ಕೇಂದ್ರ ಸರ್ಕಾರ
ಅಭ್ಯಾಸ
- ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿಮಾಡಿ.
1. ಭಾರತ ಗಣರಾಜ್ಯದ ಅತ್ಯುತ್ತಮ ಅಧಿಕಾರಿ ರಾಷ್ಟ್ರಪತಿ.
2. ಸಂಸತ್ತಿನ ಎರಡು ಸದನಗಳು ರಾಜ್ಯಸಭೆ ಮತ್ತು ಲೋಕಸಭೆ.
3. ಸಂಸತ್ತಿನ ಕೆಳಮನೆಯನ್ನು ಲೋಕಸಭೆ ಎನ್ನುತ್ತಾರೆ.
4. ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ ಆರು ವರ್ಷ.
||.ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.
1. ಕೇಂದ್ರ ಸರ್ಕಾರದ ಮೂರು ಅಂಗಗಳು ಯಾವುವು?
ಉತ್ತರ:-ಕೇಂದ್ರ ಸರ್ಕಾರದ ಮೂರು ಅಂಗಗಳು ಯಾವು ವೆಂದರೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ.
ಶಾಸಕಾಂಗ: ಶಾಸನಗಳನ್ನು ಅಥವಾ ಕಾಯಿದೆ ಕಾನೂನುಗಳನ್ನು ಮಾಡುವ ಅಂಗವೇ ಶಾಸಕಾಂಗ. ಜೊತೆಗೆ ಇದು ಕಾರ್ಯಾಂಗದ ಮೇಲೆ ಹತೋಟಿ ಇಟ್ಟುಕೊಳ್ಳುವ ಕೆಲಸವನ್ನು ಮಾಡುತ್ತದೆ.
ಕಾರ್ಯಾಂಗ: ಇದು ಶಾಸನಗಳನ್ನು ಆಡಳಿತದ ಮುಖಾಂತರ ಕಾರ್ಯರೂಪಕ್ಕೆ ತರುತ್ತದೆ.
ನ್ಯಾಯಾಂಗ: ನ್ಯಾಯಾಂಗವು ನ್ಯಾಯನಿರ್ಣಯ ನೀಡುತ್ತದೆ.
2. ಲೋಕಸಭಾ ಸದಸ್ಯರ ಅರ್ಹತೆಗಳು ಯಾವುವು?
ಉತ್ತರ:-ಲೋಕಸಭಾ ಸದಸ್ಯರ ಅಧಿಕಾರಾವಧಿ ಐದು ವರ್ಷ. ಲೋಕಸಭೆಯ ಸದಸ್ಯರು ಬಯಸಿದಷ್ಟು ಸಲ ಚುನಾವಣೆ ಗಳಲ್ಲಿ ಸ್ವರ್ದಿಸಬಹುದು. ಐದು ವರ್ಷಗಳ ಅವಧಿ ಮುಗಿದ ನಂತರ ಲೋಕಸಭೆ ವಿಸರ್ಜನೆಯಾಗುತ್ತದೆ.
ಅರ್ಹತೆಗಳು :
1. ಭಾರತದ ಪ್ರಜೆಯಾಗಿರಬೇಕು.
2. ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
3. ಸರ್ಕಾರದ ಯಾವುದೇ ಹುದ್ದೆಯಲ್ಲಿರಬಾರದು.
4. ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರಬಾರದು.
5. ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಬಳಗಾಗಿರಬಾರದು.
6. ಅವರು ದಿವಾಳಿಯಾಗಿರಬಾರದು, ಅಂದರೆ ಆರ್ಥಿಕ ವಾಗಿ ಎಲ್ಲವನ್ನು ಕಳೆದುಕೊಂಡವರಾಗಿರಬಾರದು.
7. ಸಂಸತ್ತು ಕಾಲಕಾಲಕ್ಕೆ ನಿಗದಿ ಪಡಿಸುವ ಅರ್ಹತೆ ಪಡೆದಿರಬೇಕು.
3. ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಯಾರಿಗಿದೆ?
ಉತ್ತರ:-ಸಾಮಾನ್ಯವಾಗಿ ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಹೊಂದಿದೆ.
4. ಪ್ರಧಾನ ಮಂತ್ರಿಯವರ ಮಹತ್ವವೇನು?
ಉತ್ತರ:-ಸಂಸದೀಯ ಪದ್ಧತಿಯಲ್ಲಿ ಪ್ರಧಾನಮಂತ್ರಿಯವರ ಪಾತ್ರ ಮಹತ್ವದ್ದಾಗಿದೆ. ದೇಶದ ಭದ್ರತೆಯನ್ನು ಕಾಪಾಡುವುದರಲ್ಲಿ ಇವರ ಪಾತ್ರ ಮಹತ್ವವಾದುದು .
