ಸೀನ ಸೆಟ್ಟರು ನಮ್ಮ ಟೀಚರು
ಅಭ್ಯಾಸ ಪ್ರಶ್ನೆಗಳು
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಮಾಂಡವಿ ಯಾರನ್ನು ಪರಿಚಯಿಸಿದರು?
ಉತ್ತರ:-ಮಾಂಡವಿ ಸೀನಸೆಟ್ಟರನ್ನು ಪರಿಚಯಿಸಿದರು.
2. ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು?
ಉತ್ತರ:-ಸೀನಸೆಟ್ಟರು ತಮ್ಮ ಜಮೀನಿನಲ್ಲಿ ಸಾಸಿವೆಯನ್ನು ಬೆಳೆಯುತ್ತಿದ್ದರು.
3. ಮಕ್ಕಳು ಏನು ಹಾಕಿಕೊಂಡು ಗದ್ದೆಗೆ ಇಳಿದರು?
ಉತ್ತರ:-ಮಕ್ಕಳು ಕಂಬಳಿಗೊಪ್ಪೆ ಹಾಕಿಕೊಂಡು ಗದ್ದೆಗೆ ಇಳಿದರು.
4. ಹಾಲಪ್ಪನ ಕಾಲನ್ನು ಏನು ಕಚ್ಚಿತು?
ಉತ್ತರ:-ಹಾಲಪ್ಪನ ಕಾಲನ್ನು ಒಂದು ನೀರಾವು ಕಚ್ಚಿತು.
5. ಮನೆಯ ಅಟ್ಟ ಮಕ್ಕಳಿಗೆ ಯಾವ ಟವರ್ ಆಗಿ ಪರಿವರ್ತಿತಗೊಂಡಿತ್ತು?
ಉತ್ತರ:-ಮನೆಯ ಅಟ್ಟ ಮಕ್ಕಳಿಗೆ ಗದ್ದೆ ವೀಕ್ಷಣೆಯ ಟವರ್ ಆಗಿ ಪರಿವರ್ತಿತಗೊಂಡಿತ್ತು.
ಆ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ.
1. ಸೀನಸೆಟ್ಟರ ವೇಷ ಹೇಗಿತ್ತು?
ಉತ್ತರ:-ಸೀನಸೆಟ್ಟರು ಹಳೆಯದಾದ ಪಂಚೆಯೊಂದನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆತ್ತಿ ಕಟ್ಟಿದ್ದರು. ಚೌಕುಳೀಯ ಅಂಗಿ ಹೆಗಲ ಮೇಲೆ ಟವಲೊಂದನ್ನು ಹೊದ್ದಿದ್ದರು. ಇನ್ನೊಂದು ಹಳೆಯ ಟವಲಿನಿಂದ ತಲೆಗೆ ಲಪ್ಪಟೆ ಸುತ್ತಿಕೊಂಡಿದ್ದರು. ಅವರ ವೇಷ ಟೀಚರ್ರಂತೆ ಇರದೆ, ರೈತನಂತಿತ್ತು.
2. ಮಕ್ಕಳು ಸಸಿ ಕಿತ್ತ ಬಗೆ ಹೇಗಿತ್ತು?
ಉತ್ತರ:-ಮೊದ ಮೊದಲು ಮಕ್ಕಳಿಗೆ ಹಿಡಿ ತುಂಬಾ ಸಸಿಗಳನ್ನು ಬುಡ ಸಮೇತ ಕೀಳುವುದು ಸಾಧ್ಯವಾಗಲಿಲ್ಲ. ಅನೇಕ ಸಸಿಗಳನ್ನು ಹಾಳು ಮಾಡಿದರು. ಹತಾರು ಬಾರಿ ಕಿತ್ತು ಕಿತ್ತು ಪ್ರಯತ್ನಿಸಿದಾಗ ಕೀಳುವುದು ಸಲೀಸಾಯಿತು. ಹಾಗೆಯೇ ಅವರ ಕೆಲಸದ ವೇಗವೂ ಹೆಚ್ಚಾಯಿತು.
3. ಹಾಲಪ್ಪನಿಗೆ ಹಾವು ಕಚ್ಚಿದಾಗ ಸೀನಸೆಟ್ಟರು ಏನು ಹೇಳಿದರು?
