ಉಷ್ಣ
ಅಭ್ಯಾಸಗಳು
1.ಪ್ರಯೋಗಶಾಲಾತಾಪಮಾಪಕಮತ್ತುವೈದ್ಯಕೀಯತಾಪಮಾಪಕಗಳನಡುವಣಹೋಲಿಕೆಮತ್ತುವ್ಯತ್ಯಾಸಗಳನ್ನುತಿಳಿಸಿ.
ಉತ್ತರ :–
ಹೋಲಿಕೆಗಳು :
1) ಎರಡೂ ತಾಪಮಾಪಕಗಳು ಉದ್ದವಾದ, ಕಿರಿದಾದ ಸಮಗಾತ್ರದ ಗಾಜಿನ ನಳಿಕೆಯನ್ನು ಹೊಂದಿರುತ್ತದೆ.
ii) ಎರಡಕ್ಕೂ ಒಂದು ತುದಿಯಲ್ಲಿ ಗಾಜಿನ ಬುರುಡೆ ಇರುತ್ತದೆ.
iii) ಎರಡರಲ್ಲೂ ಪಾದರಸವಿರುತ್ತದೆ.
iv) ಎರಡರ ಮೇಲೂ ಸೆಲ್ಸಿಯಸ್ ಅಳತೆ ಪಟ್ಟಿ ಇದ್ದು ಅದನ್ನು °C ನಿಂದ ಸೂಚಿಸಿರುತ್ತಾರೆ.
ವ್ಯತ್ಯಾಸಗಳು :
1) ವೈದ್ಯಕೀಯ ತಾಪಮಾಪಕದಲ್ಲಿ 35°C ಇಂದ 42°C ವರೆಗೆ ಸೂಚಿಸಿದ್ದರೆ ಪ್ರಯೋಗ ಶಾಲಾ ತಾಪಮಾಪಕ ದಲ್ಲಿ -10°C ಇಂದ 110°C ವರೆಗೆ ಸೂಚಿಸಿರುತ್ತಾರೆ.
ii) ವೈದ್ಯಕೀಯ ತಾಪಮಾಪಕದಲ್ಲಿ ಒಂದು ವಕ್ರತೆ ಇರುತ್ತದೆ. ಇದರಿಂದ ಪಾದರಸದ ಮಟ್ಟ ತಾನಾಗಿಯೇ ಕುಸಿಯುವುದಿಲ್ಲ. ಆದ್ದರಿಂದ ಉಷ್ಣತೆ ನೋಡುವಾಗ ಬಾಯಿಂದ ತೆಗೆದು ನೋಡಬಹುದು. ಆದರೆ ಪ್ರಯೋಗ ಶಾಲಾ ತಾಪಮಾಪಕದಲ್ಲಿ ಈ ವಕ್ರತೆ ಇರುವುದಿಲ್ಲವಾದ್ದರಿಂದ ತಾಪಮಾಪಕವನ್ನು ವಸ್ತುವಿನಲ್ಲಿ ಇಟ್ಟಾಗಲೇ ಉಷ್ಣವನ್ನು ದಾಖಲಿಸಿಕೊಳ್ಳಬೇಕು.
2. ಉಷ್ಣವಾಹಕಗಳು ಮತ್ತು ಅವಾಹಕಗಳಿಗೆ ತಲಾ ಎರಡು ಉದಾಹರಣೆ ನೀಡಿ.
ಉತ್ತರ :–ವಾಹಕಗಳು: ತಾಮ್ರ, ಅಲ್ಯೂಮಿನಿಯಂ ಮತ್ತು ಕಬ್ಬಿಣ.
ಅವಾಹಕಗಳು: ಮರ, ನೀರು ಮತ್ತು ಗಾಳಿ.
3. ಬಿಟ್ಟ ಸ್ಥಳಗಳನ್ನು ತುಂಬಿ :
ಎ) ವಸ್ತುವಿನ ಉಷ್ಣತೆಯ ಮಟ್ಟವನ್ನು ನಿರ್ಧರಿಸುವುದು ಅದರ ತಾಪ.
ಬಿ) ಕುದಿಯುವ ನೀರಿನ ತಾಪವನ್ನು ವೈದ್ಯಕೀಯ ತಾಪ ಮಾಪಕದಿಂದ ಅಳೆಯಲು ಸಾಧ್ಯವಿಲ್ಲ
ಸಿ) ತಾಪವನ್ನು ಡಿಗ್ರಿ ಸೆಲ್ಸಿಯಸ್ ನಿಂದ ಅಳೆಯುವರು.
ಡಿ) ಉಷ್ಣವು ಪ್ರಸಾರವಾಗಲು ಯಾವುದೇ ಮಾಧ್ಯಮದ ಅಗತ್ಯವಿಲ್ಲದ ವಿಧಾನ ವಿಕಿರಣ.
