ವ್ಯವಹಾರ ಅಧ್ಯಯನ
ಅಧ್ಯಾಯ – 16
ಬ್ಯಾಂಕ್ ವ್ಯವಹಾರಗಳು
ಅಭ್ಯಾಸಗಳು
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
1. ಬ್ಯಾಂಕ್ ಎಂಬ ಪದವು ಫ್ರೆಂಚಿನ ಬ್ಯಾಂಕ್ (Banque) ಶಬ್ದದಿಂದ ಬಂದಿದೆ.
2. ಬ್ಯಾಂಕುಗಳ ಬ್ಯಾಂಕ್ ಭಾರತೀಯ ರಿಜರ್ವ್ ಬ್ಯಾಂಕ್ ಆಗಿದೆ.
3. ರಾಷ್ಟ್ರೀಕೃತ ಬ್ಯಾಂಕಿಗೆ ಉದಾಹರಣೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
4. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಭಾರತೀಯ ಅಂಚೆ ಇಲಾಖೆಯು ನೀಡುತ್ತದೆ.
5. ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸ ಬಹುದಾದ ಖಾತೆ ಚಾಲ್ತಿ ಖಾತೆ.
6. ಠೇವಣಿಯನ್ನು ನಿಗದಿತ ಅವಧಿಗೆ ಇಡಬಹುದಾಗಿದೆ ನಿಶ್ಚಿತ ಠೇವಣಿಖಾತೆ ಯಲ್ಲಿ ಇಡಬಹುದಾಗಿದೆ.
II. ಈ ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.
7. ಬ್ಯಾಂಕು ಎಂದರೇನು?
ಉತ್ತರ:- ಬ್ಯಾಂಕ್ ಎಂಬ ಪದವು ಇಟಾಲಿಯನ್ನ ‘ಬ್ಯಾಂಕೋ’ (Banko) ಅಥವಾ ಫ್ರೆಂಚಿನ ‘ಬ್ಯಾಂಕ್’ (Banque) ಎಂಬ ಶಬ್ದಗಳಿಂದ ಬಂದಿದೆ. ಇವುಗಳ ಅರ್ಥ
ಬೆಂಚು‘ ಅಥವಾ ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್ ಆಗಿದೆ. ಬ್ಯಾಂಕು ಹಣಕಾಸಿನ ಸಂಸ್ಥೆಯಾಗಿದ್ದು, ಠೇವಣಿಗಳನ್ನು ಸ್ವೀಕರಿಸಿ, ಆ ಠೇವಣಿಗಳನ್ನು ಸಾಲಗಳ ರೂಪದಲ್ಲಿ ಕೊಡುತ್ತದೆ. ಯಾರು ಹಣವನ್ನು ಉಳಿತಾಯ ಮಾಡಬೇಕೆಂದು ಬಯಸುವರೋ ಅವರಿಂದ ಸ್ವೀಕರಿಸಿ ಯಾರಿಗೆ ಅವಶ್ಯವಿದೆಯೋ ಅವರಿಗೆ ಸಾಲದ ರೂಪದಲ್ಲಿ ಕೊಡುತ್ತದೆ. ಬ್ಯಾಂಕಿನಲ್ಲಿ ಸೇವೆಗಳನ್ನು ಉಪಯೋಗಿಸಿಕೊಳ್ಳುವ ಆ ವ್ಯವಹಾರಗಳನ್ನು ಬ್ಯಾಂಕಿಂಗ್ ಎನ್ನುತ್ತಾರೆ.
8. ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಮನಿಸ ಬಹುದಾದ ಗುಣಲಕ್ಷಣಗಳ ಪಟ್ಟಿ ಮಾಡಿ.
ಉತ್ತರ:- ಬ್ಯಾಂಕುಗಳು ಹಲವಾರು ಸೇವೆಗಳನ್ನು ತನ್ನ ಗ್ರಾಹಕರಿಗೆ ನೀಡುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ
1. ಹಣದ ವಹಿವಾಟು: ಬ್ಯಾಂಕುಗಳು ಹಣಕಾಸಿನ ಸಂಸ್ಥೆ ಗಳಾಗಿದ್ದು, ಸಾರ್ವಜನಿಕರ ಹಣದ ವಹಿವಾಟನ್ನು ಮಾಡುತ್ತವೆ.
2. ವ್ಯಕ್ತಿ/ಸಂಸ್ಥೆ/ಕಂಪನಿ: ಬ್ಯಾಂಕು ಒಬ್ಬ ವ್ಯಕ್ತಿಯಾಗಿರ ಬಹುದು. ಸಂಸ್ಥೆ ಅಥವಾ ಕಂಪನಿ ಆಗಿರಬಹುದು. ಬ್ಯಾಂಕಿಂಗ್ ಕಂಪನಿ ಎಂದರೆ ಹಣಕಾಸಿನ ವ್ಯವಹಾರ ಮಾಡುವ ಸಂಸ್ಥೆ.