ಉತ್ತರ:-ಹಾಲಪ್ಪನಿಗೆ ಹಾವು ಕಚ್ಚಿದಾಗ ಗಾಬರಿಯಾಯಿತು. ಆಗ ಸೀನಸೆಟ್ರು ಹೆದರಬೇಡ, ಏನೂ ಆಗವುದಿಲ್ಲ, ಅದು ಹಾವಲ್ಲ ನೀರಾವು, ವಿಷವಿರುವುದಿಲ್ಲ. ಒಂದು ಮೀನು ಕಚ್ಚಿದ ಹಾಗೆ ಆಗುತ್ತದೆ ಎಂದು ಸಮಾಧಾನ ಹೇಳಿದರು.
ಇ. ಕೆಳಗಿನ ಮಾತುಗಳನ್ನು ಯಾರು ಯಾರಿಗೆ, ಹೇಳಿದರು ತಿಳಿಸಿ:
1. ‘ಹಂಗಾರೆ ಸೀನಸೆಟ್ರು ನಮ್ಮ ಟೀಚರು’
ಉತ್ತರ:-ಈ ಮಾತುಗಳನ್ನು ತುಂಗಾ ತನ್ನ ಉಪಾಧ್ಯಾಯಿನಿ ಹಾಗೂ ವಿದ್ಯಾರ್ಥಿಗಳ ಮುಂದೆ ಹೇಳಿದಳು.
2. ‘ಮುಂಚೆ ಸಸಿಗಳನ್ನು ಕೀಳಾಣ’
ಉತ್ತರ:-ಈ ಮಾತನ್ನು ಸೀನಸೆಟ್ಟರು ಮಕ್ಕಳನ್ನು ಉದ್ದೇಶಿಸಿ ಹೇಳಿದರು.
3. ‘ಇವತ್ತು ಪೂರಾ ಕಿತ್ತೇ ಹೋಗಾಣ’
ಉತ್ತರ:-ಈ ಮಾತನ್ನು ಮಕ್ಕಳೆಲ್ಲರೂ ಒಕ್ಕೊರಲಿನಿಂದ ಸೀನಸೆಟ್ಟರಿಗೆ ಹೇಳಿದರು.
4. ‘ಕೈ ಎಲ್ಲಿಗ್ ಹೋತು’
ಉತ್ತರ:-ಈ ಮಾತನ್ನು ಯಶೋಧ ಮಕ್ಕಳೆಲ್ಲರಿಗೂ ಆಟ ಆಡಿಸುವಾಗ ಕೇಳಿದ ಮಾತು.
ಚಟುವಟಿಕೆ
ಅ) ಶಾಲೆಯಿಂದ ಹೊರಗೆ ನೀವು ಕಲಿಯಬಹುದಾದ ವಿಷಯಗಳನ್ನು ಪಟ್ಟಿಮಾಡಿ:
ಉತ್ತರ:-ಶಾಲೆಯಿಂದ ಹೊರಗೆ ಕಲಿಯ ಬಹುದಾದ ವಿಷಯ ಗಳೆಂದರೆ ಗ್ರಾಮಗಳಲ್ಲಿ ಮಕ್ಕಳು ಹೊಲ-ಗದ್ದೆ-ತೋಟಗಳ ಬಗ್ಗೆ, ಕೃಷಿ ಪದ್ಧತಿಯ ಬಗ್ಗೆ ಬೆಳೆಗಳ ಬಗ್ಗೆ ತಿಳಿಯುವರು. ನಗರಗಳಲ್ಲಿ ವಿವಿಧ ರೀತಿಯ ಅಂಗಡಿಗಳು ದವಸ-ಧಾನ್ಯ ಅಂಗಡಿ ತರಕಾರಿ ಅಂಗಡಿ, ಆಸ್ಪತ್ರೆಗಳು, ಬಟ್ಟೆ ಅಂಗಡಿ, ಸೈಕಲ್ ಷಾಪ್, ಗ್ಯಾರೇಜ್, ದೇವಾಲಯ, ಹಾಲಿನ ಬೂತ್, ಪುಸ್ತಕದ ಅಂಗಡಿ, ಸ್ಟೇಷನರು, ಬಸ್ ಸ್ಟಾಪ್, ಹೋಟೆಲುಗಳು, ಶಾಲೆಗಳು, ಆಟದ ಮೈದಾನ, ಉದ್ಯಾನವನಗಳು, ವಿದ್ಯಾರ್ಥಿಗಳು ವ್ಯಾಪಾರಿಗಳ ವೇಷ-ಭೂಷಣ, ನಡೆ-ನುಡಿ, ಮುಂತಾದವುಗಳು ವಿಭಿನ್ನ ವಿಭಿನ್ನ ವಾತಾವರಣವನ್ನು ನೋಡಿ ಕಲಿಯ ಬಹುದು.
