ಹಕ್ಕಿ ಹಾರುತ್ತಿದೆ ನೋಡಿದಿರಾ
ಅಭ್ಯಾಸ .
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
ಉತ್ತರ:- ಕಣ್ಣ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಹಕ್ಕಿಯು ಅಷ್ಟೊಂದು ವೇಗದಲ್ಲಿ ಹಾರುತ್ತಿದೆ.
2. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಉತ್ತರ:- ಹಕ್ಕಿಯ ಗರಿಯಲ್ಲಿ ಕರಿ, ಬಿಳಿ, ಕೆಂಪು, ಹಳದಿ ಬಣ್ಣಗಳಿವೆ.
3. ಹಕ್ಕಿಯ ಕಣ್ಣುಗಳು ಯಾವುವು?
ಉತ್ತರ:- ಸೂರ್ಯ ಚಂದ್ರರೇ ಹಕ್ಕಿಯ ಕಣ್ಣುಗಳು.
4. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಉತ್ತರ:- ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
5. ಹಕ್ಕಿ ಯಾರನ್ನು ಹರಸಿದೆ?
ಉತ್ತರ:- ಹಕ್ಕಿಯು ಹಸಿಮಕ್ಕಳನ್ನು ಹರಸಿದೆ.
6. ಹಕ್ಕಿಯು ಯಾವುದರ ಸಂಕೇತವಾಗಿದೆ?
ಉತ್ತರ:- ಹಕ್ಕಿಯು ಕಾಲದ ಸಂಕೇತವಾಗಿದೆ.
7. ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?
ಉತ್ತರ:- ಹಕ್ಕಿಯ ಚುಂಚಗಳು ದಿಗ್ಮಂಡಲದ ಆಚೆಗೂ ಚಾಚಿವೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?’
ಉತ್ತರ:- ಕಾಲವೆಂಬ ಹಕ್ಕಿಯ ಗಾತ್ರವು ಬಹಳ ದೊಡ್ಡದು. ಅದರ ಹಾರಾಟಕ್ಕೆ ಸಾಮಾನ್ಯವಾದಂತಹ ಸ್ಥಳವು ಸಾಲದು. ಅದರ ಹಾರಾಟಕ್ಕೆ ವಿಶಾಲವಾದ, ಕೊನೆಯಿಲ್ಲದ ಆಕಾಶವೇ ಬೇಕು.
2. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಉತ್ತರ:- ಹಳೇ ಜನಾಂಗವು ಕಳೆದು ಹೋಗುತ್ತಿದ್ದಂತೆಯೇ ಹೊಸ ಜನಾಂಗವು ಉದಯಿಸಿ ಬರುವದು ನಿಸರ್ಗ ನಿಯಮ, ಹೊಸ ಕಾಲದ ಪ್ರತಿನಿಧಿಗಳಾದ ಹಸುಮಕ್ಕಳನ್ನು ಈ ಕಾಲವೆಂಬ ಹಕ್ಕಿಯು ತನ್ನ ಮುಕ್ತ ಹಸ್ತದಿಂದ ಹರಸಿದೆ.
3. ಹಕ್ಕಿಯು ಯಾವ ಮೇರೆ ಮೀರಿ, ನೀರನು ಹೀರಿದೆ?
ಉತ್ತರ:- ಹಕ್ಕಿಯು ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ ತಿಂಗಳೂರಿನ ನೀರನು ಹೀರಿದೆ.
ಇ) ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವವು?
