1. ಸಸ್ಯಗಳಲ್ಲಿ ಪೋಷಣೆ
ಅಭ್ಯಾಸಗಳು
1. ಜೀವಿಗಳು ಆಹಾರವನ್ನು ಏಕೆ ಸೇವಿಸಬೇಕು?
ಉತ್ತರ:- ಜೀವಿಗಳು ಬದುಕಲು, ದೇಹದ ಬೆಳವಣಿಗೆಗೆ ಹಾಗೂ ಶಕ್ತಿಯನ್ನು ಪಡೆಯಲು ಆಹಾರವನ್ನು ಸೇವಿಸಬೇಕು.
ಜೈವಿಕ ಕ್ರಿಯೆಗಳಿಗೆ ಬೇಕಾದ ಶಕ್ತಿಯನ್ನು ಪಡೆಯಲು ಜೀವಿಗಳ ದೇಹ ನಿರ್ಮಾಣಕ್ಕೆ ಮತ್ತು ಹಾನಿಗೊಳಗಾದ ದೇಹದ ಭಾಗಗಳ ದುರಸ್ತಿಗೆ ಆಹಾರವನ್ನು ಸೇವಿಸಬೇಕು.
2. ಪರಾವಲಂಬಿ ಮತ್ತು ಕೊಳೆತಿನಿಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ.
ಉತ್ತರ:-ಪರಾವಲಂಬಿಗಳು : ಪರಾವಲಂಬಿಗಳು ಬೇರೆ ಸಸ್ಯ/ಪ್ರಾಣಿಗಳಿಂದ ಆಹಾರವನ್ನು ಪಡೆಯುತ್ತವೆ. ಉದಾ: ಕಸ್ಕ್ಯೂಟ, ಜಂತು ಹುಳು.
ಕೊಳೆತಿನಿಗಳು: ಕೊಳೆತಿನಿಗಳು ಸತ್ತ ಮತ್ತು ಕೊಳೆಯುತ್ತಿರುವ ವಸ್ತುಗಳಿಂದ ಆಹಾರವನ್ನು ಪಡೆದುಕೊಳ್ಳುತ್ತವೆ. ಉದಾ: ಶಿಲೀಂಧ್ರಗಳು, ಅಣಬೆ.
3.ಎಲೆಗಳಲ್ಲಿ ಇಷ್ಟದ ಇರುವಿಕೆಯನ್ನು ನೀವು ಹೇಗೆ ಪರೀಕ್ಷಿಸುವಿರಿ?
ಉತ್ತರ:- ಈ ಚಟುವಟಿಕೆಗೆ ಒಂದು ಎಲೆ, ಮದ್ಯಸಾರ (spirit), ಬೀಕರ್, ಪ್ರನಾಳ, ಜ್ವಾಲಕ (burner), ನೀರು, ಗಾಜಿನ ತಟ್ಟೆ ಮತ್ತು ಆಯೋಡಿನ್ ದಾವಣದ ಅಗತ್ಯ ನಮಗಿದೆ.
ಪ್ರನಾಳದಲ್ಲಿ ಒಂದು ಎಲೆಯನ್ನು ತೆಗೆದುಕೊಳ್ಳಿ. ಎಲೆಯು ಸಂಪೂರ್ಣವಾಗಿ ಮುಳುಗುವಂತೆ ಮದ್ಯಸಾರವನ್ನು ಸುರಿಯಿರಿ.
ಈಗ ಅರ್ಧಭಾಗದಷ್ಟು ನೀರು ತುಂಬಿರುವ ಬೀಕರಿನಲ್ಲಿ ಪ್ರನಾಳವನ್ನಿಡಿ. ಎಲೆಯಲ್ಲಿರುವ ಎಲ್ಲ ಹಸಿರು ಬಣ್ಣ ಪ್ರನಾಳದಲ್ಲಿರುವ ಮದ್ಯಸಾರಕ್ಕೆ ಪೂರ್ಣವಾಗಿ ಇಳಿಯುವವರೆಗೂ ಬೀಕರನ್ನು ಬಿಸಿ ಮಾಡಿ.
ಎಲೆಯನ್ನು ಎಚ್ಚರಿಕೆಯಿಂದ ಆಚೆ ತೆಗೆಯಿರಿ ಮತ್ತು ನೀರಿನಲ್ಲಿ ತೊಳೆಯರಿ. ನಂತರ ಒಂದು ಗಾಜಿನ ತಟ್ಟೆಯ ಮೇಲೆ ಹಾಕಿ.ಸ್ವಲ್ಪ ಅಯೋಡಿನ್, ದಾವಣವನ್ನು ಅದರ ಮೇಲೆ ಸುರಿಯಿರಿ.
ಎಲೆಯು ಕಪ್ಪು ಮಿಶ್ರಿತ ನೀಲಿ ಬಣ್ಣಕ್ಕೆ ತಿರುಗುತ್ತದೆ ಇದರಿಂದ ಎಲೆಯಲ್ಲಿ ಪಿಷ್ಠವಿದೆ ಎಂದು ಗೊತ್ತಾಗುತ್ತದೆ.
