ಪಾಠ -1
ದೊಡ್ಡವರ ದಾರಿ
ಅ. ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದದನ್ನು ಆರಿಸಿ ಬಿಟ್ಟ ಸ್ಥಳ ಭರ್ತಿ ಮಾಡಿರಿ .
೧. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು.
೨. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು.
೩. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು.
೪. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು.
((ಪಾಲಿಶ್, ಕಾಸು, ಕಾಗದದ ಚೂರು, ತಪ್ಪಿನ, ದಾರಿ)
ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿ.
೧. ರಾಷ್ಟ್ರಪತಿ:- ಡಾ. ರಾಜೇಂದ್ರ ಪ್ರಸಾದರು ಭಾರತದ ಪ್ರಥಮ ರಾಷ್ಟ್ರಪತಿಗಳು
೨. ಕಾಸು:-ಯಾವಾಗಲೂ ಡುಡಿದೇ ಕಾಸು ಸಂಪಾದಿಸಬೇಕು.
೩. ಶಿಸ್ತು:-ಯಶಸ್ಸು ಗಳಿಸಲು ಶಿಸ್ತು ಬಹಳ ಮುಖ್ಯ.
೪. ದಾರಿ :-ನಾವು ನಡೆಯುವ ದಾರಿ ಬೇರೆಯವರಿಗೆ ಮಾರ್ಗದರ್ಶಕದಂತಿರಬೇಕು.
ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು?
ಉತ್ತರ:-ರಾಜೇಂದ್ರ ಪ್ರಸಾದರು ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.
೨. ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಏನನ್ನು ಕೊಟ್ಟರು?
ಉತ್ತರ:-ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಕಾಸನ್ನು ಕೊಟ್ಟರು.
೩. ಯಾವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು?
ಉತ್ತರ:-ಪುಸ್ತಕದ ಪುಟಗಳನ್ನು ಹರಿದು ಹಾಕುವುದು ಒಳ್ಳೆಯ ಅಭ್ಯಾಸವಲ್ಲ ,ಎಂದು ಪ್ರಸಾದರು ಮಕ್ಕಳಿಗೆ ತಿಳಿಸಿದರು
೪. ಜಾಮಿಯಾ ಮಿಲಿಯ ಎಲ್ಲಿದೆ?
ಉತ್ತರ:- ಜಾಮಿಯಾ ಮಿಲಿಯಾ ದೆಹಲಿಯಲ್ಲಿದೆ.
೫. ಜಾಕೀರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು?
ಉತ್ತರ:-ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಬೂಟ್ ಪಾಲಿಶ್ ಹಾಕುವವನ ವೇಷ ಹಾಕಿದರು.
೬. ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು?
೧. ” ನೋಡಿ ಮಕ್ಕಳೇ ಜ್ಞಾನ ಭಂಡಾರ”.
ಉತ್ತರ:-ಈ ಮೇಲಿನ ವಾಕ್ಯವನ್ನು ಡಾ. ರಾಜೇಂದ್ರ ಪ್ರಸಾದರು ಮಕ್ಕಳಿಗೆ ಹೇಳಿದರು.
೨. ” ತಾತ ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ”.
ಉತ್ತರ:-ಈ ಮೇಲಿನ ವಾಕ್ಯವನ್ನು ಮಕ್ಕಳು ರಾಜೇಂದ್ರ ಪ್ರಸಾದರಿಗೆ ಹೇಳಿದರು.
ಉ. ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
೧. ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವವನ್ನು ವಿವರಿಸಿರಿ.
ಉತ್ತರ:-ರಾಜೇಂದ್ರ ಪ್ರಸಾದ್ ರಾಷ್ಟ್ರಪತಿಗಳಂತಹ ಉನ್ನತ ಸ್ಥಾನಕ್ಕೇರಿದರು ಸರಳ ಜೀವನ ನಡೆಸಿದವರು ಅವರದು ಋಷಿ ಸದೃಶ ಜೀವನ ಅವರು ಕೋಪವನ್ನು ಹತ್ತಿಕ್ಕ ಬಲ್ಲವರಾಗಿದ್ದರು ಬಾಳಿನಲ್ಲಿ ಶಿಸ್ತು ಸಂಯಮ ಸಮಯ ಪಾಲನೆ ಇವುಗಳಿಗೆ ಭಾರೀ ಮಹತ್ವ ನೀಡುತ್ತಿದ್ದರು.