ಉತ್ತರ:- ಯುಗ ಯುಗಗಳಿಂದಲೂ ಶತ ಶತಮಾನ ಗಳಿಂದಲೂ ಈ ಕಾಲದ ಹಕ್ಕಿಯು ವಿಶಾಲವಾದಂತಹ ನಭೋಮಂಡಲದಲ್ಲಿ ಹಾರುತ್ತಲೇ ಬಂದಿದೆ. ಅದೆಷ್ಟೋ ರಾತ್ರಿ ಹಗಲುಗಳು ಕಳೆದಿವೆ. ಕಣ್ಮುಚ್ಚಿ ಕಣ್ ತೆರೆಯುವಷ್ಟರಲ್ಲಿ ಈ ಹಕ್ಕಿಯು ಗಾವುದ ಮುಂದೆ ಚಲಿಸಿದೆ. ಈ ಹಕ್ಕಿಗೆ ಕರಿ, ಬಿಳಿ, ಕೆಂಪು, ಹಳದಿ ರೆಕ್ಕೆಗಳು ಪಕ್ಕದಲ್ಲಿ ಇವೆ. ಅಂದರೆ ಕಾಲವೆಂಬ ಹಕ್ಕಿಯು ವೈವಿಧ್ಯಮಯವಾದ ಪ್ರದೇಶಗಳನ್ನು ತಡಿಹಾಯುತ್ತ ವಿವಿಧ ಜನಾಂಗಗಳನ್ನು ನೋಡುತ್ತಾ ಮುಂದೆ ಸಾಗಿದೆ. ಅನೇಕ ಘಟನಾವಳಿಗಳನ್ನು ಇತಿಹಾಸವನ್ನಾಗಿಸಿಕೊಂಡು ಮುಂದೆ ಸಾಗಿದೆ. ಈ ಕಾಲವೆಂಬ ಹಕ್ಕಿಗೆ ನೀಲಮೇಘ-ಮಂಡಲದ ಸಮನಾದ ಬಣ್ಣವಿದೆ. ಮುಗಿಲೇ ರೆಕ್ಕೆ ಮೂಡಿಸಿ ಕೊಂಡಿರುವಂತಿದೆ. ಸೂರ್ಯ ಚಂದ್ರರನ್ನೇ ತನ್ನ ಕಣ್ಣುಗಳಾಗಿ ಮಾಡಿಕೊಂಡಿದೆ. ರಾಜ್ಯ ಸಾಮ್ರಾಜ್ಯಗಳೆಂಬ ತೆನೆಗಳನ್ನು ಒಕ್ಕಿ ರಾಶಿ ಮಾಡಿದೆ. ಮಂಡಲಗಿಂಡಲಗಳನ್ನು ಕಬಳಿಸಿದೆ. ಸಾರ್ವಭೌಮರ ರೆಕ್ಕೆಯನ್ನು ಕುಕ್ಕಿದೆ. ಯುಗ ಯುಗಗಳ ಹಣೆಬರಹವನ್ನು ಬರೆಸಿದೆ. ಮನ್ವಂತರಗಳ ಭಾಗ್ಯವನ್ನು ತೆರೆಸಿದೆ. ರೆಕ್ಕೆಗಳ ಬೀಸುತ್ತ ಹೊಸ ಚೈತನ್ಯವನ್ನು ಸೂಸುತ್ತ ಹೊಸಗಾಲದ ಹಸುಮಕ್ಕಳನ್ನು ಹರಸಿದೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ:
1. “ರೆಕ್ಕೆಗಳೆರಡು ಪಕ್ಕದಲ್ಲುಂಟು.”
ಉತ್ತರ:- ವಿವರಣೆ: ವರಕವಿ ದ.ರಾ. ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವನ ದಿಂದ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ. ಗರಿ ಕವನ ಸಂಕಲನದೊಳಗಿನ ಕವಿತೆ ಇದು.
ವಿವರಣೆ: ಪ್ರಸ್ತುತ ವಾಕ್ಯವನ್ನು ವರಕವಿ ದ.ರಾ ಬೇಂದ್ರೆಯವರು ಬರೆದಿರುವ ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯಿಂದ ಆರಿಸಿಕೊಳ್ಳಲಾಗಿದೆ.
ಕಾಲವೆಂಬ ಹಕ್ಕಿಯು ಹಗಲು, ಇರುಳುಗಳೆಂಬ ಎರಡು ರೆಕ್ಕೆಗಳನ್ನು ಹೊಂದಿದೆ. ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಗಾವುದ ಗಾವುದ ಮುಂದಕ್ಕೆ ಹಾರುತ್ತದೆ. ಇದಕ್ಕೆ ಕರಿ ಬಿಳಿ ಬಣ್ಣದ ಪುಚ್ಚಗಳುಂಟು, ಬಿಳಿ ಹೊಳೆ ಬಣ್ಣದ ಗರಿ ಗರಿಯುಂಟು. ಕೆಂಪು, ಹಳದಿ ಬಣ್ಣಗಳ ಎರಡು ಬಣ್ಣದ ರೆಕ್ಕೆಗಳು ಪಕ್ಕದಲ್ಲಿ ಉಂಟು. ಇಂತಹ ಹಕ್ಕಿ ಹಾರುತಿದೆ ನೋಡಿದಿರಾ.