ಆ. ಕೆಳಗೆ ನೀಡಿರುವ ಪದಗಳಲ್ಲಿ ಬೇಸಾಯಕ್ಕೆ ಸಂಬಂಧಿಸಿದ ಪದಗಳನ್ನು ಮತ್ತು ಶಾಲೆಗೆ ಸಂಬಂಧಿಸಿದ ಪದಗಳನ್ನು
ಪ್ರತ್ಯೇಕ ಪಟ್ಟಿಮಾಡಿ ಬರೆಯಿರಿ:
ಗದ್ದೆ, ಬೆಂಚು, ಸಸಿ, ಕಪ್ಪು ಹಲಗೆ, ನಾಟಿ, ಪೈರು, ಪುಸ್ತಕ, ಪೆನ್ನು, ಜಮೀನು, ಮೇಷ್ಟ್ರು, ರೈತ, ಕೆಸರು, ಗಂಟೆ, ತೆನೆ, ಗೊಬ್ಬರ, ಸೀಮೆಸುಣ್ಣ, ಮನೆಕೆಲಸ.
ಬೇಸಾಯಕ್ಕೆ ಸಂಬಂಧಪಟ್ಟ ಪದಗಳು
ಗದ್ದೆ, ಸಸಿ, ನಾಟಿ, ಪೈರು, ಜಮೀನು, ರೈತ, ಕೆಸರು, ತೆನೆ, ಗೊಬ್ಬರ.
ಶಾಲೆಗೆ ಸಂಬಂಧಪಟ್ಟ ಪದಗಳು
ಬೆಂಚು, ಕಪ್ಪು ಹಲಗೆ, ಪುಸ್ತಕ, ಪೆನ್ನು, ಮೇಷ್ಟ್ರು, ಗಂಟೆ, ಸೀಮೆಸುಣ್ಣ, ಮನೆಕೆಲಸ.
ಪೂರಕ ಮಾಹಿತಿ
ಅ. ಕೆಳಗೆ ನೀಡಿರುವ ಬಂಡಿ ಆಟದಲ್ಲಿ ಬಿಟ್ಟ ಪದಗಳನ್ನು ತುಂಬಿರಿ:
ಅಚ್ಚಚ್ಚು, ಬೆಲ್ಲದಚ್ಚು,
ಅಲ್ಲಿನೋಡು, ಇಲ್ಲಿನೋಡು,
ಸಂಪಂಗಿ ಮರದಲಿ ಗುಂಪುನೋಡು,
ಯಾವ ಗುಂಪು?ಕಾಗೆ ಗುಂಪು .
ಯಾವ ಕಾಗೆ? ಕಪ್ಪು ಕಾಗೆ,
ಯಾವ ಕಪ್ಪು? ಇದ್ದಿಲ ಕಪ್ಪು,
ಯಾವ ಇದ್ದಿಲು? ಮರದ ಇದ್ದಿಲು.
ಯಾವ ಮರ? ಮಾವಿನ ಮರ,
ಯಾವ ಮಾವು? ಸಿಹಿ ಮಾವು,
ಯಾವ ‘ಸಹಿ?ಸಕ್ಕರೆ ಸಿಹಿ .
ಯಾವ ಸಕ್ಕರೆ? ಮಂಡ್ಯ ಸಕ್ಕರೆ .
ಯಾವ ಮಂಡ್ಯ, ಕರ್ನಾಟಕದ ಮಂಡ್ಯ,
ಯಾವ ಕರ್ನಾಟಕ ನಮ್ಮ ವಿಶಾಲ ಕರ್ನಾಟಕ.
ಅಭ್ಯಾಸ
ಉದಾಹರಣೆಯಲ್ಲಿ ನೀಡಿರುವಂತೆ ಕೆಳಗಿನ ವಾಕ್ಯಗಳಲ್ಲಿ ಸರ್ವನಾಮಗಳನ್ನು ಗುರುತಿಸಿ, ಅವು ಯಾವ ರೀತಿಯ ಸರ್ವನಾಮಗಳೆಂದು ತಿಳಿಸಿ.