ಇ) ಬಿಸಿ ಹಾಲಿನ ಲೋಟದಲ್ಲಿ ಅದ್ದಿದ ಒಂದು ತಣ್ಣನೆಯ ಸ್ಟೀಲ್ ಚಮಚ ತನ್ನ ಇನ್ನೊಂದು ತುದಿಗೆ ಉಷ್ಣ ಪ್ರಸಾರ ಮಾಡುವ ವಿಧಾನ ವಹನ.
ಎಫ್) ತಿಳಿಯಾದ ಬಣ್ಣದ ಬಟ್ಟೆಗಳಿಗಿಂತ ಹೆಚ್ಚು ಉಷ್ಣವನ್ನು ಹೀರುವ ಬಟ್ಟೆಗಳು ಗಾಢ ಅಥವಾ ದಟ್ಟವಾದ ಬಣ್ಣದ್ದಾಗಿರುತ್ತವೆ.
5. ಚಳಿಗಾಲದಲ್ಲಿ ಒಂದೇ ಪದರದ ದಪ್ಪ ಬಟ್ಟೆಯನ್ನು ಧರಿಸುವುದಕ್ಕಿಂತ ಹಲವು ಪದರಗಳ ಬಟ್ಟೆ ಧರಿಸುವುದು ನಮ್ಮನ್ನ ಬೆಚ್ಚಗೆ ಇಡುತ್ತದೆ. ಏಕೆ ? ಚರ್ಚಿಸಿ.
ಉತ್ತರ :–ಚಳಿಗಾಲದಲ್ಲಿ ಒಂದೇ ಪದರದ ದಪ್ಪ ಬಟ್ಟೆಯನ್ನು ಧರಿಸುವುದಕ್ಕಿಂತ ಹಲವು ಪದರಗಳ ಬಟ್ಟೆ ಧರಿಸುವುದು ನಮ್ಮನ್ನ ಬೆಚ್ಚಗೆ ಇಡುತ್ತದೆ.ಏಕೆಂದರೆ ಹಲವು ಪದರಗಳ ನಡುವೆ ಹಿಡಿದಿಡಲ್ಪಟ್ಟ ಗಾಳಿಯು ನಮ್ಮ ದೇಹದಿಂದ ಸುತ್ತ ಮುತ್ತಲಿನ ಪ್ರದೇಶಕ್ಕೆ ಉಷ್ಣದ ವರ್ಗಾವಣೆಯನ್ನು ತಡೆಯುವುದರಿಂದ ನಮಗೆ ಬೆಚ್ಚನೆಯ ಅನುಭವವಾಗುತ್ತದೆ.
6. ಚಿತ್ರ 3.13ನ್ನು ನೋಡಿ, ವಹನ, ಸಂವಹನ ಮತ್ತು ವಿಕಿರಣದಿಂದ ಎಲ್ಲೆಲ್ಲಿ ಉಷ್ಣಪ್ರಸಾರವಾಗುತ್ತಿದೆ ಗುರುತು ಮಾಡಿ.
ಉತ್ತರ :–
ಲೋಹದ ಪಾತ್ರೆಯು – ವಹನ ಕ್ರಮದಲ್ಲಿ
ಅದರೊಳಗಿರುವ ದ್ರವವು – ಸಂವಹನ ಕ್ರಮದಲ್ಲಿ
ಸುತ್ತಲೂ ಇರುವ ಪ್ರದೇಶದಲ್ಲಿ ಜ್ವಾಲೆಯಿಂದ ಪಾತ್ರೆಯ ತಳದವರೆಗೂ ವಿಕಿರಣ ಕ್ರಮದಲ್ಲಿ ಉಷ್ಣ ಪ್ರಸಾರವಾಗುತ್ತದೆ.
7. ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಮನೆಗಳ ಹೊರ ಗೋಡೆಗಳಿಗೆ ಬಿಳಿ ಬಣ್ಣ ಬಳಿಯುವುದು ಸೂಕ್ತ ವಿವರಿಸಿ.
ಉತ್ತರ :–ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಮನೆಗಳ ಹೊರ ಗೋಡೆಗಳಿಗೆ ಬಿಳಿಯ ಬಣ್ಣ ಬಳಿಯುವುದರಿಂದ ಅದು ಹೊರಗಿನ ತಾಪವನ್ನು ಹೀರಿಕೊಳ್ಳುವುದಿಲ್ಲ. ಬಿಳಿ ಬಣ್ಣವು ತನ್ನ ಮೇಲೆ ಬೀಳುವ ಬಿಸಿಲು ಮತ್ತು ತಾಪವನ್ನು ಪ್ರತಿಫಲಿಸುತ್ತದೆ. ಆಗ ಮನೆಯೊಳಗೆ ಬಿಸಿಲಿನ ತಾಪದ ಅನುಭವವಾಗದೆ ತಂಪಾಗಿರುವುದು.