3. ಠೇವಣಿಗಳನ್ನು ಅಂಗೀಕರಿಸುತ್ತವೆ: ಬ್ಯಾಂಕು ಸಾರ್ವ ಜನಿಕರಿಂದ ಠೇವಣಿಗಳನ್ನು ಅಂಗೀಕರಿಸುತ್ತದೆ. ಈ ಠೇವಣಿ ಗಳನ್ನು ಠೇವಣಿದಾರರು ಬೇಡಿಕೆ ಇಟ್ಟಾಗ ಅಥವಾ ಒಂದು ನಿರ್ದಿಷ್ಟ ಅವಧಿ ಮುಗಿದ ಮೇಲೆ ಹಿಂದಿರುಗಿಸಬೇಕಾಗುತ್ತದೆ. ಈ ಠೇವಣಿಗಳಿಗೆ ಬ್ಯಾಂಕು ಭದ್ರತೆಯನ್ನು ಒದಗಿಸುತ್ತದೆ. ಬ್ಯಾಂಕು ಗ್ರಾಹಕರ ಠೇವಣಿಗಳಿಗೆ ಮೇಲ್ವಿಚಾರಕನಂತೆ ವರ್ತಿಸುತ್ತದೆ.
4. ಸಾಲಗಳನ್ನು ಕೊಡುವುದು: ಬ್ಯಾಂಕು ಕೈಗಾರಿಕಾ ಕ್ಷೇತ್ರ, ಕೃಷಿ ಕ್ಷೇತ್ರ, ಶಿಕ್ಷಣ, ಗೃಹನಿರ್ಮಾಣ ಮೊದಲಾದ ಉದ್ದೇಶಗಳಿಗಾಗಿ ಹಣವನ್ನು ಸಾಲ ರೂಪದಲ್ಲಿ ಕೊಡುತ್ತದೆ.
5. ಪಾವತಿ ಮತ್ತು ಹಿಂದಕ್ಕೆ ಪಡೆಯುವುದು: ಬ್ಯಾಂಕು ಸುಲಭ ರೀತಿಯಲ್ಲಿ ಠೇವಣಿದಾರರಿಗೆ ಚೆಕ್ಕು ಅಥವಾ ಹುಂಡಿಗಳ ಮೂಲಕ ಹಣವನ್ನು ಪಾವತಿ ಮಾಡುತ್ತದೆ ಮತ್ತು ಠೇವಣಿಗಳನ್ನು ಹಿಂದಕ್ಕೆ ಪಡೆಯಲು ಅನುವು ಮಾಡಿಕೊಡುತ್ತದೆ.
6. ಏಜೆಂಟ್ ಅಥವಾ ಏಜೆಂಟ್ ನಿಯೋಜನೆ ಮತ್ತು ಉಪಯುಕ್ತ ಸೇವೆಗಳು: ಬ್ಯಾಂಕು ತನ್ನ ಗ್ರಾಹಕರಿಗೆ ಏಜೆಂಟರಂತೆ ಅನೇಕ ಉಪಯುಕ್ತ ಸೇವೆಗಳನ್ನು ಒದಗಿಸುತ್ತದೆ.
7. ಲಾಭ ಮತ್ತು ಸೇವಾಭಾವನೆ: ಬ್ಯಾಂಕು ಸೇವೆಯ ಮನೋಭಾವ ಹೊಂದಿದ್ದು, ಲಾಭ ಪಡೆಯುವ ಒಂದು ಸಂಸ್ಥೆಯಾಗಿದೆ.
8. ನಿರಂತರ ವಿಸ್ತರಿಸುತ್ತಾ ಹೋಗುವ ಕಾರ್ಯಗಳು: ಬ್ಯಾಂಕುಗಳು ತಮ್ಮ ಕಾರ್ಯಗಳನ್ನು ನಿರಂತರವಾಗಿ ಬೇರೆ ಬೇರೆ ದಿಕ್ಕುಗಳತ್ತ ಸೇವೆಗಳನ್ನು ಮತ್ತು ಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಹೋಗುತ್ತವೆ.
