ವ್ಯಾಘ್ರಗೀತೆ
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಭಗವದ್ಗೀತೆಯನ್ನು ರಚಿಸಿದವರು ಯಾರು?
ಉತ್ತರ:- ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು.
2. ಹುಲಿಗೆ ಪರಮಾನಂದವಾಗಲು ಕಾರಣವೇನು?
ಉತ್ತರ:- ತುಂಬಾ ಹಸಿದುಕೊಂಡಿದ್ದ ಹುಲಿಗೆ, ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ ಪರಮಾನಂದವಾಯಿತು.
3 ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
ಉತ್ತರ:- ಹುಲಿಯಿಂದ ತಪ್ಪಿಸಿಕೊಳ್ಳಲು, ನಿಂತ ಕಡೆಯಲ್ಲೇ ಹುಲಿಯ ವೇಗಕ್ಕೆ ಸರಿಯಾಗಿ ಚಾಚೂ ತಪ್ಪದಂತೆ ತಮ್ಮವೇಗವನ್ನೂ ಹೊಂದಿಸಿಕೊಂಡು ಕುಲಾಲಚಕ್ರದಂತೆ ತಿರುಗಿದರು. ಇದರಿಂದ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು.
4. ಶಾನುಭೋಗರ ‘ಬ್ರಹ್ಮಾಸ್ತ್ರ’ ಯಾವುದು?
ಉತ್ತರ:- ಶಾನುಭೋಗರ ಬ್ರಹ್ಮಾಸ್ತ್ರ ಅವರ ಹತ್ತಿರವಿದ್ದ ಖಿರ್ದಿ ಪುಸ್ತಕ.
5. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?
ಉತ್ತರ:- ಹಸಿದು ಮಲಗಿದ್ದ ಹುಲಿಯು ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?
ಉತ್ತರ:- ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ‘ಕಾಡು ದಾರಿ ಆದರೂ ಬೆಳದಿಂಗಳ ದಿನ, ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು’ ಎಂದು ಯೋಚಿಸಿದರು.
2. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?
ಉತ್ತರ:- ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನೆಂದರೆ- ಭರತ ಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವಷ್ಟೇ. ಆದ್ದರಿಂದಲೇ ಹುಲಿ ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ.
3. ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ.
ಉತ್ತರ:- ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದದ್ದು ಇಷ್ಟು, ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು ಹರದಾರಿಯಿದೆ ಎನ್ನುವಾಗ ಎತ್ತುಗಳು ಏನು ಮಾಡಿದರೂ ಮುಂದೆ ಹೋಗದೆ ಕಣಿ ಹಾಕಿಕೊಂಡವು. ತಕ್ಷಣವೇ ಹುಲಿಯ ಗರ್ಜನೆಯೂ ಕೇಳಿಸಿತು. ಎತ್ತುಗಳ ಘಂಟೆಯ ಶಬ್ದ, ರೈತರ ಮಾತುಗಳನ್ನು ಕೇಳಿದ ಹುಲಿ ನಿರಾಶೆಯಿಂದಲೂ, ಕೋಪದಿಂದಲೂ ಗರ್ಜಿಸಿ ಪಲಾಯನ ಮಾಡಿತು. ನಂತರ ರೈತರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾ ತೆಂಗಿನಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದುವರೆದರು. ಮೂರ್ಛಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರೆರಚಿ ಎಚ್ಚರಿಸಿದರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ.
ಉತ್ತರ:- ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆ ಯಾಡುವ ಬಗೆ ಹೀಗಿದೆ: ಯಾರನ್ನೇ ಆಗಲಿ, ಭರತ ಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೇ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವಷ್ಟೆ. ಆದ್ದರಿಂದ ಹುಲಿ ತನ್ನ ಬೇಟೆಯ ಅಭಿಮುಖವಾಗಿಯೇ ಬರುತ್ತದೆ. ಬೇಟೆಯನ್ನು ಹಾದು ಮುಂದೆ ಹೋಗುವುದು ಕಷ್ಟವಾದಾಗ, ಅವನ ಹಿಂದೆ ನಿಶ್ಯಬ್ದ ವಾಗಿ ನಡೆದು, ಅನಂತರ ಅವನ ಮುಂಭಾಗಕ್ಕೆ ನೆಗೆದು ಕೂಡಲೇ ತಿರುಗಿ ಅವನ ಮೇಲೆ ಬೀಳುತ್ತದೆ. ಮತ್ತೆ ಮತ್ತೆ ತನಗೆ ಬೆನ್ನು ತಿರುಗಿಸಿ ನಡೆಯುವಂಥ ಶಾನುಭೋಗರಂತಹ ಬೇಟೆ ಸಿಕ್ಕರಂತೂ ಅವರ ವಿಷಯದಲ್ಲಿ ಮೆಚ್ಚುಗೆಯನ್ನೂ ಸೂಚಿಸುತ್ತದೆ. ತನಗೆ ಒಳ್ಳೆಯ ಎದುರಾಳಿಯೇ ಸಿಕ್ಕಿದ್ದಾನೆ. ತಿಂದರೆ ಇಂಥವನನ್ನೇ ತಿನ್ನಬೇಕು ಎಂದುಕೊಳ್ಳುತ್ತದೆ.
ಇನ್ನು ಸದ್ವಂಶದಲ್ಲಿ ಜನಿಸಿದ ಹುಲಿಯಂತೂ, ಸತ್ಯವ್ರತೆಯಾದ ತನ್ನ ಅಜ್ಜನಾದ ಪುಣ್ಯಕೋಟಿಯನ್ನು ನೆನಪಿಸಿಕೊಂಡು, ಅನ್ಯಾಯ ಮಾಡದಂತೆ ಬೇಟೆಯಾಡುತ್ತದೆ. ಇಂಥ ಹುಲಿಗೆ ಬೇಟೆಯಾಡುವಾಗ ಭಗವದ್ಗೀತೆಯ ‘ಸ್ವರ್ಧರ್ಮೇ ನಿಧನಂ ಶ್ರೇಯಃ’ ಎಂಬ ವಾಣಿಯು, ಬೈಬಲ್ನ ‘ಸೈತಾನ್ ಹಿಂದಿರುಗು’ ಎನ್ನುವುದೂ, ನೆನಪಾಗಿ ತಾನು ಅಧರ್ಮಕ್ಕೆ ಕೈಹಾಕುವುದು ಸರಿಯಲ್ಲವೆಂಬ ವಿಚಾರ ಮೂಡುತ್ತದೆ. ಬೆನ್ನು ಮೇಲಾಗಿ ಬಿದ್ದ ಅಥವಾ ಬೆನ್ನು ಮೇಲಾಗಿ ಪ್ರಜ್ಞೆ ತಪ್ಪಿದ, ಬೇಟೆಯನ್ನು ಇದು ಎಂದಿಗೂ ಕೊಲ್ಲುವುದಿಲ್ಲ, ತಿನ್ನುವುದಿಲ್ಲ. ಹೀಗೆ ಕೊನೆಯವರೆಗೂ ಈ ಪ್ರಾಣಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡೇ ಬರುತ್ತದೆ.
2. ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ.
ಉತ್ತರ:- ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೂ ಹೌದು. ಹುಲಿಯ ಧರ್ಮವೂ ಹೌದು. ಹೇಗೆಂದರೆ, ಶಾನುಭೋಗರ ಪ್ರಕಾರ ಖಿರ್ದಿ ಪುಸ್ತಕ ವಿವರವಾಗಿಯೆಂದರೆ, ತಮ್ಮ ವಿಪತ್ತಿನ ಸನ್ನಿವೇಶದಲ್ಲಿ ಅವರಿಗೆ ತಮ್ಮ ಖಿರ್ದಿ ಪುಸ್ತಕದ ಯೋಚನೆ ಬಂತು. ಅವರಲ್ಲಿ ಆಯುಧವಿರದ ಕಾರಣ, ಖಿರ್ದಿ ಪುಸ್ತಕವನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡು ಹುಲಿಯ ಮುಖಕ್ಕೆ ಬಂದು ಬಡಿದಾಗ ಹುಲಿಗೆ ಪೆಟ್ಟೆನೂ ಆಗದೆ ಆಶ್ಚರ್ಯವಾಯಿತು. ಬಳಲಿಕೆಯಿಂದ ಜಡವಾಗಿದ್ದ ಮನಸ್ಸಿಗೆ ಪರಿಸ್ಥಿತಿಯ ಅರಿವಾಗಲು ಅರೆನಿಮಿಷ ಹಿಡಿಯಿತು. ಆ ಅರೆ ನಿಮಿಷದಲ್ಲಿ ಶಾನುಭೋಗರು ಒಂದೇ ಉಸಿರಿನಲ್ಲಿ ಧಾವಿಸುತ್ತಾ ಮರ ಹತ್ತಲು ಪ್ರಯತ್ನಿಸಿದಾಗ, ಕಲ್ಲನ್ನು ಎಡವಿ ಬಿದ್ದು ಪ್ರಜ್ಞೆ ಕಳೆದುಕೊಂಡರು. ಕೆಲ ನಿಮಿಷಗಳಾದ ಮೇಲೆ ಪ್ರಜ್ಞೆ ಬಂದಾಗ ಯಾರೋ ಅವರಿಗೆ ನೀರು ಚಿಮುಕಿಸುತ್ತಿದ್ದರು. ಗಟ್ಟಿ ಮನಸ್ಸಿನ ಅವರು ಬೇಗ ಚೇತರಿಸಿಕೊಂಡದ್ದು ನಡೆದುದೆಲ್ಲವನ್ನೂ ನೆನಪಿಗೆ ತಂದುಕೊಂಡರು. ಮತ್ತೆ ಖಿರ್ದಿ ಪುಸ್ತಕವನ್ನು ಭದ್ರ ಮಾಡಿಕೊಂಡರು. ಇದರಿಂದಲೇ ತಮ್ಮಜೀವ ಉಳಿಯಿತೆಂದು ಅದನ್ನು ಪೂಜಿಸುತ್ತ ಬಂದರು.
ಲೇಖಕರ ಪ್ರಕಾರ ಶಾನುಭೋಗರನ್ನು ರಕ್ಷಿಸಿದ್ದು ಹುಲಿಯ ಧರ್ಮಶ್ರದ್ಧೆಯಿಂದ. ಏಕೆಂದರೆ ಕಲ್ಲನ್ನು ಎಡವಿ, ಬೆನ್ನು ಮೇಲಾಗಿ ಬಿದ್ದ ಶಾನುಭೋಗರನ್ನು ಕೊಲ್ಲದೆ ಕೊನೆಯವರೆಗೂ ಆ ಪ್ರಾಣಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡು ಬಂದಿತ್ತು. ಇದರಿಂದ ಉದಾರ ಹೃದಯರಾದ ಶಾನುಭೋಗರ ಬಾಯಿಂದ ‘ಭಲೆ’ ಎಂಬ ಮೆಚ್ಚಿಕೆಯನ್ನು ಪಡೆದುಕೊಂಡಿತು. ಅಲ್ಲದೆ ಲೇಖಕರಿಂದ ಹಾಡಿ ಹೊಗಳಿಸಿಕೊಂಡಿತು.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ:
1. ‘ಖಂಡವಿದೆಕೊ, ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ’
ಉತ್ತರ:- ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ತೆಗೆದು- ಕೊಂಡಿದೆ.
ಮತ್ತೆ ಮತ್ತೆ ಶಾನುಭೋಗರ ಬೆನ್ನು ಕಂಡು ಗೊಂದಲಕ್ಕೆ ಈಡಾದ ಸಂದರ್ಭದಲ್ಲಿ ಹುಲಿ ಈ ಮೇಲಿನ ಸಾಲನ್ನು ನೆನಪಿಸಿಕೊಂಡಿತು.
ಸ್ವಾರಸ್ಯ: ಪ್ರತಿ ಬಾರಿ ಹುಲಿ, ಶಾನುಭೋಗರ ಮೇಲೆ ಎಗರ ಬೇಕೆಂದಾಗ ಕೇವಲ ಅವರ ಬೆನ್ನೇ ಕಾಣುತ್ತಿತ್ತು. ಒಳ್ಳೆಯ ಎದುರಾಳಿ ಸಿಕ್ಕಿದನೆಂದು ಮೆಚ್ಚಿಕೆಯಾಯಿತು. ಅದಕ್ಕೆ ಒಂದು ಕಡೆ ಹಸಿವು, ಮತ್ತೊಂದು ಕಡೆ ತನ್ನ ಸ್ವಾಭಿಮಾನಕ್ಕೆ ಇಂಥ ಧಕ್ಕೆ ಬಂತಲ್ಲಾ ಎಂಬ ಯೋಚನೆ. ನಾಳೆ ಇತರ ವ್ಯಾಘ್ರಗಳೆದುರಿಗೆ ತನ್ನ ಗೌರವ ಎಷ್ಟಕ್ಕೆ ನಿಂತಿತು. ಮೇಲೆ ಬಿದ್ದೇಬಿಡಲೆ ಎಂಬ ಯೋಚನೆಯಾಗಿ ಗೊಂದಲ ಉಂಟಾಯಿತು. ಈ ಸಮಯದಲ್ಲಿಯೇ ಮೇಲಿನ ಸಾಲನ್ನು ನೆನಪಿಸಿಕೊಂಡು, ಪುಣ್ಯಕೋಟಿಯನ್ನು ತಿನ್ನದೇ ಬಿಟ್ಟ ತನ್ನ ಅಜ್ಜನನ್ನು ನೆನಪಿಸಿಕೊಂಡಿತು.
2. ‘ಸ್ವಧರ್ಮೇ ನಿಧನಂ ಶ್ರೇಯಃ’
ಉತ್ತರ:- ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ತೆಗೆದು- ಕೊಂಡಿದೆ.