8. 30°C ನ ಒಂದು ಲೀಟರ್ ನೀರನ್ನು 50°Cನ ಒಂದು ಲೀಟರ್ ನೀರಿನೊಂದಿಗೆ ಬೆರೆಸಿದೆ. ಈ ಸಂದರ್ಭದಲ್ಲಿ ಮಿಶ್ರಣದ ತಾಪ ಎಷ್ಟಿರುತ್ತದೆ ?
ಎ) 80°C
ಬಿ) 50°C ಗಿಂತ ಹೆಚ್ಚು, 80°C ಗಿಂತ ಕಡಿಮೆ
ಸಿ) 20°C
ಡಿ) 30°C ನಿಂದ 50°C .
ಉತ್ತರ :–ಡಿ) 30° ನಿಂದ 500 ನಡುವೆ.
9. 40°C ನ ಒಂದು ಕಬ್ಬಿಣದ ಗುಂಡನ್ನು 40°C ನ ನೀರಿರುವ ಪಾತ್ರೆಗೆ ಹಾಕಿದರೆ ಉಷ್ಣವು
ಎ) ಕಬ್ಬಿಣದ ಗುಂಡಿನಿಂದ ನೀರಿಗೆ ಹರಿಯುತ್ತದೆ.
ಬಿ) ಕಬ್ಬಿಣದ ಗುಂಡಿನಿಂದ ನೀರಿಗಾಗಲಿ ಅಥವಾ ನೀರಿ ನಿಂದ ಕಬ್ಬಿಣದ ಗುಂಡಿಗಾಗಲೀ ಹರಿಯುವುದಿಲ್ಲ.
ಸಿ) ನೀರಿನಿಂದ ಕಬ್ಬಿಣದ ಗುಂಡಿಗೆ ಹರಿಯುತ್ತದೆ.
ಡಿ) ಎರಡರ ತಾಪವೂ ಹೆಚ್ಚಾಗುತ್ತದೆ.
ಉತ್ತರ :– ಬಿ) ಕಬ್ಬಿಣದ ಗುಂಡಿನಿಂದ ನೀರಿಗಾಗಲಿ ಅಥವಾ ನೀರಿನಿಂದ ಕಬ್ಬಿಣದ ಗುಂಡಿಗಾಗಲೀ ಹರಿಯುವುದಿಲ್ಲ.
10. ಮರದ ಚಮಚವನ್ನು ಒಂದು ಕಪ್ ಐಸ್ಕ್ರೀಮ್ನಲ್ಲಿ ಅದ್ದಿದಾಗ ಅದರ ಇನ್ನೊಂದು ತುದಿ
ಎ) ವಹನ ಕ್ರಿಯೆಯಿಂದ ತಣ್ಣಗಾಗುತ್ತದೆ.
ಬಿ) ಸಂವಹನ ಕ್ರಿಯೆಯಿಂದ ತಣ್ಣಗಾಗುತ್ತದೆ.
ಸಿ) ವಿಕಿರಣ ಕ್ರಿಯೆಯಿಂದ ತಣ್ಣಗಾಗುತ್ತದೆ.
ಡಿ) ತಣ್ಣಗಾಗುವುದಿಲ್ಲ.
ಉತ್ತರ :–ಡಿ) ತಣ್ಣಗಾಗುವುದಿಲ್ಲ.
11. ಸಾಮಾನ್ಯವಾಗಿ ಕಲೆರಹಿತ ಉಕ್ಕಿನ (stainless steel) ಬಾಣಲೆಗಳಿಗೆ ತಾಮ್ರದ ತಳ ಕಟ್ಟುವರು. ಇದಕ್ಕೆ ಕಾರಣ
ಎ) ತಾಮ್ರದ ತಳವು ಬಾಣಲೆ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
ಬಿ) ಇಂತಹ ಬಾಣಲೆಗಳು ಬಣ್ಣ ಬಣ್ಣವಾಗಿ ಕಾಣಿಸುತ್ತವೆ.
ಸಿ) ತಾಮ್ರವು ಕಲೆರಹಿತ ಉಕ್ಕಿಗಿಂತ ಉತ್ತಮ ಉಷ್ಣವಾಹಕ.
ಡಿ) ಕಲೆರಹಿತ ಉಕ್ಕಿಗಿಂತ ತಾಮ್ರವನ್ನು ಸ್ವಚ್ಛಗೊಳಿಸಿವುದು ಸುಲಭ.
ಉತ್ತರ :–ಸಿ) ತಾಮ್ರವು ಕಲೆರಹಿತ ಉಕ್ಕಿಗಿಂತ ಉತ್ತಮ ಉಷ್ಣವಾಹಕ.