : –ಮೆಲುಕು ಹಾಕುವ ಪ್ರಾಣಿಗಳಿಂದ ಮಾತ್ರ ಜೀರ್ಣ ವಾಗುವ ಕಾರ್ಬೊಹೈಡ್ರೆಟ್ ಎಂದರೆ ಸೆಲ್ಯುಲೋಸ್. ಆ ಪ್ರಾಣಿಗಳ ಸೀಕಮ್ನಲ್ಲಿರುವ ಕೆಲವು ಬ್ಯಾಕ್ಟಿರಿಯಾಗಳು ಮಾತ್ರ ಆಹಾರದಲ್ಲಿರುವ ಸೆಲ್ಯುಲೋಸ್ ಅನ್ನು ಜೀರ್ಣಿಸು ತ್ತವೆ. ಆದರೆ ಇವು ಮನುಷ್ಯರಲ್ಲಿ ಇರುವುದಿಲ್ಲವಾದ್ದರಿಂದ ಜೀರ್ಣಿಸಲು ಆಗುವುದಿಲ್ಲ.
8. ನಮಗೆ ಗ್ಲಕೋಸ್ನಿಂದ ತಕ್ಷಣ ಶಕ್ತಿ ಸಿಗುವುದು. ಏಕೆ ?
ಉತ್ತರ : –ನಮಗೆ ಗ್ಲುಕೋಸ್ನಿಂದ ತಕ್ಷಣ ಶಕ್ತಿ ದೊರಕುವುದು. ಏಕೆಂದರೆ ಜೀವಕೋಶಗಳಲ್ಲಿ ಗ್ಲುಕೋಸ್ ಆಮ್ಲಜನಕ ದೊಂದಿಗೆ ವರ್ತಿಸಿ ನೀರು ಮತ್ತು ಶಕ್ತಿಯನ್ನು ಬಿಡುಗಡೆ ಮಾಡುವುದು.
9. ಜೀರ್ಣನಾಳದ ಯಾವ ಭಾಗವು ಇದರಲ್ಲಿ ಭಾಗಿಯಾಗಿದೆ :
(i)ಆಹಾರ ಹೀರಿಕೆ ಸಣ್ಣ ಕರುಳು (ಭಿತ್ತಿಯಲ್ಲಿರುವ ರಕ್ತನಾಳಗಳು)
(ii) ಆಹಾರವನ್ನು ಜಗಿಯುವುದು ಬಾಯಿ (ದವಡೆ ಹಲ್ಲುಗಳು)
(ii) ಬ್ಯಾಕ್ಟಿರಿಯಾಗಳನ್ನು ಕೊಲ್ಲುವುದು ಜಠರ (ಹೈಡೋ ಕ್ಲೋರಿಕ್ ಆಮ್ಲ)
(iv) ಆಹಾರದ ಸಂಪೂರ್ಣ ಜೀರ್ಣಕ್ರಿಯೆ ಸಣ್ಣ ಕರುಳು
(v) ಮಲ ಉತ್ಪತ್ತಿ ದೊಡ್ಡ ಕರುಳು
10. ಪೋಷಣೆಯಲ್ಲಿ ಮನುಷ್ಯ ಹಾಗೂ ಅಮೀಬಾಕ್ಕಿರುವ ಒಂದು ಹೋಲಿಕೆ ಮತ್ತು ಒಂದು ವ್ಯತ್ಯಾಸವನ್ನು ಬರೆಯಿರಿ.
ಉತ್ತರ : –ಹೋಲಿಕೆಗಳು
ಅಮೀಬಾ:-ಆಹಾರವು ಜೀರ್ಣವಾಗಲು, ಅಮೀಬಾ ಜೀರ್ಣರಸಗಳನ್ನು : ಆಹಾರ ರಸದಾನಿಯ ಮೇಲೆ ಸುರಿಸುತ್ತದೆ. ಆಗ ಆಹಾರವು 5 ವಿಭಜಿಸಿ ಸರಳ ಅಣುಗಳಾಗಿ ಮಾರ್ಪಾಡಾಗುತ್ತವೆ
ಮನುಷ್ಯ:-ಮನುಷ್ಯರ ದೇಹದಲ್ಲಿ ಜಠರದ ಒಳಗೋಡೆಗಳಲ್ಲಿ ಮತ್ತು ಸಣ್ಣ ಕರುಳಿನ ಭಿತ್ತಿ ಯಲ್ಲಿ ಜೀರ್ಣ ರಸಗಳು ಉತ್ಪತ್ತಿಯಾಗುತ್ತದೆ. ಇದು ಸಂಕೀರ್ಣವಾದ ಆಹಾರ ಪದಾರ್ಥವನ್ನು ಸರಳ ಅಣುಗಳಾಗಿ ಮಾರ್ಪಡಿಸುತ್ತವೆ.
ವ್ಯತ್ಯಾಸಗಳು
12. ಚಿತ್ರ 2.11 ರಜೀರ್ಣಾಂಗವ್ಯವಸ್ಥೆಯಭಾಗಗಳನ್ನುಗುರ್ತಿಸಿ.
13. ನಾವು ಕೇವಲ ಹಸಿಸೊಪ್ಪು, ತರಕಾರಿ ಅಥವಾ ಹುಲ್ಲನ್ನು ಅವಲಂಬಿಸಿ ಬದುಕಬಹುದೇ ? ಚರ್ಚಿಸಿ.
ಉತ್ತರ : – ಹಸಿಸೊಪ್ಪು ತರಕಾರಿಗಳು ಮತ್ತು ಹುಲ್ಲು ಸೆಲ್ಯುಲೋಸ್ ನಿಂದ ಸಮೃದ್ಧವಾಗಿರುತ್ತವೆ, ಸೆಲ್ಯುಲೋಸ್ ಒಂದು ರೀತಿಯ ಕಾರ್ಬೋಹೈಡ್ರೇಟ್. ಮಾನವರು ಸೇರಿದಂತೆ ಅನೇಕ ಪ್ರಾಣಿಗಳು ಸೆಲ್ಯುಲೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅವುಗಳು ಕಿಣ್ವಗಳನ್ನು ಹೊಂದಿಲ್ಲ ಮತ್ತು ನಾವು ಸೆಲ್ಯುಲೋಸ್ ಅನ್ನು ಜೀರ್ಣಿಸಿಕೊಳ್ಳಬಲ್ಲ ಕೆಲವು ವಿಶೇಷ ರೀತಿಯ ಬ್ಯಾಕ್ಟೀರಿಯಾಗಳನ್ನು ಹೊಂದಿಲ್ಲ. ಆದ್ದರಿಂದ ತರಕಾರಿಗಳನ್ನು ಕಚ್ಚಾ ರೂಪದಲ್ಲಿ ತೆಗೆದುಕೊಂಡು ನಾವು ಬದುಕಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಸೆಲ್ಯುಲೋಸ್ ಅನ್ನು ಸರಳ ಕಾರ್ಬೋಹೈಡ್ರೇಟ್ಗಳಾಗಿ ವಿಭಜಿಸುವ ಸಲುವಾಗಿ ತರಕಾರಿಗಳನ್ನು ಬೇಯಿಸುತ್ತೇವೆ. ಬೇಯಿಸಿದ ತರಕಾರಿಗಳನ್ನು ತೆಗೆದುಕೊಳ್ಳುವ ಮೂಲಕ ಮಾತ್ರ ನಾವು ಬದುಕಬಹುದು.