ಪುಣ್ಯಕೋಟಿಯನ್ನು ತಿನ್ನದೇ ಪ್ರಾಣಬಿಟ್ಟ ತನ್ನ ಅಜ್ಜನನ್ನು ನೆನಪಿಸಿಕೊಂಡಾಗ ಹುಲಿಗೆ ಮೇಲಿನ ಸಾಲು ನೆನಪಾಯಿತು.
ಸ್ವಾರಸ್ಯ: ಪುಣ್ಯಕೋಟಿ ತಿನ್ನಲು ಆಹ್ವಾನ ಕೊಟ್ಟರೂ ತಿನ್ನದೆ ಪ್ರಾಣ ಬಿಟ್ಟ ತನ್ನ ಅಜ್ಜನ ಆದರ್ಶ ಕಣ್ಣು ತುಂಬಿ ನಿಂತಾಗ ಹುಲಿಗೆ ಭಗವದ್ಗೀತೆಯ ಮೇಲಿನ ಸಾಲುಗಳು ನೆನಪಾದವು. ಜೊತೆಗೆ ಬೈಬಲ್ ನೆನಪಿಗೆ ಬಂದು ‘ಸೈತಾನ ಹಿಂದಿರುಗು’ ಎಂದುಕೊಂಡಿತು.
3. ‘ದೇವರೆ ಮರ ಹತ್ತುವಷ್ಟು ಅವಕಾಶ ಕರುಣಿಸು’.
ಉತ್ತರ:- ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ತೆಗೆದು- ಕೊಂಡಿದೆ.
ಶಾನುಭೋಗರು ತಮ್ಮಖಿರ್ದಿ ಪುಸ್ತಕದಿಂದ ಹುಲಿಯ ಮುಖಕ್ಕೆ ಬಂದು ಬಡಿದಾಗ ಈ ಮೇಲಿನಂತೆ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.
ಸ್ವಾರಸ್ಯ: ನಿಂತ ಕಡೆಯಲ್ಲೇ ಕುಲಾಲ ಚಕ್ರದಂತೆ ತಿರುಗಿದ ಹುಲಿಗೆ ಮತ್ತು ಶಾನುಭೋಗರಿಗೆ ವಿಪರೀತವಾದ ಆಯಾಸವಾಯಿತು. ಶಾನುಭೋಗರು ಖಿರ್ದಿ ಪುಸ್ತಕದಿಂದ ಹುಲಿಯ ಮುಖಕ್ಕೆ ಬಂದು ಬಡಿದಾಗ ಅದಕ್ಕೆ ಪೆಟ್ಟೆನೂ ಆಗದೆ, ಆಶ್ಚರ್ಯವಾಯಿತು. ಬಳಲಿಕೆ ಯಿಂದ ಜಡವಾಗಿದ್ದ ಮನಸ್ಸಿಗೆ ಪರಿಸ್ಥಿತಿಯ ಅರಿವಾಗಲು ಅರೆನಿಮಿಷ ಹಿಡಿಯಿತು. ಆ ಅರೆ ನಿಮಿಷದಲ್ಲಿ ಶಾನುಭೋಗರು ಮೇಲಿನ ವಾಕ್ಯದಂತೆ ಅಂದಕೊಳ್ಳುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆಗೆ ಧಾವಿಸಿದರು. ಆದರೆ ದೇವರ ರಕ್ಷಣಾ ವ್ಯವಸ್ಥೆ ಬೇರೆ ಇದ್ದುದರಿಂದಾಗಿ, ಕಲ್ಲೊಂದನ್ನು ಎಡವಿ ಬಿದ್ದು ಶಾನುಭೋಗರು ಪ್ರಜ್ಞೆ ಕಳೆದುಕೊಂಡರು.
4. ‘ನಾನು ಮುಖ ಮೇಲಾಗಿ ಬಿದ್ದಿದ್ದೆನೆ?’
ಉತ್ತರ:- ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ತೆಗೆದುಕೊಂಡಿದೆ.
ಪ್ರಜ್ಞೆ ಬಂದ ಮೇಲೆ ಮೇಲಿನಂತೆ ಶಾನುಭೋಗರು ಗಾಡಿಯವರನ್ನು ಕೇಳಿದರು.
ಸ್ವಾರಸ್ಯ: ಪ್ರಜ್ಞೆ ಬಂದ ಶಾನುಭೋಗರು ಮನಸ್ಸನ್ನೆಲ್ಲಾ ವಿಸ್ಮಯ ಆವರಿಸಿತ್ತು. ತಾವು ಉಳಿದದ್ದು ಹೇಗೆ? ನಿಸ್ಸಹಾಯರಾಗಿ ಪ್ರಜ್ಞೆಯಿಲ್ಲದೆ ಬಿದ್ದಿದ್ದಾಗ ಹುಲಿ ತಮ್ಮನ್ನು ಎಳೆದುಕೊಂಡು ಹೋಗಲಿಲ್ಲವೇಕೆ? ಸ್ವಲ್ಪ ಹೊತ್ತು ಯೋಚಿಸಿ ಗಾಡಿಯವರನ್ನು ಮೇಲಿನಂತೆ ಕೇಳಿದರು. ಅವರು ಇಲ್ಲ, ಬಿದ್ದದ್ದು ಬೆನ್ನು ಮೇಲಾಗಿ ಎಂದಾಗ, ಶಾನುಭೋಗರ ಸಮಸ್ಯೆಗೆ ಉತ್ತರ ದೊರೆತಂತಾಯಿತು.
5. ‘ಹುಲಿ ಈಗ ಎಷ್ಟು ಹಸಿದಿರಬೇಕು’
ಉತ್ತರ:- ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ತೆಗೆದುಕೊಂಡಿದೆ. ಶಾನುಭೋಗರು ಊಟಕ್ಕೆ ಕುಳಿತಾಗ, ಮೇಲಿನಂತೆ ಯೋಚಿಸಿದರು.
ಸ್ವಾರಸ್ಯ: ಶಾನುಭೋಗರು ಕುಡಿದ ನೀರು ಅಲಗದ ಹಾಗೆ ಎನ್ನಲಾಗದಿದ್ದರೂ ‘ಜೀವಸಹಿತ ಮನೆ ಸೇರಿಕೊಂಡರು. ರಸದೂಟ
ವನ್ನು ಮಾಡಿದರು. ಈ ಮೇಲಿನ ಯೋಚನೆ ಬಂದಾಗ ಅವರ ವದನಾರವಿಂದ ದಲ್ಲಿ ಮುಗುಳುನಗೆ ಮೂಡಿತು. ಊಟದ ರುಚಿ ಇಮ್ಮಡಿಯಾಯಿತು.
ಉ) ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿದೆ:
1. ಮಂತ್ರಿತ್ವ ಹೋಗಿ ಕೇವಲ ಶಾನುಭೋಗಿಕೆ ಮಾತ್ರ ಉಳಿದಿತ್ತು.
