INDIA – GEOGRAPHICAL POSITION AND PHYSICAL FEATURES|ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು
ಅಭ್ಯಾಸಗಳು
1. ಬಿಟ್ಟ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿ.
1) ಇಂಡಿಯಾ ಎಂಬ ಹೆಸರು ಸಿಂಧೂ ನದಿಯಿಂದ ಬಳಕೆಗೆ ಬಂದಿದೆ
2) ಭಾರತವು ಒಟ್ಟು 32,87,263 ಚದರ ಕಿ.ಮೀಗಳಷ್ಟು ವಿಸ್ತಾರವಾಗಿದೆ.
3) ಭಾರತದ ಮಧ್ಯಭಾಗದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ಉತ್ತರ ಅಕ್ಷಾಂಶ ಹಾಯ್ದು ಹೋಗುತ್ತದೆ.
4) ಭಾರತದ ಮುಖ್ಯ ಭೂಭಾಗವು ಹೊಂದಿರುವ ಕರಾವಳಿಯು 6,100 ಕಿ.ಮೀ.ಗಳಷ್ಟು ಆಗಿದೆ.
5) ಭಾರತದ ಭೂಸ್ವರೂಪವನ್ನು 4 (ನಾಲ್ಕು) ಪ್ರಧಾನ ವಿಭಾಗಗಳಾಗಿ ವಿಂಗಡಿಸಲಾಗಿದೆ.
6) ಮಹಾ ಹಿಮಾಲಯವನ್ನು ಹಿಮಾದ್ರಿ ಎಂದೂ ಕರೆಯುವರು.
7) ಪ್ರಪಂಚದಲ್ಲಿಯೇ ಮೌಂಟ್ ಎವರೆಸ್ಟ್ ಅತ್ಯುನ್ನತ ಶಿಖರವಾಗಿದೆ.
8) ಉತ್ತರ ಭಾರತದ ಮೈದಾನವು ಮೆಕ್ಕಲು ಮಣ್ಣಿನಿಂದ ನಿರ್ಮಾಣವಾಗಿದೆ.
II. ಕೆಳಗಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿರಿ.
10) ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿದೆ?
ಉತ್ತರ:- ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ.
11) ಭಾರತವು ಭೂಮಿಯ ಯಾವ ಗೋಳಾರ್ಧದಲ್ಲಿದೆ?
ಉತ್ತರ:-ಭಾರತವು ಸಂಪೂರ್ಣವಾಗಿ ಉತ್ತರಾರ್ಧ ಗೋಳದಲ್ಲಿದೆ. ಭಾರತವು ಭೌಗೋಳಿಕವಾಗಿ ಉತ್ತರ ಗೋಳಾರ್ಧ ಹಾಗೂ ಪೂರ್ವ ಗೋಳಾರ್ಧದ ಮಧ್ಯದಲ್ಲಿ ನೆಲೆಸಿದೆ. ಇದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿ ತ್ರಿಕೋನಾಕೃತಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಾಚಿಕೊಂಡಿದೆ.
12) ಭಾರತದ ಭೂರಾಶಿಯ ದಕ್ಷಿಣ ತುದಿ ಯಾವುದು?
ಉತ್ತರ:- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇನ್ನೂ ದಕ್ಷಿಣಕ್ಕೆ ವಿಸ್ತರಿಸಿವೆ. ನಿಕೋಬಾರ್ ದ್ವೀಪದ 6°.45′ ದಕ್ಷಿಣ ಅಕ್ಷಾಂಶದಲ್ಲಿರುವ ‘ಇಂದಿರಾ ಪಾಯಿಂಟ್’ ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ.
13) ಇಂದಿರಾಪಾಯಿಂಟ್ ಯಾವ ದ್ವೀಪದಲ್ಲಿದೆ?
ಉತ್ತರ:- ಇಂದಿರಾಪಾಯಿಂಟ್ ನಿಕೋಬಾರ್ ದ್ವೀಪದ ದಕ್ಷಿಣ ತುದಿಯಲ್ಲಿದೆ.
14) ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ಯಾವುದು?
ಉತ್ತರ:-“ಶಿವಾಲಿಕ್ ಶ್ರೇಣಿ” ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರಾಗಿದೆ.
15) ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಯಾವುದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?