1. ಇವರು ಲೋಕಸಭೆಯ ನಾಯಕರಾಗಿದ್ದಾರೆ.
2. ಖಾತೆಗಳ ಹಂಚಿಕೆಯ ಅಧಿಕಾರ ಇವರಿಗಿದೆ.
3. ಸರ್ಕಾರದ ಮುಖ್ಯಸ್ಥರಾಗಿದ್ದಾರೆ.
4. ಸಚಿವ ಸಂಪುಟದ ಪುನರ್ರಚನೆಯ ಅಧಿಕಾರ ಇವರಿಗಿದೆ.
5. ವಿವಿಧ ಇಲಾಖೆಗಳಿಗೆ ಸಚಿವರನ್ನು ನೇಮಕ ಮಾಡು ವಂತೆ ರಾಷ್ಟ್ರಪತಿಯವರಿಗೆ ಶಿಫಾರಸ್ಸು ಮಾಡುತ್ತಾರೆ.
6. ಸಚಿವರನ್ನು ಪದಚ್ಯುತಿಗೊಳಿಸುವಂತೆ ರಾಷ್ಟ್ರಪತಿ ಯವರಿಗೆ ಶಿಫಾರಸ್ಸು ಮಾಡುತ್ತಾರೆ.
5. ಕೇಂದ್ರ ಮಂತ್ರಿಮಂಡಲ ಹೇಗೆ ರಚನೆಯಾಗುತ್ತದೆ?
ಉತ್ತರ:-ರಾಷ್ಟ್ರಪತಿಯವರು ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ನಾಯಕರನ್ನು ಸರ್ಕಾರ ರಚಿರುವಂತೆ ಆಹ್ವಾನಿಸಿ, ಅವರನ್ನು ಪ್ರಧಾನಿಯಾಗಿ ನೇಮಕ ಮಾಡುತ್ತಾರೆ. ಅನಂತರ ಪ್ರಧಾನಮಂತ್ರಿಯವರ ಸಲಹೆಯ ಮೇರೆಗೆ ಉಳಿದ ಸಚಿವರ ನೇಮಕ ಮಾಡುತ್ತಾರೆ. ಪ್ರಧಾನಿ ಮತ್ತು ಸಚಿವರು ಸೇರಿ ಕೇಂದ್ರಮಂತ್ರಿಮಂಡಲ (ಕ್ಯಾಬಿನೆಟ್) ರಚನೆಯಾರುತ್ತದೆ. ಈ ರೀತಿ ಮಂತ್ರಿಮಂಡಲ ರಚನೆಯಾಗುವ ಪದ್ಧತಿಗೆ ‘ಸಂಸದೀಯ ಪದ್ಧತಿ’ (ಕ್ಯಾಬಿನೆಟ್ ಪದ್ಧತಿ) ಎನ್ನುವರು. ಮಂತ್ರಿಯವರು ಒಂದು ಖಾತೆಯ ರಾಜಕೀಯ ಮುಖ್ಯಸ್ಥರಾಗಿರುತ್ತಾರೆ. ಸಚಿವರ ಹೊಣೆಗಾರಿಕೆಯು ಕ್ಯಾಬಿನೆಟ್ ಪದ್ಧತಿಯ ತಿರುಳಾಗಿದೆ. ಅಂದರೆ ತನ್ನ ಖಾತೆಯ ಕಾರ್ಯನಿರ್ವಹಣೆಗೆ ಮಂತ್ರಿಯವರು ವೈಯಕ್ತಿಕವಾಗಿ ಜವಬ್ದಾರರಾಗಿರುತ್ತಾರೆ.
ಸಚಿವರ ಖಾತೆಗಳನ್ನು ಪ್ರಧಾನಿಯೇ ಹಂಚಿಕೊಡುತ್ತಾರೆ. ಪ್ರಧಾನಿಯವರು ಕೆಲವೊಂದು ಸಂದರ್ಭಗಳಲ್ಲಿ ಯಾವುದೇ ಸಚಿವರ ರಾಜೀನಾಮೆ ಕೇಳಬಹುದು. ಪ್ರಧಾನಿಯವರು ರಾಜೀನಾಮೆ ನೀಡಿದಾಗ, ಅವರ ಸಂಗಡ ಸಚಿವ ಸಂಪುಟವೂ ವಿಸರ್ಜನೆಯಾಗುತ್ತದೆ. ಮಂತ್ರಿಮಂಡಲವು ಲೋಕಸಭೆಗೆ ಬದ್ಧವಾಗಿರುತ್ತದೆ. ಲೋಕಸಭೆಯು ಅವಿಶ್ವಾಸ ಗೊತ್ತುವಳಿ ಮಂಡಿಸಿ ಬಹುಮತ ಸಾಬೀತು ಪಡಿಸಿದರೆ ಮಂತ್ರಿಮಂಡಲ ವಜಾಗೊಳ್ಳುತ್ತದೆ.