2. ಖಿರ್ದಿ ಪುಸ್ತಕ ಶಾನುಭೋಗರ ಬ್ರಹ್ಮಾಸ್ತ್ರ.
3. ನೆಲದಿಂದ ಮೇಲೆದ್ದುಕೊಂಡಿದ್ದ ಕಲ್ಲನ್ನು ಎಡವಿ ಶಾನುಭೋಗರು ಬಿದ್ದರು.
4. ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆಯುತ್ತಿದ್ದರು.
5. ಶಾನುಬೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ.
ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:
1. ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.
ಉತ್ತರ:- ಲೋಪ, ಆಗಮ, ಆದೇಶ ಇವು ಕನ್ನಡ ಸಂಧಿಗಳು.
ಉದಾ: ಲೋಪ – ಊರೂರು, ಬಲ್ಲೆನೆಂದು, ಮಾತಂತು, ಸಂಪನ್ನರಾದ.
ಆಗಮ – ಕೈಯನ್ನು, ಮಳೆಯಿಂದ, ಶಾಲೆಯಲ್ಲಿ, ಮರವನ್ನು, ಮಗುವಿಗೆ.
ಆದೇಶ – ಮಳೆಗಾಲ, ಮೈದೋರು, ಬೆಂಬತ್ತು, ಕಡುವೆಳ್ಪು, ಮೆಲ್ವಾತು.
2. ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಾಗಿ ವಿಂಗಡಿಸಿ ಬರೆಯಿರಿ.
ಉತ್ತರ:- ಸಂಸ್ಕೃತ ಸ್ವರಸಂಧಿಗಳು ಸವರ್ಣದೀರ್ಘ, ಗುಣ, ವೃದ್ಧಿ, ಯಣ್ ಸಂಧಿ.
ಸಂಸ್ಕೃತ ವ್ಯಂಜನಸಂಧಿಗಳು- ಜಶ್ಯ, ಶ್ಚುತ್ವ, ಅನುನಾಸಿಕ ಸಂಧಿ.
3. ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ. ಸುರಾಸುರ, ಬಲ್ಲೆನೆಂದು, ಸೂರ್ಯೋದಯ, ಮಳೆಗಾಲ, ಅಷ್ಟೆಶ್ವರ್ಯ, ವೇದಿಯಲ್ಲಿ.
ಉತ್ತರ:- ಸುರ+ಅಸುರ = ಸುರಾಸುರ ಸವರ್ಣದೀರ್ಘಸಂಧಿ
ಬಲ್ಲೆನು+ಎಂದು = ಬಲ್ಲೆನೆಂದು –ಸ್ವರಲೋಪ ಸಂದಿ
ಸೂರ್ಯ+ಉದಯ =ಸೂರ್ಯೋದಯ- ಗುಣಸಂಧಿ
ಮಳೆ + ಕಾಲ = ಮಳೆಗಾಲ –ಆದೇಶಸಂಧಿ
ಅಷ್ಟ + ಐಶ್ವರ್ಯ = ಅಷ್ಟೆ ಶ್ವರ್ಯ – ವೃದ್ಧಿಸಂಧಿ
ವೇದಿ + ಅಲ್ಲಿ = ವೇದಿಯಲ್ಲಿ – ಯಕಾರಾಗಮಸಂಧಿ
ಆ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ.
1. ಬೇಗ ಬೇಗ : ದ್ವಿರುಕ್ತಿ :: ಧೀರಶೂರ : …..
ಉತ್ತರ:- ಬೇಗ ಬೇಗ: ದ್ವಿರುಕ್ತಿ :: ಧೀರಶೂರ : ಜೋಡುನುಡಿ.
2. ಲೋಪಸಂಧಿ: ಸ್ವರಸಂಧಿ :: ಆದೇಶಸಂಧಿ :….
ಉತ್ತರ:- ಲೋಪಸಂಧಿ : ಸ್ವರಸಂಧಿ :: ಆದೇಶಸಂಧಿ : ಗದಬಾದೇಶಸಂಧಿ.
3. ಕಟ್ಟಕಡೆಗೆ: ಕಡೆಗೆ ಕಡೆಗೆ :: ಮೊತ್ತಮೊದಲು :..
ಉತ್ತರ:- ಕಟ್ಟಕಡೆಗೆ : ಕಡೆಗೆ ಕಡೆಗೆ : :ಮೊದಲುಮೊದಲು. : :: ಮೊತ್ತಮೊದಲು
4. ಶರಶ್ಚಂದ್ರ : ಶ್ಚುತ್ವ ಸಂಧಿ : :ದಿಗಂತ :
ಉತ್ತರ:- ಶರಶ್ಚಂದ್ರ : ಶ್ಚುತ್ವ ಸಂಧಿ : :ದಿಗಂತ : ಜಶ್ವಸಂಧಿ.
ಈ) ಈ ಗಾದೆಮಾತುಗಳನ್ನು ವಿಸ್ತರಿಸಿ ಬರೆಯಿರಿ:
1. ಕೈ ಕೆಸರಾದರೆ ಬಾಯಿ ಮೊಸರು
2. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
1. ಕೈ ಕೆಸರಾದರೆ ಬಾಯಿ ಮೊಸರು :
ದುಡಿಮೆಯ ಮೌಲ್ಯವನ್ನು ಈ ಗಾದೆಯು ನಮಗೆ ತಿಳಿಸುತ್ತದೆ. ಹನ್ನೆರಡನೆಯ ಶತಮಾನದ ಶಿವಶರಣರು ಸಾರಿದಂತೆ ಕಾಯಕವೇ ಕೈಲಾಸ. ಭಗವದ್ಗೀತೆಯೂ ಇದನ್ನೇ ಹೇಳುತ್ತದೆ. ಕೆಲಸ ಮಾಡುವಾಗ ಸಾಮಾನ್ಯವಾಗಿ ಕೈ ಕೆಸರಾಗುವುದು ಸಹಜ. ಕೈ ಕೆಸರಾಗುವುದು ಎಂದರೆ ಬೆವರು ಹರಿಸಿ ದುಡಿಯುವುದು. ಕೆಲಸ ಮಾಡದೆ ನಮಗೆ ತಿನ್ನಲು ಆಹಾರವು ಸಿಕ್ಕಲಾರದು. ಒಂದು ವೇಳೆ ಸಿಕ್ಕರೆ ಅದು ಹಂಗಿನ ಅನ್ನವೆನಿಸುವುದು. ಅನ್ಯರನ್ನು ಆಶ್ರಯಿಸಿ ಪಡೆದ ಕೂಳು ಹಂಗಿನ ಕೂಳು. ಅದು ನಮ್ಮ ಮಾನಹಾನಿಗೆ ಕಾರಣ. ನಾವು ದುಡಿಯಬೇಕು, ಸುಖಪಡಬೇಕು. ಬಾಯಿಗೆ ಮೊಸರು ಎಂದರೆ ಸುಖದ ಊಟವೆಂದರ್ಥ. ಮೊಸರನ್ನವನ್ನು ಉಣ್ಣಬೇಕಾದರೆ ನಮ್ಮ ಗಳಿಕೆ ತೃಪ್ತಿಕರವಾಗಿರಬೇಕು. ಹೀಗೆ ಪ್ರತಿಯೊಬ್ಬರೂ ಶ್ರಮಪಟ್ಟು ದುಡಿದರೆ ದೇಶದ ಪ್ರಗತಿ ನಿಶ್ಚಿತ. ಅನ್ನದ ಕೊರತೆಯ ಕೂಗು ಕೇಳಿಸದು. ಆದ್ದರಿಂದ ಹಸಿವು ಹಿಂಗಬೇಕಾದರೆ ನಮ್ಮೆಲ್ಲರ ಕೈ ಕೆಸರಾಗಬೇಕು. ಶ್ರಮ ಗೌರವವನ್ನರಿತು ನಾವು ಪ್ರಾಮಾಣಿಕವಾಗಿ ದುಡಿದು ಉಣ್ಣಬೇಕು.
2. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ :
ಈ ಮಾತನ್ನು ವಿಶೇಷವಾಗಿ ವಿಘ್ನು ಪುರುಷರ ಕುರಿತು ಮಾತಾಡುವಾಗ ಬಳಸುವುದುಂಟು. ಯಾವುದೇ ರಚನಾತ್ಮಕ ಕಾರ್ಯವನ್ನು ಮಾಡಬೇಕಾದರೆ ಸಮಯ ಹಿಡಿಯುತ್ತದೆ. ಅದೇ ಹಾಳು ಮಾಡುವುದಕ್ಕೆ ಸಮಯ ಬೇಕಾಗಿಲ್ಲ ಎಂಬ ಅಂಶವನ್ನು ಈ ಗಾದೆಮಾತು ತಿಳಿಸಿಕೊಡುತ್ತದೆ. ಕುಂಬಾರನು ಮಣ್ಣನ್ನು ತಂದು ಹದಗೊಳಿಸಿ, ಹಲವಾರು ದಿನಗಳ ಕಾಲ ಸತತ ಪರಿಶ್ರಮಪಟ್ಟು ಮಡಿಕೆಗಳನ್ನು ಮಾಡುತ್ತಾನೆ. ಅಂಥ ಮಡಿಕೆಗಳನ್ನು ಒಂದೇ ಒಂದು ದೊಣ್ಣೆಯಿಂದ ಒಡೆದು ನಾಶಮಾಡಲು ಒಂದು ನಿಮಿಷವು ಬೇಕಾಗುವುದಿಲ್ಲ. ಹೀಗೆ ಕುಂಬಾರನ ಕಷ್ಟ ಪರಿಶ್ರಮಗಳಿಂದ ಸಿದ್ಧವಾದ ಮಡಿಕೆಗಳನ್ನು ಸುಲಭವಾಗಿ ನಾಶ ಮಾಡಬಹುದು. ನಿರುಪಯುಕ್ತಗೊಳಿಸಬಹುದು. ಆದರೆ ಅವೇ ಮಡಿಕೆಗಳನ್ನು ಪುನಃ ಮಾಡುವುದು ಸುಲಭವಾಗುವುದಿಲ್ಲ.
ಒಂದು ಒಳ್ಳೆಯ ಕೆಲಸವನ್ನು ಮಾಡುವುದಕ್ಕೆ ಹಲವು ಹತ್ತಾರು ಜನರ ಸಹಾಯ ಸಹಕಾರಗಳು ಬೇಕಾಗುತ್ತವೆ. ದೀರ್ಘವಾದ ಪರಿಶ್ರಮ ಪ್ರಯತ್ನಗಳಿಂದ ಮಾಡುವ ಒಂದು ಒಳ್ಳೆಯ ಕೆಲಸವು ಸಾರ್ಥಕ ಫಲವಾಗಿ ರೂಪುಗೊಳ್ಳುತ್ತದೆ. ಆದರೆ ಅದನ್ನು ನಾಶ ಮಾಡುವುದಕ್ಕೆ ಕಷ್ಟಪಡಬೇಕಾಗಿಲ್ಲ. ಒಂದು ಶಿಲ್ಪ ಕಲಾಕೃತಿಯನ್ನು ರಚಿಸುವುದಾಗಲಿ ಸಂಘ-ಸಂಸ್ಥೆಗಳನ್ನು ಕಟ್ಟುವುದಾಗಲಿ ಸುಲಭದ ಸಂಗತಿಯಲ್ಲ. ಆದರೆ ಒಬ್ಬನೇ ಒಬ್ಬ ವಿಘ್ನ ಸಂತೋಷಿ ಅವುಗಳನ್ನು ಸುಲಭದಲ್ಲಿ ನಿರ್ನಾಮ ಮಾಡಬಲ್ಲನು. ನಾಶ ಮಾಡುವುದೊಂದೇ ಅವನಿಗೆ ಗೊತ್ತು. ನಾಶ ಕಾರ್ಯ ಸುಲಭ ಸೃಷ್ಟಿ ಕಾರ್ಯ ಕಷ್ಟ ಎಂಬುದೇ ಈ ಗಾದೆಮಾತಿನ ತಾತ್ಪರ್ಯವಾಗಿದೆ.
ಉ. ಈ ವಿಷಯಗಳಿಗೆ ಸಂಬಂಧಿಸಿ ಪ್ರಬಂಧ ಬರೆಯಿರಿ:
1. ಸ್ವಚ್ಛಭಾರತ ಅಭಿಯಾನ.
2. ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ.
3. ರಾಷ್ಟ್ರೀಯ ಭಾವೈಕ್ಯ.
ಉತ್ತರ:
1. ಸ್ವಚ್ಛಭಾರತ ಅಭಿಯಾನ :
ಅಕ್ಟೋಬರ್ 2, 2014 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಸ್ವಚ್ಛ ಭಾರತ ಅಭಿಯಾನವು ಸ್ವಚ್ಛ ಮತ್ತು ನೈರ್ಮಲ್ಯ ಭಾರತವನ್ನು ಸಾಧಿಸುವ ಗುರಿಯನ್ನು ಹೊಂದಿರುವ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನವಾಗಿದೆ. ಈ ಉಪಕ್ರಮವು ಬಯಲು ಶೌಚವನ್ನು ತೊಡೆದುಹಾಕಲು, ಘನ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಉತ್ತೇಜಿಸಲು ಕೇಂದ್ರೀಕರಿಸುತ್ತದೆ.
ಬಯಲು ಶೌಚವನ್ನು ನಿರ್ಮೂಲನೆ ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಶೌಚಾಲಯಗಳ ನಿರ್ಮಾಣ ಸೇರಿದಂತೆ ಎಲ್ಲರಿಗೂ ನೈರ್ಮಲ್ಯ ಸೌಲಭ್ಯಗಳನ್ನು ಖಚಿತಪಡಿಸುವುದು ಅಭಿಯಾನದ ಗುರಿಯಾಗಿದೆ. ಇದು ಮೂಲದಲ್ಲಿ ಬೇರ್ಪಡಿಸುವ ಮೂಲಕ ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಅಭ್ಯಾಸಗಳ ಮೂಲಕ ಘನ ತ್ಯಾಜ್ಯದ ಸರಿಯಾದ ವಿಲೇವಾರಿಗೆ ಒತ್ತು ನೀಡುತ್ತದೆ.