ಉತ್ತರ:- ಭಾರತದ ಭೂಸ್ವರೂಪ ವಿಭಾಗಗಳಲ್ಲಿ ‘ಶಿವಾಲಿಕ್ ಶ್ರೇಣಿ’ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ.
16) ಹಿಮಾಲಯ ಪರ್ವತದಿಂದಾಗುವ ಪ್ರಯೋಜನಗಳು ಯಾವುವು?
ಉತ್ತರ:- ಹಿಮಾಲಯ ಪರ್ವತ ಶ್ರೇಣಿಗಳು ಭಾರತದ ಜನಜೀವನದ ಮೇಲೆ ಅಪಾರ ಪ್ರಭಾವವನ್ನು ಬೀರುತ್ತವೆ.
(1) ಇವು ಭಾರತಕ್ಕೆ ರಕ್ಷಣೆಯನ್ನು ಒದಗಿಸುತ್ತವೆ.
(2) ಉತ್ತರ ಏಷ್ಯಯಾದಿಂದ ಬೀಸುವ ಶೀತಗಾಳಿಗಳನ್ನು ತಡೆಹಿಡಿಯುತ್ತವೆ. ನದಿಗಳ ಉಗಮ ಪ್ರದೇಶವಾಗಿವೆ.
(3) ಜಲವಿದ್ಯುಚ್ಛಕ್ತಿ ಉತ್ಪಾದನೆಗೆ ಅನುಕೂಲವಾಗಿವೆ.
(4) ಇದು ವಿಶಾಲವಾದ ಮೈದಾನಗಳನ್ನು ನಿರ್ಮಿಸಿವೆ.
(5) ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ.
(6) ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಒಳಗೊಂಡಿವೆ.
(7) ಪ್ರವಾಸೋದ್ದಿಮೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಪ್ರಾಮುಖ್ಯತೆಯನ್ನು ಪಡೆದಿದೆ.
17) ಪರ್ಯಾಯ ಪ್ರಸ್ಥಭೂಮಿಯು ಹೊಂದಿರುವ ವ್ಯಾಪ್ತಿಯನ್ನು ವಿವರಿಸಿ.
ಉತ್ತರ:-ಪರ್ಯಾಯ ಪ್ರಸ್ಥಭೂಮಿಯು ಸಟ್ಲಜ್ ಗಂಗಾ ಮೈದಾನದ ದಕ್ಷಿಣದಲ್ಲಿ ಹಿಂದೂಮಹಾಸಾಗರದವರೆಗೂ ಚಾಚಿಕೊಂಡಿದೆ. ಇದರ ಒಟ್ಟು ಕ್ಷೇತ್ರ ಸುಮಾರು 16 ಲಕ್ಷ ಚ.ಕಿ.ಮೀ. ಇದು ಉತ್ತರದಲ್ಲಿ ಅರಾವಳಿ ಪರ್ವತದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಹರಡಿದೆ. ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳಿಂದ ಪೂರ್ವದಲ್ಲಿ ‘ಜಾರ್ಖಂಡ್’ನ ರಾಜಮಹಲ್ ಬೆಟ್ಟಗಳವರೆಗೆ ಸುಮಾರು 1400 ಕಿ.ಮೀ ಅಗಲವಾಗಿದೆ. ಈ ಪರ್ಯಾಯ ಪ್ರಸ್ಥಭೂಮಿಯು ತ್ರಿಕೋನಾಕೃತಿಯಲ್ಲಿದ್ದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿದೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಬಂಗಾಳಕೊಲ್ಲಿ ಹಾಗೂ ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಗಳನ್ನು ಇದು ಒಳಗೊಂಡಿದೆ.
18) ಸಿವಾಲಿಕ್ ಶ್ರೇಣಿಯನ್ನು ಕುರಿತು ಬರೆಯಿರಿ.
ಉತ್ತರ:- ಶಿವಾಲಿಕ್ ಶ್ರೇಣಿ : ಇದು ಹಿಮಾಲಯ ಪರ್ವತಗಳಲ್ಲಿ ಇತ್ತೀಚಿಗೆ ನಿರ್ಮಿತವಾದುದು. ಇದು ಅತ್ಯಂತ ದಕ್ಷಿಣದಲ್ಲಿರುವ ಸರಣಿ ಹಾಗೂ ಅತಿ ಕಡಿಮೆ ಎತ್ತರವನ್ನು ಹೊಂದಿದೆ. ಇದನ್ನು ಹಿಮಾಲಯದ ಪಾದ ಬೆಟ್ಟಗಳು ಎಂದೂ ಸಹ ಕರೆಯುವರು. ಇಲ್ಲಿ ಸಮತಟ್ಟಾದ ಕಿರಿದಾದ ಮೈದಾನಗಳಿವೆ. ಈ ಮೈದಾನಗಳನ್ನು ಡೂನ್ಗಳು ಎಂದು ಕರೆಯುವರು.
