ಅಭ್ಯಾಸ ಪ್ರಶ್ನೆಗಳು
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :
1. ಸ್ವಾತಂತ್ರ್ಯಸ್ವರ್ಗದಲ್ಲಿ ಅಭಿಮಾನಧನವೆನಿಪ ಮಸ್ತಕವು ಹೇಗಿರುತ್ತದೆ?
ಉತ್ತರ:-ಸ್ವಾತಂತ್ರ್ಯಸ್ವರ್ಗದಲ್ಲಿ ಅಭಿಮಾನಧನವೆನಿಪ ಮಸ್ತಕವು ಜಗ್ಗದೆ, ಕುಗ್ಗದೆ, ತಗ್ಗದೆ, ಬಗ್ಗದೆ ನೀಟಾಗಿದೆ.
2. ಕವಿಯು ಬಾಳು ಹೇಗಿರಬೇಕೆಂದು ಆಶಿಸಿದ್ದಾರೆ?
ಉತ್ತರ:-ಕವಿಯ ಬಾಳು ಹೇಗಿರಬೇಕೆಂದರೆ ಅವರ ಅರಿವು ಸರ್ವ ಸ್ವತಂತ್ರವಾಗಿ ಸಂಕುಚಿತತೆ ನಾಶವಾಗಿ, ವಿಶ್ವ ಖಂಡ ಖಂಡವಾಗದೆ ಒಂದಾಗಿ ಚೆನ್ನಾಗಿ ಬಾಳಬೇಕು. ಅಂತಹ ನಾಡು ಎಂಬ ಸ್ವಾತಂತ್ರ್ಯ ಸ್ವರ್ಗದಲ್ಲಿರಬೇಕು ಎಂದು ಆಶಿಸುತ್ತಾರೆ.
3. ಕವಿಯು ಸಂಪ್ರದಾಯದ ಅನಿಷ್ಟ ರೂಢಿ ನಿಯಮಗಳನ್ನು ಏನೆಂದು ಕರೆಯುತ್ತಾರೆ?
ಉತ್ತರ:-ಸಂಪ್ರದಾಯದ ಅನಿಷ್ಟ ರೂಢಿ-ನಿಯಮಗಳು ನಿರ್ಜನಭರಿತ ಮರುಭೂಮಿಯಂತೆ, ಅಲ್ಲಿ ಸುವಿಚಾರಗಳೆಂಬ ವಾಹಿನಿಯು ಹರಿಯದಿದ್ದರೆ ಮುಂದುವರಿಯುವುದು ಹೇಗೆ? ಎಂದಿದ್ದಾರೆ.
4. ಧ್ರುವತಾರೆ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ:-ಎಲ್ಲಿ ವಿಶಾಲತೆಯ ನಡೆ-ನುಡಿಗಳಿರುವುದೋ, ಮನಸ್ಸು ಅರಳುವ ಮಾತು ಇರುವುದೋ, ಅಲ್ಲಿ ನಿನ್ನ- ಪ್ರೀತಿ, ದಯೆ, ಕೃಪೆಯಿದ್ದರೆ, ನಿನ್ನನ್ನೇ ಧ್ರುವತಾರೆ ಎಂದು ಕರೆಯುತ್ತಾರೆ.
ಆ. ಕೆಳಗಿನ ಪದಗಳಿಗೆ ಪದ್ಯದಲ್ಲಿರುವ ಸಮಾನಾರ್ಥಕ ಪದಗಳನ್ನು ಬರೆಯಿರಿ:
1. ಜಗ- ಜಗತ್ತು
2. ಸತ್ಯ –ನಿಜ
3. ಮರಳುಗಾಡು –ಮರುಭೂಮಿ
4. ಪ್ರವಾಹ –ಜೋರಾಗಿ ಹರಿಯುವುದು
5. ಒಲವು– ಪ್ರೇಮ
6. ಅನುಗ್ರಹ – ಕೃಪೆ
ಇ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ:
೧. ಸ್ವತಂತ್ರ: ಸ್ವತಂತ್ರವೇ ಸ್ವರ್ಗವಾಗಿದೆ.
೨. ವಿಶಾಲ : ಆಕಾಶ ತುಂಬಾ ವಿಶಾಲವಾಗಿದೆ.
೩. ನವೀನ : ನಿತ್ಯವು ನವ ನವೀನ ಅವಕಾಶವಾಗಿದೆ.
