ಅರ್ಥಶಾಸ್ತ್ರ
ಅಧ್ಯಾಯ – ೧೫
ಅರ್ಥವ್ಯವಸ್ಥೆ ಮತ್ತು ಸರಕಾರ
ಅಭ್ಯಾಸಗಳು
1. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
1. 20ನೇ ಶತಮಾನದಲ್ಲಿ ಸರಕಾರಗಳು ಆರ್ಥಿಕಾಭಿವೃದ್ಧಿಯ ತಂತ್ರವಾಗಿ ಆರ್ಥಿಕ ಯೋಜನೆಗಳನ್ನು ಜಾರಿಗೆ ತಂದವು.
2. ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಸಂಸ್ಥೆ ರಾಷ್ಟ್ರೀಯ ಯೋಜನಾ ಆಯೋಗ.
3. ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ‘ಎಲ್ಲರನ್ನು ಒಳಗೊಂಡ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಲಾಯಿತು.
4. ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ. ಎಂ.ಎಸ್. ಸ್ವಾಮಿನಾಥನ್
5. ಪರಿಸರಸ್ನೇಹಿ ಹಾಗೂ ಸುಸ್ಥಿರ ಕೃಷಿಗಾಗಿ ಸರಕಾರವು ರೈತರಿಗೆ ಸಾವಯವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸುತ್ತಿದೆ.
6. ನೀತಿ ಆಯೋಗವು 2015ರ ಜನವರಿ 1 ರಂದು ಸ್ಥಾಪಿತವಾಯಿತು.
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
7. ಆರ್ಥಿಕ ಯೋಜನೆಯ ಅರ್ಥ ತಿಳಿಸಿ.
ಉತ್ತರ:- ‘ಸರಕಾರವು ಕೆಲವು ನಿರ್ಧಿಷ್ಟ ಧೈಯೋದ್ದೇಶ ಗಳೊಂದಿಗೆ, ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು, ಜನರ ಸುಖವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು, ಪ್ರಜ್ಞಾಪೂರ್ವಕವಾಗಿ ಮತ್ತು ವಿವೇಕಯುತವಾಗಿ ಜಾರಿಗೊಳಿಸುವ ಪ್ರಕ್ರಿಯೆಯನ್ನು “ಆರ್ಥಿಕ ಯೋಜನೆ” ಎನ್ನುತ್ತೇವೆ’.
8. ಭಾರತದ ‘ಆರ್ಥಿಕ ಯೋಜನೆಯ ಪಿತ‘ ಯಾರು ?
ಉತ್ತರ:- ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ‘ಭಾರತದ ಆರ್ಥಿಕ ಯೋಜನೆಯ ಪಿತಾಮಹ’ ಎಂದು ಕರೆಯಲಾಗುತ್ತಿದೆ.
9. ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆ ಯಾವುದು ?
ಉತ್ತರ:- ‘ರಾಷ್ಟ್ರೀಯ ಅಭಿವೃದ್ಧಿ ಮಂಡಳಿ’ (National Development Council) ಯು ರಾಷ್ಟ್ರೀಯ ಯೋಜನಾ ಆಯೋಗವು ತಯಾರಿಸಿದ ಪಂಚವಾರ್ಷಿಕ ಯೋಜನೆಯ ಕರಡಿಗೆ ಅನುಮೋದನೆ ನೀಡುತ್ತದೆ.
10. ಹಸಿರುಕ್ರಾಂತಿ ಎಂದರೇನು ?
ಉತ್ತರ:- ಪಂಚವಾರ್ಷಿಕ ಯೋಜನೆಗಳ ಅತಿ ದೊಡ್ಡ ಸಾಧನೆಯೆಂದರೆ ‘ಹಸಿರು ಕ್ರಾಂತಿ’. ‘ಕ್ರಾಂತಿ’ ಎಂದರೆ ‘ಶೀಘ್ರ ಬದಲಾವಣೆ ಅಥವಾ ಪ್ರಗತಿ’ ಎಂದರ್ಥ, 1967-70ರ ಅವಧಿಯಲ್ಲಿ ಭಾರತದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಆದಂತಹ ಶೀಘ್ರ ಪ್ರಗತಿಯನ್ನು ‘ಹಸಿರು ಕ್ರಾಂತಿ’ ಎಂದು ಗುರುತಿಸ ಲಾಗುತ್ತಿದೆ. ಇದು ಹಸಿರು ಬೆಳೆಗಳಲ್ಲಾದ ಪ್ರಗತಿಯಾದುದರಿಂದ ಇದಕ್ಕೆ “ಹಸಿರು ಕ್ರಾಂತಿ” ಎಂದು ಹೆಸರಿಸಲಾಗಿದೆ.