೨. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್ ಹುಸೇನ್ ಏನು ಮಾಡಿದರು?
ಉತ್ತರ:-ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್ ಹುಸೇನರು ಒಂದು ದಿನ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಒಬ್ಬ ಬೂಟ್ ಪಾಲಿಶ್ ಹಾಕುವವನ ವೇಷದಲ್ಲಿ ಕುಳಿತರು. ಮತ್ತು ಪಾಲಿಶ್ ಡಬ್ಬಿ, ಬ್ರಷ್ ಹಿಡಿದು, ಬಂದ ವಿದ್ಯಾರ್ಥಿಗಳಿಗೆ ಪಾಲಿಶ್ ಹಾಕಿದರು. ಇದನ್ನು ಕಂಡ ವಿದ್ಯಾರ್ಥಿಗಳು ತಮ್ಮ ವರ್ತನೆಗೆ ನಾಚಿ, ಅಂದಿನಿಂದ ನೀಟಾಗಿ ಬಟ್ಟೆ ಹಾಕಿಕೊಂಡು ಬೂಟುಗಳಿಗೆ ಪಾಲಿಶ್ ಹಾಕಿಕೊಂಡು ಕಾಲೇಜಿಗೆ ಬರತೊಡಗಿದರು.
ಅಭ್ಯಾಸ
ಅ. ಆವರಣದಿಂದ ಸೂಕ್ತ ಪದ ಆರಿಸಿ ಖಾಲಿ ಬಿಟ್ಟ ಸ್ಥಳದಲ್ಲಿ ಬರೆಯಿರಿ.
1. ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ. (48, 49, 52)
2. ಹ್ರಸ್ವ ಸ್ವರಕ್ಕೆ ಉದಾಹರಣೆ ಇ (ಇ, ಐ. ಓ)
3. ಅನುಸ್ವಾರ, ವಿಸರ್ಗವನ್ನು ಯೋಗವಾಹ ಎಂದು ಕರೆಯುತ್ತಾರೆ. (ಸ್ವರ, ವ್ಯಂಜನ, ಯೋಗವಾಹ)
4. ವ್ಯಂಜನಗಳಿಗೆ ಸ್ವರ ಸೇರಿ ಆಗುವ ಅಕ್ಷರಗಳನ್ನು ಗುಣಿತಾಕ್ಷರ ಎನ್ನುವರು.
5. ವಿಜಾತೀಯ ಒತ್ತಕ್ಷರವುಳ್ಳ ಪದಕ್ಕೆ ಉದಾಹರಣೆ ಶಕ್ತಿ. (ಹಗ್ಗ, ಶಕ್ತಿ, ಸುಣ್ಣ)
(ಗುಣಿತಾಕ್ಷರ, ಸಂಯುಕ್ತಾಕ್ಷರ, ಮಹಾಪ್ರಾಣಾಕ್ಷರ)
ಆ. ಈ ಪದಗಳಲ್ಲಿರುವ ಅಕ್ಷರಗಳನ್ನು ಬಿಡಿಸಿ ಬರೆಯಿರಿ.
ಉದಾ: ಸಹಾಯ: ಸ್+ಅ, ಹ್+ಆ, ಯ್+ಅ.
1. ಆಭರಣ:
ಆ, ಭ್+ಅ, ರ್+ಅ, ಣ್ +ಅ.
2. ಅವಲಕ್ಕಿ:
ಅ, ವ್+ಅ, ಲ್ +ಅ,ಕ್ +ಕ್+ಇ
3. ಸಂಭ್ರಮ:
ಸ್+ಅಂ,ಭ್+ರ್+ಅ,ಮ್+ಅ
4. ಪರಮಾಶ್ಚರ್ಯ:
ಪ್+ಅ,ರ್+ಅ,ಮ್+ಆ,ಶ್+ಚ್+ಅ, ಯ್+ರ್+ಅ