ಪಾಠ 1:-ಆಧಾರಗಳು.
1. ಈ ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ.
1. ಸಾಹಿತ್ಯ ಆಧಾರಗಳಲ್ಲಿ ದೇಶೀಯ ಸಾಹಿತ್ಯ ಮತ್ತು ವಿದೇಶೀಯ ಸಾಹಿತ್ಯ ಎಂಬ ಎರಡು ವಿಧಗಳಿವೆ.
2. ಅಶ್ವಘೋಷನ ಬುದ್ಧ ಚರಿತ ವು ಸಾಹಿತ್ಯಕ ಆಧಾರವಾಗಿದೆ.
3. ಕನ್ನಡ ಭಾಷೆಯಲ್ಲಿ ದೊರೆತಿರುವ ಮೊದಲ ಶಾಸನ ಹಲ್ಮಿಡಿ ಶಾಸನ.
II. ಸಂಕ್ಷಿಪ್ತವಾಗಿ ಉತ್ತರಿಸಿ
4. ಆಧಾರ ಎಂದರೇನು?
ಉತ್ತರ:- ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳು. ಇವುಗಳು ಆ ಕಾಲಮಾನದ ವಿವರವನ್ನು ನೀಡುತ್ತವೆ.
5. ಇತಿಹಾಸಕ್ಕೆ ಸಂಬಂಧಿಸಿದ ದೇಶಿ ಮತ್ತು ವಿದೇಶಿ ಸಾಹಿತ್ಯಕ ಆಧಾರಗಳಿಗೆ ಎರಡು ಉದಾಹರಣೆಗಳನ್ನು ನೀಡಿ.
ಉತ್ತರ :-ದೇಶಿ ಸಾಹಿತ್ಯಕ ಆಧಾರಗಳಿಗೆ ಉದಾಹರಣೆಗಳು—ವಿಶಾಖದತ್ತನ “ಮುದ್ರ ರಾಕ್ಷಸ” ಕಲ್ಹಣನ “ರಾಜತರಂಗಿಣಿ”.
ವಿದೇಶಿ ಸಾಹಿತ್ಯಕ ಆಧಾರಗಳಿಗೆ ಉದಾಹರಣೆಗಳು—–ಮೆಗಸ್ತಾನಿಸನ “ಇಂಡಿಕಾ”, ಹ್ಯೂ ಯನ್ ತ್ಸಾಂಗನ “ಸಿ-ಯು-ಕಿ.
6. ನಾಣ್ಯಶಾಸ್ತ್ರ ಎಂದರೇನು?
ಉತ್ತರ:-ನಾಣ್ಯಗಳ ಸ್ವರೂಪ, ವಿಕಾಸ ಹಾಗೂ ಬೆಳವಣಿಗೆಯ ಬಗ್ಗೆ ತಿಳಿಸಿಕೊಡುವ ಅಧ್ಯಯನವೇ ನಾಣ್ಯಶಾಸ್ತ್ರ ವಾಗಿದೆ.
7. ಪ್ರಾಕ್ತನ ಆಧಾರ ಎಂದರೇನು? ಉದಾಹರಣೆ ಸಹಿತ ವಿವರಿಸಿ.
ಉತ್ತರ:- ಸಂಶೋಧನೆ ಮತ್ತು ಉತ್ಖನನಗಳಿಂದ ದೊರೆತಿರುವ ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಮಡಿಕೆ–ಕುಡಿಕೆ ಹಾಗೂ ಇನ್ನಿತರ ಪಳೆಯುಳಿಕೆಗಳನ್ನು ಪ್ರಾಕ್ತನ ಆಧಾರಗಳೆಂದು ಕರೆಯುತ್ತೇವೆ.
ಉದಾಹರಣೆಗೆ, ಮೌರ್ಯ ವಂಶದ ರಾಜ ಅಶೋಕ ಕಲ್ಲು ಬಂಡೆಗಳ ಮೇಲೆ, ಕಲ್ಲು ಹಾಸಿನ ಮೇಲೆ ಶಾಸನಗಳನ್ನು ಕೆತ್ತಿಸಿದ್ದಾನೆ. ಈ ಶಾಸನಗಳಿಂದ ಅನೇಕ ಸಂಗತಿಗಳು ತಿಳಿದು ಬರುತ್ತದೆ.
9. ಮೌಖಿಕ ಆಕರಗಳು ಸ್ಥಳೀಯ ಇತಿಹಾಸವನ್ನು ತಿಳಿಯಲು ಹೇಗೆ ಸಹಕಾರಿಯಾಗಿವೆ ವಿವರಿಸಿ.
ಉತ್ತರ:-ಮೌಖಿಕ ಪರಂಪರೆಯು ಮಾನವ ಸಮಾಜದ ನೆನಪುಗಳ ಚರಿತ್ರೆಯೂ ಹೌದು. ಇಂದು ಭಾರತದ ಬಹುಮುಖಿ ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಮೌಖಿಕ ಆಕರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅನಾದಿ ಕಾಲದಿಂದಲೂ ಮಾನವನು ತನ್ನ ಅನುಭವ ಹಾಗೂ ನೆನಪುಗಳನ್ನುಹಾಡು, ಕಾವ್ಯ, ಲಾವಣಿಗಳ ರೂಪದಲ್ಲಿ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದಿದ್ದಾನೆ. ಮೌಖಿಕ ಸಾಹಿತ್ಯವು ಸ್ಥಳೀಯ ಇತಿಹಾಸವನ್ನು ತಿಳಿಯಲು ಸಹಾಯಕವಾಗಿದೆ.ಅನೇಕ ಬುಡಕಟ್ಟುಗಳು, ಅಕ್ಷರ ಕಲಿಕೆಯಿಂದ ದೂರ ಉಳಿದಿದ್ದು ಸಮುದಾಯಗಳು ತಮ್ಮ ಅನುಭವಗಳನ್ನು ತಮ್ಮ ಮೌಖಿಕ ಸಾಹಿತ್ಯದಲ್ಲಿ ಉಳಿಸಿಕೊಂಡಿವೆ.
.