2. “ಸಾರ್ವಭೌಮರಾ ನೆತ್ತಿಯ ಕುಕ್ಕಿ”
ಉತ್ತರ:- ವಿವರಣೆ: ವರಕವಿ ದ.ರಾ. ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವನ ದಿಂದ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ. ಗರಿ ಕವನ ಸಂಕಲನದೊಳಗಿನ ಕವಿತೆ ಇದು..
ವಿವರಣೆ: ಕಾಲವೆಂಬ ಹಕ್ಕಿಯು ತನ್ನ ಸ್ವಭಾವ ಸಹಜವಾದಂತಹ ಪರಿವರ್ತನಶೀಲ ಗುಣದಿಂದ ಹಾರಾಡುತ್ತದೆ. ಸಾರ್ವಭೌಮರು ಯಾರಾದರೂ ಅದನ್ನು ತಡೆಯುವಂತಹ ದುಸ್ಸಾಹಸವನ್ನು ಮಾಡಿದ್ದೇ ಆದರೆ ಅವರ ನೆತ್ತಿಯನ್ನು ಕುಕ್ಕಿ ಕುಕ್ಕಿ ಹಕ್ಕಿಯು ಗಾವುದ ಗಾವುದ ವೇಗದಿಂದ ಹಾರುತ್ತಿದೆ.
3. ‘ಬಲ್ಲರು ಯಾರಾ ಹಾಕಿದ ಹೊಂಚ’.
ಉತ್ತರ:- ವಿವರಣೆ: ವರಕವಿ ದ.ರಾ. ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವನ ದಿಂದ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ. ಗರಿ ಕವನ ಸಂಕಲನದೊಳಗಿನ ಕವಿತೆ ಇದು.
ಕಾಲವೆಂಬ ಹಕ್ಕಿಯು ಮೇಲಕ್ಕೆ ಮೇಲಕ್ಕೆ ಏರುತ್ತಾ ದಿಗಂಡಲಗಳ ಅಂಚನ್ನು ಮುಟ್ಟಿದೆ. ಅದಕ್ಕಿಂತಲೂ ಆಚೆಗೆ ಆಚೆಗೆ ತನ್ನ ಚುಂಚನ್ನು ಚಾಚಿದೆ. ಹೀಗೆ ಚಾಚಿರುವ ಕಾರಣ ಬ್ರಹ್ಮಾಂಡವನ್ನು ಒಡೆಯಲೆಂದು ಯಾರಾದರೂ ಹೊಂಚು ಹಾಕಿರಬಹುದೇ? ಅಂತೂ ಈ ಹಕ್ಕಿಯ ಹಾರಾಟದಲ್ಲಿ ಯಾರೂ ಅರಿಯದಂತಹ ಒಂದು ನಿಗೂಢತೆ ಇದೆ. ನವನವೀನತೆ ಇದೆ.
4. “ಹೊಸಗಾಲದ ಹಸುಮಕ್ಕಳ ಹರಸಿ”
ಉತ್ತರ:- ವಿವರಣೆ: ವರಕವಿ ದ.ರಾ. ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವನ ದಿಂದ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ. ಗರಿ ಕವನ ಸಂಕಲನದೊಳಗಿನ ಕವಿತೆ ಇದು.
ವಿವರಣೆ: ಕಾಲಧರ್ಮಕ್ಕೆ ಅನುಸರಿಸಿ ಹಳೆಯ ಕಾಲದ ಜನಾಂಗವು ಹೋಗಿ ಹೊಸ ಜನಾಂಗವು ಬರಲೇಬೇಕು ಮತ್ತು ಬಂದೇ ಬರುತ್ತದೆ. ಹಸುಮಕ್ಕಳು ಈ ಹೊಸ ಯುಗದ ವೀರ ಪ್ರತಿನಿಧಿಗಳಾಗಿ ಜನಿಸಿ ಬರುತ್ತಾರೆ. ಈ ಕಾಲವೆಂಬ ಹಕ್ಕಿಯು ಈ ಹಸುಮಕ್ಕಳನ್ನೆಲ್ಲಾ ಹರಸಿ ಹರಸಿ ಮುಂದೆ ಸಾಗಿದೆ. ಅವರ ಹರಕೆ ಹೊಸ ಜನಾಂಗಕ್ಕೆ ಬೇಕೇ ಬೇಕು.