ಉದಾ : ಡೆಹರಾ ಡೂನ್, ಕೋಟಾ, ಪಾಟ್ಲಿ ಚೌಕಾಂಬಾ, ಉದಾಂಪೂರ ಮತ್ತು ಕೋಟ್ಲಾಗಳು. ಇವು ಸಮುದ್ರದಿಂದ 600-1500 ಮಿ.ಗಳಷ್ಟು ಎತ್ತರವಾಗಿವೆ. ಇವು ಪರ್ವತಗಳು ನೈಸರ್ಗಿಕ ಗಡಿಗಳಾಗಿವೆ ಹಾಗೂ ಮಧ್ಯ ಏಷ್ಯಾದಿಂದ ಬೀಸುವ ಶೀತಗಾಳಿಯನ್ನು ನಿಯಂತ್ರಿಸುತ್ತವೆ. ಇವು ಮಳೆ ಮಾರುತಗಳನ್ನು ತಡೆದು ಅಧಿಕ ಮಳೆಯಾಗಲು ನೆರವಾಗುತ್ತವೆ. ಖನಿಜಗಳ ಉಗ್ರಾಣಗಳಾಗಿವೆ. ಹಲವು ನದಿಗಳ ಉಗಮ ಸ್ಥಾನಗಳಾಗಿವೆ.
19) ಉತ್ತರದ ಮೈದಾನವನ್ನು ಸಂಚಯನ ಮೈದಾನವೆಂದು ಕರೆಯುತ್ತಾರೆ. ಏಕೆ?
ಉತ್ತರ:-ಉತ್ತರ ಭಾರತದ ಮಹಾ ಮೈದಾನವನ್ನು ಸಟ್ಲಜ್ ಗಂಗಾ ಮೈದಾನವೆಂತಲೂ ಕರೆಯುವರು. ಇದು ಉತ್ತರದಲ್ಲಿ ಹಿಮಾಲಯ ಪರ್ವತಗಳು ಹಾಗೂ ದಕ್ಷಿಣದಲ್ಲಿ ಪರ್ಯಾಯ ಪ್ರಸ್ಥಭೂಮಿಯ ನಡುವೆ ಕಂಡು ಬರುವುದು. ಈ ಮೈದಾನವು ಪಶ್ಚಿಮದ ಸಿಂಧೂ ನದಿಯ ಮೈದಾನದಿಂದ ಪೂರ್ವದಲ್ಲಿ ಬ್ರಹ್ಮಪುತ್ರ ಕಣಿವೆಯವರೆಗೂ ವಿಸ್ತರಿಸಿದೆ. ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 2400 ಕಿ.ಮೀ ಉದ್ದವಾಗಿರುವ ಈ ಮೈದಾನವು 70 ರಿಂದ 500 ಕಿ.ಮೀ. ಅಗಲವಾಗಿದೆ. ಈ ಮೈದಾನವು ಬಹುತೇಕವಾಗಿ ಸಮತಟ್ಟಾಗಿದೆ. ಉತ್ತರ ಭಾರತದ ಮೈದಾನವು ಸಟ್ಲಜ್, ಗಂಗಾ ಮತ್ತು ಬ್ರಹ್ಮಪುತ್ರ – ಈ ಮೂರು ನದಿಗಳ ‘ಸಂಚಯ ಕಾರ್ಯ’ದಿಂದ ನಿರ್ಮಾಣಗೊಂಡದ್ದು, ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವುದರಿಂದ ಇದು “ಸಂಚಯನ ಮೈದಾನ’ವಾಗಿದೆ.
20) ಪಶ್ಚಿಮ ಘಟ್ಟಗಳು ಪೂರ್ವ ಘಟ್ಟಗಳಿಗಿರುವ ವ್ಯತ್ಯಾಸವನ್ನು ತಿಳಿಸಿ.
ಉತ್ತರ:-