ವಸಂತ ಮುಖ ತೋರಲಿಲ್ಲ
ಅಭ್ಯಾಸ .
ಪ್ರಶ್ನೆಗಳಿಗೆ ಉತ್ತರಿಸಿ:
1. ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
ಉತ್ತರ:- ಪುಟ್ಟ ಪೋರಿಯು ಹೊರಗೆ ಮುಸುರೆ ತಿಕ್ಕುತ್ತಿದ್ದಾಳೆ.
2. ಅಮ್ಮ ಎಲ್ಲಿ ಮಲಗಿದ್ದಾಳೆ?
ಉತ್ತರ:-ಗುಡಿಸಿಲಿನಲ್ಲಿ ಗೂರುತ್ತ ಅಮ್ಮ ಮಲಗಿದ್ದಾಳೆ.
3. ಯಾರಿಗೆ ವಸಂತ ಮುಖ ತೋರಲಿಲ್ಲ?
ಉತ್ತರ:-ಕಮ್ಮಾರ, ಕುಂಬಾರ, ನೇಕಾರ, ಕೇರಿಯ ಮಾರ ಇವರಿಗೆ ವಸಂತ ಮುಖ ತೋರಲಿಲ್ಲ.
4. ಪುಟ್ಟಿಯ ಪ್ರಶ್ನೆಗಳೇನು?
ಉತ್ತರ:- ಗುಡಿಸಲೊಳಗೆ ಬರಲು ವಸಂತ ಹೆದರಿದನೇ? ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೇ? ಇವು ಪುಟ್ಟಿಯ ಪ್ರಶ್ನೆಗಳು.
5. ಈ ಕವನದಲ್ಲಿ ಪ್ರಕೃತಿಯ ಸಂಭ್ರಮ ಹೇಗೆ ವ್ಯಕ್ತವಾಗಿದೆ?
ಉತ್ತರ:- ವಸಂತ ಮುಖ ತೋರಲಿಲ್ಲ ಕವನದಲ್ಲಿ ಮೈದುಂಬಿ ನಿಂತ ಮಾವಿನ ಮರಗಳು, ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳು, ಕಡಲುಕ್ಕಿ ಹರಿಯುವ ಸಂಭ್ರಮ, ಬಣ್ಣದ ಚಿಟ್ಟೆ, ಚಿತ್ತಾರ ಬಿಡಿಸಿದ ನವಿಲು ಹೀಗೆ ಪ್ರಕೃತಿಯ ಸಂಭ್ರಮ ವ್ಯಕ್ತವಾಗಿದೆ.