ಸ್ವಚ್ಛ ಭಾರತ ಅಭಿಯಾನವು ಜನರು ಸ್ವಚ್ಛತೆಯನ್ನು ಜೀವನ ವಿಧಾನವಾಗಿ ಅಳವಡಿಸಿಕೊಳ್ಳುವಂತೆ ಉತ್ತೇಜಿಸುವ ಮೂಲಕ ಮಹತ್ವದ ನಡವಳಿಕೆಯ ಬದಲಾವಣೆಯನ್ನು ತಂದಿದೆ. ಇದು ಸ್ವಚ್ಛತಾ ಡ್ರೈವ್ಗಳು, ಜಾಗೃತಿ ಅಭಿಯಾನಗಳು ಮತ್ತು ಶಾಲಾ ನೈರ್ಮಲ್ಯ ಕಾರ್ಯಕ್ರಮಗಳಂತಹ ಚಟುವಟಿಕೆಗಳ ಮೂಲಕ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.
ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ ಈ ಮಿಷನ್ ಸಕ್ರಿಯ ಭಾಗವಹಿಸುವಿಕೆಯನ್ನು ಕಂಡಿದೆ. ಇದು ತನ್ನ ಸಂದೇಶವನ್ನು ವರ್ಧಿಸಲು ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಸಹ ತೊಡಗಿಸಿಕೊಂಡಿದೆ.
ಸ್ವಚ್ಛ ಭಾರತ ಅಭಿಯಾನದ ಸಾಧನೆಗಳಲ್ಲಿ ಲಕ್ಷಾಂತರ ಶೌಚಾಲಯಗಳ ನಿರ್ಮಾಣ, ರಸ್ತೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಮತ್ತು ನೈರ್ಮಲ್ಯದ ಬಗ್ಗೆ ಸುಧಾರಿತ ಜಾಗೃತಿ ಸೇರಿವೆ.
ಅಭಿಯಾನವು ನೀರಿನಿಂದ ಹರಡುವ ರೋಗಗಳನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ಗಮನಾರ್ಹವಾಗಿ ಕೊಡುಗೆ ನೀಡಿದೆ, ವಿಶೇಷವಾಗಿ ನೈರ್ಮಲ್ಯ ಸೌಲಭ್ಯಗಳ ಪ್ರವೇಶವು ಹಿಂದೆ ಸೀಮಿತವಾಗಿದ್ದ ಗ್ರಾಮೀಣ ಪ್ರದೇಶಗಳಲ್ಲಿ.
ಆದಾಗ್ಯೂ, ನೈರ್ಮಲ್ಯ ಮೂಲಸೌಕರ್ಯದ ಸುಸ್ಥಿರ ನಿರ್ವಹಣೆಯನ್ನು ಖಾತ್ರಿಪಡಿಸುವುದು ಮತ್ತು ಸ್ವಚ್ಛತೆ ಮತ್ತು ನೈರ್ಮಲ್ಯದ ಕಡೆಗೆ ಆಳವಾದ ಬೇರೂರಿರುವ ವರ್ತನೆಗಳನ್ನು ಬದಲಾಯಿಸುವಂತಹ ಸವಾಲುಗಳು ಉಳಿದಿವೆ.
ಮಹಾತ್ಮ ಗಾಂಧಿಯವರ 150 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುವ ಮೂಲಕ 2022 ರ ವೇಳೆಗೆ ಸ್ವಚ್ಛತೆಯ ಅಭ್ಯಾಸಗಳು ಮತ್ತು ಸ್ವಚ್ಛ ಭಾರತ ಗುರಿಯನ್ನು ಸಾಧಿಸುವುದರ ಮೇಲೆ ಕೇಂದ್ರೀಕರಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಪ್ರಯತ್ನಗಳು ವಿಕಸನಗೊಳ್ಳುತ್ತಲೇ ಇವೆ.
ಕೊನೆಯಲ್ಲಿ, ಸ್ವಚ್ಛ ಭಾರತ ಅಭಿಯಾನವು ಕೇವಲ ಸರ್ಕಾರದ ಉಪಕ್ರಮವಲ್ಲ ಆದರೆ ಸ್ವಚ್ಛ, ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಭಾರತದ ಕಡೆಗೆ ಒಂದು ಚಳುವಳಿಯಾಗಿದೆ, ಅದರ ಉದ್ದೇಶಗಳನ್ನು ಸಾಧಿಸಲು ಎಲ್ಲಾ ನಾಗರಿಕರಿಂದ ಸಾಮೂಹಿಕ ಪ್ರಯತ್ನಗಳ ಅಗತ್ಯವಿರುತ್ತದೆ
.2. ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ :
ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆಯು ಪೂರ್ವದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ರಕ್ಷಿಸುವ ಮತ್ತು ಗೌರವಿಸುವ ಗುರಿಯನ್ನು ಹೊಂದಿರುವ ಪ್ರಮುಖ ಪ್ರಯತ್ನವಾಗಿದೆ. ಭಾರತೀಯ, ಚೈನೀಸ್, ಜಪಾನೀಸ್ ಮತ್ತು ಇತರ ವೈವಿಧ್ಯಮಯ ನಾಗರಿಕತೆಗಳನ್ನು ವ್ಯಾಪಿಸಿರುವ ಈ ಸ್ಮಾರಕಗಳು ಶತಮಾನಗಳ ವಾಸ್ತುಶಿಲ್ಪದ ತೇಜಸ್ಸು, ಕಲಾತ್ಮಕ ಅಭಿವ್ಯಕ್ತಿ ಮತ್ತು ಸಾಂಸ್ಕೃತಿಕ ಮಹತ್ವವನ್ನು ಒಳಗೊಂಡಿವೆ.
ಸಂರಕ್ಷಣಾ ಪ್ರಯತ್ನಗಳು ಈ ಸ್ಮಾರಕಗಳ ರಚನಾತ್ಮಕ ಸಮಗ್ರತೆ, ದೃಢೀಕರಣ ಮತ್ತು ಸೌಂದರ್ಯದ ಮೌಲ್ಯವನ್ನು ಕಾಪಾಡಿಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತವೆ. ಇದು ನೈಸರ್ಗಿಕ ಅಂಶಗಳು ಮತ್ತು ಮಾನವ ಮಧ್ಯಸ್ಥಿಕೆಗಳನ್ನು ತಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿಖರವಾದ ಮರುಸ್ಥಾಪನೆ, ಸಂರಕ್ಷಣೆ ಮತ್ತು ರಕ್ಷಣೆ ಕ್ರಮಗಳನ್ನು ಒಳಗೊಂಡಿರುತ್ತದೆ.
