ಉತ್ತರ ಅಮೇರಿಕ ಖಂಡ
ಅಭ್ಯಾಸಗಳು
- ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿಮಾಡಿ.
1. ಉತ್ತರ ಅಮೇರಿಕ ಖಂಡವನ್ನು ಪ್ರೈರೀನಾಡು ಖಂಡ ಎಂದು ಕರೆಯುತ್ತಾರೆ.
2. ಕೆನಡದಲ್ಲಿ ಮರ ಕಡಿಯುವ ವೃತ್ತಿಯನ್ನು ಅವಲಂಬಿಸಿದ ಜನರನ್ನು ಲಂಬರ್ ಜಾಕ್ಸ್ ಎಂದು ಕರೆಯಲಾಗಿದೆ.
3. ಪ್ರಪಂಚದ ಗೋಧಿಯ ಕಣಜ ಎಂದು ಫೈರೀಸ್ ಮೈದಾನ ನ್ನು ಕರೆಯಲಾಗಿದೆ.
4. ಸೂಚಿಪರ್ಣ ಅರಣ್ಯವನ್ನು ಟೈಗಾ ಎಂದು ಕರೆಯಲಾಗಿದೆ.
||.ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
1. ಉತ್ತರ ಅಮೆರಿಕ ಖಂಡದ ಸ್ಥಾನ ಮತ್ತು ವಿಸ್ತೀರ್ಣ ತಿಳಿಸಿರಿ.
ಉತ್ತರ :-ಉತ್ತರ ಅಮೆರಿಕವು ಸಂಪೂರ್ಣವಾಗಿ ಸಮಭಾಜಕ ವೃತ್ತದ ಉತ್ತರದಲ್ಲಿ ನೆಲೆಗೊಂಡಿದೆ. ಅದು ಅಕ್ಷಾಂಶಿಕವಾಗಿ 19° ಉತ್ತರದಿಂದ 71° ಉತ್ತರ ಅಕ್ಷಾಂಶ, 500 ಪಶ್ಚಿಮದಿಂದ, 150° ಪಶ್ಚಿಮ ರೇಖಾಂಶಗಳ ನಡುವೆ ಹಬ್ಬಿದೆ. ಕರ್ಕಾಟಕ ಸಂಕ್ರಾಂತಿ ವೃತ್ತವು (23 1/2 ಉ.ಅ)ಈ ಖಂಡದ ದಕ್ಷಿಣದಲ್ಲಿಯೂ ಉತ್ತರ ಮೇರು ವೃತ್ತವು (66 1/2 ಉ.ಆರ್ಕ್ಟಿಕ್ ವೃತ್ತ) ಉತ್ತರ ಭಾಗದಲ್ಲಿ ಹಾದು ಹೋಗಿದೆ.
ವಿಸ್ತೀರ್ಣ : ಉತ್ತರ ಅಮೆರಿಕವು ವಿಸ್ತಿರ್ಣದಲ್ಲಿ (16.46%) ಏಷ್ಯ ಮತ್ತು ಆಫ್ರಿಕಗಳ ನಂತರ ಮೂರನೇ ಅತಿ ದೊಡ್ಡ ಭೂಖಂಡವಾಗಿದೆ. ಇದರ ವಿಸ್ತೀರ್ಣ 24.24 ದಶಲಕ್ಷ ಚ.ಕಿ.ಮೀ.
2. ಉತ್ತರ ಅಮೆರಿಕ ಖಂಡದ ಪ್ರಮುಖ ರಾಷ್ಟ್ರಗಳನ್ನು ಪಟ್ಟಿ ಮಾಡಿ.
ಉತ್ತರ :-ಉತ್ತರ ಅಮೆರಿಕ ಖಂಡದ ಪ್ರಮುಖ ರಾಷ್ಟ್ರಗಳೆಂದರೆ ಕೆನಡ, ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಮೆಕ್ಸಿಕೋ , ವೆಸ್ಟ್ ಇಂಡಿಸ್ ಮತ್ತು ಕ್ಯೂಬಾ
3. ಉತ್ತರ ಅಮೆರಿಕದ ಗ್ರಾಂಡ್ ಕ್ಯಾನಿಯನ್ ಹೇಗೆ ನಿರ್ಮಾಣಗೊಂಡಿದೆ.