೪. ಕಠಿಣ : ಕಠಿಣ ಸಮಯವು ನಮ್ಮನು ಪರೀಕ್ಷಿಸುತ್ತದೆ.
೫. ಮಧುರ : ನಾಳೆಯ ಮಧುರವಾದ ದಿನಕ್ಕೆ ಈ ದಿನ ಶ್ರಮಪಡಬೇಕು.
ಭಾಷಾಭ್ಯಾಸ
ಅ. ಕೆಳಗೆ ನೀಡಿರುವ ವಾಕ್ಯಗಳಲ್ಲಿರುವ ತಪ್ಪನ್ನು ಸರಿಪಡಿಸಿ ಬರೆಯಿರಿ.
1. ಅಕ್ಕಿ ಹಕ್ಕಿಯನ್ನು ತಿನ್ನುತ್ತಿದೆ.
ಹಕ್ಕಿ ಅಕ್ಕಿಯನ್ನು ತಿನ್ನುತ್ತಿದೆ.
2. ಅನ್ನ ಅಣ್ಣವನ್ನು ಉನ್ನುತ್ತಾನೆ.
ಅಣ್ಣ ಅನ್ನವನ್ನು ಉಣ್ಣುತ್ತಾನೆ.
3. ಬಾಲೆಯ ಹಣ್ಣನ್ನು ಬಾಳೆಯು ತಿಂದಳು.
ಬಾಳೆಯ ಹಣ್ಣನ್ನು ಬಾಲೆಯು ತಿಂದಳು.
4. ನಮ್ಮ ಸಾಲೆಯ ಆಸಾ ಹಶುರು ಬನ್ನದ ಪುಸ್ತಕ ತಂದಿದ್ದಾಳೆ.
ನಮ್ಮ ಶಾಲೆಯ ಆಶಾ ಹಸುರು ಬಣ್ಣದ ಪುಸ್ತಕ ತಂದಿದ್ದಾಳೆ.
ವಚನಗಳು
ಅಭ್ಯಾಸ :
ಅ) ಮುಂದೆ ನೀಡಿರುವ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳದಲ್ಲಿ ಆವರಣದಲ್ಲಿ ನೀಡಿರುವ ಪದಗಳ ಬಹುವಚನ ರೂಪ ಬರೆಯಿರಿ.
೧. ನಮ್ಮ ಮನೆಯಲ್ಲಿ ಎಂಟು ದನಗಳು ಇವೆ. (ದನ, ಇದೆ)
೨. ನಮ್ಮ ತರಗತಿಯಲ್ಲಿ ಅರವತ್ತು ಹುಡುಗರು ಇದ್ದಾರೆ. (ಹುಡುಗ. ಇದ್ದಾನೆ) .
೩. ಆರನೆಯ ತರಗತಿಯಲ್ಲಿ ಇಪ್ಪತ್ತು ಹುಡುಗಿಯರು ಇದ್ದಾರೆ. (ಹುಡುಗಿ, ಇದ್ದಾಳೆ)
ಅಭ್ಯಾಸ-೧
ಅ) ಏಕವಚನ – ಬಹುವಚನ.
೧. ಜಿಲ್ಲೆ – ಜಿಲ್ಲೆಗಳು
೨. ಊರು ಊರುಗಳು
೩. ಕೊಠಡಿ ಕೊಠಡಿಗಳು
೪. ನಾಯಿ – ನಾಯಿಗಳು
ಆ) ಏಕವಚನ – ಬಹುವಚನ
೧. ಹಕ್ಕಿ – ಹಕ್ಕಿಗಳು
೨. ನದಿ ನದಿಗಳು
೩. ಬೆಟ್ಟ – ಬೆಟ್ಟಗಳು
೪. ಗುಡ್ಡ – ಗುಡ್ಡಗಳು
ಅಭ್ಯಾಸ – ೨
ಅ) ಏಕವಚನ – ಬಹುವಚನ
೧. ಅಣ್ಣ – ಅಣ್ಣಂದಿರು
೨. ಚಿಕ್ಕಮ್ಮ – ಚಿಕ್ಕಮ್ಮಂದಿರು
೩. ದೊಡ್ಡಮ್ಮ – ದೊಡ್ಡಮ್ಮಂದಿರು
ಆ) ಏಕವಚನ – ಬಹುವಚನ
೧. ಅತ್ತೆ – ಅತ್ತೆಯಂದಿರು
೨. ತಮ್ಮ – ತಮ್ಮಂದಿರು
೩. ಭಾವ – ಭಾವಂದಿರು