ಪ್ರಾಚ್ಯ ಸ್ಮಾರಕಗಳು ಸಾಮಾನ್ಯವಾಗಿ ಪ್ರಾಚೀನ ದೇವಾಲಯಗಳು, ಅರಮನೆಗಳು, ಪಗೋಡಗಳು, ಗೋರಿಗಳು ಮತ್ತು ಕೋಟೆಗಳನ್ನು ಒಳಗೊಂಡಿರುತ್ತವೆ, ಪ್ರತಿಯೊಂದೂ ವಿಶಿಷ್ಟವಾದ ವಾಸ್ತುಶಿಲ್ಪದ ಶೈಲಿಗಳು, ಧಾರ್ಮಿಕ ಸಂಕೇತಗಳು ಮತ್ತು ಪ್ರಾದೇಶಿಕ ಪ್ರಭಾವಗಳನ್ನು ಪ್ರತಿಬಿಂಬಿಸುತ್ತದೆ. ಅವರು ಅವುಗಳನ್ನು ಸೃಷ್ಟಿಸಿದ ನಾಗರಿಕತೆಗಳಿಗೆ ಜೀವಂತ ಸಾಕ್ಷಿಗಳಾಗಿ ಕಾರ್ಯನಿರ್ವಹಿಸುತ್ತವೆ .
ಸರ್ಕಾರಿ ಏಜೆನ್ಸಿಗಳು, ಪರಂಪರೆ ಸಂಸ್ಥೆಗಳು ಮತ್ತು ಸಂರಕ್ಷಣಾಕಾರರು ಸಮಗ್ರ ಸಂರಕ್ಷಣಾ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತಾರೆ. ಈ ತಂತ್ರಗಳು ದಾಖಲಾತಿ, ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ಉತ್ತಮ ಅಭ್ಯಾಸಗಳ ಅನುಷ್ಠಾನವನ್ನು ಒಳಗೊಳ್ಳುತ್ತವೆ, ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ಮಾರ್ಗಸೂಚಿಗಳಿಗೆ ಇವು ಬದ್ಧವಾಗಿರುತ್ತವೆ.
ಸಾರ್ವಜನಿಕ ಅರಿವು ಮತ್ತು ಶಿಕ್ಷಣವು ಸ್ಮಾರಕಗಳ ಬಗ್ಗೆ ಮೆಚ್ಚುಗೆಯನ್ನು ಬೆಳೆಸುವಲ್ಲಿ ಮತ್ತು ಅವುಗಳ ಸಂರಕ್ಷಣೆಗಾಗಿ ಪ್ರತಿಪಾದಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಾಂಸ್ಕೃತಿಕ ಪರಂಪರೆಯ ಪ್ರವಾಸೋದ್ಯಮವು ನಿರ್ವಹಣೆ ಮತ್ತು ಪುನಃಸ್ಥಾಪನೆ ಯೋಜನೆಗಳಿಗೆ ಆದಾಯವನ್ನು ಗಳಿಸುವ ಮೂಲಕ ಸಂರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ.
ಪ್ರಾಚ್ಯ ಸ್ಮಾರಕಗಳನ್ನು ಸಂರಕ್ಷಿಸುವ ಸವಾಲುಗಳಲ್ಲಿ ಹಣಕಾಸಿನ ನಿರ್ಬಂಧಗಳು, ಪರಿಸರ ಅವನತಿ, ನಗರಾಭಿವೃದ್ಧಿ ಒತ್ತಡಗಳು ಮತ್ತು ಸಾಂಸ್ಕೃತಿಕ ಕಲಾಕೃತಿಗಳ ಅಕ್ರಮ ಸಾಗಾಣಿಕೆ ಸೇರಿವೆ. ಈ ಸವಾಲುಗಳನ್ನು ಎದುರಿಸಲು ಸಮರ್ಥನೀಯ ನಿರ್ವಹಣಾ ಅಭ್ಯಾಸಗಳು ಮತ್ತು ಅಂತರರಾಷ್ಟ್ರೀಯ ಸಹಕಾರದ ಅಗತ್ಯವಿದೆ.
ಸಂರಕ್ಷಣಾ ವಿಜ್ಞಾನದಲ್ಲಿನ ತಾಂತ್ರಿಕ ಪ್ರಗತಿಗಳು, ಉದಾಹರಣೆಗೆ ಲೇಸರ್ ಸ್ಕ್ಯಾನಿಂಗ್, ಡಿಜಿಟಲ್ ಮ್ಯಾಪಿಂಗ್, ಮತ್ತು ಆಕ್ರಮಣಶೀಲವಲ್ಲದ ಇಮೇಜಿಂಗ್ ತಂತ್ರಗಳು, ಸ್ಮಾರಕ ಪರಿಸ್ಥಿತಿಗಳನ್ನು ನಿರ್ಣಯಿಸಲು ಮತ್ತು ಮರುಸ್ಥಾಪನೆ ಯೋಜನೆಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.
ಸಂರಕ್ಷಣೆಯ ಯಶಸ್ವಿ ಉದಾಹರಣೆಗಳಲ್ಲಿ ಭಾರತದಲ್ಲಿ ತಾಜ್ ಮಹಲ್ ಮರುಸ್ಥಾಪನೆ, ಚೀನಾದ ಮಹಾಗೋಡೆ ಮತ್ತು ಕಾಂಬೋಡಿಯಾದ ಅಂಕೋರ್ ದೇವಾಲಯಗಳು ಸ್ಮಾರಕ ಪರಂಪರೆಯನ್ನು ಕಾಪಾಡುವ ಜಾಗತಿಕ ಪ್ರಯತ್ನಗಳನ್ನು ಪ್ರದರ್ಶಿಸುತ್ತವೆ.
.
3. ರಾಷ್ಟ್ರೀಯ ಭಾವೈಕ್ಯ :
ರಾಷ್ಟ್ರೀಯ ಭಾವೈಕ್ಯ ಒಂದು ದೇಶದೊಳಗಿನ ವೈವಿಧ್ಯಮಯ ಸಮುದಾಯಗಳು, ಸಂಸ್ಕೃತಿಗಳು ಮತ್ತು ಪ್ರದೇಶಗಳನ್ನು ಏಕೀಕೃತ ಸಮಗ್ರವಾಗಿ ಒಗ್ಗೂಡಿಸುವ ಶಕ್ತಿಯಾಗಿದೆ. ಇದು ಧರ್ಮ, ಭಾಷೆ, ಜನಾಂಗೀಯತೆ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯ ವ್ಯತ್ಯಾಸಗಳನ್ನು ಮೀರಿ ನಾಗರಿಕರಲ್ಲಿ ಸೇರಿರುವ, ಒಗ್ಗಟ್ಟಿನ ಮತ್ತು ಹಂಚಿಕೆಯ ಗುರುತನ್ನು ಇದು ಬೆಳೆಸುತ್ತದೆ.