4. ಹಸಿರು ಸಸ್ಯಗಳಲ್ಲಿ ಆಹಾರ ಸಂಸ್ಕರಣ ಪ್ರಕ್ರಿಯೆಯ ಸಂಕ್ಷಿಪ್ತ ವಿವರಣೆ ಕೊಡಿ.
ಉತ್ತರ:- ಎಲೆಗಳು ಕ್ಲೋರೋಫಿಲ್ ಎಂಬ ಹಸಿರು ವರ್ಣಿಕೆ ಯನ್ನು ಹೊಂದಿರುತ್ತವೆ. ಸೂರ್ಯನ ಬೆಳಕಿನಲ್ಲಿ ಇರುವ ಶಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಅದು ಎಲೆಗಳಿಗೆ ಸಹಾಯವನ್ನು ಮಾಡುತ್ತದೆ. ಈ ಶಕ್ತಿಯು ಕಾರ್ಬನ್ ಡೈಯಾಕ್ಸೈಡ್ ಮತ್ತು ನೀರಿನಿಂದ ಆಹಾರವನ್ನು ಸಂಶ್ಲೇಷಿಸಲು ಬಳಕೆಯಾಗುತ್ತದೆ. ಸೂರ್ಯನ ಬೆಳಕಿನಲ್ಲಿ ಆಹಾರ ಸಂಶ್ಲೇಷಣೆ ನಡೆಯುತ್ತದೆ. ದ್ಯುತಿ ಸಂಶ್ಲೇಷಣ ಪ್ರಕ್ರಿಯೆ ನಡೆಯಲು ಕ್ಲೋರೋಫಿಲ್ , ಸೂರ್ಯನ ಬೆಳಕು, ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಅವಶ್ಯಕ.
5. ಸಸ್ಯಗಳು ಆಹಾರ ಪ್ರಾಥಮಿಕ ಮೂಲಗಳು ಎಂಬುದನ್ನು ರೇಖಾಚಿತ್ರದ ಮೂಲಕ ತೋರಿಸಿ.
6. ಬಿಟ್ಟಸ್ಥಳ ತುಂಬಿ.
ಎ). ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸುವುದರಿಂದ ಹಸಿರು ಸಸ್ಯಗಳನ್ನು………… ಎನ್ನುವರು.
ಉ. ಸ್ವಪೋಷಕ
ಬಿ) ಸಸ್ಯಗಳಿಂದ ಸಂಶ್ಲೇಷಿಸಲ್ಪಟ್ಟ ಆಹಾರವು………… ರೂಪದಲ್ಲಿ ಸಂಗ್ರಹವಾಗುವುದು.
ಉ. ಪಿಷ್ಟ
ಸಿ). ದ್ಯುತಿ ಸಂಶ್ಲೇಷಣೆ ಯಲ್ಲಿ ಸೌರಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ವರ್ಣಕ…………
ಉ. ಕ್ಲೋರೋಫಿಲ್ ( ಪತ್ರ ಹರಿತ್ತು)
ಡಿ.) ಸಸ್ಯಗಳು ದ್ಯುತಿ ಸಂಶ್ಲೇಷಣೆ ಯಲ್ಲಿ……… ಅನ್ನು ಒಳ ತೆಗೆದುಕೊಳ್ಳುತ್ತವೆ, ಮತ್ತು……….. ಅನ್ನು ಬಿಡುಗಡೆ ಮಾಡುತ್ತವೆ.
ಉ. ಇಂಗಾಲದ ಡೈಆಕ್ಸೈಡ್ ——ಆಮ್ಲಜನಕ
7. ಕೆಳಗಿನವುಗಳನ್ನು ಹೆಸರಿಸಿ.
I) ತೆಳುವಾದ ಕೊಳವೆಯಾಕಾರದ ಹಳದಿ ಬಣ್ಣದ ಕಾಂಡ ಹೊಂದಿರುವ ಪರಾವಲಂಬಿ ಸಸ್ಯ.
ಉ. ಕಸ್ಕ್ಯೂಟ
ii). ಭಾಗಶಃ ಸ್ವಪೋಷಿತ ಸಸ್ಯ
ಉ. ಕೀಟಾಹಾರಿ ಸಸ್ಯಗಳು
iii). ಎಲೆಗಳು ಅನಿಲ ವಿನಿಮಯ ನಡೆಸುವ ರಂದ್ರಗಳು.