11. ಸುಗ್ಗಿ ನಂತರದ ತಂತ್ರಜ್ಞಾನ ಎಂದರೇನು ?
ಉತ್ತರ:- ಕೃಷಿ ಉತ್ಪಾದನೆಯ ಹೆಚ್ಚಳದಿಂದ ಕೃಷಿವಸ್ತುಗಳ ಬೆಲೆಗಳು ಇಳಿಕೆ ರೈತರಿಗೆ ನಷ್ಟವಾಗುವ ಆತಂಕ . ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಸಿಗಬೇಕಾದ ಅನಿವಾರ್ಯತೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವ ಸಲುವಾಗಿ ಕೃಷಿ ಮಾರುಕಟ್ಟೆಗಳ ಸುಧಾರಣೆ – ಹೆಚ್ಚುವರಿ ಉತ್ಪನ್ನಗಳನ್ನು ಸಂಸ್ಕರಿಸಿ ಅವುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಲು ಕ್ರಮ- ಹೆಚ್ಚುವರಿ ಉತ್ಪನ್ನಗಳನ್ನು ಕೆಡದಂತೆ ಸಂಗ್ರಹಿಸಲು ಉಗ್ರಾಣಗಳು ಮತ್ತು ಶೈತ್ಯಾಗಾರಗಳ-ಅವಶ್ಯಕತೆ ಉಂಟಾಯಿತು. ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಬಳಕೆಗೆ ತರಲಾದ ಈ ಸುಧಾರಿತ ತಂತ್ರಜ್ಞಾನವನ್ನು ಸುಗ್ಗಿ ನಂತರದ ತಂತ್ರಜ್ಞಾನ” (Post-harvest Technology) ಎಂದು ಕರೆಯುತ್ತಾರೆ.
12. ನೀತಿ ಆಯೋಗದ ಈಗಿನ ಅಧ್ಯಕ್ಷರು ಯಾರು?
ಉತ್ತರ:- ನೀತಿ ಆಯೋಗದ ನೇತೃತ್ವವನ್ನು ದೇಶದ ಪ್ರಧಾನಮಂತ್ರಿಯವರು ವಹಿಸಿರುತ್ತಾರೆ. ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ.
III. ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.
13. ಕಲ್ಯಾಣ ರಾಜ್ಯಗಳಲ್ಲಿ ಸರಕಾರಗಳ ಕಾರ್ಯಕ್ಷೇತ್ರ ಹೇಗೆ ವಿಸ್ತರಣೆಗೊಂಡಿದೆ ?
ಉತ್ತರ:- 19ನೆಯ ಶತಮಾನದ ಅಂತ್ಯದವರೆಗೆ ಮಾನವನ ಆರ್ಥಿಕ ಚಟುವಟಿಕೆಗಳಲ್ಲಿ ಸರಕಾರದ ಮಧ್ಯಪ್ರವೇಶ ಇರಬಾರದು ಎಂದು ಅಂದಿನ ಹಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯವಾಗಿತ್ತು. ಆಗ ಸರಕಾರಗಳು ಕೇವಲ ರಾಷ್ಟ್ರರಕ್ಷಣೆ, ನ್ಯಾಯನಿರ್ಣಯ ಮತ್ತು ಶಾಂತಿ-ಸುವ್ಯವಸ್ಥೆ ಪಾಲನೆ ಮುಂತಾದ ಮೂಲಭೂತ ಕಾರ್ಯಗಳನ್ನಷ್ಟೇ ನಿರ್ವಹಿಸುತ್ತಿದ್ದವು. ಆದರೆ 20ನೆಯ ಶತಮಾನದಲ್ಲಿ ‘ಕಲ್ಯಾಣ ರಾಜ್ಯ’ಗಳ ಉದಯದೊಂದಿಗೆ ಸರಕಾರಗಳ ಕಾರ್ಯಕ್ಷೇತ್ರ ವಿಸ್ತರಣೆಯಾಯಿತು. ಸರಕಾರಗಳು ಎಲ್ಲ ಪ್ರಜೆಗಳಿಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸಾರಿಗೆ, ಸಂಪರ್ಕ ಮುಂತಾದ ಹಲವು ಸೌಕರ್ಯಗಳನ್ನು ಒದಗಿಸಿಕೊಡಲು ಮುಂದಾದವು. ಹಾಗಾಗಿ ಸರಕಾರವು ಜನರ ಆರ್ಥಿಕ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಲು ಮುಂದಾಯಿತು. ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸರಕಾರದ ಪಾತ್ರ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಿತು.
14. ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳನ್ನು ಬರೆಯಿರಿ.
ಉತ್ತರ:- ಭಾರತದಲ್ಲಿ ಆರ್ಥಿಕ ಯೋಜನೆಗಳ ಮೂಲ ಉದ್ದೇಶ ಬಡತನ ನಿರ್ಮೂಲನೆ ಹಾಗೂ ಜನರ ಜೀವನ ಮಟ್ಟವನ್ನು ಸಾಧ್ಯವಾದಷ್ಟು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು. ಈ ಮೂಲ ಉದ್ದೇಶದ ಸಾಧನೆಗೆ ಪೂರಕವಾಗಿ ಕೆಲವು ಉದ್ದೇಶಗಳನ್ನು ಸಾಧಿಸಬೇಕಾಗುತ್ತದೆ. ಅವುಗಳೆಂದರೆ:
1. ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು.
2. ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು.
3. ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡು ವುದು.
4. ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
5. ಅರ್ಥವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು, ಇತ್ಯಾದಿ.
15. ಪಂಚವಾರ್ಷಿಕ ಯೋಜನೆಗಳ ಸಾಧನೆಗಳನ್ನು ಪಟ್ಟಿ ಮಾಡಿರಿ.
ಉತ್ತರ:- ಉತ್ತರ: ಪಂಚವಾರ್ಷಿಕ ಯೋಜನೆಗಳ ಸಾಧನೆ: ಯೋಜನೆಯ ಪ್ರಾರಂಭದ 20 ವರ್ಷಗಳ ಅವಧಿಯಲ್ಲಿ ನಮ್ಮ ರಾಷ್ಟ್ರೀಯ ಆದಾಯವು ಸರಾಸರಿ ವಾರ್ಷಿಕ ಶೇ.3.5ರ ದರದಲ್ಲಿ ಹೆಚ್ಚಳವಾದರೆ, ನಂತರದ 20 ವರ್ಷಗಳ ಅವಧಿಯಲ್ಲಿ ಅದು ಶೇ. 5ರ ದರದಲ್ಲಿ ಹೆಚ್ಚಳವಾಗಿದೆ. 1991-2000ರ ಅವಧಿಯಲ್ಲಿ ಸರಾಸರಿ ವಾರ್ಷಿಕ ಶೇ.5.6ರ ದರದಲ್ಲಿ ಹೆಚ್ಚಿದರೆ, 2001-2010ರ ಅವಧಿಯಲ್ಲಿ ಶೇ.7.3ರ ದರದಲ್ಲಿ ಹೆಚ್ಚಳವಾಗಿದೆ. ಅದಕ್ಕೆ ತಕ್ಕಂತೆ ತಲಾ ಆದಾಯದ ಬೆಳವಣಿಗೆಯೂ ಹೆಚ್ಚಿದೆ. 2001- 2010ರ ಅವಧಿಯಲ್ಲಿ ತಲಾ ಆದಾಯವು ವಾರ್ಷಿಕ ಸರಾಸರಿ ಶೇ.5.6ರ ದರದಲ್ಲಿ ಹೆಚ್ಚಿದೆ.
ಯೋಜನೆಯ ಪ್ರಾರಂಭದಲ್ಲಿ ರಾಷ್ಟ್ರೀಯ ಆದಾಯಕ್ಕೆ ಕೃಷಿವಲಯದಿಂದ ಶೇ. 50ಕ್ಕಿಂತ ಹೆಚ್ಚಿನ ಆದಾಯ ಬರುತ್ತಿತ್ತು. ಆದರೆ ಈಗ ಈ ವಲಯದ ಪಾಲು ಶೇ. 12 ಆಗಿದೆ. ಸದ್ಯದಲ್ಲಿ ರಾಷ್ಟ್ರೀಯ ಆದಾಯಕ್ಕೆ ಸೇವಾ ವಲಯದಿಂದ ಅತಿಹೆಚ್ಚು ಅಂದರೆ ಶೇ. 59 ರಷ್ಟು ಆದಾಯ ಬರುತ್ತಿದೆ.