ರಾಷ್ಟ್ರೀಯ ಭಾವೈಕ್ಯ ವು ಪರಸ್ಪರ ಗೌರವ, ತಿಳುವಳಿಕೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸ್ವೀಕಾರವನ್ನು ಉತ್ತೇಜಿಸುತ್ತದೆ. ಇದು ವೈವಿಧ್ಯತೆಯಲ್ಲಿ ಏಕತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ, ಸಾಮಾನ್ಯ ರಾಷ್ಟ್ರೀಯ ನೀತಿಯನ್ನು ಪ್ರಚಾರ ಮಾಡುವಾಗ ವಿವಿಧ ಸಂಪ್ರದಾಯಗಳ ಶ್ರೀಮಂತಿಕೆಯನ್ನು ಆಚರಿಸುತ್ತದೆ.
ಯುವ ಮನಸ್ಸುಗಳಲ್ಲಿ ಸಹಿಷ್ಣುತೆ, ಒಳಗೊಳ್ಳುವಿಕೆ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ನೀಡುವ ಮೂಲಕ ರಾಷ್ಟ್ರೀಯ ಏಕೀಕರಣವನ್ನು ಪೋಷಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು, ಭಾಷಾ ಕಲಿಕೆಯ ಉಪಕ್ರಮಗಳು ಮತ್ತು ರಾಷ್ಟ್ರೀಯ ಇತಿಹಾಸ ಪಠ್ಯಕ್ರಮದ ಮೂಲಕ ಏಕತೆಯನ್ನು ಉತ್ತೇಜಿಸಲು ವೇದಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ.
ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸಲು ರಾಜಕೀಯ ಸ್ಥಿರತೆ ಮತ್ತು ಅಂತರ್ಗತ ಆಡಳಿತ ಅತ್ಯಗತ್ಯ. ಸಮಾನ ಅಭಿವೃದ್ಧಿಯನ್ನು ಉತ್ತೇಜಿಸುವ, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ನೀತಿಗಳು ಎಲ್ಲಾ ನಾಗರಿಕರು ಮೌಲ್ಯಯುತ ಮತ್ತು ಪ್ರತಿನಿಧಿಸುವ ಭಾವನೆಯನ್ನು ಹೊಂದಿರುವ ಸಾಮರಸ್ಯದ ಸಮಾಜಕ್ಕೆ ಕೊಡುಗೆ ನೀಡುತ್ತವೆ.
ಸಮಾನವಾದ ಬೆಳವಣಿಗೆ ಮತ್ತು ಅಭಿವೃದ್ಧಿ ಉಪಕ್ರಮಗಳ ಮೂಲಕ ಆರ್ಥಿಕ ಏಕೀಕರಣವು ಪ್ರದೇಶಗಳು ಮತ್ತು ಸಮುದಾಯಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುತ್ತದೆ, ಸಾಮೂಹಿಕ ಸಮೃದ್ಧಿ ಮತ್ತು ಹಂಚಿಕೆಯ ಪ್ರಗತಿಯ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.
ಮಾಧ್ಯಮ ಮತ್ತು ಸಂವಹನ ಚಾನೆಲ್ಗಳು ಅಂತರ್ಗತ ನಿರೂಪಣೆಗಳನ್ನು ಪ್ರಸಾರ ಮಾಡುವ ಮೂಲಕ ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ಏಕತೆಯ ಯಶಸ್ಸಿನ ಕಥೆಗಳನ್ನು ಎತ್ತಿ ತೋರಿಸುತ್ತವೆ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಕುರಿತು ಸಂವಾದವನ್ನು ಬೆಳೆಸುತ್ತವೆ.
ಕಾನೂನು ಚೌಕಟ್ಟುಗಳು ಮತ್ತು ಸಾಂವಿಧಾನಿಕ ರಕ್ಷಣೆಗಳು ಎಲ್ಲಾ ನಾಗರಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರಕ್ಷಿಸುತ್ತದೆ, ಕಾನೂನಿನ ಮುಂದೆ ಸಮಾನತೆಯನ್ನು ಖಾತ್ರಿಪಡಿಸುತ್ತದೆ ಮತ್ತು ಸಮಾಜದಾದ್ಯಂತ ನ್ಯಾಯ ಮತ್ತು ನ್ಯಾಯದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.
ಐತಿಹಾಸಿಕ ನಿರೂಪಣೆಗಳು ಮತ್ತು ಸ್ವಾತಂತ್ರ್ಯ ಅಥವಾ ರಾಷ್ಟ್ರೀಯ ಏಕತೆಯ ಹೋರಾಟಗಳ ಹಂಚಿಕೊಂಡ ನೆನಪುಗಳು ಸಾಮೂಹಿಕ ಹೆಮ್ಮೆ ಮತ್ತು ದೇಶಭಕ್ತಿಯನ್ನು ಪ್ರೇರೇಪಿಸುತ್ತದೆ, ರಾಷ್ಟ್ರೀಯ ಏಕೀಕರಣದ ಬದ್ಧತೆಯನ್ನು ಬಲಪಡಿಸುತ್ತದೆ.
ರಾಷ್ಟ್ರೀಯ ಏಕೀಕರಣದ ಸವಾಲುಗಳಲ್ಲಿ ಕೋಮು ಉದ್ವಿಗ್ನತೆ, ಪ್ರಾದೇಶಿಕ ಅಸಮಾನತೆ, ಭಾಷಾ ವ್ಯತ್ಯಾಸಗಳು ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆಗಳು ಸೇರಿವೆ. ಈ ಸವಾಲುಗಳನ್ನು ಎದುರಿಸಲು ಸಂವಾದವನ್ನು ಉತ್ತೇಜಿಸಲು, ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಅಂತರ್ಗತ ಅಭಿವೃದ್ಧಿ ನೀತಿಗಳನ್ನು ಉತ್ತೇಜಿಸಲು ಪೂರ್ವಭಾವಿ ಕ್ರಮಗಳ ಅಗತ್ಯವಿದೆ.
ಕೊನೆಯಲ್ಲಿ, ರಾಷ್ಟ್ರೀಯ ಏಕೀಕರಣವು ಕೇವಲ ಸಂಘರ್ಷದ ಅನುಪಸ್ಥಿತಿಯಲ್ಲ, ಆದರೆ ಒಂದು ಸುಸಂಬದ್ಧ ಮತ್ತು ಅಂತರ್ಗತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಹಂಚಿಕೆಯ ದೃಷ್ಟಿ, ಪರಸ್ಪರ ಗೌರವ ಮತ್ತು ಸಾಮೂಹಿಕ ಕ್ರಿಯೆಯ ಉಪಸ್ಥಿತಿಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ಮೂಲಭೂತ ತತ್ವಗಳಾಗಿ ಏಕತೆ, ವೈವಿಧ್ಯತೆ ಮತ್ತು ಸಾಮರಸ್ಯವನ್ನು ಎತ್ತಿಹಿಡಿಯಲು ವೈಯಕ್ತಿಕ, ಸಮುದಾಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿರಂತರ ಪ್ರಯತ್ನಗಳ ಅಗತ್ಯವಿದೆ.