9. ಸಂಬಂಧ ಕಲ್ಪಿಸುವ ಕೊಂಡಿ: ಬ್ಯಾಂಕು ಠೇವಣಿದಾರರು ಮತ್ತು ಸಾಲ ಪಡೆಯುವವರ ಮಧ್ಯೆ ಸಂಪರ್ಕ ಕಲ್ಪಿಸುವ ಒಂದು ಕೊಂಡಿಯಂತೆ ತಮ್ಮ ಕಾರ್ಯಗಳನ್ನು ನಡೆಸುತ್ತದೆ. ಗ್ರಾಹಕರ ಉಳಿಕೆ ಹಣವನ್ನು ಠೇವಣಿಗಳ ಮೂಲಕ ಸಂಗ್ರಹಿಸಿ ಇದನ್ನು ಯಾರಿಗೆ ಅವಶ್ಯಕವಿದೆಯೋ ಅವರಿಗೆ ಸಾಲ ರೂಪದಲ್ಲಿ ಕೊಡುತ್ತದೆ.
10. ಬ್ಯಾಂಕಿಂಗ್ ವ್ಯವಹಾರ: ಬ್ಯಾಂಕಿನ ಮುಖ್ಯ ಚಟು ವಟಿಕೆ ಹಣಕಾಸಿನಿಂದ ಕೂಡಿದ ವ್ಯವಹಾರ (ಬ್ಯಾಂಕಿಂಗ್) ವಾಗಿದ್ದು, ಇತರ ವ್ಯವಹಾರಗಳಿಗೆ ಅಧೀನವಾಗಿರುವುದಿಲ್ಲ.
11. ಹೆಸರಿನ ಗುರುತು: ಬ್ಯಾಂಕು ಯಾವಾಗಲೂ ತನ್ನ ಹೆಸರಿನಲ್ಲಿ ಬ್ಯಾಂಕು ಎಂಬ ಪದವನ್ನು ಸೇರಿಸಿರಬೇಕು. ಉದಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕು, ಕಾರ್ಪೊರೇಷನ್ ಬ್ಯಾಂಕು ಮುಂತಾದವು. ಇದರಿಂದಾಗಿ ಗ್ರಾಹಕರು ಯಾವ ಬ್ಯಾಂಕಿನ ಜೊತೆಯಲ್ಲಿ ವ್ಯವಹಾರ ಇಟ್ಟುಕೊಂಡಿದ್ದಾರೆಂದು ತಿಳಿಯುತ್ತದೆ.
9. ಬ್ಯಾಂಕ್ ನಿರ್ವಹಿಸುವ ಕಾರ್ಯಗಳಾವುವು?
ಉತ್ತರ:- ಬ್ಯಾಂಕ್ ತನ್ನ ಗ್ರಾಹಕರಿಗೆ ಅನೇಕ ಕಾರ್ಯಗಳನ್ನು ನೀಡುತ್ತಿದ್ದು, ಅವುಗಳಲ್ಲಿ ಮುಖ್ಯವಾದವು ಗಳೆಂದರೆ-
i) ಸಾರ್ವಜನಿಕರಿಂದ ಅಥವಾ ಇತರರಿಂದ ಠೇವಣಿ ಗಳನ್ನು ಅಂಗೀಕರಿಸುವುದು.
ii) ಸಾರ್ವಜನಿಕರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಸಾಲಗಳನ್ನು ಕೊಡುವುದು.
iii) ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದು.
iv) ಚೆಕ್ಕು ಮತ್ತು ಹುಂಡಿಗಳ ಮೇಲೆ ಹಣ ವಸೂಲು ಮಾಡುವುದು.
v) ಹುಂಡಿಗಳನ್ನು ಸೋಡಿ ಮಾಡುವುದು.
vi) ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು.
vi) ವಿದೇಶಿ ವಿನಿಮಯದ ವ್ಯವಹಾರಗಳನ್ನು ನಿರ್ವಹಿಸುವುದು.
viii) ಬೆಲೆ ಬಾಳುವ ವಸ್ತುಗಳನ್ನು ತಮ್ಮ ಸುಪರ್ದಿನಲ್ಲಿ ಭದ್ರವಾಗಿ ಇಟ್ಟುಕೊಳ್ಳುವುದು
ix) ಸಾಲಪತ್ರಗಳನ್ನು ಮತ್ತು ಜವಾಬ್ದಾರಿ ಪತ್ರಗಳನ್ನು ಕೊಡುವುದು.
x) ಸರ್ಕಾರದ (ಕೇಂದ್ರ ಮತ್ತು ರಾಜ್ಯ )ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವುದು.
10. ಬ್ಯಾಂಕ್ ಮತ್ತು ಗ್ರಾಹಕರ ಸಂಬಂಧವನ್ನು ತಿಳಿಸಿ.
ಉತ್ತರ:- ಬ್ಯಾಂಕು ಮತ್ತು ಅದರ ಗ್ರಾಹಕರಿಗೂ ಇರುವ ಸಂಬಂಧಗಳನ್ನು ಎರಡು ರೀತಿಗಳಲ್ಲಿ ವಿಂಗಡಿಸಬಹುದು:
1. ಸಾಮಾನ್ಯ ಸಂಬಂಧ
2. ವಿಶೇಷ ಸಂಬಂಧ.