5. “ಮಂಗಳ ಲೋಕದ ಅಂಗಳಕೇರಿ”
ಉತ್ತರ:- ವಿವರಣೆ: ವರಕವಿ ದ.ರಾ. ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವನ ದಿಂದ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ. ಗರಿ ಕವನ ಸಂಕಲನದೊಳಗಿನ ಕವಿತೆ ಇದು.
ವಿವರಣೆ: ಹಕ್ಕಿಗಳ ಬೆಳ್ಳಿ ಹಳದ್ದಿಯ ಮೇಲೇರಿ ಆಡುತ್ತಾ ಹಾಡುತ್ತಾ ಮೇಲೇರಿ ಚಂದದ ಬಗ್ಗೆ ಹೇಳುತ್ತಾ ಈ ವಾಕ್ಯವನ್ನು ವರ್ಣಿಸಿದ್ದಾರೆ. ಮುಗಿಲೆತ್ತರಕ್ಕೆ ಬಾನಿನಂಗಳದಲ್ಲಿ ಹಾರುವ ಹಕ್ಕಿಯನ್ನು ಕಂಡು, ಬಹುಶಃ ಮಂಗಳ ಲೋಕದ ಅಂಗಳದವರೆಗೂ ಹಾರಬಹುದೆಂಬ ಭಾವನೆ ಉಂಟಾಗುತ್ತದೆ. ಮೇಲೆ ಹಾರುವ ಅದರ ಅಂದಚೆಂದ ನೋಡಲು ಬಲು ಚೆಂದ ಎಂಬುದಾಗಿ ವರ್ಣಿಸಿದ್ದಾರೆ.
ಉ) ಹೊಂದಿಸಿ ಬರೆಯಿರಿ:
1. ಹಕ್ಕಿ – ಜ್ಞಾನಪೀಠ ಪ್ರಶಸ್ತಿ =
2. ನಾಕುತಂತಿ – ಪಕ್ಷಿ
3. ನೀಲಮೇಘಮಂಡಲ- ಖಂಡ-ಖಂಡಗಳ .
4. ರಾಜ್ಯದ ಸಾಮ್ರಾಜ್ಯದ – ತೆನೆ ಒಕ್ಕಿ
5. ತೇಲಿಸಿ ಮುಳುಗಿಸಿ – ಸಮ ಬಣ್ಣ
6. ಮಂಗಳ – ಭಾಗ್ಯವ ತೆರೆಸಿ
ಅಂಗಳಕೇರಿ
ಉತ್ತರಗಳು:
1. ಹಕ್ಕಿ – ಪಕ್ಷಿ
2. ನಾಕುತಂತಿ – ಜ್ಞಾನಪೀಠ ಪ್ರಶಸ್ತಿ =
3. ನೀಲಮೇಘಮಂಡಲ- ಸಮ ಬಣ್ಣ
4. ರಾಜ್ಯದ ಸಾಮ್ರಾಜ್ಯದ – ತೆನೆ ಒಕ್ಕಿ
5. ತೇಲಿಸಿ ಮುಳುಗಿಸಿ – ಖಂಡ-ಖಂಡಗಳ .
6. ಮಂಗಳ ಅಂಗಳಕೇರಿ
ಭಾಷಾ ಚಟುವಟಿಕೆ
ಅ)
1. ಕೊಟ್ಟಿರುವ ಪದಗಳ ಸಮಾನಾರ್ಥಕ ಪದ ಬರೆಯಿರಿ:
ಸೂರ್ಯ, ಮೇಘ, ಗಡ, ಹರಸು, ಒಕ್ಕಿ, ಕೆನ್ನ
ಉತ್ತರ:ಸೂರ್ಯ – ದಿನಕರ, ಭಾಸ್ಕರ, ಭಾನು
ಮೇಘ – ಮೋಡ
ಗಡ – ಬೇಗನೆ
ಹರಸು – ಆಶೀರ್ವದಿಸು
ಒಕ್ಕಿ- ರಾಶಿ ಮಾಡಿ
ಕೆನ್ನ – ಕೆಂಪು
2. ತತ್ಸಮ-ತದ್ಭವ ಬರೆಯಿರಿ :
ಬಣ್ಣ, ಬ್ರಹ್ಮ, ಚಂದ್ರ, ಯುಗ, ಅಂಗಳ
ಉತ್ತರ:
ಬಣ್ಣ –ವರ್ಣ
ಚಂದ್ರ- ಚಂದಿರ
ಬ್ರಹ್ಮ- ಬೊಮ್ಮ
ಯುಗ – ಜುಗ
ಅಂಗಳ- ಅಂಗಣ.
