ಅಭ್ಯಾಸ
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1) ಕಾವೇರಿ ಹೇಗೆ ಹೊಳೆಯುತ್ತಾಳೆ?
ಉತ್ತರ:- ಕಾವೇರಿಯು, ಮುಗಿಲಲ್ಲಿ ಮಿಂಚು ಹೊಳೆಯುವಂತೆ ಹೊಳೆ-ಹೊಳೆ ಹೊಳೆಯುವಳು.
2) ಸೋಲು ಸಾವರಿಯದವರು ಯಾರು?
ಉತ್ತರ:-ಸೋಲು ಸಾವರಿಯವರು ಕೊಡವರು.
3) ಕೊಡಗು ಯಾವ ಗಿರಿಯಿಂದ ಯಾವ ಗಿರಿಯ ಪರ್ಯಂತ ಬೆಳೆದಿದೆ ?
ಉತ್ತರ:-ಕೊಡಗು, ಬೊಮ್ಮಗಿರಿಯಿಂದ-ಪುಷ್ಪಗಿರಿ ಪರ್ಯಂತ ಬೆಳೆದಿದೆ.
4) ಕಾವೇರಿಯ ತವರ್ಮತೆ ಯಾವುದು?
ಉತ್ತರ:-‘ಕೊಡಗು’, (ಕೊಡಗಿನ ತಲಕಾವೇರಿ) ಕಾವೇರಿಯ ತವರ್ಮನೆ.
5) ಯಾವ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು?
ಉತ್ತರ:-ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು.
ಆ) ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿ:
೧) ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ?
೨)ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
ಸುಮ್ಮನಿತ್ತರೊ ದಟ್ಟಿಕುಪ್ಪಸ? ಹಾಡುಹುತ್ತರಿಗೇಳಿರಿ!
ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ!
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ಭಾಷಾಭ್ಯಾಸ
ಅ) ಮಾದರಿಯಂತೆ ಬಿಡಿಸಿ ಬರೆಯಿರಿ:
ಮಾದರಿ : ಕನಿಕರ = ಕ್+ಅ, ನ್+ಇ, ಕ್+ಅ, ರ್+ಅ.
೧) ಸಹಕಾರ = ಸ+ಅ, ಹ್+ಆ, ಕ+ಆ, ರ್+ ಅ
೨) ಪರಿಣತಿ = ಪ್+ಅ, ರ್ +ಇ, ಣ್+ಅ. ತ್+ಇ
೩) ಚೇತನ=ಚ್+ ಏ, ತ್+ ಅ, ನ್ +ಅ
೪) ಪ್ರವಾಸ = ಪ್+ರ್+ಅ, ವ್+ಆ, ಸ್+ಅ.
೫) ಭಯಾನಕ = ಭ್+ಅ, ಯ್+ಆ, ನ್+ಅ, ಕ್+ಅ
ಆ. ಕೆಳಗಿನ ಗುಣಿತಾಕ್ಷರಗಳನ್ನು ಕೂಡಿಸಿ ಬರೆಯಿರಿ.
1. ಸ್+ಅ ರ್+ಓ ವ್+ಅ ರ್+ಅ =ಸರೋವರ
2. ಚ್+ಅ ಳ್+ಉ ವ್+ಅ ಳ್+ಇ = ಚಳುವಳಿ
3. ರ್+ಅ ಹ್+ಅ ದ್+ಆ ರ್+ಇ =ರಹದಾರಿ
4. ಜ್+ಆ ಗ್+ಋ ತ್+ಇ =ಜಾಗೃತಿ
5. ಹ್+ಇ ಮ್+ಆ ಲ್+ಅ ಯ್+ಅ =ಹಿಮಾಲಯ