ಯೋಜನೆಗಳ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು ಸುಮಾರು ಐದು ಪಟ್ಟು ಹೆಚ್ಚಳವಾಗಿದ್ದು, 2011-12 ರಲ್ಲಿ 257.4 ದಶಲಕ್ಷ ಟನ್ನುಗಳಿಗೆ ಹೆಚ್ಚಿದೆ.
ಕೈಗಾರಿಕೆ ಮತ್ತು ಸೇವಾ ವಲಯಗಳ ವಿಸ್ತರಣೆಯಿಂದ ಉದ್ಯೋಗಾವಕಾಶಗಳು ಹೆಚ್ಚಿವೆ. ಬಡತನ ನಿರ್ಮೂಲನೆ ಹಾಗೂ ಉದ್ಯೋಗ ಸೃಷ್ಠಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಬಡಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲು ಪ್ರಯತ್ನಿಸಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಪ್ರಗತಿ ಕಂಡುಬಂದಿದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ನಮ್ಮ ತಂತ್ರಜ್ಞರ ಸೇವೆಯನ್ನು ಹೊರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತದ ರಫ್ತು ಕ್ಷೇತ್ರದಲ್ಲಿ ತಯಾರಿಕಾ ಮತ್ತು ಎಂಜಿನಿಯರಿಂಗ್ ಸರಕುಗಳ ರಫ್ತು ಪ್ರಮಾಣ ಅಗಾಧವಾಗಿ ಹೆಚ್ಚಿದೆ.
16. ಹಸಿರು ಕ್ರಾಂತಿಗೆ ಪ್ರೇರಣೆಯಾದ ಅಂಶಗಳಾವುವು ?
ಉತ್ತರ:- ಹಸಿರು ಕ್ರಾಂತಿಯು ‘ಹೆಚ್ಚು ಇಳುವರಿ ಬೀಜ’ಗಳ ಬಳಕೆಯ ಪರಿಣಾಮವಾಗಿದೆ. 1965-66 ರ ಅವಧಿಯಲ್ಲಿ ಭಾರತದಲ್ಲಿ ಆಹಾರ ಧಾನ್ಯಗಳ ಕೊರತೆ ಅಗಾಧವಾಗಿ ಹೆಚ್ಚಿತು. ಆಗ ಭಾರತ ಸರಕಾರವು 1996 ರಲ್ಲಿ ಗೋಧಿಯ ಹೆಚ್ಚು ಇಳುವರಿ ಬೀಜಗಳನ್ನು ಆಯ್ದ ರಾಜ್ಯ/ಜಿಲ್ಲೆಗಳಲ್ಲಿ ಬಳಕೆಗೆ ತಂದಿತು. ಹೆಚ್ಚು ಇಳುವರಿ ಬೀಜಗಳ ಬಳಕೆಯು ನಿಗದಿತ ಪೋಷಕಾಂಶಗಳು, ನಿಯಮಿತವಾದ ನೀರು ಮತ್ತು ರೋಗಗಳಿಂದ ರಕ್ಷಣೆಯನ್ನು ಅಪೇಕ್ಷಿಸುವುದರಿಂದ ಹೆಚ್ಚು ಇಳುವರಿ ಬೀಜಗಳ ಬಳಕೆಯ ಜೊತೆಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಕೆಗೆ ತರಲಾಯಿತು. ನೀರಾವರಿ ಸೌಲಭ್ಯಗಳನ್ನು ವಿಸ್ತರಿಸಲಾಯಿತು. ಇದರಿಂದ ಗೋಧಿಯ ಉತ್ಪಾದನೆ ಅಗಾಧವಾಗಿ ಹೆಚ್ಚಿತು. ಕೃಷಿ ಉತ್ಪಾದನೆಯಲ್ಲಿ ಬಳಸಲಾದ ಈ ಸುಧಾರಿತ ತಂತ್ರಜ್ಞಾನವನ್ನು ‘ಸುಗ್ಗಿ ಪೂರ್ವ ತಂತ್ರಜ್ಞಾನ’ ಎನ್ನುತ್ತಾರೆ.