1. ಸಾಮಾನ್ಯ ಸಂಬಂಧ: ಇದು ಮೂರು ಮುಖ್ಯ ವಿಧಗಳಿಂದ ಕೂಡಿದೆ.
(ಅ) ಪ್ರಾಥಮಿಕ ಸಂಬಂಧ (ಸಾಲಿಗ ಮತ್ತು ಸಾಲಗಾರನ ಸಂಬಂಧದಂತೆ.)
(ಆ) ಸಹಾಯಕ ಅಥವಾ ಉಪಕಾರ ಸಂಬಂಧ (ಧರ್ಮದರ್ಶಿ ಅಥವಾ ನಿಕ್ಷೇಪಧಾರಿ ಮತ್ತು ಪ್ರಯೋಜನಕಾರಿಯ ನಡುವಿನ ಸಂಬಂಧ)
(ಇ) ಕಾರಬಾರಿ ಅಥವಾ ನಿಯೋಗಿ ಮತ್ತು ಮುಖ್ಯಸ್ಥನ ಸಂಬಂಧ.
2. ವಿಶೇಷ ಸಂಬಂಧ: ಚೆಕ್ಕುಗಳನ್ನು ಮನ್ನಣೆ ಮಾಡು ವುದು. ಗ್ರಾಹಕರ ಲೆಕ್ಕಗಳ ಗೌಪ್ಯತೆ ಕಾಪಾಡುವುದು.
11. ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಖಾತೆ ತೆರೆಯುವವರ ಸಂಖ್ಯೆ ಹೇರಳವಾಗಿರುತ್ತದೆ. ಕಾರಣ ಕೊಡಿ.
ಉತ್ತರ:- ಸಾಮಾನ್ಯವಾಗಿ ವೇತನ ಪಡೆಯುವವರು ಅಥವಾ ಒಂದು ನಿಯಮಿತ ಆದಾಯ ಹೊಂದಿರುವ ಜನರಿಂದ ಉಳಿತಾಯ ಖಾತೆ ತೆರೆಯಲ್ಪಡುತ್ತದೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಪಿಂಚಣಿದಾರರು ತೆರೆಯಲು ಅವಕಾಶವಿದೆ. ಈ ಖಾತೆಯು ಜನರು ಹಣ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಉಳಿತಾಯ ಖಾತೆಯ ಗರಿಷ್ಠಮೊತ್ತಕ್ಕೆ ಪರಿಮಿತಿ ಇರುವುದಿಲ್ಲ. ಬ್ಯಾಂಕಿನಿಂದ ಹಣ ಹಿಂದಕ್ಕೆ ಪಡೆಯಲು ಚೆಕ್ಕು ಪುಸ್ತಕ ಅಥವಾ ಹಣ ಹಿಂದಕ್ಕೆ ಪಡೆಯುವ ಚೀಟಿಯ ಮೂಲಕ ಸಾಧ್ಯವಿದೆ.
12. ಬ್ಯಾಂಕ್ ಖಾತೆ ತೆರೆಯುವುದರಿಂದಾಗುವ ಅನುಕೂಲ ಗಳು ಯಾವುವು?
ಉತ್ತರ:- ಬ್ಯಾಂಕು ಖಾತೆಯನ್ನು ತೆಗೆಯುವುದರಿಂದ ಆಗುವ ಅನುಕೂಲಗಳು ಹೀಗಿವೆ:
1) ಬ್ಯಾಂಕು ಖಾತೆಯು ಹಣದ ಭದ್ರತೆ ಕಾಪಾಡುತ್ತದೆ.
ii) ಬ್ಯಾಂಕು ಖಾತೆಯು ಹಣದ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತದೆ.
iii) ಬ್ಯಾಂಕು ಖಾತೆಯು ಹಣವನ್ನು ವಸೂಲು ಮಾಡಲು ಸಹಾಯ ಮಾಡುತ್ತದೆ.
iv) ಬ್ಯಾಂಕು ಖಾತೆಯನ್ನು ಹೊಂದಿರುವವರು ಸಾಲ ವನ್ನು ಪಡೆಯಲು ಸಾಧ್ಯವಾಗುತ್ತದೆ.
v) ಬ್ಯಾಂಕು ಖಾತೆಯು ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಾಧ್ಯ ಮಾಡಿಕೊಡುತ್ತದೆ.
vi) ಬ್ಯಾಂಕು ಖಾತೆದಾರರು ಭದ್ರತಾ ಕಪಾಟುಗಳನ್ನು ಪಡೆಯಬಹುದು