ಉತ್ತರ :-ಕೊಲರಾಡೊ ನದಿಯು ಕೊಲರಾಡೊ ಪ್ರಸ್ಥ ಭೂಮಿಯ ಮೂಲಕ ಹರಿಯುತ್ತಾ ಗ್ರಾಂಡ್ ಕ್ಯಾನಿಯನ್ ಮಹಾಕಂದರವನ್ನು ನಿರ್ಮಾಣ ಮಾಡಿದೆ.
4. ಉತ್ತರ ಅಮೆರಿಕದ ಪ್ರಮುಖ ಸಸ್ಯ ಹಾಗೂ ಪ್ರಾಣಿ ಗಳನ್ನು ಹೆಸರಿಸಿರಿ.
ಉತ್ತರ :-ಪ್ರಮುಖ ಸಸ್ಯಗಳು :ಪಾಚಿ ಮತ್ತು ಹಾವಸೆಗಳು ಪೈನ್, ಫರ್, ಸ್ಪೂಸ್, ಲಾರ್ಚ್ , ಸೈಪ್ರಸ್, ಓಕ್, ಆಶ್ ಮತ್ತು ಚೆಸ್ಟ್ನಟ್ಗಳು ಮುಂತಾದವುಗಳು
ಪ್ರಮುಖ ಪ್ರಾಣಿಗಳು : ಲೈನಾಕ್ಸ್, ಸಾಬಲ್, ಸಿಲ್ವರ್ ಫಾಕ್ಸ್ , ಬೀವರ್, ಕಪ್ಪುಕರಡಿ, ಹಿಮಇಲಿ ಮತ್ತು ಪೊರ್ಕುಪೈನ್
5. ಉತ್ತರ ಅಮೆರಿಕದ ಪ್ರಮುಖ ನದಿಗಳನ್ನು ಪಟ್ಟಿ ಮಾಡಿರಿ.
ಉತ್ತರ :-ಮಿಸಿಸಿಪ್ಪಿ, ಮಿಸ್ಸೊರಿ, ಕೊಲರಾಡೊ ,ರೆಡ್ರಿವರ್, ಓಹಾವೋ, ಅರಕಾನ್ಸ್ಸ್, ಟೆನಸ್ಸಿ, ಪ್ಲಾಟೆ, ಸ್ಪೆಕ್, ಫ್ರೀಸರ್, ಕೊಲಂಬಿಯಾ, ಯಾಕಾನ್, ರಯೋಗ್ರಾಂಡ್, ಮೆಕೆಂಡು, ನೆಲ್ಸನ್ ಮತ್ತು ಸೇಂಟ್ ಲಾರೆನ್ಸ್ ಉತ್ತರ ಅಮೆರಿಕಾದ ಪ್ರಮುಖ ನದಿಗಳಾಗಿವೆ.
6. ಉತ್ತರ ಅಮೆರಿಕದಲ್ಲಿ ಕಂಡುಬರುವ ಪ್ರಮುಖ ಜನರು ಹಾಗೂ ಅವರ ಭಾಷೆಗಳನ್ನು ತಿಳಿಸಿರಿ.
ಉತ್ತರ :-ಉತ್ತರ ಅಮೆರಿಕನ್ನರು, ಯುರೋಪಿಯನ್ನರು, ಅಮೆರಿಕನ್ ಇಂಡಿಯನ್ಸ್ ಮತ್ತು ಆಫ್ರಿಕನ್ನರಾಗಿದ್ದಾರೆ. ಇವರು ಪ್ರಮುಖ ಭಾಷೆ: ಸ್ಪ್ಯಾನಿಷ್, ಇಂಗ್ಲೀಷ್, ಫ್ರೆಂಚ್, ಅಮೆರಿಕನ್ ಇಂಡಿಯನ್ ಭಾಷೆಗಳನ್ನು ಮಾತನಾಡುತ್ತಾರೆ.