3. ಸಂಧಿ ಬಿಡಿಸಿ ಹೆಸರಿಸಿರಿ:
ಇರುಳಳಿದು, ತೆರೆದಿಕ್ಕುವ, ಹೊಸಗಾಲ, ಮನ್ವಂತರ, ತಿಂಗಳಿನೂರು
ಉತ್ತರ:
ಇರುಳು+ಅಳಿದು=ಇರುಳಳಿದು,ಸ್ವರಲೋಪ ಸಂಧಿ
ತೆರೆದು+ಇಕ್ಕುವ=ತೆರೆದಿಕ್ಕುವ,ಸ್ವರಲೋಪ ಸಂಧಿ
ಹೊಸ+ಕಾಲ=ಹೊಸಗಾಲ,ಆದೇಶ ಸಂಧಿ
ಮನು+ಅಂತರ = ಮನ್ವಂತರ,ಯಣ್ ಸಂಧಿ
ತಿಂಗಳಿನ+ಊರು = ತಿಂಗಳಿನೂರು,ಸ್ವರಲೋಪ ಸಂಧಿ
4. ಈ ಪದ್ಯದಲ್ಲಿ ಬರುವ ದ್ವಿರುಕ್ತಿ ಪದಗಳನ್ನು ಪಟ್ಟಿ ಮಾಡಿರಿ.
ಉತ್ತರ:- ಇರುಳಿರುಳು, ಬಿಳಿಹೊಳೆ, ಗರಿಗರಿ, ಬಣ್ಣ-ಬಣ್ಣ, ಖಂಡಖಂಡ.
ಆ. ಕೊಟ್ಟಿರುವ ಅವ್ಯಯ ಪದಗಳು ಯಾವ ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ.
ಉತ್ತರ:-
ಅದುವೆ –ಸಾಮಾನಾವ್ಯಯ
ಆದ್ದರಿಂದ – ಸಂಬಂಧಾರ್ಥಾಕವ್ಯಯ
ಅಯ್ಯೋ- ಭಾವಸೂಚಕಾವ್ಯ
ಬೇಗನೆ-ಸಾಮಾನಾವ್ಯಯ
ಧಗಧಗ – ಅನುಕರುಣಾವ್ಯಯ
ಸಾಕು – ಕ್ರಿಯಾರ್ಥಕಾವ್ಯಯ
ಓಡೋ –ಭಾವಸೂಚಕಾವ್ಯಯ
ಹೌದು – ಕ್ರಿಯಾರ್ಥಕಾವ್ಯಯ
ನೀನೇ – ಅವಧರಣಾರ್ಥಕಾವ್ಯಯ
ರೊಯ್ಯನೆ – ಅನುಕರಣಾವ್ಯಯ
ಮೆಲ್ಲನೆ – ಸಾಮಾನಾವ್ಯಯ
ಅಲ್ಲದೆ –ಸಂಬಂಧಾರ್ಥಕಾವ್ಯಯ.
ಚಟುವಟಿಕೆ
5. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.
1. ನೀಲ ಮೇಘಮಂಡಲ——————————–
——————————————————–
—————————-ಹಕ್ಕಿ ಹಾರುತಿದೆ ನೋಡಿದಿರಾ
ಉತ್ತರ:-
ನೀಲಮೇಘ ಮಂಡಲ ಸಮಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ.
2. ಯುಗ ಯುಗಗಳು—————————
—————————————————-
————————————————-
——————————ಹಕ್ಕಿ ಹಾರುತಿದೆ ನೋಡಿದಿರಾ.
ಉತ್ತರ:-
ಯುಗ ಯುಗಗಳ ಹಣೆಬರೆಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ.