ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :
1. ಸೂರ್ಯ ಏಕೆ ದುಡಿಯುತ್ತಿದ್ದಾನೆ ?
ಉತ್ತರ :- ಇಳೆಗೆ ಮಳೆ ತರಲು ಸೂರ್ಯ ದುಡಿಯುತ್ತಿದ್ದಾನೆ .
2. ಭೂಮಿಯ ಪೋಷಕ ಯಾರು ?
ಉತ್ತರ : –ಭೂಮಿಯ ಪೋಷಕ ಸೂರ್ಯ .
3. ಸೂರ್ಯ ಮರೆಯದೆ ಯಾವ ಕರ್ತವ್ಯ ಮಾಡುವನು ?
ಉತ್ತರ :- ಸೂರ್ಯ ಮರೆಯದೆ ಇಳೆಗೆ ಬಿಸಿಲು – ಬೆಳಕು ನೀಡುವ ಕರ್ತವ್ಯ ಮಾಡುವನು .
4. ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ ?
ಉತ್ತರ :- ಬಿರು ಬಿಸಿಲಿಗೆ ಮರ – ಗಿಡ , ಪೊದೆ – ಬಳ್ಳಿಗಳು ಕಂಗಾಲಾಗಿಲ್ಲ .
5. ಸೂರ್ಯನಿಂದ ಮಕ್ಕಳು ಕಲಿಯಬೇಕಾದ್ದೇನು ?
ಉತ್ತರ :- ಸೂರ್ಯನಿಂದ ಮಕ್ಕಳು ಕಲಿಯಬೇಕಾದುದೆಂದರೆ “ ಕಷ್ಟಕ್ಕೆ ಹೆದರದೆ , ನಮ್ಮ ಕರ್ತವ್ಯವನ್ನು ನಾವು ಮಾಡುತ್ತಾ ನಗುತ್ತಾ ನಲಿಯುತ , ಇತರರನ್ನು ನಗಿಸುತ್ತಾ ನಲಿಸುತ್ತಾ ಧನ್ಯತೆಯನ್ನು ಪಡೆಯಬೇಕು .
ಆ . ಕೆಳಗಿನ ಪದಗಳಿಗೆ ತಲಾ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ .
- ಸೂರ್ಯ : ಭಾನು , ನೇಸರ
- ಇಳೆ : ಭೂಮಿ , ಧರೆ
- ಪ್ರಕೃತಿ : ನಿಸರ್ಗ , ನೈಸರ್ಗಿಕ ( ಸ್ವಾಭಾವಿಕ )
- ಸಂಭ್ರಮ : ಸಡಗರ , ಉತ್ಸಾಹ
ಇ . ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ .
1 ) ಪೋಷಕರು : ನಮ್ಮ ಪೋಷಕರು ನಮ್ಮನ್ನು ತುಂಬಾ ಪ್ರೀತಿಯಿಂದ ಪೋಷಿಸುತ್ತಾರೆ .
2 ) ಕರ್ತವ್ಯ : ಎಲ್ಲರೂ ಅವರವರ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು .
3 ) ಸಂಭ್ರಮ : ಹಬ್ಬಗಳು ಸಡಗರ ಸಂಭ್ರಮವನ್ನು ತರುತ್ತವೆ .
4 ) ಧನ್ಯತೆ : ನಾವು ಮಾಡುವ ಕೆಲಸದಲ್ಲಿಯೇ ಧನ್ಯತೆಯನ್ನು ಕಾಣಬೇಕು .