ಹಸಿರು ಕ್ರಾಂತಿಯ ಪ್ರಾರಂಭದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಗೋಧಿ ಬೆಳೆಯಲ್ಲಿ ಮಾತ್ರ ಬಳಸಲಾಯಿತು. ಅದರ ಯಶಸ್ಸಿನಿಂದ ಪ್ರೇರಿತವಾದ ಸರಕಾರವು ಭತ್ತ, ಜೋಳ, ರಾಗಿ, ಕಬ್ಬು ಮುಂತಾದ ಬೆಳೆಗಳಲ್ಲಿಯೂ ಹೆಚ್ಚು ಇಳುವರಿ ಬೀಜಗಳನ್ನು ಬಳಸಲು ಪ್ರೇರಣೆ ನೀಡಿತು. ಸುಧಾರಿತ ತಂತ್ರಜ್ಞಾನವನ್ನು ಎಲ್ಲ ಬೆಳೆಗಳಲ್ಲೂ ಬಳಸುವುದರ ಜೊತೆಗೆ ಇದನ್ನು ದೇಶಾದ್ಯಂತ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಯಿತು. 80 ರ ದಶಕದ ವೇಳೆಗೆ ಭಾರತವು ಆಹಾರ ಧಾನ್ಯಗಳ : ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿತು.
ಸರಕಾರವು ಸಣ್ಣ ಮತ್ತು ಬಡ ರೈತರಿಗೂ ಸುಧಾರಿತ ತಂತ್ರಜ್ಞಾನದ ಲಾಭ ದೊರೆಯುವಂತೆ ಮಾಡಲು ಹೆಚ್ಚಿನ ‘ಸಹಾಯಧನ‘ದೊಂದಿಗೆ ಬೀಜ, ಗೊಬ್ಬರ, ಕ್ರಿಮಿನಾಶಕ, ಯಂತ್ರೋಪಕರಣಗಳು ಮುಂತಾದುವುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ವಿತರಿಸಲು ಮುಂದಾಯಿತು. ಅಲ್ಲದೆ ರೈತರಿಗೆ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲು ಮುಂದಾಯಿತು. ಇದರಿಂದ ಸುಧಾರಿತ ಕೃಷಿ ವಿಧಾನಗಳನ್ನು ಎಲ್ಲ ವರ್ಗದ ರೈತರು ಬಳಸಲು ಸಾಧ್ಯವಾಯಿತು. ಕೃಷಿ ಉತ್ಪಾದನೆ ಹೆಚ್ಚಿತು. ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಬಳಕೆಗೆ ತರಲಾದ ಸುಧಾರಿತ ತಂತ್ರಜ್ಞಾನವನ್ನು ‘ಸುಗ್ಗಿ ನಂತರದ ತಂತ್ರಜ್ಞಾನ’ ಎನ್ನುತ್ತಾರೆ. ಹಸಿರು ಕ್ರಾಂತಿಗೆ ಸುಗ್ಗಿ ಪೂರ್ವ ಮತ್ತು ಸುಗ್ಗಿ ನಂತರದ ತಂತ್ರಜ್ಞಾನಗಳೆರಡೂ ಪ್ರೇರಕ ಅಂಶಗಳಾಗಿವೆ.
17. ಕೃಷಿ ವಲಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳೇನು ?
ಉತ್ತರ:- ಕೃಷಿ ವಲಯವು ಸದ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವೆಂಬಂತೆ
(1) ಸರಕಾರವು ರೈತರಿಗೆ ಸಾವಯವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸುತ್ತಿದೆ.
(2) ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಜೈವಿಕ ಗೊಬ್ಬರ, ರಾಸಾಯನಿಕ ಕ್ರಿಮಿನಾಶಕಗಳಿಗೆ ಬದಲಾಗಿ ಜೈವಿಕ ಕ್ರಿಮಿನಾಶಕಗಳ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ.