ಉ. ಪತ್ರರಂದ್ರ
8. ಸರಿ ಉತ್ತರವನ್ನು ಗುರುತುಮಾಡಿ
ಎ. ಕಸ್ಕ್ಯೂಟ ಇದಕ್ಕೆ ಉದಾಹರಣೆ
(i) ಸ್ವಪೋಷಕ (ii) ಪರಾವಲಂಬಿ
(iii) ಕೊಳೆತಿನಿ (iv) ಆತಿಥೇಯ ಸಸ್ಯ
ಉ. ಪರಾವಲಂಬಿ
ಬಿ. ಕೀಟಗಳನ್ನು ಹಿಡಿಯುವ ಮತ್ತು ತಿನ್ನುವ ಸಸ್ಯ
(i) ಕಸ್ಕ್ಯೂಟ (ii) ದಾಸವಾಳ
(iii) ಹೂಜಿಗಿಡ (iv) ಗುಲಾಬಿ
ಉ. ಹೂಜಿಗಿಡ
9. ಹೊಂದಿಸಿ ಬರೆಯಿರಿ.
I. II
ಕ್ಲೋರೋಫಿಲ್ ಎಲೆ
ನೈಟ್ರೋಜನ್ ಬ್ಯಾಕ್ಟೀರಿಯಾ
ಕಸ್ಕ್ಯೂಟ ಪರಾವಲಂಬಿ
ಪ್ರಾಣಿಗಳು ಪರಪೋಷಕಗಳು
ಕೀಟಗಳು ಹೂಜಿಗಿಡ
10. ಸರಿ , ತಪ್ಪು ಎಂದು ಗುರುತಿಸಿ
a. ದ್ಯುತಿ ಸಂಶ್ಲೇಷಣೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ .
ಉ. ತಪ್ಪು
b. ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸಿಕೊಳ್ಳುವ ಸಸ್ಯಗಳನ್ನು ಕೊಳೆತಿನಿಗಳು ಎನ್ನುವರು.
ಉ. ತಪ್ಪು
c. ದ್ಯುತಿಸಂಶ್ಲೇಷಣೆಯ ಉತ್ಪನ್ನವು ಪ್ರೋಟೀನ್ ಅಲ್ಲ.
ಉ. ಸರಿ
d. ದ್ಯುತಿ ಸಂಶ್ಲೇಷಣೆಯಲ್ಲಿ ಸೌರಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.
ಉ. ಸರಿ
11. ಸರಿ ಉತ್ತರ ಆರಿಸಿ ಬರೆಯಿರಿ
ದ್ಯುತಿ ಸಂಶ್ಲೇಷಣೆಗಾಗಿ ವಾತಾವರಣದಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಸಸ್ಯದ ಯಾವ ಭಾಗ ತೆಗೆದುಕೊಳ್ಳುತ್ತದೆ.
(ಎ) ಬೇರುರೋಮ (ಬಿ) ಪತ್ರರಂಧ್ರಗಳು
(ಸಿ) ಎಲೆಯ ಸಿರೆಗಳು (ಡಿ) ದಳಗಳು
ಉ. ಬಿ.) ಪತ್ರರಂಧ್ರಗಳು
12. ಕೆಳಗಿನವುಗಳನ್ನು ಸರಿ ಉತ್ತರ ಆರಿಸಿ
ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡ್ ಅನ್ನು ಸಸ್ಯಗಳು ವಾಗಿ ಇವುಗಳ ಮೂಲಕ ಒಳ ತೆಗೆದುಕೊಳ್ಳುತ್ತವೆ.
(i) ಬೇರುಗಳು (ii) ಕಾಂಡ
(iii) ಹೂಗಳು (iv) ಎಲೆಗಳು
ಉ. ಎಲೆಗಳು
13. ಬಹಳಷ್ಟು ಹಣ್ಣು ಮತ್ತು ತರಕಾರಿ ಸಸ್ಯಗಳನ್ನು ರೈತರು ದೊಡ್ಡದಾದ ಹಸಿರುಮನೆಗಳಲ್ಲಿ ಏಕೆ ಬೆಳೆಯುತ್ತಾರೆ ? ಇದರಿಂದ ರೈತರಿಗೆ ಆಗುವ ಅನುಕೂಲಗಳೇನು ?
ಉತ್ತರ:- ಹಸಿರುಮನೆಗಳು ಉತ್ತಮ ವಾತಾವರಣ ಒದಗಿಸುತ್ತವೆ.
ಅನಾನುಕೂಲ ವಾತಾವರಣದಿಂದ ರಕ್ಷಿಸುತ್ತದೆ.
ಪ್ರಾಣಿ ಪಕ್ಷಿಗಳು ಮತ್ತು ಕ್ರಿಮಿಕೀಟಗಳಿಂದ ರಕ್ಷಣೆ ಸಿಗುತ್ತದೆ.
ಹೆಚ್ಚಾದ ಮಳೆ ಗಾಳಿ ಬಿಸಿಲಿನಿಂದ ರಕ್ಷಣೆ ಸಿಗುತ್ತದೆ. ಎಲ್ಲ ಕಾರಣಗಳಿಂದ ರೈತರು ಹಸಿರುಮನೆಗಳಲ್ಲಿ ಹೆಚ್ಚು ಇಳುವರಿ ಪಡೆಯುತ್ತಾರೆ.