ಈ. ಬೇಸಿಗೆ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉತ್ತರ :- ‘ಬೇಸಿಗೆ’ ಪದ್ಯವನ್ನು ಬಿ.ಆರ್. ಲಕ್ಷ್ಮಣರಾವ್ರವರು ರಚಿಸಿದ್ದಾರೆ. ಈ ಪದ್ಯದ ಸಂಕ್ಷಿಪ್ತ ಸಾರಾಂಶ ಹೀಗಿದೆ. – “ಬೇಸಿಗೆ ರಜಾ ಬಂದಿದ್ದರೂ ಬಿಸಿಲಿನ ಝಳ, ತಾಪ ಸಜೆ ಕೊಟ್ಟಂತೆ ಆಗಿದೆ. ಏಕೆಂದರೆ ಹೊರಗೆ ಹೋಗಿ ಬಿಸಿಲಿನಲ್ಲಿ ಆಡಲು ಸಾಧ್ಯವಿಲ್ಲ. ಆದರೂ ಸಹ ನಾವು ಬಿಸಿಲನ್ನು ಉಂಟುಮಾಡಿರುವ ಸೂರ್ಯನನ್ನು ದೂಷಿಸಬಾರದು. ಅದರ ಬದಲು ಸೂರ್ಯನ ಮಹಿಮೆಯನ್ನು ನಾವೆಲ್ಲ ತಿಳಿಯಬೇಕು. ಸೂರ್ಯನ ಬಿಸಿಲನ್ನು ಕಂಡು, “ಏಕೆ ಈ ಸೂರ್ಯ ಇಷ್ಟೊಂದು ತಾಪದಿಂದ ಕೂಡಿದ್ದಾನೆ, ಅಥವಾ ಯಾರ ಮೇಲಾದರೂ ಇವನಿಗೆ ಕೋಪವೇನಾದರೂ ಇದ್ದು ಇಷ್ಟೊಂದು ಬಿಸಿಲನ್ನು ಉಂಟು ಮಾಡುತ್ತಿರಬಹುದೇ?” ಎಂದು ತಪ್ಪು ತಿಳಿಯಕೂಡದು.
ಇಷ್ಟೊಂದು ಬಿಸಿಲಿನ ತಾಪ ಕೊಡಲು ಕಾರಣ ‘ಮೋಡ ಕೂಡಿಸಲು, ಇಳೆಗೆ ಮಳೆ ತರಲು, ಅದಕ್ಕಾಗಿ ಈತ ದುಡಿಯುತ್ತಿರುವನು.ಭೂಮಿಯನ್ನು ಪೋಷಿಸುತ್ತಿರುವವನು ಸೂರ್ಯ, ಭೂಮಿಗೆ ಆತನ ಅಗತ್ಯ ಬಹಳವಾಗಿದೆ. ಆದರೆ ಸೂರ್ಯನಿಗೆ ಹೊಗಳಿಕೆ ಬೇಕಿಲ್ಲ. ಯಾರಾದರೂ ಆತನನ್ನು ದೂಷಿಸಿದರೆ ಆತ ಕುಗ್ಗುವುದಿಲ್ಲ. ಅತನು ನಮಗೆ ಬೆಳಕು – ಬಿಸಿಲನು, ನೀಡುವುದು ತನ್ನ ಕರ್ತವ್ಯವೆಂದು ತಿಳಿದು ನಿಷ್ಠೆಯಿಂದ ಮಾಡುತ್ತಿರುವನು. ಆದರೆ ಮನುಷ್ಯ ಬಿಸಿಲು ಹೆಚ್ಚಿದಾಗ ಸೂರ್ಯನನ್ನು ದೂಷಿಸುವನು. ಆದರೆ ಪ್ರಕೃತಿಯಲ್ಲಿನ ಮರ ಗಿಡ ಪೊದೆ ಬಳ್ಳಿಯ ಮೇಲೂ ಅದೇ ಬಿಸಿಲು ಬಿದ್ದರೂ ಅವು ಕಂಗಾಲಾಗದೆ ಹಸಿರಿನ ಚಿಗುರು ಹೂ, ಕಾಯಿ, ಹಣ್ಣುಗಳನ್ನು ನೀಡುತ್ತಾ ಸಂಭ್ರಮಿಸುತ್ತಿವೆ. ನಾವು ಕೂಡ ಸೂರ್ಯನಿಂದ ಹಾಗೂ ಪ್ರಕೃತಿಯಿಂದ, ನಮ್ಮ ಕರ್ತವ್ಯವನ್ನು ನಾವು ಮಾಡುತ್ತಾ ನಾವು ನಗುತ್ತಾನಲಿಯುತ್ತಾ, ಇತರರನ್ನು ನಗಿಸಿ, ನಲಿಸುತ್ತಾ ಧನ್ಯತೆಯನ್ನು ಪಡೆಯೋಣ” ಮತ್ತು ಅದರಂತೆ ಬಾಳೋಣ” ಎಂಬುದು “ಬೇಸಿಗೆ” ಎಂಬ ಪದ್ಯದ ಸಾರಾಂಶವಾಗಿದೆ.