ಹೀಗೆ ಕೃಷಿಯಲ್ಲಿ ಎಲ್ಲ ರೀತಿಯ ಪರಸರ ಸ್ನೇಹಿ ತಂತ್ರಗಳನ್ನು ಬಳಸುವ ಮೂಲಕ, ಕೃಷಿ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನು ‘ಎರಡನೇ ಹಸಿರು ಕ್ರಾಂತಿ’ ಅಥವಾ ‘ಸದಾ ಹಸಿರು ಕ್ರಾಂತಿ’ ಎಂದು ಗುರುತಿಸಲಾಗುತ್ತಿದೆ. ಕೆಲವು ಉತ್ಸಾಹಿ ರೈತರು ಸಾವಯವ ಸುಧಾರಿತ ಕೃಷಿ ವಿಧಾನಗಳನ್ನು ಎಲ್ಲ ವರ್ಗದ ರೈತರು ಬಳಸಲು ಸಾಧ್ಯವಾಯಿತು. ಕೃಷಿ ಉತ್ಪಾದನೆ ಹೆಚ್ಚಿತು. ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಬಳಕೆಗೆ ತರಲಾದ ಸುಧಾರಿತ ತಂತ್ರಜ್ಞಾನವನ್ನು ‘ಸುಗ್ಗಿ ನಂತರದ ತಂತ್ರಜ್ಞಾನ’ ಎನ್ನುತ್ತಾರೆ. ಹಸಿರು ಕ್ರಾಂತಿಗೆ ಸುಗ್ಗಿ ಪೂರ್ವ ಮತ್ತು ಸುಗ್ಗಿ ನಂತರದ ತಂತ್ರಜ್ಞಾನಗಳೆರಡೂ ಪ್ರೇರಕ ಅಂಶಗಳಾಗಿವೆ.
17. ಕೃಷಿ ವಲಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳೇನು ?
ಉತ್ತರ:- ಕೃಷಿ ವಲಯವು ಸದ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವೆಂಬಂತೆ (1) ಸರಕಾರವು ರೈತರಿಗೆ ಸಾವಯವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸುತ್ತಿದೆ. (2) ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಜೈವಿಕ ಗೊಬ್ಬರ, ರಾಸಾಯನಿಕ ಕ್ರಿಮಿನಾಶಕಗಳಿಗೆ ಬದಲಾಗಿ ಜೈವಿಕ ಕ್ರಿಮಿನಾಶಕಗಳ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ.
ಹೀಗೆ ಕೃಷಿಯಲ್ಲಿ ಎಲ್ಲ ರೀತಿಯ ಪರಸರ ಸ್ನೇಹಿ ತಂತ್ರಗಳನ್ನು ಬಳಸುವ ಮೂಲಕ, ಕೃಷಿ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನು ‘ಎರಡನೇ ಹಸಿರು ಕ್ರಾಂತಿ’ ಅಥವಾ ‘ಸದಾ ಹಸಿರು ಕ್ರಾಂತಿ’ ಎಂದು ಗುರುತಿಸಲಾಗುತ್ತಿದೆ. ಕೆಲವು ಉತ್ಸಾಹಿ ರೈತರು ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ ಮುಂತಾದ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಅನುಕೂಲ ಪಡೆಯುತ್ತಿದ್ದಾರೆ.
18. ನೀತಿ ಆಯೋಗದ ಧೈಯಗಳು ಯಾವುವು?
ಉತ್ತರ:- ನೀತಿ ಆಯೋಗವು ತಳಮಟ್ಟದ ಮಾರ್ಗವನ್ನು ಉಪಯೋಗಿಸುತ್ತದೆ. ಅದರ ಧೈಯಗಳು 15 ವರ್ಷಗಳ ಮಾರ್ಗ ನಕ್ಷೆ, 7 ವರ್ಷಗಳ ದೂರದರ್ಶಿತ್ವ ಯೋಜನೆ- ಮತ್ತು ಕಾರ್ಯ ಯೋಜನೆಯನ್ನು ಒಳಗೊಂಡಿರುವುದು.
ಧೈಯೋದ್ದೇಶಗಳು:
1) ಭಾರತ ಸರಕಾರದ ಅತ್ಯುನ್ನತ ಸಾರ್ವಜನಿಕ ನೀತಿ ಚಿಂತಕರ ಛಾವಡಿಯಾಗಿ ಕಾರ್ಯ ನಿರ್ವಹಿಸುವುದು ಮತ್ತು ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಕಾರ್ಯವನ್ನು ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುವುದು.
2) ಕೆಳಮಟ್ಟದಿಂದ ಸಂಪನ್ಮೂಲಗಳನ್ನು ಬಳಸಿಕೊಂಡು ಆರ್ಥಿಕ ನೀತಿ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರತದ ರಾಜ್ಯ ಸರಕಾರಗಳ ಒಳಗೊಳ್ಳುವಿಕೆಯ ಮೂಲಕ ಸಹಕಾರಿ ಫೆಡರಿಲಿಸಂನ್ನು ಉತ್ತೇಜಿಸುತ್ತದೆ.