ಭಾರತಕ್ಕೆ ಐರೋಪ್ಯರ ಆಗಮನ.
ಅಭ್ಯಾಸಗಳು
- ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಭಾರತಕ್ಕೆ ವ್ಯಾಪಾರಕ್ಕಾಗಿ ಸಮುದ್ರ ಮಾರ್ಗವಾಗಿ ಬಂದಿದ್ದ ಯುರೋಪಿಯನ್ನರು ಯಾರು?
ಉತ್ತರ:-ಭಾರತಕ್ಕೆ ವ್ಯಾಪಾರಕ್ಕಾಗಿ ಸಮುದ್ರ ಮಾರ್ಗವಾಗಿ ಮೊದಲಿಗೆ ಬಂದಿದ್ದ ಯುರೋಪಿಯನ್ನರು ಪೋರ್ಚು ಗೀಸರು.
2. ಭಾರತಕ್ಕೆ ಜಲಮಾರ್ಗವನ್ನು ಕಂಡು ಹಿಡಿದವರು ಯಾರು?
ಉತ್ತರ:-ಭಾರತಕ್ಕೆ ಜಲಮಾರ್ಗವನ್ನು ಕಂಡು ಹಿಡಿದವರು ವಾಸ್ಕೋಡಿಗಾಮ.
3. ಡಚ್ಚರ ರಾಜಧಾನಿ ಯಾವುದು?
ಉತ್ತರ:-ಡಚ್ಚರ ರಾಜಧಾನಿ ಪುಲಿಕಾಟ್.
4. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಯಾವಾಗ ಸ್ಥಾಪನೆಯಾಯಿತು?
ಉತ್ತರ:-ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸಾ.ಶ.1600 ಸ್ಥಾಪನೆಯಾಯಿತು.
5. ಫ್ರೆಂಚರ ವ್ಯಾಪಾರ ಕೇಂದ್ರಗಳನ್ನು ಹೆಸರಿಸಿ.
ಉತ್ತರ:-ಪಾಂಡಿಚೇರಿ, ಮಚಲಿಪಟ್ಟಣ, ಕಲ್ಲಿಕೋಟೆ, ಮಾಹೆ, ಕಾರೈಕಲ್ ಮತ್ತು ಚಂದ್ರನಗರಗಳಲ್ಲಿ ಫ್ರೆಂಚರ ವ್ಯಾಪಾರ ಕೇಂದ್ರಗಳು ಇದ್ದವು.
6. ಬ್ರಿಟಿಷ್ ‘ದಸ್ತಕ್‘ ನೀಡಿದ ಮೊಗಲ್ ದೊರೆ ಯಾರು?
ಉತ್ತರ:-ಮೊಗಲ್ ಚಕ್ರವರ್ತಿ ಫರೂಕ್ ಸಿಯಾರನು ಬ್ರಿಟಿಷರಿಗೆ ‘ದಸ್ತಕ್’ ನೀಡಿದರು.
||.ಈ ಕೆಳಗಿನ ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿರಿ.
1. ಭಾತದಲ್ಲಿ ಪೋರ್ಚುಗೀಸರ ಅವನತಿಗೆ ಕಾರಣವಾದ ಅಂಶಗಳನ್ನು ಪಟ್ಟಿಮಾಡಿ.
ಉತ್ತರ:-* ಬಲಿಷ್ಠ ನೌಕಾಪಡೆಯನ್ನು ಹೊಂದಿದ್ದ ಡಚ್ಚರು ಮತ್ತು ಇಂಗ್ಲೀಷರು ಪೋರ್ಚುಗೀಸರ ಪ್ರಬಲ ಪ್ರತಿಸ್ಪರ್ಧಿ ಗಳಾಗಿದ್ದರು.
* ಪೋರ್ಚುಗೀಸ್ ಸರ್ಕಾರದ ನೌಕರರು ಭ್ರಷ್ಟರಾಗಿ, ಸ್ವಾಮಿನಿಷ್ಠೆ ಕಳೆದುಕೊಂಡರು ಮುಂದೆ ಅವರ ಸರ್ಕಾರ ಹೀನ ಸ್ಥಿತಿಗೆ ಇಳಿಯಿತು.
* ಮತಾಂಧತೆಯೇ ಪೋರ್ಚುಗೀಸರ ಅವನತಿಗೆ ಮುಖ್ಯ ಕಾರಣವಾಗಿತ್ತು ಅವರು ಇಲ್ಲಿಯ ವಿವಿಧ ಧರ್ಮೀಯ ರನ್ನು ಬಲವಂತದಿಂದ ಮತಾಂತರಿಸಿದರು.
* ವಿಜಯನಗರ ಸಾಮ್ರಾಜ್ಯದ ಅವನತಿ ನಂತರ ಅವರ ವ್ಯಾಪಾರ ಕುಂಠಿತವಾಯಿತು.
2. ಭಾರತದಲ್ಲಿ ಫ್ರೆಂಚರ ಅವನತಿಗೆ ಕಾರಣಗಳು ಯಾವುವು?
* ಭಾರತದಲ್ಲಿದ್ದ ಫ್ರೆಂಚ್ ಸೇನಾ ನಾಯಕರಿಗೆ ಫ್ರಾನ್ಸ್ ಸರ್ಕಾರ ಪೂರ್ಣ ಬೆಂಬಲವನ್ನು ನೀಡಲಿಲ್ಲ.
* ಫ್ರಾನ್ಸಿನಲ್ಲಿ ರಾಜಕೀಯ ಗೊಂದಲ ಮತ್ತು ಕ್ರಾಂತಿಗಳು ಕಂಡುಬಂದವು. ಇದು ಭಾರತದಲ್ಲಿ ಇವರ ಅವನತಿಗೆ ಕಾರಣವಾಯಿತು.
* ಫ್ರೆಂಚರ ನೌಕಾಪಡೆಯು ಇಂಗ್ಲೀಷರ ನೌಕಾಪಡೆಗಿಂತ ಉತ್ತಮ ದರ್ಜೆಯದಾಗಿರಲಿಲ್ಲ.
III. ಈ ಕೆಳಗಿನ ‘ಎ‘ ಪಟ್ಟಿಗೆ ಸಂಬಂಧಿಸಿದ ‘ಬಿ‘ ಪಟ್ಟಿಯಲ್ಲಿನ ವಿಷಯಗಳನ್ನು ಹೊಂದಿಸಿ ಬರೆಯಿರಿ.
‘ಎ‘ ‘ಬಿ‘
1. ಪೋರ್ಚುಗೀಸರು ಎ. ಪಾಂಡಿಚೇರಿ
2. ಡಚ್ಚರು ಬಿ. ಕಲ್ಕತ್ತ
3. ಫ್ರೆಂಚರು ಸಿ. ಪುಲಿಕಾಟ್
4. ಬ್ರಿಟಿಷರು ಡಿ. ಗೋವ
ಉತ್ತರ:-
‘ಎ‘ ‘ಬಿ‘
1. ಪೋರ್ಚುಗೀಸರು ಡಿ. ಗೋವ
2. ಡಚ್ಚರು ಸಿ. ಪುಲಿಕಾಟ್
3. ಫ್ರೆಂಚರು ಎ. ಪಾಂಡಿಚೇರಿ
4. ಬ್ರಿಟಿಷರು ಬಿ. ಕಲ್ಕತ್ತ